Viral Video : ಸ್ಟೂಡೆಂಟ್ಸ್ ಜೋತೆ ಜಾಲಿ ಸ್ಟೆಪ್ಸ್ ಹಾಕಿದ ಲೆಕ್ಚರರ್: ವಿಡಿಯೋ ನೋಡಿದರೆ ಹೊಟ್ಟೆ ಉರಿಯುವುದು ಗ್ಯಾರಂಟಿ
ಸಾಮಾಜಿಕ ತಾಣದಲ್ಲಿ ಸುದ್ದಿ ಮಾಡಲು ಅದೆಷ್ಟೋ ಜನ ದಿನವೂ ಸೈಕಲ್ ಹೊಡೆಯುತ್ತಲೆ ಇರುತ್ತಾರೆ. ಇನ್ನು ಕೆಲವರು ಏನೇ ವಿಡಿಯೋ ಹಾಕಿದ್ರೂ ವೈರಲ್ ಆಗುತ್ತದೆ. ಈ ವೈರಲ್ ಪ್ರಪಂಚದಲ್ಲಿ ಎಲ್ಲರೂ ಫೇಮಸ್ ಆಗಲು ಸರ್ಕಸ್ ಮಾಡುತ್ತಾ ಇರುತ್ತಾರೆ.
ಸಾಮಾಜಿಕ ತಾಣದಲ್ಲಿ ಈಗ ರೀಲ್ಸ್‌ಗಳದ್ದೇ ಹವಾ. ಜನ ಇವುಗಳನ್ನು ಮಾಡಿ ತಮ್ಮಲ್ಲಿರುವ ಟ್ಯಾಲೆಂಟ್ ತೋರಿಸುತ್ತಲೆ ಇರುತ್ತಾರೆ. ಇನ್ನು ಕೆಲವರು ತಮ್ಮ ಸುತ್ತ ನಡೆಯುವ ಸಮಸ್ಯೆಗಳನ್ನೆ, ಕಟೆಂಟ್ ಮಾಡಿ ಪ್ರಚಾರ ಪಡೆಯುತ್ತಾರೆ. ಈ ಸಾಲಿಗೆ ಇನ್ನು ಒಬ್ಬರು ಸೇರುತ್ತಾರೆ, ಅವರು ಬೇರೆ ಅವರ ವಿಡಿಯೋವನ್ನು ತಮ್ಮ ಖಾತೆಯಿಂದ ಪಬ್ಲಿಷ್ ಆಗಿ ಖ್ಯಾತಿ ಪಡೆಯುವವರು. ಇದೇ ಸಾಲಿಗೆ ಈ ವ್ಯಕ್ತಿ ಸೇರುತ್ತಾನೆ. ಈತನ ಹಾಕಿಕೊಂಡ ವಿಡಿಯೋ ಸಖತ್ ಟ್ರೆಂಡ್ ಸೃಷ್ಟಿಸಿದೆ.

ಡಾನ್ಸ್ ನೋಡಿ
ಕ್ಲಾಸ್ ರೂಮ್‌ನಲ್ಲಿ ಸ್ಟ್ರಿಕ್ಟ್ ಆಗಿದ್ದ ಟೀಚರ್, ಅಖಾಡದಲ್ಲಿ ಜಾಲಿ ಆದರೆ ಏನ್ ಆಗುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿ. ವಿದ್ಯಾರ್ಥಿಗಳೊಂದಿಗೆ ಮಹಿಳಾ ಲೆಕ್ಚರರ್ ಮೈಚಳಿ ಬಿಟ್ಟು ಸಖತ್ ಸ್ಟೆಪ್ಸ್ ಹಾಕುತ್ತಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮಹಿಳಾ ಲೆಕ್ಚರರ್ ಮಾಡುತ್ತಿರುವ ಡ್ಯಾನ್ಸ್‌ನ್ನು ವಿದ್ಯಾರ್ಥಿಯೊಬ್ಬ ರೆಕಾರ್ಡ್ ಮಾಡಿ, ಅಪ್‌ಲೋಡ್ ಮಾಡಿದ್ದಾನೆ. ಕಾಲೇಜಿ ಸಮಾರಂಭದಲ್ಲಿನ ಈ ವಿಡಿಯೋ ಈ ಸಾಮಾಜಿಕ ತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಏನ್ ಸ್ಟೆಪ್ಸ್ ಗುರು
ಸೀರೆಯನ್ನು ಉಟ್ಟುಕೊಂಡು ಮೈದಾನದಲ್ಲಿ ಸ್ಟೆಪ್ಸ್ ಹಾಕುತ್ತಿರುವ ಈ ಲೆಕ್ಚರರ್ ಜೋಶ್ ಕಂಡು ವಿದ್ಯಾರ್ಥಿಗಳೇ ನಿಬ್ಬೆರಗಾದರು. ಸಿರಿಯನ್ನು ಆಗಾಗ್ಗೆ ಸರಿ ಮಾಡಿಕೊಳ್ಳುತ್ತಾ ಮೈ ಕೈ ಆಡಿಸುತ್ತಾ, ಸ್ಟೆಪ್ಸ್ ಹಾಕಿದರು. ಇವರ ಟೋನ್‌ಗೆ ಸ್ಟೆಪ್ಸ್ ಹಾಕುವುದನ್ನು ಕಂಡು ವಿದ್ಯಾರ್ಥಿಗಳು ಫುಲ್ ಎಂಜಾಯ್ ಮಾಡಿದರು. ಕುಣಿದು ಕುಣಿದು ಲೆಕ್ಚರರ್‌ಗೆ ಸುಸ್ತಾ ಆದರು. ಈ ವಿಡಿಯೋ ಸಖತ್ ಟ್ರೆಂಡ್ ಆಗುತ್ತಿದೆ.
ಈ ವಿಡಿಯೋ ನೋಡಿದರೆ ವಿದ್ಯಾರ್ಥಿಗಳೆಲ್ಲಾ ಲೆಕ್ಚರರನ್ನು ಡ್ಯಾನ್ಸ್ ಮಾಡಲು ಒತ್ತಾಯ ಮಾಡಿದ್ದಾರೆ ಎಂದು ಅನಿಸುತ್ತಾದೆ. ನಂತರ ತನ್ನೊಳಗಿನ ಕಲೆಗೆ ಮೋಸ್ ಮಾಡಬಾರದು ಎಂದು ಶಿಕ್ಷಕಿ ಸಹ ಸಖತ್ ಸ್ಟೆಪ್ಸ್ ಹಾಕಿ ಬಿಟ್ಟಿದ್ದಾಳೆ. ಈ ಸ್ಟೆಪ್ಸ್ ವಿದ್ಯರ್ಥಿಗಳಿಗೆ ಜೋಶ್ ನೀಡಿದಂತೂ ಸುಳ್ಳು ಅಲ್ಲವೇ ಅಲ್ಲ.
ವಿದ್ಯಾರ್ಥಿಗಳು ತಮ್ಮ ಲೆಕ್ಷರರ್ ಜೋಶ್ ಕಂಡು ಡಬಲ್ ಖುಷ್ ಆಗಿ, ಇನ್ನು ಎರಡು ಸ್ಟೆಪ್ ಜಾಸ್ತಿ ಕುಟಿದಂತೆ ಕಾಣುತ್ತಿದೆ. ಕೊನೆಗೆ ಕುಣಿದು ಕುಣಿದು ಸುಸ್ತಾದ ಲೆಕ್ಚರರ್ ಫುಲ್ ಸೈಲೆಂಟ್ ಆದರು. ವಿದ್ಯಾರ್ಥಿಗಳು ಎಲ್ಲ ಕ್ಲ್ಯಾಪ್ ಮಾಡಿ ಅವರನ್ನು ಪ್ರೋತ್ಸಾಹಿಸಿದರು.
ಈ ವಿಡಿಯೋ ಅಪ್‌ಲೋಡ್ ಆದಾಗಿನಿಂದ 3 ಸಾವಿರಕ್ಕೂ ಹೆಚ್ಚು ಲೈಕ್, 1.79 ಲಕ್ಷರಿಂದ ವೀಕ್ಷಣೆ ಆಗಿದೆ. ಅಲ್ಲದೆ 348 ಜನರು ಈ ವಿಡಿಯೋವನ್ನು ರಿ ಪೋಸ್ಟ್ ಮಾಡಿದ್ದಾರೆ.












Click it and Unblock the Notifications