ನಕ್ಕರೆ ಸ್ವರ್ಗ... ಆದರೆ ನಗಲು ಒಳ್ಳೆಯ ದಂತ ಪಂಕ್ತಿ ಬೇಕಲ್ಲ...
ಪುಟ್ಟ ಮಕ್ಕಳಿಂದ ಹಿರಿಯವರೆಗೆ ಮುಗುಳ್ನಗು ಯಾವುತ್ತೂ ಮನೆ ಮಾಡಿರಬೇಕು. ಅದು ನಮ್ಮ ಮುಖಕ್ಕೆ ಶೋಭೆ. ನಮ್ಮ ನಗು ನಮ್ಮ ವ್ಯಕ್ತಿತ್ವಕ್ಕೂ ಕನ್ನಡಿ ಹಿಡಿದಿರುತ್ತದೆ, ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಇನ್ನು ಮುತ್ತಿನಂಥ ಅಥವಾ ದಾಳಿಂಬೆ ಹಣ್ಣಿನಂತೆ ದಂತಪಂಕ್ತಿಗಳಿದ್ದರಂತೂ ನಮ್ಮ ಮುಖಕ್ಕೆ ನಗುವೇ ಭೂಷಣ!
ಆದರೆ, ದುರಾದೃಷ್ಟವೆಂದರೆ, ನಾವು ನಮ್ಮ ಹಲ್ಲುಗಳ ಆರೋಗ್ಯದೆಡೆ ಗಮನ ನೀಡುವುದೇ ಇಲ್ಲ. ಪ್ರತಿದಿನ ಬೆಳಿಗ್ಗೆ ರಾತ್ರಿ ಎರಡು ಬಾರಿ ಎಷ್ಟು ಜನ ಹಲ್ಲು ಉಜ್ಜುತ್ತೀರಿ? ಆಗಾಗ ಫ್ಲಾಸ್ ಮಾಡಿಕೊಳ್ಳುತ್ತೀರಿ? ಕನಿಷ್ಠ ವರ್ಷಕ್ಕೊಮ್ಮೆಯಾದರೂ ದಂತ ವೈದ್ಯರ ಬಳಿ ಎಷ್ಟು ಜನ ತಪಾಸಣೆ ಮಾಡಿಸುತ್ತೀರಿ? ಈ ಪ್ರಶ್ನೆಗಳನ್ನು ನಿಮಗೆ ನೀವೇ ಕೇಳಿಕೊಳ್ಳಿ.
ಉತ್ತರ ಕರ್ನಾಟಕ ಭಾಗದಲ್ಲಿ ಅದರಲ್ಲಿಯೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ, ಅಂತರ್ ಜಲ ಕುಸಿತದಿಂದ ಬೋರ್ ವೆಲ್ ನೀರಿನಲ್ಲಿ ಅತಿಯಾದ ಫ್ಲೋರೈಡ್ ಇರುತ್ತದೆ. ಆ ಗಡಸು ನೀರನ್ನು ಕುಡಿಯಲು ಉಪಯೋಗಿಸುವುದರಿಂದ, ಹಳದಿ ಹಲ್ಲು, ಕಂದು ಹಲ್ಲು ಸಾಮಾನ್ಯವಾಗಿ ಕಂಡು ಬರುತ್ತವೆ.
ಈ ಹಲ್ಲುಗಳು ಗಟ್ಟಿಯಾಗಿ ಇರುವುದಿಲ್ಲ. ಹಾಗಾಗಿ ಗಟ್ಟಿ ಪದಾರ್ಥಗಳನ್ನು ತಿಂದಾಗ ಮುರಿಯುತ್ತವೆ. ಮುರಿದ ಹಲ್ಲುಗಳಲ್ಲಿ ಆಹಾರ ಸಿಕ್ಕು ಹುಳುಕು ಹಲ್ಲುಗಳಾಗಬಹುದು. ಮತ್ತು ಈ ಹಲ್ಲುಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕಷ್ಟ. ಹಾಗಾಗಿ ವಸಡು ರೋಗ ಬರಬಹುದು. ವಸಡಿನಿಂದ ರಕ್ತ ಬರುವುದು, ಬಾಯಿಯಿಂದ ವಾಸನೆ ಬರುವುದು ಸಾಮಾನ್ಯ.
ಕಂದು ಹಲ್ಲು ಹೊಂದಿದ ವಿದ್ಯಾರ್ಥಿಗಳು ಇನ್ಫಿರಿಯಾರಿಟಿ ಕಾಂಪ್ಲೆಕ್ಸ್ (inferiority complex) ಅಥವಾ ಕೀಳರಿಮೆಯಿಂದ ನರಳುತ್ತಾರೆ. ಈ ಕಂದು ಹಲ್ಲುಗಳು ಮಕ್ಕಳ ಆತ್ಮವಿಶ್ವಾಸಕ್ಕೆ ಧಕ್ಕೆ ತರುತ್ತವೆ. ಬೇರೆ ಮಕ್ಕಳ ರೀತಿ ಬಿಂದಾಸ್ ಆಗಿ ನಗಲು, ಮುಕ್ತವಾಗಿ ಮಾತನಾಡಲು ಹಿಂಜರಿಯುತ್ತಾರೆ. ಶಾಲೆಗಳಲ್ಲಿ ಭಾಷಣ ಸ್ಪರ್ಧೆ, ಸಂಗೀತ ಸ್ಪರ್ಧೆ ಹೀಗೆ ಹಲವು ಸ್ಪರ್ಧೆಗಳಲ್ಲಿ ಪ್ರತಿಭೆ ಇದ್ದರೂ ಭಾಗವಹಿಸುವುದಿಲ್ಲ.

ಮಗಳು ಚಿಕ್ಕವಳಿದ್ದಾಗಲೇ ತಪಾಸಣೆ ಮಾಡಿಸಿ
ಅತಿಯಾದ ಕಂದು ಹಲ್ಲುಗಳು ಯುವತಿಯರ ಮದುವೆಗೆ ಅಡ್ಡ ಬರುತ್ತವೆ. ಮದುವೆ ತಡ ಆಗುತ್ತಿರುವುದನ್ನು ತಡವಾಗಿ ಮನವರಿಕೆ ಮಾಡಿಕೊಂಡ ಹೆತ್ತವರು ಆಗ ದಂತ ವೈದ್ಯರನ್ನು ಸಂಪರ್ಕಿಸುತ್ತಾರೆ. ಅಷ್ಟರಲ್ಲಾಗಲೇ ಕಾಲ ಮಿಂಚಿರುತ್ತದೆ. ಅಂದರೆ, ಹಲ್ಲುಗಳು ತೀರ ಹಾಳಾಗಿಬಿಟ್ಟಿರುತ್ತವೆ. ಅದರ ಬದಲು ಮಗಳು ಚಿಕ್ಕವಳು ಇದ್ದಾಗಲೇ ಕಾಸ್ಮೆಟಿಕ್ ಟ್ರೀಟ್ಮೆಂಟ್ ಮಾಡಿಸಿದರೆ ಅವಳು ಬೇರೆ ಮಕ್ಕಳ ತರಹ ಈ ಸ್ಪರ್ಧಾತ್ಮಕ ಯುಗದಲ್ಲಿ ಇನ್ನಷ್ಟು ಸಾಧನೆ ಮಾಡಲು ಅನುಕೂಲವಾಗುತ್ತದೆ.

ನಗು ಆತ್ಮವಿಶ್ವಾಸ ಹೆಚ್ಚಿಸುತ್ತದೆ
ದಂತ ಚಿಕಿತ್ಸೆ ದುಬಾರಿ ಆದರೂ ಮಕ್ಕಳ ಭವಿಷ್ಯದ ಮುಂದೆ ಏನೂ ಅಲ್ಲ. ಈಗ ಎಲ್ಲಾ ಜನರ ಹತ್ತಿರ ಸ್ಮಾರ್ಟ್ ಫೋನ್ ಗಳಿವೆ. ಹಾಗೆ ಮಕ್ಕಳ ಮುಗುಳ್ನಗೆ ಸುಂದರವಾಗಿ ಇದೆಯೇ ಎಂಬುದನ್ನು ಗಮನಿಸಬೇಕು. ಅವರ ಮುಖದಲ್ಲಿರುವ ನಗು ಅವರ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅದೆ ತರಹ ಯುವಕರ ಮುಖದಲ್ಲಿ ಸುಂದರವಾದ ನಗು ಇದ್ದರೆ ಹಲವು ಖಾಸಗಿ ಕಂಪನಿಗಳಲ್ಲಿ ಕೆಲಸಗಳು ದೊರೆಯುತ್ತವೆ. ಒಮ್ಮೊಮ್ಮೆ ಕಂದು ಬಣ್ಣದ ಹಲ್ಲುಗಳಿವೆ ಎಂಬ ಕಾರಣಕ್ಕಾಗಿ ಸಂದರ್ಶನದಲ್ಲಿ ಪ್ರತಿಭೆ ಇದ್ದರೂ ಯುವಕ, ಯುವತಿಯರಿಗೆ ಕೆಲಸ ಸಿಗದೆ ಇರಬಹುದು ಅಥವಾ ಕೀಳರಿಮೆಯಿಂದ ಸಂದರ್ಶನದಲ್ಲಿ ಉತ್ತಮ ಸಾಧನೆ ತೋರಲು ವಿಫಲರಾಗಬಹುದು.

ವರ್ಷಕ್ಕೊಮ್ಮೆಯಾದರೂ ವೈದ್ಯರ ಬಳಿ ಹೋಗಿ
ಹಾಗಾಗಿ ಮುಖದ ನಗು ಸುಂದರವಾಗಿ ಕಾಣಲು ವರ್ಷಕ್ಕೆ ಒಮ್ಮೆಯಾದರೂ ದಂತ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಬೇಕು. ಮುಂದಿನ ಹಲ್ಲುಗಳಿಗೆ ಪೆಟ್ಟು ಬಿದ್ದರೂ ಸಹ ರಕ್ತ ಸಂಚಾರ ಸ್ಥಗಿತಗೊಂಡು ಹಲ್ಲುಗಳು ಕಂದು, ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನು ಹಾಗೆ ಬಿಟ್ಟರೆ ಕೀವು ತುಂಬುತ್ತವೆ. ಗುಟ್ಕಾ, ಎಲೆ ಅಡಿಕೆ, ತಂಬಾಕು ಸೇವನೆಯಿಂದ, ಸಿಗರೇಟ್ ಸೇವನೆಯಿಂದ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಅವುಗಳನ್ನು simple scaling, ಸ್ವಚ್ಛತೆ ಮಾಡಿಸುವುದರಿಂದ ಬೆಳ್ಳಗಾಗುತ್ತವೆ.

ಸ್ವಾಭಾವಿಕವಾಗಿ ಹಲ್ಲು ಸ್ವಚ್ಛ ಕಾಣಬೇಕಿದ್ದರೆ...
ಆದರೆ fluorosis, tetracycline stains, ಪೆಟ್ಟು ಬಿದ್ದು ಹಲ್ಲುಗಳ ಬಣ್ಣ ಒಳಗಿನಿಂದ ಬದಲಾಗಿರುತ್ತದೆ, ಅವುಗಳನ್ನು ಬರಿ ಸ್ವಚ್ಛ ಮಾಡಿದರೆ ಬೆಳ್ಳಗೆ ಆಗಲಾರವು. ಅಂತಹ ಹಲ್ಲುಗಳನ್ನು bleaching, composite veneers, ceramic crowns, veneers, laminates ನಿಂದ ಅತ್ಯಂತ ಅಚ್ಚುಕಟ್ಟಾಗಿ ಸ್ವಾಭಾವಿಕವಾಗಿ ಕಾಣುವ ಹಲ್ಲುಗಳಂತೆ ಮಾಡಬಹುದು. ಈ ತರಹದ ಚಿಕಿತ್ಸೆಯನ್ನು ಈಗ ಎಲ್ಲಾ ಊರುಗಳಲ್ಲೂ ದಂತ ವೈದ್ಯರು ಮಾಡುತ್ತಾರೆ.

ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ
ಅತಿಯಾದ ಫ್ಲೋರೈಡ್ ನಿಂದ ಹಲ್ಲಿನ ತೊಂದರೆ ಜೊತೆಗೆ ಎಲುಬು, ಮಾಂಸಗಳ ತೊಂದರೆಯೂ ಬರುತ್ತದೆ. ಲಕ್ಷಾಂತರ ಜನ ಮೊಣಕಾಲು ನೋವು, ಸಂಧಿವಾತದಿಂದ ನರಳುತ್ತಾರೆ. ಸ್ವಾತಂತ್ರ್ಯ ಸಿಕ್ಕು ಇಷ್ಟು ವರ್ಷಗಳಾದರೂ ಇನ್ನೂವರೆಗೂ ಶುದ್ಧ ಕುಡಿಯುವ ನೀರು ಗ್ರಾಮಗಳಲ್ಲಿ ಸಿಗುವುದು ಕಷ್ಟ. ಹಾಗಾಗಿ ಅಂತರ್ ಜಲ ಹೆಚ್ಚಿಗೆ ಮಾಡಿ, ಕೆರೆ ಬಾವಿಯ ನೀರನ್ನು ಸೋಸಿ ಕುಡಿಯುವುದು ಉತ್ತಮ ಉಪಾಯ. ನಕ್ಕರೆ ಸ್ವರ್ಗ... ಆದರೆ ನಗಲು ಒಳ್ಳೆಯ ದಂತ ಪಂಕ್ತಿ ಬೇಕಲ್ಲ... ಯಾವಾಗಲೂ ನಗುತ್ತಿರಿ. ಅದಕ್ಕೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳಿ.
-
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು












Click it and Unblock the Notifications