ಐ-ಫೋನ್ ಶೋದಕ್ಕೆ ಏಳು ಗಂಟೆ ಕಾರ್ಯಾಚರಣೆ: ಕೇಳದಲ್ಲಿ ಐ-ಫೋನ್ ಕಳೆದುಕೊಂಡಿದ್ದ ಬೆಂಗಳೂರು ಯುವತಿ
ಸಾಮಾನ್ಯವಾಗಿ ಫೋನ್‌ಗಳು ಕಳೆದುಕೊಂಡಾಗ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವುದು ಸಾಮಾನ್ಯ. ಇನ್ನೇನು ಆ ಫೋನ್ ನಮಗೆ ಸಿಗುವುದೇ ಇಲ್ಲ ಎಂಬ ನಂಬಕೆ, ಕಳೆದುಕೊಂಡವರಲ್ಲಿ ಇರುತ್ತದೆ. ಇನ್ನು ಕೆಲವರಲ್ಲಿ ಪೊಲೀಸರು ನಮ್ಮ ಕೈ ಬಿಡುವುದಿಲ್ಲ ಎಂಬ ನಂಬಿಕೆ ಇರುತ್ತದೆ. ಇಂತಹದ್ದೇ ನಂಬಿಕೆ ಉದಾಹರಣೆ ಈ ಸ್ಟೋರಿ..
ರಜೆಯ ಮಜೆಯನ್ನು ಸವಿಯಲು ಹೋದಾಗ ಅಚಾನಕ್ ಆಗಿ ಫೋನ್ ಅಲ್ಲಿ ಕಳೆದು ಬಿಟ್ಟಿದೆ. ತಡ ಮಾಡದೆ ಕಳೆದು ಕೊಂಡ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದಯವಿಟ್ಟು ಹುಡುಕಿ ಕೊಡಿ ಎಂದು ಅಂಗಲಾಚಿದ್ದಾರೆ. ಫೋನ್ ಕಳೆದುಕೊಂಡಿದ್ದರಿಂದ ರಜೆಯ ಮೂಡ್ ಎಲ್ಲ ಪ್ಲಾಫ್ ಆಗಿದೆ. ಆದರೆ ಕೆಲವೇ ದಿನಗಳಲ್ಲಿ ಬಂದ ಸುದ್ದಿ ಮಹಿಳೆಗೆ ಡಬಲ್ ಖುಷಿ ನೀಡಿದೆ.

ಅಗಿದ್ದೇನು?
ಕರ್ನಾಟಕದಿಂದ ಒಂದು ತಂಡ ಕೇರಳಕ್ಕೆ ಪ್ರವಾಸಕ್ಕೆ ತೆರಳಿದೆ. ಈ ವೇಳೆ ಸಮುದ್ರ ಕಿನಾರೆಯಲ್ಲಿ ತಿರುಗಾಡುವಾಗ ಮಹಿಳೆಯೊಬ್ಬಳ ಐಫೋನ್ ಕಳೆದು ಹೋಗಿದೆ. ಹೀಗಾಗಿ ಇವರ ಪ್ರವಾಸ ಹಾಳಾಗಿದೆ. ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.
ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ತಂಡ ಒಟ್ಟಾಗಿ ಈ ಫೋನ್ ಹುಡುಕಲು ಶ್ರಮಿಸಿದೆ. ಅವರ 1.5 ಲಕ್ಷ ರೂಪಾಯಿ ಮೌಲ್ಯದ ಐಫೋನ್ ಕಲ್ಲುಗಳು ಮತ್ತು ಸಮುದ್ರದ ಅಲೆಗಳ ನಡುವೆ ಸಿಲುಕಿಕೊಂಡಿತ್ತು. ಆದಾಗ್ಯೂ, ಆಂಟಿಲಿಯಾ ಮೋಟೆಲ್ ಮತ್ತು ಕೇರಳ ಫೈರ್ ತಂಡವು ಒಟ್ಟಾಗಿ ಏಳು ಗಂಟೆಗಳ ರಕ್ಷಣಾ ಕಾರ್ಯಾಚರಣೆ ನಡೆಸಿ ಫೋನ್ ಅನ್ನು ಹುಡುಕುವಲ್ಲಿ ಯಶಸ್ವಿ ಆಗಿದೆ.. ಈ ವಿಡಿಯೋಗೆ ಇದುವರೆಗೆ 1 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ.
ಈ ವಿಡಿಯೋವನ್ನು @antiliyachalets ನಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಸುದೀರ್ಘ ಮತ್ತು ಸವಾಲಿನ ಕಾರ್ಯಾಚರಣೆ ಕಂಡು ಬರುತ್ತದೆ. ಜೋರಾದ ಗಾಳಿ ಮತ್ತು ಅಲೆಗಳು ಇಡೀ ಕಾರ್ಯಾಚರಣೆ ನಡೆಸಲಾಗಿದೆ ಎಂದು ವಿಡಿಯೋ ಪೋಸ್ಟ್ ಮಾಡುವ ವೇಳೆ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಐಫೋನ್ ನ್ಯಾವಿಗೇಟ್ ಮಾಡುವ ಮೂಲಕ ಕಳೆದುಕೊಂಡಿದ್ದ ಐ ಫೋನ್ ಹುಡುಕುವಲ್ಲಿ ತಂಡ ಯಶಸ್ವಿ ಆಗಿದೆ. ಈ ಫೋನ್ ಹುಡುಕಲು ತಂಡವು ಅಪಾಯಕಾರಿ ಕಲ್ಲುಗಳು ಮತ್ತು ಅಲೆಗಳನ್ನು ಎದುರು ನಿಂತು ಹುಡಕ ಬೇಕಾಗಿತ್ತು.












Click it and Unblock the Notifications