Karnataka Election 2023 Astrology : ಕರ್ನಾಟಕ ವಿಧಾನಸಭೆ ಚುನಾವಣೆ - ಗ್ರಹಗತಿ ಯಾರಿಗೆ ಚೆನ್ನಾಗಿದೆ? ಇಲ್ಲಿದೆ ಭವಿಷ್ಯ

ಬೆಂಗಳೂರು ಏಪ್ರಿಲ್ 3: ರಾಜ್ಯ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನನಾಯಕರ ಮುಂದಿನ ರಾಜಕೀಯ ಭವಿಷ್ಯ ಹೆಚ್ಚು ಆಸಕ್ತಿಯನ್ನು ಹುಟ್ಟಿಸಿದೆ. ರಾಜ್ಯದಲ್ಲಿ ಪ್ರಬಲ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ಮುಂದಿನ ಆಡಳಿತ ತಮ್ಮದೇ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ? ಯಾರು ಸೋಲುತ್ತಾರೆ? ಯಾರಿಗೆ ಬಹುಮತ ಸಿಗಲಿದೆ ಎಂಬಿತ್ಯಾದಿ ಅಂಶಗಳಿಗೆ ಜನರ ಹೇಳಿಕೆಯನ್ನು ಪಡೆದ ಸಮೀಕ್ಷೆಗಳು ಈಗಾಗಲೇ ಉತ್ತರ ಕೊಟ್ಟಿವೆ. ಇದರೊಂದಿಗೆ ಖ್ಯಾತ ಜ್ಯೋತಿಷಿಗಳೂ ಕೂಡ ರಾಜ್ಯ ರಾಜಕೀಯದ ಮುಂದಿನ ಭವಿಷ್ಯವನ್ನು ನುಡಿದಿದ್ದಾರೆ. ಸದ್ಯ ಜನ್ಮ ಕುಂಡಲಿ ಆಧಾರದ ಮೇಲೆ ರಾಜ್ಯದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ತಿಳಿಯೋಣ.

Karnataka Election 2023 Astrology : Who Will Win Polls According To Astrology Predictions

ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಬಗ್ಗೆ ಜನ್ಮ ಕುಂಡಲಿ ಏನು ಹೇಳುತ್ತದೆ? ಮುಂದಿನ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದಿಯೇ? ಕಾಂಗ್ರೆಸ್ ಪಕ್ಷ ತನ್ನ ಸರ್ಕಾರ ರಚನೆ ಮಾಡಲಿದಿಯೇ? ಅಥವಾ ಜೆಡಿಎಸ್ ಬರಲಿದಿಯೇ? ಜನ್ಮ ಕುಂಡಲಿ ಜ್ಯೋತಿಷ್ಯದ ಆಧಾರದ ಮೇಲೆ ಇದಕ್ಕೆಲ್ಲ ಉತ್ತರ ಸಿಗಲಿದೆ. ಹಾಗಾದರೆ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬರಲಿದೆ?

ಪ್ರಸ್ತುತ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಮುಖ್ಯಮಂತ್ರಿ ಆಗಿರುವ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ಪಕ್ಷದಿಂದ ಸಿದ್ದರಾಮಯ್ಯ ಹಾಗೂ ಜೆಡಿಎಎಸ್‌ನಿಂದ ಹೆಚ್.ಡಿ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ತಮ್ಮ ಪಕ್ಷ ಗೆಲ್ಲಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಈ ಮೂರು ಜನಪ್ರತಿನಿಧಿಗಳು ಮುಖ್ಯಮಂತ್ರಿಯ ಆಕಾಂಕ್ಷಿಗಳೂ ಆಗಿದ್ದಾರೆ.

ಪ್ರಸ್ತುತ ಬಸವರಾಜ ಬೊಮ್ಮಾಯಿಯ ಪ್ರಬಲ ಪೈಪೋಟಿ ಎಂದರೆ ಅದು ಕಾಂಗ್ರೆಸ್. ಹಾಗಾದರೆ ಮುಂದಿನ ಸಿಎಂ ಬಸವರಾಜ್ ಬೊಮ್ಮಾಯಿ ಆಗಬಹುದೇ? ಇದಕ್ಕೆ ಜನ್ಮ ಕುಂಡಲಿ ಜ್ಯೋತಿಷ್ಯ ಏನು ಹೇಳುತ್ತದೆ?

Karnataka Election 2023 Astrology : Who Will Win Polls According To Astrology Predictions

ಚುನಾವಣೆಯಲ್ಲಿ ಬಿಜೆಪಿಗೆ ಪಕ್ಕಾ ಗೆಲುವು

ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವ ಅಮಿತ್ ಶಾ ಪಕ್ಷ ಸಂಘಟನೆಯಲ್ಲಿ ಹಾಗೂ ಪಕ್ಷದ ಒಳಾಡಳಿತದ ಬಗ್ಗೆ ಹೆಚ್ಚು ಗಮನಹರಿಸುವಂತವರಾಗಿರುತ್ತಾರೆ. ಮಾತ್ರವಲ್ಲದೆ ಮೋದಿ ಹಾಗೂ ಅಮಿತ್ ಶಾ ಅವರ ಗ್ರಹಗತಿಗಳು ಹೇಗಿವೆ ಎನ್ನುವುದು ಈ ಸಂದರ್ಭದಲ್ಲಿ ಬಹುಮುಖ್ಯವಾಗಿದೆ. ಮೋದಿ ಹಾಗೂ ಅಮಿತ್ ಶಾ ಅವರ ಗ್ರಹಗತಿಗಳು ಈ ಸಂದರ್ಭದಲ್ಲಿ ಉತ್ತಮವಾಗಿದೆ. ಇದರ ಲಾಭ ರಾಜ್ಯಕ್ಕೂ ಸಿಗುತ್ತದೆ.

ಹುಬ್ಬಳ್ಳಿಯಲ್ಲಿ ಜನವರಿ 28, 1960ರಂದು ಬಸವರಾಜ ಬೊಮ್ಮಾಯಿ ಅವರು ಹುಟ್ಟಿದರು. ಮೇಷ ರಾಶಿಯವರಾದ ಇವರು ಜನ್ಮತ: ನಾಯಕರೇ. ಮೇಷ ರಾಶಿಯ ಆರನೇ ಮನೆಯಲ್ಲಿ ರಾಹು ಗ್ರಹ ಇದೆ. ಮೇಷ ರಾಶಿ ಒಂಬತ್ತನೆ ಭಾಗ್ಯದ ಮನೆಯಲ್ಲಿ ಶನಿ, ಮಂಗಳ, ಚಂದ್ರ, ಶುಕ್ರ ಹಾಗೂ ಗುರು ಗ್ರಹಗಳು ಸ್ಥಾನ ಪಡೆದುಕೊಂಡಿವೆ. ಹತ್ತನೇ ಮನೆಯಲ್ಲಿ ಸೂರ್ಯ ಹಾಗೂ ಬುಧ ಇದೆ. ಇನ್ನೆರಡನೆ ಮನೆಯಲ್ಲಿ ಕೇತು ಇದೆ. ಗುರು ಮೇಷ ರಾಶಿಯವರ ಭಾಗ್ಯದ ಮನೆಯಲ್ಲಿ ಕುಳಿತಿರುವುದರಿಂದ ಇದು ಶುಭಫಲವನ್ನು ನೀಡುತ್ತದೆ. ಹೀಗಾಗಿ ಬಸವರಾಜ ಬೊಮ್ಮಾಯಿ ಅವರ ಜನ್ಮ ಕುಂಡಲಿ ಹೇಳುವಂತೆ ಮುಂಬರುವ ಚುನಾವಣೆಯಲ್ಲಿ ಬೊಮ್ಮಾಯಿ ಕಠಿಣ ಪೈಪೋಟಿ ನೀಡಲಿದ್ದಾರೆ.

ಇನ್ನೂ ಶನಿಯೂ ಮೇಷ ರಾಶಿಯವರ ಒಂಬತ್ತನೇ ಮನೆಯಲ್ಲಿ ಕುಳಿತಿರುವುದರಿಂದ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ. ಅವರ ಮೇಲೆ ಹೆಚ್ಚು ಆರೋಪಗಳು ಕೇಳಿ ಬರುತ್ತವೆ. ವಿರೋಧ ಪಕ್ಷಗಳು ಆರೋಪ ಮಾಡುತ್ತವೆ. ಜೊತೆಗೆ ಹೆಚ್ಚು ತೊಂದರೆ ನೀಡುತ್ತವೆ. ಬಸವರಾಜ ಬೊಮ್ಮಾಯಿ ಅವರ ಜನ್ಮ ಕುಂಡಲಿ ಪ್ರಭಲವಾಗಿರುವುದರಿಂದ ಭಾರತೀಯ ಜನತಾ ಪಕ್ಷ ಜಯ ಸಾಧಿಸಲಿದೆ.

Karnataka Election 2023 Astrology : Who Will Win Polls According To Astrology Predictions

ಸಿದ್ದರಾಮಯ್ಯ ಅವರನ್ನ ಜನ ಕೈಹಿಡಿಯುತ್ತಾರೆ ಆದರೆ...

ಹಾಗಾದರೆ ಕಾಂಗ್ರೆಸ್ ಪಕ್ಷದ ಭವಿಷ್ಯ ಹೇಗಿದೆ? ಸಿದ್ದರಾಮಯ್ಯ ಅವರ ಜನ್ಮ ಕುಂಡಲಿ ಹೇಗಿದೆ? ಜ್ಯೋತಿಷ್ಯ ಏನು ಹೇಲುತ್ತದೆ ಎಂದು ತಿಳಿಯೋಣ. ಸಿದ್ದರಾಮಯ್ಯ ಜನ್ಮ ಕುಂಡಲಿ ಪ್ರಕಾರ, ಇವರದ್ದು ಕನ್ಯಾ ರಾಶಿಯಾಗಿದೆ. ಎರಡನೇ ಮನೆಯಲ್ಲಿ ಗುರು, ಮೂರನೇ ಮನೆಯಲ್ಲಿ ಕೇತು ಇದೆ. ಇವರ ಜೀವನದಲ್ಲಿ ಕೇತುವಿನ ಮಹದಶ ನಡೆಯುತ್ತಿದೆ. ಇದೇ ಸಮಯದಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ಕೊಂಚ ಸಮಸ್ಯೆಗಳು ಎದುರಾಗಬಹುದು. ಇವರ ಮೂರನೇ ಮನೆಯಲ್ಲಿ ಕೇತು ಇರುವುದರಿಂದ ಧಿಡೀರ್ ಬದಲಾವಣೆಗಳು ಆಗಬಹುದು. ಅಥವಾ ಧಿಡೀರ್ ನಾಯಕ ಕೂಡ ಆಗಬಹುದು. ಕೇತು ಜೊತೆ ಚಂದ್ರ ಇರುವುದರಿಂದ ಕೆಲ ಸಮಸ್ಯೆಗಳೂ ಎದುರಾಗಬಹುದು. ಶತ್ರುಗಳ ಕಾಟ, ಗಲಾಟೆ ನಡೆಯುತ್ತವೆ. ಜೊತೆಗೆ ಇವರೇ ತಪ್ಪು ಮಾಡುವ ಸಾಧ್ಯತೆಗಳು ಇರುತ್ತವೆ.

ಹೀಗಾಗಿ ಪ್ರಚಾರದ ವೇಳೆ, ಜನರ ನಡುವೆ ಮಾತನಾಡುವಾಗ ವಿಶೇಷ ಕಾಳಜಿಯನ್ನು ವಹಿಸಬೇಕಾಗುತ್ತದೆ. ಯಾಕೆಂದರೆ ಕೇತುವಿನ ಜೊತೆ ಚಂದ್ರನಿರುವುದರಿಂದ ಜನ ನಿಮ್ಮನ್ನು ಧಿಡೀರನೆ ಮೇಲಕ್ಕೂ ಕರೆದುಕೊಂಡು ಹೋಗಬಹುದು ಅಥವಾ ಕೆಳಕ್ಕೂ ತಳ್ಳಬಹುದು. ಹೀಗಾಗಿ ಬಸವರಾಜ ಬೊಮ್ಮಾಯಿ ಹಾಗೂ ಸಿದ್ದರಾಮಯ್ಯ ಇಬ್ಬರ ಜನ್ಮ ಕುಂಡಲಿ ನೋಡುವುದಾದರೆ ಬಸವರಾಜ ಬೊಮ್ಮಾಯಿ ಅವರ ಜನ್ಮ ಕುಂಡಲಿ ಪ್ರಬಲವಾಗಿದೆ. ಒಂದು ವೇಳೆ ಸರಿಯಾದ ಮಾರ್ಗದಲ್ಲಿ ಬಿಜೆಪಿ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿದರೆ ಗೆಲ್ಲುವ ಸಾಧ್ಯತೆಗಳು ಬಹುತೇಕ ಪಕ್ಕಾ ಎನ್ನುತ್ತದೆ ಜ್ಯೋತಿಷ್ಯ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಗಬಹುದು ಅಥವಾ ಆಗದೇ ಇರಬಹುದು.

Karnataka Election 2023 Astrology : Who Will Win Polls According To Astrology Predictions

ಹೆಚ್.ಡಿ ಕುಮಾರಸ್ವಾಮಿ ಅವರ ಜನ್ಮ ಕುಂಡಲಿ ಏನು ಹೇಳುತ್ತದೆ?

ಹೆಚ್.ಡಿ ಕುಮಾರಸ್ವಾಮಿ ಅವರ ಜನ್ಮ ಕುಂಡಲಿಯ ಪ್ರಕಾರ, ಕರ್ನಾಟಕದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಇಬ್ಬರು ಸೇರಿ ಬಿಜೆಪಿಗೆ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಚುನಾವಣೆ ಗೆಲ್ಲುವುದು ಅಷ್ಟು ಸುಲಭದ ಮಾತಲ್ಲ. ಈ ಬಾರಿ ಕೆಲ ಸಂಘರ್ಷಗಳು ಆಗುವ ಸಾಧ್ಯತೆ ಇದೆ. ಜೊತೆಗೆ ಮೂರು ಪಕ್ಷಗಳು ಪರಸ್ಪರ ಠಕ್ಕರ್ ಕೊಡುತ್ತವೆ. ಒಂದು ವೇಳೆ ಭಾರತೀಯ ಜನತಾ ಪಾರ್ಟಿ ಉತ್ತಮ ರೀತಿಯಲ್ಲಿ ಚುನಾಚಣೆಯಲ್ಲಿ ಸ್ಪರ್ಧಿಸಿದರೆ ಅದರ ಗೆಲುವು ಖಡಾಖಂಡಿತ ಎನ್ನುತ್ತದೆ ಜ್ಯೋತಿಷ್ಯ.

ಹೀಗಾಗಿ ಈ ಬಾರಿ ರಾಜ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಎನ್ನುವುದು ಜನ್ಮ ಕುಂಡಲಿ ಪ್ರಕಾರ ಖಚಿತವಾಗಿದೆ. ಈ ಪ್ರಕಾರ ಭಾರತೀಯ ಜನತಾ ಪಕ್ಷವೇ ಜಯ ಗಳಿಸಿದರೆ ಸಿಎಂ ಬಸವರಾಜ ಬೊಮ್ಮಾಯಿ ಅವರೇ ಆಗುತ್ತಾರಾ? ಅಥವಾ ಬೇರೆಯವರಿಗೆ ಅಧಿಕಾರ ನೀಡಲಾಗುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+