ನೇಪಥ್ಯಕ್ಕೆ ಸರಿಯುತ್ತಿರುವ ನಮ್ಮ ಜನಪದ ನೃತ್ಯಗಳು: ಉಳಿಸುವ ಪರಿಯೇನು..?
ರಾಜ್ಯದಲ್ಲಿ ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದ ಬಹುತೇಕ ಜನಪದ ನೃತ್ಯಗಳು ಸದ್ದಿಲ್ಲದೆ ನೇಪಥ್ಯಕ್ಕೆ ಸರಿದಿದ್ದರೆ ಇನ್ನು ಕೆಲವು ನೃತ್ಯಗಳು ಕೆಲವು ಕಾರ್ಯಕ್ರಮಗಳ ವೇದಿಕೆಗಷ್ಟೇ ಸೀಮಿತವಾಗುತ್ತಿವೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡುತ್ತಾ ಹೋದರೆ ಪಾಶ್ಚಿಮಾತ್ಯ ನೃತ್ಯಗಳು ಬಹುಬೇಗ ಯುವ ಜನತೆಯನ್ನು ಆಕರ್ಷಿಸುತ್ತಿರುವುದು ಎದ್ದು ಕಾಣಿಸುತ್ತಿದೆ. ಹೀಗಾಗಿ ನಮ್ಮ ಜನಪದ ನೃತ್ಯಗಳನ್ನು ಉಳಿಸಿಬೆಳೆಸುವ ಕೆಲಸವನ್ನು ಮಾಡುವುದು ಅನಿವಾರ್ಯವಾಗಿದೆ.
ಹಾಗೆ ನೋಡಿದರೆ ಕಲೆ ಸಂಸ್ಕೃತಿ ಎಲ್ಲದರಲ್ಲೂ ಭಿನ್ನತೆ ಹೊಂದಿರುವ ಕೊಡಗಿನಲ್ಲಿಯೇ ಹತ್ತಾರು ನೃತ್ಯಗಳಿದ್ದು ಅವುಗಳೆಲ್ಲವೂ ವಿಭಿನ್ನ ವಿಶಿಷ್ಟವಾಗಿವೆ. ಇವುಗಳಲ್ಲಿ ಸಾಮಾಜಿಕ, ಧಾರ್ಮಿಕ, ಕಾರ್ಯ ಪ್ರದರ್ಶನದ ಮಹತ್ವವಿರುವುದು ಮೇಲ್ನೋಟಕ್ಕೆ ಗೋಚರವಾಗುತ್ತದೆ. ಬೊಳಕಾಟ್, ಉಮ್ಮತ್ತಾಟ್ ಈ ಎಲ್ಲವೂ ಗಮನ ಸೆಳೆಯುವವೇ ಆಗಿವೆ. ಕರ್ನಾಟಕದ ಪ್ರತಿಯೊಂದು ಪ್ರದೇಶಗಳಲ್ಲಿಯೂ ತಮ್ಮ ಆಚಾರ-ವಿಚಾರ, ಸಂಸ್ಕೃತಿ ಮುಂತಾದವುಗಳಿಗೆ ತಕ್ಕಂತೆ ಆಯಾಯ ರೀತಿಯ ಜನಪದ ನೃತ್ಯಗಳಿವೆ.

ನಮ್ಮ ದೇಶದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಹಲವು ಬಗೆಯ ಜನಪದ ನೃತ್ಯಗಳಿರುವುದನ್ನು ನಾವು ಕಾಣಬಹುದು. ಪ್ರತಿ ಜಿಲ್ಲೆಯೂ ತನ್ನದೇ ಆದ ವಿಶಿಷ್ಟ ಪ್ರಕಾರಗಳ ನೃತ್ಯಗಳನ್ನು ಹೊಂದಿರುವುದು ಕಂಡು ಬರುತ್ತವೆ. ಕೊಡಗಿನಲ್ಲಿ ಬೊಳಕಾಟ್, ಉಮ್ಮತ್ತಾಟ್, ಹುತ್ತರಿ, ಕೋಲಾಟ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ, ಮೈಸೂರಲ್ಲಿ ಕಂಸಾಳೆ, ಉತ್ತರ ಕರ್ನಾಟಕದಲ್ಲಿ ಡೊಳ್ಳು ಕುಣಿತ, ಹೀಗೆ ಸಾಗುತ್ತಲೇ ಹೋಗುತ್ತದೆ. ಪ್ರತಿಯೊಂದು ನೃತ್ಯಗಳೂ ವೈವಿಧ್ಯಮಯವಾಗಿ ಮನಸೆಳೆದರೂ ಆಧುನಿಕ ನೃತ್ಯಗಳ ದಾಳಿಗೆ ತತ್ತರಿಸಿ ಮೂಲೆ ಗುಂಪಾಗುತ್ತಿದೆ.
ಗಮನ ಸೆಳೆಯುವ ಸುಗ್ಗಿ ಕುಣಿತ
ರಾಜ್ಯದಲ್ಲಿ ಗುಡ್ಡಗಾಡಿನ ಲಂಬಾಣಿಯವರ ನೃತ್ಯದಿಂದ ಹಿಡಿದು ಬಯಲು ಸೀಮೆಯ ರೈತರ ಸುಗ್ಗಿ ಕುಣಿತಗಳವರೆಗೆ ನಾವು ನೋಡಿದ್ದೇ ಆದರೆ ಒಂದೊಂದು ಜನಪದ ನೃತ್ಯವೂ ವಿಭಿನ್ನ ಹಾಗೂ ವಿಶಿಷ್ಟವಾಗಿದ್ದು, ನಯನ ಮನೋಹರವಾಗಿಯೂ ಆಕರ್ಷಣೀಯವಾಗಿಯೂ, ಬೆಡಗು ಭಿನ್ನಾಣಗಳಿಂದ ಕಂಗೊಳಿಸುತ್ತವೆ. ಅಲ್ಲದೆ, ಇಂತಹ ಹಬ್ಬಕ್ಕೆ ಇಂತಹದ್ದೇ ನೃತ್ಯವನ್ನು ನರ್ತಿಸಬೇಕೆಂಬ ಕಟ್ಟಳೆಯನ್ನು ಸಹ ಜನಪದ ನೃತ್ಯದಲ್ಲಿ ಕಾಣುತ್ತೇವೆ. ಹಬ್ಬ ಹರಿದಿನಗಳಲ್ಲಿ ಜಾತ್ರೆ, ಉತ್ಸವಗಳಲ್ಲಿ, ಸುಗ್ಗಿಯ ಸಮಯಗಳಲ್ಲಿ ವೈವಿದ್ಯಮಯವಾಗಿ ಕುಣಿದು ದುಃಖಗಳನ್ನು ಮರೆತು ಸುಖವನ್ನು ಇತರರೊಂದಿಗೆ ಹಂಚಿಕೊಳ್ಳುವ ಪ್ರಯತ್ನ ಈ ನೃತ್ಯಗಳಿಂದಾಗುತ್ತಿತ್ತು ಎಂದರೆ ಅತಿಶಯೋಕ್ತಿ ಎನಿಸಲಾರದು.
ಮಳೆ, ಗಾಳಿ, ಚಳಿಯನ್ನು ಲೆಕ್ಕಿಸದೆ ಶ್ರಮ ವಹಿಸಿ ದುಡಿದು ರೈತರು, ವರ್ಷದ ಕೊನೆಯಲ್ಲಿ ಧಾನ್ಯದ ರಾಶಿಯನ್ನು ಕಂಡಾಗ ತಮ್ಮ ದುಡಿಮೆಗೆ ಸಿಕ್ಕ ಪ್ರತಿಫಲವೆಂದು ಹಿಗ್ಗುತ್ತಾರೆ. ಈ ದಿನಗಳಲ್ಲಿ ಊರ ದೇವಸ್ಥಾನಗಳ ಮುಂದೆ ರೈತರು ಗುಂಪುಗೂಡಿಕೊಂಡು ನರ್ತಿಸುವುದೇ ಸುಗ್ಗಿ ಕುಣಿತವಾಗಿದೆ. ಇದರ ಆಚರಣೆ, ಕುಣಿತ ವಿಧಾನ ಎಲ್ಲವೂ ಒಂದೆಡೆಯಿಂದ ಮತ್ತೊಂದೆಡೆಗೆ ಭಿನ್ನವಾಗಿದೆ. ಅಲ್ಲದೆ ನಗರ ನಾಗರೀಕತೆಗೆ ಸಿಲುಕಿ ಕೆಲವು ಬದಲಾವಣೆಗಳಾಗಿವೆ. ಆದರೆ ಮೂಲ ಮಾತ್ರ ಬದಲಾಗದೆ ಉಳಿದಿದೆ. ಸಾಂಪ್ರದಾಯಿಕವಾಗಿ ಪೀಳಿಗೆಯಿಂದ ಪೀಳಿಗೆಗೆ ಬಂದ ಈ ಸುಗ್ಗಿ ಕುಣಿತ ಎಲ್ಲೆಡೆಯೂ ಹಾಗೆಯೇ ಉಳಿಯದೆ ಕೆಲವೆಡೆಗಳಲ್ಲಿ ನಿಂತು ಹೋಗಿರುವುದನ್ನು ಸಹ ನಾವು ಕಾಣಬಹುದು.

ನಮ್ಮಿಂದ ದೂರವಾಗುತ್ತಿರುವ ಜನಪದ ನೃತ್ಯಗಳು
ಜನಪದ ನೃತ್ಯಗಳ ಪೈಕಿ ಒಂದಾದ ಗೊರವರ ಕುಣಿತದ ಬಗ್ಗೆ ತಿಳಿಯಲು ಹೊರಟರೆ ಇದರಲ್ಲಿ ಹಲವು ವಿಶೇಷತೆಗಳಿರುವುದನ್ನು ಕಾಣಬಹುದು. ನೃತ್ಯದ ಮೂಲಕವೇ ದೇವರನ್ನು ಪೂಜಿಸುವುದು ಈ ಕುಣಿತದ ಮುಖ್ಯ ಉದ್ದೇಶವಾಗಿದೆ. ನೃತ್ಯವನ್ನು ಮಾಡುವಾಗ ಕುದುರೆಯ ಹೆಜ್ಜೆ, ಧ್ವನಿ, ಓಟಗಳನ್ನು ಅನುಕರಿಸುತ್ತಾರೆ. ಅಲ್ಲದೆ, ಕಂಬಳಿಯ ಹೊದಿಕೆಯಲ್ಲಿ ತನ್ನ ರೂಪವನ್ನು ಮರೆ ಮಾಡಿಕೊಂಡು ಬಂದ ಶಿವ ರಾಕ್ಷಸನನ್ನು ಸಂಹರಿಸಿದ ಎಂದು ನಂಬಿರುವ ಇವರು ಆತನ ಭಕ್ತರಾಗಿ ಕಂಬಳಿಯ ನಿಲುವಂಗಿ, ಢಮರು, ಗಂಟೆ, ತ್ರಿಶೂಲ, ಗೆಜ್ಜೆ, ಚಾವಟಿ, ಭಂಡಾರ, ಚೀಲ, ಕುಲಾಯಿ, ಎದೆಹಾರ, ನಡುಪಟ್ಟಿ ಮುಂತಾದವುಗಳನ್ನು ಧರಿಸುತ್ತಾರೆ. ಮೇಲ್ನೋಟಕ್ಕೆ ಈ ಕುಣಿತ ವಿಚಿತ್ರವಾಗಿ ಕಂಡರೂ ಇದರಲ್ಲಿರುವ ಜನಪದ ಸೊಬಗು ಅರಿವಾಗುತ್ತದೆ.
ಇವತ್ತು ಬಹಳಷ್ಟು ಜನಪದ ನೃತ್ಯಗಳು ನಮ್ಮಿಂದ ದೂರವಾಗುತ್ತಿವೆ. ಅವುಗಳನ್ನು ಪೀಳಿಗೆಗೆ ಪರಿಚಯಿಸಿ ಮುಂದುವರೆಸಿಕೊಂಡು ಹೋಗುವವರ ಕೊರತೆಯೂ ಇದಕ್ಕೆ ಕಾರಣವಾಗಿದೆ. ಇದರ ಜತೆಗೆ ಪಾಶ್ಚಾತ್ಯ ಶಿಕ್ಷಣ, ನಗರ ನಾಗರೀಕತೆಯ ಪ್ರಭಾವವೂ ಕಾರಣವಾಗುತ್ತಿದೆ. ಈ ಜನಪದ ನೃತ್ಯಗಳ ಕುರಿತಂತೆ ಹೇಳುವುದಾದರೆ, ಇಂದು ನಮ್ಮಲ್ಲಿರುವ ಜನಪದ ನೃತ್ಯಗಳು ಪೀಳಿಗೆಯಿಂದ ಪೀಳಿಗೆಗೆ ರೂಢಿಮಯವಾಗಿ ಬಂದವುಗಳಾಗಿವೆ. ಅಷ್ಟೇ ಅಲ್ಲದೆ ಇವು ಅನಾದಿ ಕಾಲದಿಂದಲೂ ಹಳ್ಳಿಗರ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ.

ಜನಪದ ನೃತ್ಯ ಉಳಿಸಿ ಬೆಳಸಬೇಕಿದೆ
ಹಿಂದಿನ ಕಾಲದವರು ಜನಪದ ನೃತ್ಯಕ್ಕೆ ಮಹತ್ವದ ಸ್ಥಾನವನ್ನು ನೀಡಿದ್ದರು. ಈ ನೃತ್ಯಗಳು ಊರಿನ ಸಂಸ್ಕೃತಿಗೆ, ಜನಜೀವನಕ್ಕೆ ಹಿಡಿದ ಕನ್ನಡಿಯಂತಿದ್ದವಲ್ಲದೆ, ಜನರ ಆಚಾರ ವಿಚಾರಗಳಿಗೆ ಪೂರಕವಾಗಿದ್ದವು. ಜಾತಿಮತ ಬೇಧಗಳನ್ನು ದೂರ ಮಾಡಿ ಜನರಲ್ಲಿ ಒಮ್ಮತ ಸೃಷ್ಟಿ ಮಾಡುವ ಪ್ರಯತ್ನವೂ ಈ ಜನಪದ ನೃತ್ಯಗಳಿಂದಾಗುತ್ತಿದ್ದವು. ಆದರೆ ಇವತ್ತು ಕೆಲವೊಂದು ಜನಪದ ನೃತ್ಯಗಳು ನಮ್ಮ ಮುಂದೆ ಅಥವಾ ಕಾರ್ಯಕ್ರಮಗಳ ವೇದಿಕೆಯಲ್ಲಿ ಪ್ರದರ್ಶನವಾಗುತ್ತಿದ್ದರೆ ಉಳಿದಂತೆ ಬಹುತೇಕ ಜನಪದ ನೃತ್ಯಗಳು ವಿನಾಶದ ಅಂಚಿಗೆ ಸರಿಯುತ್ತಿರುವುದು ಬೇಸರದ ಸಂಗತಿಯಾಗಿದೆ. ಸಂಬಂಧಿಸಿದ ಅಕಾಡೆಮಿಗಳು ಇವುಗಳ ಉಳಿವಿಗೆ ಶ್ರಮಿಸಬೇಕಿದೆ.
-
Toxic release postponed: ಯಶ್ ಅಭಿಮಾನಿಗಳಿಗೆ ಆಘಾತ: "ಟಾಕ್ಸಿಕ್" ಸಿನಿಮಾ ಬಿಡುಗಡೆ ದಿಢೀರ್ ಮುಂದೂಡಿಕೆ -
ಕರ್ನಾಟಕ ವಿದ್ಯುತ್ ನಿಗಮ ಬೆಳಕಿನ ಸಂಸ್ಥೆಗೆ ಕತ್ತಲೆಯ ಛಾಯೆ: ಸರ್ಕಾರಿ ನಿರ್ಲಕ್ಷದ ಒಳನೋಟ -
Bengaluru: ‘92 ಲಕ್ಷದ ಪ್ಯಾಕೇಜ್ ಇದ್ದರೂ ಉಳಿಯಲಿಲ್ಲ ಕೆಲಸ’; ಒಂದೇ ದಿನ ಶೇ. 40ರಷ್ಟು ಸಿಬ್ಬಂದಿ ವಜಾ ಮಾಡಿದ ಐಟಿ ಕಂಪನಿ -
Karna Serial: "ಕರ್ಣ" ಧಾರಾವಾಹಿಯಿಂದ ಹೊರಬಂದ ಟಿ.ಎಸ್.ನಾಗಾಭರಣ, ಹಿರಿಯ ನಟ ಅಭಿಜಿತ್ ಎಂಟ್ರಿ -
Gold Rate: ಮಾರುಕಟ್ಟೆಯಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಹೀಗಿದೆ, ನಿಮ್ಮ ನಗರದ ದರ ಪರಿಶೀಲಿಸಿ -
'ವಂತಾರ'ಕ್ಕೆ ಒಂದು ವರ್ಷ: ಆರೋಗ್ಯ ಸುಧಾರಿಸಿದ ಅನೇಕ ಪ್ರಾಣಿಗಳು ಮರಳಿ ಕಾಡಿಗೆ -
Elnaaz Norouzi: ಭಾರತದಲ್ಲೇ ನೆಲೆಸಿದ್ದಾರೆ ಇರಾನ್ ಸುಂದರಿ, ಮತ್ತೆ ಅಲ್ಲಿಗೆ ಕಾಲಿಟ್ಟರೆ ನನ್ನ ಕೊಲ್ತಾರೆ ಎಂದ ನಟಿ ಎಲ್ನಾಜ್ -
South India: ದಕ್ಷಿಣ ಭಾರತದಲ್ಲಿ ಪ್ರಾದೇಶಿಕ ಪಕ್ಷಗಳ ಪ್ರಭಾವ: ತಮಿಳುನಾಡು ಮುನ್ನಡೆ, ಕರ್ನಾಟಕದಲ್ಲಿ ಏಕೆ ಹಿನ್ನಡೆ -
Middle East War: ಗಲ್ಫ್ ದೇಶಗಳಿಗೆ ರಫ್ತು ಸ್ಥಗಿತ; ರಾಜ್ಯದಲ್ಲೇ ಉಳಿದ ತರಕಾರಿ, ಮೊಟ್ಟೆ, ಹಾಲಿನ ಉತ್ಪನ್ನ- ರೈತರು ಕಂಗಾಲು -
Bengaluru: ಗೊರಗುಂಟೆಪಾಳ್ಯದ ಟ್ರಾಫಿಕ್ಗೆ ಸಿಗಲಿದ್ಯಾ ಮುಕ್ತಿ? ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು 'ಸುರಂಗ ರಸ್ತೆ' ಪ್ರಸ್ತಾಪ -
Rama Navami 2026: ಶ್ರೀರಾಮನವಮಿ ದಿನಾಂಕ, ಮುಹೂರ್ತ, ಮಹತ್ವ, ಪೂಜಾ ವಿಧಾನ ಸೇರಿ ಸಂಪೂರ್ಣ ವಿವರ -
ಅಮೆರಿಕ ಮತ್ತು ಬ್ರಿಟನ್ ನಡುವೆ ಬಿರುಕು, ಡೊನಾಲ್ಡ್ ಟ್ರಂಪ್ ತೀವ್ರ ಅಸಮಾಧಾನ | Operation Roaring Lion












Click it and Unblock the Notifications