Koratagere Constituency : ಕಾಂಗ್ರೆಸ್, ಜೆಡಿಎಸ್ ಕೋಟೆಯಲ್ಲಿ ಕಮಲ ಅರಳುವುದೇ? ಒಂದು ವರದಿ
ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಪ್ರಭಾವವಿದೆ. ಬಿಜೆಪಿ ಇಲ್ಲಿ ತನ್ನ ಪ್ರಭಾವ ಬೀರುವಲ್ಲಿ ಸೋತಿದೆ. ಹಾಗಾಗಿ ನೇರ ಹಣಾಹಣಿ ಇರುವುದು ಮಾತ್ರ ಕೈ ಮತ್ತು ದಳದ ಅಭ್ಯರ್ಥಿ ನಡುವೆ.
ತುಮಕೂರು, ಫೆಬ್ರವರಿ.21: ಕಾಂಗ್ರೆಸ್, ಜೆಡಿಎಸ್‌ನ ಪ್ರಬಲ ಕೋಟೆಯಾಗಿರುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ತುಮಕೂರು ಜಿಲ್ಲೆಯಲ್ಲಿದೆ. ಪ್ರಸ್ತುತ ಕಾಂಗ್ರೆಸ್ ನಾಯಕ, ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದು ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿದೆ.
ತುಮಕೂರು ಜಿಲ್ಲೆಯು ಚಿಕ್ಕನಾಯಕನಹಳ್ಳಿ, ತಿಪಟೂರು, ತುರುವೇಕೆರೆ, ಕುಣಿಗಲ್, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಸಿರಾ, ಪಾವಗಡ ಮತ್ತು ಮಧುಗಿರಿ ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.
ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಪ್ರಭಾವವಿದೆ. ಬಿಜೆಪಿ ಇಲ್ಲಿ ತನ್ನ ಪ್ರಭಾವ ಬೀರುವಲ್ಲಿ ಸೋತಿದೆ. ಹಾಗಾಗಿ ನೇರ ಹಣಾಹಣಿ ಇರುವುದು ಮಾತ್ರ ಕೈ ಮತ್ತು ದಳದ ಅಭ್ಯರ್ಥಿ ನಡುವೆ.

ಮತ್ತೆ ಮುಖಾಮುಖಿಯಾಗುತ್ತಾರಾ ಜಿ.ಪರಮೇಶ್ವರ್, ಸುಧಾಕರ್ ಲಾಲ್?
ಚುನಾವಣಾ ಸಮರಕ್ಕೆ ಸಜ್ಜಾಗಿರುವ ಕೊರಟಗೆರೆ ಕ್ಷೇತ್ರದಲ್ಲಿ 2018ರ ಚುನಾವಣೆಯಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ ಪರಮೇಶ್ವರ್ ಜಯ ಗಳಿಸಿದ್ದರು. ಜನತಾ ದಳ (ಜಾತ್ಯತೀತ)ಯ ಸುಧಾಕರ್ ಲಾಲ್ ಕೇವಲ 7,619 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು.
2013ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ ಪರಮೇಶ್ವರ ಅವರನ್ನು ಜೆಡಿಎಸ್ ಅಭ್ಯರ್ಥಿಯಾಗಿದ್ದ ಸುಧಾಕರ್ ಲಾಲ್ ಸೋಲಿಸಿದ್ದರು. ಅದು 18,155 ಮತಗಳ ಅಂತರದಿಂದ. 1989 ರಿಂದ ಸೋಲಿಲ್ಲದ ಸರದಾರನಂತೆ ಗೆಲುವು ದಾಖಲಿಸುತ್ತಿದ್ದ ಅವರನ್ನು ಸುಧಾಕರ್ ಲಾಲ್ ಸೋಲು ಅನುಭವಿಸುವಂತೆ ಮಾಡಿದ್ದರು.
ಈ ಬಾರಿಯೂ ಕಾಂಗ್ರೆಸ್‌ನಿಂದ ಜಿ ಪರಮೇಶ್ವರ ಅಭ್ಯರ್ಥಿಯಾಗುವ ಸಂಭವವಿದ್ದು, ಜೆಡಿಎಸ್ ಅಭ್ಯರ್ಥಿಯಾಗಿ ಸುಧಾಕರ್ ಲಾಲ್ ಕಣಕ್ಕಿಳಿಯಲಿದ್ದಾರೆ. ಮತ್ತೆ ಕಳೆದೆರಡು ಬಾರಿಯಂತೆ ಇಬ್ಬರ ಮುಖಾಮುಖಿಗೆ ಕೊರಟಗೆರೆ ಸಾಕ್ಷಿಯಾಗಲಿದೆ ಎನ್ನುವ ಲೆಕ್ಕಾಚಾರವಿದೆ.

ದಲಿತ ನಾಯಕ ಜಿ.ಪರಮೇಶ್ವರ್ ಕೈ ಹಿಡಿಯಲಿದ್ದಾರಾ ಮತದಾರ?
ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಒಬ್ಬರಾಗಿರುವ ಜಿ.ಪರಮೇಶ್ವರ್ ಪ್ರಸ್ತುತ ಕರ್ನಾಟಕ ವಿಧಾನಸಭೆಯಲ್ಲಿ ಕೊರಟಗೆರೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ದಲಿತ ಮುಖಂಡರಾಗಿರುವ ಇವರು ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜ್ಯದ ಉಪಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸತತ ಎರಡು ಅವಧಿಗೆ ಕೆಪಿಸಿಸಿ ಅಧ್ಯಕ್ಷರಾಗಿದ್ದ ಇವರು ಅತಿ ದೀರ್ಘ ಕಾಲ ಈ ಹುದ್ದೆ ಅಲಂಕರಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
1993 ರಿಂದ ವಿವಿಧ ಸರಕಾರಗಳ ಆಡಳಿತಗಳಲ್ಲಿ ಹಲವಾರು ಖಾತೆಗಳ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. 1989, 1999 ಮತ್ತು 2004 ರಲ್ಲಿ ಮಧುಗಿರಿ ವಿಧಾನಸಭಾ ಕ್ಷೇತ್ರಗಳು ಹಾಗೂ ಕ್ಷೇತ್ರ ಪುನರ್ವಿಂಗಡಣೆಯ ನಂತರ 2008 ಮತ್ತು 2018 ರಲ್ಲಿ ಕೊರಟಗೆರೆ ಕ್ಷೇತ್ರವನ್ನು ಪರಮೇಶ್ವರ ಪ್ರತಿನಿಧಿಸಿದ್ದಾರೆ. ರಾಜ್ಯದ ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿದ್ದಾರೆ. ಈ ಕಾರಣಕ್ಕಾಗಿಯೇ ಕೊರಟಗೆರೆಯಲ್ಲಿ ಮತ್ತೆ ಕಾಂಗ್ರೆಸ್‌ಗೆ ಮತದಾರ ಮನ್ನಣೆ ನೀಡಬಹುದು ಎನ್ನಲಾಗಿದೆ.

ಮತ್ತೆ ಕೊರಟಗೆರೆಯಲ್ಲಿ ಸುಧಾಕರ್ ಲಾಲ್ ಗೆಲುವು ಸಾಧ್ಯವೆ?
ಜಾತ್ಯಾತೀತ ಜನತಾದಳದ ಅಭ್ಯರ್ಥಿ ಸುಧಾಕರ್ ಲಾಲ್ 2018ರಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಿ.ಪರಮೇಶ್ವರ ಅವರ ವಿರುದ್ಧ ಕಣಕ್ಕಿಳಿದಿದ್ದರು. ಬೇರೆ ಪಕ್ಷಗಳ ಅಭ್ಯರ್ಥಿಗಳಿದ್ದೂ ಅದು ಕಾಂಗ್ರೆಸ್, ಜೆಡಿಎಸ್ ನೇರ ಹಣಾಹಣಿ ಎಂಬುದು ಎಲ್ಲರಿಗೂ ತಿಳಿದಿತ್ತು. ಈ ಚುನಾವಣೆಯಲ್ಲಿ ಸುಧಾಕರ್ ಲಾಲ್ ಸೋಲು ಕಂಡಿದ್ದಾರೆ. ಆದರೆ, ಇಲ್ಲಿ ಗಮನಿಸಬೇಕಾಗಿರುವುದು ಸೋಲಿನ ಅಂತರ. ಹೌದು, ಸುಧಾಕರ್ ಲಾಲ್ ಸೋಲು ಕಂಡಿದ್ದು, ಕೇವಲ 7,619 ಮತಗಳ ಅಂತರದಿಂದ.
ಅದರ ಹಿಂದಿನ ಚುನಾವಣೆ ಅಂದರೆ 2013ರ ಚುನಾವಣೆಯಲ್ಲಿ ಸುಧಾಕರ್ ಲಾಲ್ , ಜಿ. ಪರಮೇಶ್ವರ್ ವಿರುದ್ಧ 18,155 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದರು. ಹೀಗಾಗಿ ಈ ಬಾರಿ ಮತದಾರ ಯಾರ ಕಡೆ ಹೋಗುತ್ತಾನೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಕೊರಟಗೆರೆಯಲ್ಲಿ ಬಿಜೆಪಿಗಿಲ್ಲ ಬುನಾದಿ!
ಬೆಟ್ಟ ಗುಡ್ಡಗಳ ಈ ಕ್ಷೇತ್ರದಲ್ಲಿ ಬಿಜೆಪಿಗೆ ಬುನಾದಿಯಿಲ್ಲ. ಮೊದಲಿನಿಂದಲೂ ಬಿಜೆಪಿ ಇಲ್ಲಿ ನೆಲೆಯೂರಲೂ ಸಾಧ್ಯವಾಗಿಲ್ಲ. ಬಿಜೆಪಿಯಿಂದ ಅಭ್ಯರ್ಥಿಗಳು ಕಣಕ್ಕಿಳಿದರೂ ಕೂಡ 10% ಮತಗಳನ್ನು ಪಡೆಯಲು ಸಾಧ್ಯವಾಗಿಲ್ಲ. ಆದರೆ, ಇತ್ತೀಚೆಗೆ ಪರಿಸ್ಥಿತಿ ಕೊಂಚ ಮಟ್ಟಿಗೆ ಬದಲಾಗಿದ್ದು, ಏನಾದರೂ ಇತಿಹಾಸ ಸೃಷ್ಟಿಯಾಗುತ್ತೆಯಾ ನೋಡಬೇಕು.
2018 ರಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ವೈ ಹುಚ್ಚಯ್ಯ ಪಡೆದದ್ದು ಕೇವಲ 12,190 ಮತಗಳು. ಈ ಬಾರಿ ಬಿಜೆಪಿಯ ಟಿಕೆಟ್ ಆಕಾಂಕ್ಷಿ ಎಂದು ಪ್ರಚಾರ ಆರಂಭಿಸಿರುವ ಕೆ.ಎಂ ಮುನಿಯಪ್ಪ, ಟಿಕೆಟ್ ಕೊಟ್ಟರೆ ಗೆಲ್ಲುತ್ತೇನೆ ಎಂಬ ಉತ್ಸಾಹದಲ್ಲಿದ್ದಾರೆ.
ಕೊರಟಗೆರೆ ವಿಧಾನಸಭಾ ಕ್ಷೇತ್ರದಲ್ಲಿ ತಳ ಮಟ್ಟದಲ್ಲಿದ್ದ ಪಕ್ಷವನ್ನು ಸತತ 4 ವರ್ಷಗಳಿಂದ ಜನತೆಯ ಕಷ್ಟಗಳಿಗೆ ಸ್ಪಂದಿಸುವುದರ ಮೂಲಕ ಸರ್ಕಾರಗಳ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿದ್ದೇನೆ. ಚುನಾವಣೆಯಲ್ಲಿ ನನಗೆ ಟಿಕೇಟ್ ನೀಡಿದರೆ ಕ್ಷೇತ್ರದಲ್ಲಿ ಬಿಜೆಪಿ ಗೆಲುವಿನ ಬಾವುಟ ಹಾರಿಸುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ ಟಿಕೆಟ್ ಆಕ್ಷಾಂಕಿ ಅಭ್ಯರ್ಥಿ ಕೆ.ಎಂ ಮುನಿಯಪ್ಪ.

ಪರಮೇಶ್ವರ್ ಗೆಲುವಿಗೆ ದಲಿತ ಸಿಎಂ ಕೂಗು ನೆರವಾಗುತ್ತದೆಯೇ?
ರಾಜ್ಯದಲ್ಲಿ ಹಲವು ವರ್ಷಗಳಿಂದ ಕೇಳಿ ಬರುತ್ತಿರುವ ಕೂಗು ದಲಿತ ಸಿಎಂ. ಹೌದು, ಈ ಬಾರಿಯೂ ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟೆ ನಡೆಯುತ್ತಿದೆ ಎಂಬ ವರದಿಗಳಿವೆ. ಇದರ ಜೊತೆಗೆ ತಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿ ಎಂದು ಪರಮೇಶ್ವರ ಹೇಳಿಕೊಂಡಿದ್ದಾರೆ.
ಹೀಗಾಗಿ, ದಲಿತ, ಇತರ ಪ್ರಮುಖ ಸಮುದಾಯಗಳು, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವಿಶ್ವಾಸ ಗಳಿಸಿರುವ ಜಿ.ಪರಮೇಶ್ವರ ಅವರಿಗೆ, ಈ ಬಾರಿ ದಲಿತ ಸಿಎಂ ಕೂಗು ಕೂಡ ಗೆಲುವಿಗೆ ಕಾರಣವಾಗಬಹುದು ಎಂಬ ಲೆಕ್ಕಾಚಾರಗಳಿವೆ.
*ಮತದಾರರ ಪ್ರಮಾಣ*
1. ಪರಿಶಿಷ್ಟ ಜಾತಿ (SC) ಮತದಾರರು ಸರಿಸುಮಾರು 47,576 ರಷ್ಟಿದ್ದು, 2011 ರ ಜನಗಣತಿಯ ಪ್ರಕಾರ 23.59% ರಷ್ಟಿದೆ.
2. ಪರಿಶಿಷ್ಟ ಪಂಗಡ (ST) ಮತದಾರರು ಸರಿಸುಮಾರು 21,761 ಇದ್ದು, ಇದು 2011 ರ ಜನಗಣತಿಯ ಪ್ರಕಾರ 10.79% ಇದೆ.
3. ಮುಸ್ಲಿಂ ಮತದಾರರು ಸರಿಸುಮಾರು 14,521 ರಷ್ಟಿದ್ದು, ಮತದಾರರ ಪಟ್ಟಿ ವಿಶ್ಲೇಷಣೆಯ ಪ್ರಕಾರ ಸುಮಾರು 7.2% ಇದ್ದಾರೆ.
4. ಗ್ರಾಮೀಣ ಮತದಾರರು ಸರಿಸುಮಾರು 1,89,155 ಆಗಿದ್ದು, 2011 ರ ಜನಗಣತಿಯ ಪ್ರಕಾರ 93.79% ರಷ್ಟಿದೆ.
5. ನಗರ ಪ್ರದೇಶದ ಮತದಾರರು ಸರಿಸುಮಾರು 12,524 ಆಗಿದ್ದು, 2011 ರ ಜನಗಣತಿಯ ಪ್ರಕಾರ 6.21% ರಷ್ಟಿದೆ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ












Click it and Unblock the Notifications