Karnataka 7th Pay Commission; ರಜೆ, ಪಿಂಚಣಿ, ಭತ್ಯೆ ಏರಿಕೆ ವಿವರ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕರ್ನಾಟಕ ರಾಜ್ಯ 7ನೇ ವೇತನ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಉತ್ತರದಲ್ಲಿ ಸರ್ಕಾರಿ ನೌಕರರ ರಜೆ, ಪಿಂಚಣಿ, ಭತ್ಯೆ ವಿವರಗಳನ್ನು ನೀಡಲಾಗಿದೆ.

ರಾಜ್ಯ ಸರ್ಕಾರಿ ನೌಕರರ ಸಂಘದ ಬೇಡಿಕೆಯಂತೆ ಸರ್ಕಾರ ಸುಧಾಕರ್ ರಾವ್ ಅಧ್ಯಕ್ಷತೆಯ ಕರ್ನಾಟಕ ರಾಜ್ಯ 7ನೇ ವೇತನ ಆಯೋಗ ರಚನೆ ಮಾಡಿದೆ. ರಾಜ್ಯದಲ್ಲಿ ಚುನಾವಣೆ ಎದುರಾಗುವುದರಿಂದ ಆಯೋಗ ಸರ್ಕಾರಕ್ಕೆ ಯಾವಾಗ ಪ್ರಸ್ತಾವನೆ ಸಲ್ಲಿಸಲಿದೆ? ಎಂದು ಕಾದು ನೋಡಬೇಕು.

ವೇತನ ಆಯೋಗ ತನ್ನ ಪರಿಶೀಲನಾ ಅಂಶಗಳ ಹಿನ್ನಲೆಯಲ್ಲಿ ಪ್ರಶ್ನಾವಳಿಯನ್ನು ಬಿಡುಗಡೆ ಮಾಡಿದೆ. ಈ ಪ್ರಶ್ನಾವಳಿಗಳಿಗೆ ಉತ್ತರಿಸುವ ದಿನಾಂಕವನ್ನು ಫೆಬ್ರವರಿ 28ರ ತನಕ ವಿಸ್ತರಣೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಈಗಾಗಲೇ ಆಯೋಗದ ಪ್ರಶ್ನಾವಳಿಗೆ ಉತ್ತರವನ್ನು ಸಲ್ಲಿಕೆ ಮಾಡಿದೆ. ಈ ಉತ್ತರದಲ್ಲಿ ಹಲವಾರು ಅಂಶಗಳನ್ನು ಪ್ರಸ್ತಾಪ ಮಾಡಿದೆ.

ಸರ್ಕಾರಿ ನೌಕರರ ರಜೆ, ಪಿಂಚಣಿ, ನಿವೃತ್ತಿ ಪಿಂಚಣಿ, ವಿವಿಧ ಭತ್ಯೆಗಳ ಏರಿಕೆ ಕುರಿತು ಸಹ ವಿವರಣೆ ನೀಡಲಾಗಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ 7ನೇ ರಾಜ್ಯ ವೇತನ ಆಯೋಗಕ್ಕೆ ನೀಡಿರುವ ಉತ್ತರದ ಪ್ರತಿಯನ್ನು ಪ್ರಕಟಣೆ ಮೂಲಕ ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ಸರ್ಕಾರ 2023-24ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ 7ನೇ ವೇತನ ಆಯೋಗ ಕುರಿತು ಯಾವುದೇ ಪ್ರಸ್ತಾಪ ಮಾಡಿಲ್ಲ. ನಾವು ವರದಿ ನಿರೀಕ್ಷೆ ಮಾಡುತ್ತಿದ್ದೇವೆ ಎಂದು ಮುಖ್ಯಮಂತ್ರಿಗಳು ಬಜೆಟ್ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸರ್ಕಾರಿ ನೌಕರರು ಯಾವ ಭತ್ಯೆ ಏರಿಕೆಗೆ ಬೇಡಿಕೆ ಇಟ್ಟಿದ್ದಾರೆ ಎಂಬ ವಿವರ ಇಲ್ಲಿದೆ...

ಯಾವ, ಯಾವ ಭತ್ಯೆಗಳು ಹೆಚ್ಚಳ

ಯಾವ, ಯಾವ ಭತ್ಯೆಗಳು ಹೆಚ್ಚಳ

ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಉತ್ತರದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಜಾರಿಯಲ್ಲಿರುವ ಮಕ್ಕಳ ಶೈಕ್ಷಣಿಕ ಭತ್ಯೆ ಯೋಜನೆಯನ್ನು ರಾಜ್ಯ ಸರ್ಕಾರಿ ನೌಕರರಿಗೂ ಸಹ ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಹೇಳಿದೆ.

ಪ್ರಸ್ತುತ ವಿಶೇಷ ಸಂಯೋಜಿತ ಅಥವಾ ಸಾಮಾನ್ಯ ಶಾಲೆಗಳಲ್ಲಿ 1ನೇ ತರಗತಿಯಿಂದ 12ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಗರಿಷ್ಠ 18 ವರ್ಷಗಳ ವಯೋಮಿತಿ ಮೀರದ ರಾಜ್ಯ ಸರ್ಕಾರಿ ನೌಕರರ ಅವಲಂಬಿತ ಅಂಧ ಮತ್ತು ಚಲನ ವೈಕಲ್ಯತೆ ಹೊಂದಿರುವ ಮಕ್ಕಳ ಶಿಕ್ಷಣಕ್ಕಾಗಿ ನೀಡುತ್ತಿರುವ ಮಾಸಿಕ ರೂ.1000ಗಳನ್ನು ರೂ. 2000ಗಳಿಗೆ ಹೆಚ್ಚಿಸುವುದರ ಜೊತೆಗೆ ವಿದ್ಯಾಭ್ಯಾಸ ಪೂರ್ಣಗೊಳ್ಳುವವರೆಗೆ ವಿಸ್ತರಿಸುವುದು ಎಂದು ತಿಳಿಸಿದೆ.

ಪ್ರೋತ್ಸಾಹಧನ, ಭತ್ಯೆಯ ವಿವರ

ಪ್ರೋತ್ಸಾಹಧನ, ಭತ್ಯೆಯ ವಿವರ

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತನ್ನ ಉತ್ತರದಲ್ಲಿ ಈ ಕೆಳಗಿನ ಮುಂಗಡ ಮತ್ತು ಭತ್ಯೆಗಳನ್ನು ಪರಿಷ್ಕರಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡುವುದು ಎಂದು ಹೇಳಿದೆ.

ಶವಸಂಸ್ಕಾರ ಭತ್ಯೆ: ಪ್ರಸ್ತುತ ಇರುವ ಶವಸಂಸ್ಕಾರ ಭತ್ಯೆ ರೂ.15000 ಗಳನ್ನು ರೂ. 30,000 ಗಳಿಗೆ ಹೆಚ್ಚಳ ಮಾಡುವುದು. ಸೋಲಾರ್ ವಾಟರ್ ಹೀಟರ್ ಖರೀದಿ ಮುಂಗಡವನ್ನು ಕನಿಷ್ಟ ರೂ. 50,000 ಸಾವಿರಕ್ಕೆ ಹೆಚ್ಚಿಸುವುದು ಎಂದು ಉತ್ತರದಲ್ಲಿ ಹೇಳಿದೆ.

ಸರ್ಕಾರಿ ಶಾಲಾ-ಕಾಲೇಜುಗಳನ್ನು ಪ್ರೋತ್ಸಾಹಿಸುವುದು. ರಾಜ್ಯ ಸರ್ಕಾರಿ ನೌಕರರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ವ್ಯಾಸಂಗ ಮಾಡಿಸಿದಲ್ಲಿ ಪ್ರೋತ್ಸಾಹಧನವನ್ನು ನೀಡಲು ಶಿಫಾರಸ್ಸು ಮಾಡುವುದು ಎಂದು ಉತ್ತರದಲ್ಲಿ ತಿಳಿಸಿದೆ.

ರಜಾ ಸೌಲಭ್ಯಗಳು

ರಜಾ ಸೌಲಭ್ಯಗಳು

7ನೇ ರಾಜ್ಯ ವೇತನ ಆಯೋಗ ಸರ್ಕಾರಿ ಸೇವೆಯಲ್ಲಿ ಹಾಲಿ ಜಾರಿಯಲ್ಲಿರುವ ಕೆಲಸದ ಅವಧಿ, ರಜಾ ಸೌಲಭ್ಯಗಳು ಮತ್ತು ಸಾರ್ವಜನಿಕ ರಜಾ ದಿನಗಳ ಬಗ್ಗೆ ನಿಮ್ಮ ದೃಷ್ಟಿಕೊನವೇನು? ಎಂದು ಪ್ರಶ್ನಾವಳಿಯಲ್ಲಿ ಕೇಳಿದೆ.

ರಜಾ ಸೌಲಭ್ಯಗಳ ನೀಡುವಿಕೆಯ ಹಾಗೂ ಸಾರ್ವಜನಿಕ ರಜಾ ಕುರಿತಂತೆ, ರಜೆಯನ್ನು ರಾಜಕೀಯ, ಧಾರ್ಮಿಕ ಮತ್ತು ಇತರೆ ಉದ್ದೇಶಗಳಿಗಾಗಿ ಸರ್ಕಾರವು ಘೋಷಿಸಿದ್ದು, ಇದು ಸಂಘದ-ನೌಕರರ ಬೇಡಿಕೆಯಾಗಿರುವುದಿಲ್ಲ ಎಂದು ಉತ್ತರದಲ್ಲಿ ಹೇಳಿದೆ.

ಅಲ್ಲದೇ ಕರ್ನಾಟಕ ರಾಜ್ಯದಲ್ಲಿ ಕಛೇರಿ ಕೆಲಸದ ವೇಳೆಯನ್ನು ಹಾಲಿಯಿರುವ ಬೆಳಗ್ಗೆ 10ಕ್ಕೆ ಬದಲಾಗಿ ಬೆಳಗ್ಗೆ 9.30ರಿಂದ ಹಾಗೂ ಸಂಜೆ 5.30ಕ್ಕೆ ಬದಲಾಗಿ ಸಂಜೆ 6.00 ರವರೆಗೆ ನಿಗದಿಪಡಿಸುವುದು. ಮುಂದುವರೆದು ಶೈಕ್ಷಣಿಕ ಸಂಸ್ಥೆಗಳನ್ನು ಹೊರತುಪಡಿಸಿ ಸರ್ಕಾರಿ ಕಛೇರಿಯ ವಾರದ ಕರ್ತವ್ಯದ ದಿನಗಳನ್ನು ಶನಿವಾರ, ಭಾನುವಾರ ಹೊರತುಪಡಿಸಿ ವಾರಕ್ಕೆ ಐದು ದಿನಗಳಂತೆ ಕರ್ತವ್ಯದ ದಿನಗಳೆಂದು ನಿಗದಿಪಡಿಸುವುದು ಎಂದು ತಿಳಿಸಿದೆ.

ನಗರ ಮತ್ತು ಪಟ್ಟಣಗಳಲ್ಲಿ ಅನಿಯಮಿತ ಸಾರಿಗೆ ವ್ಯವಸ್ಥೆ ಮತ್ತು ಸಂಚಾರ ದಟ್ಟಣೆಯಿಂದಾಗಿ ಬೆಳಗ್ಗೆ ಮತ್ತು ಸಂಜೆ ನೌಕರರು ಕಛೇರಿಗೆ ಬಂದು-ಹೋಗುವಾಗ ಸಾರಿಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಪ್ರಸ್ತುತ ಕೇಂದ್ರ ಸರ್ಕಾರದ ಮಾದರಿಯಂತೆ ಕಛೇರಿ ಸಮಯದ ಬದಲಾವಣೆ ಮಾಡುವುದು ಅವಶ್ಯಕತೆ ಇರುತ್ತದೆ ಎಂದು ವಿವರಣೆ ನೀಡಿದೆ.

ನಿವೃತ್ತಿ ವೇತನದ ನಿಯಮ, ಪಿಂಚಣಿ

ನಿವೃತ್ತಿ ವೇತನದ ನಿಯಮ, ಪಿಂಚಣಿ

7ನೇ ವೇತನ ಆಯೋಗ ಈಗ ಚಾಲ್ತಿಯಲ್ಲಿರುವ ನಿವೃತ್ತಿ ವೇತನದ ನಿಯಮ ಮತ್ತು ನಿಬಂಧನೆಗಳಿಂದ ಪಿಂಚಣಿದಾರರಿಗೆ ಅದರಲ್ಲೂ ತೀರಾ ವಯಸ್ಸಾದ ಪಿಂಚಣಿದಾರರಿಗೆ ನಿವೃತ್ತಿ ವೇತನವನ್ನು ಸಕಾಲದಲ್ಲಿ ಪಡೆದುಕೊಳ್ಳುವಲ್ಲಿ ಏನಾದರೂ ತೊಂದರೆಗಳಿವೆಯೇ? ಹಾಗಿದ್ದಲ್ಲಿ, ಇವುಗಳನ್ನು ಸರಳೀಕರಣಗೊಳಿಸಲು ನೀವು ಸಲಹೆ ನೀಡಲು ಬಯಸುವಿರಾ? ಎಂದು ಹೇಳಿದೆ.

ರಾಜ್ಯ ಸರ್ಕಾರಿ ನೌಕರರ ಸಂಘ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಲ್ಲಿ, ಸೇವೆಗೆ ಸೇರುವ, ವರ್ಗಾವಣೆ ಹೀಗೆ ಸೇವೆಗೆ ಸಂಬಂಧಿಸಿದ ಎಲ್ಲಾ ಘಟನೆಗಳ ಬಗ್ಗೆ ಸಂಬಂಧಿತ ದಾಖಲೆಗಳ ಸಹಿತ ಉದಾಹರಣೆಗೆ ಕುಟುಂಬ ಸದಸ್ಯರು ಮತ್ತು ನಾಮನಿರ್ದೇಶಗಳ ಮಾಹಿತಿಯನ್ನು ಕಲೆ ಹಾಕುವುದು, ನಿವೃತ್ತಿಯಾಗುವ ಸಮಯದಲ್ಲಿ ಪಿಂಚಣಿಗೆ ಸಂಬಂಧಪಟ್ಟ ದಾಖಲೆಗಳನ್ನು ಒದಗಿಸುವುದರಿಂದ ನಿವೃತ್ತಿಯಾದ ಒಂದು ತಿಂಗಳೊಳಗಾಗಿ ಯಾವುದೇ ಸಮಸ್ಯೆ ಇಲ್ಲದೆ ನಿವೃತ್ತಿ ಸೌಲಭ್ಯಗಳನ್ನು ಪಡೆಯುವ ಅವಕಾಶವನ್ನು ಕಲ್ಪಿಸುವುದು.

ಪ್ರಸ್ತುತ ಜಾರಿಯಲ್ಲಿರುವ ಹೆಚ್. ಆರ್. ಎಂ. ಎಸ್. ತಂತ್ರಾಂಶವನ್ನು ಬಲಪಡಿಸಿ ನಿವೃತ್ತಿ ಹೊಂದುವ ನೌಕರರಿಗೆ ಪಿಂಚಣಿ ಸವಲತ್ತುಗಳನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದ ಮೂಲಕವೇ ಪಡೆಯುವ ಅವಕಾಶ ಕಲ್ಪಿಸುವುದು ಎಂದು ಹೇಳಿದೆ.

ನಿವೃತ್ತಿ ವೇತನ ನೌಕರರಿಗೆ ಅನುಕೂಲ

ನಿವೃತ್ತಿ ವೇತನ ನೌಕರರಿಗೆ ಅನುಕೂಲ

ಪೂರ್ಣ ನಿವೃತ್ತಿ ವೇತನವನ್ನು ಪಡೆಯಲು ಪ್ರಸ್ತುತ 30 ವರ್ಷಗಳ ಅರ್ಹತಾ ಅವಧಿಯನ್ನು ನಿಗದಿಮಾಡಿದ್ದು, ಈ ಅವಧಿಯನ್ನು 25 ವರ್ಷಗಳಿಗೆ ನಿಗದಿಪಡಿಸಲು ಹಾಗೂ ಪಿಂಚಣಿ ನೀಡಲು ಹೆಚ್ಚಿನ ಸರಳೀಕೃತ ಸೂತ್ರವನ್ನು ಶಿಫಾರಸು ಮಾಡುವುದು ಅವಶ್ಯಕವೆಂದು ಸಂಘವು ಅಭಿಪ್ರಾಯಪಟ್ಟಿದ್ದು ಅದು ನೌಕರರಿಗೆ ಪ್ರಯೋಜನವಾಗುವುದಲ್ಲದೆ, ಕೇಂದ್ರ ವೇತನ ಆಯೋಗ ಶಿಫಾರಸು ಮಾಡಿರುವ ಸೂತ್ರಕ್ಕೆ ಹೋಲಿಕೆಯಾಗಲಿದೆ ಎಂದು ಹೇಳಿದೆ.

ಪೂರ್ಣ ಪ್ರಮಾಣದ ಪಿಂಚಣಿಗಾಗಿ ನೌಕರನು ಸಲ್ಲಿಸಿರುವ 25 ವರ್ಷಗಳ ಅರ್ಹತಾದಾಯಕ ಸೇವಾಧಿಯನ್ನು ಪರಿಗಣಿಸುವುದು ಹಾಗೂ ನಿವೃತ್ತಿ ಸಮಯದ ಕಳೆದ 10 ತಿಂಗಳಲ್ಲಿ ಪಡೆಯುತ್ತಿದ್ದ ಸರಾಸರಿ ಸಂಬಳ ಅಥವಾ ಅಂತಿಮವಾಗಿ ಪಡೆದ ವೇತನದ ಶೇ. 50 ಇದರಲ್ಲಿ ಯಾವುದು ಪ್ರಯೋಜನಕಾರಿಯೋ ಅದನ್ನು ಪಿಂಚಣಿ ಎಂದು ಪರಿಗಣಿಸುವುದು.

ವಿವಿಧ ಅಂಶಗಳನ್ನು ಹಾಗೂ ಚಾಲ್ತಿ ಅಂಕಿ-ಅಂಶಗಳ ಪ್ರಕಾರ ಕನಿಷ್ಠ ಹಾಗೂ ಗರಿಷ್ಠ ಮೂಲವೇತನಕ್ಕೆ ಕನಿಷ್ಠ ಮತ್ತು ಗರಿಷ್ಠ ಪಿಂಚಣಿ ಮತ್ತು ಕುಟುಂಬ ಪಿಂಚಣಿ ಉದ್ದೇಶಕ್ಕೆ ಹಾಲಿ ಇರುವ ಶೇ. 31ರಷ್ಟು ತುಟ್ಟಿಭತ್ಯೆಯನ್ನು ಸಂಪೂರ್ಣವಾಗಿ ವಿಲೀನಗೊಳಿಸಿ, ನಂತರ ಶೇ. 40ರಷ್ಟು ಫಿಟ್‌ಮೆಂಟ್ ಬೆನಿಫಿಟ್ ಕಲ್ಪಿಸಿ ಪರಿಷ್ಕೃತ ಮೂಲ ವೇತನದ ಶೇ. 50 ಕನಿಷ್ಠ ಪಿಂಚಣಿ/ ಕುಟುಂಬ ಪಿಂಚಣಿ ಮೊತ್ತವನ್ನು ರೂ. 16,500 + ತುಟ್ಟಿ ಭತ್ಯೆ ಹಾಗೂ ಪರಿಷ್ಕೃತ ಗರಿಷ್ಠ ವೇತನದ ಶೇ. 50ರಷ್ಟು ಗರಿಷ್ಠ ಮೊತ್ತಕ್ಕೆ ರೂ. 1,50,000 + ತುಟ್ಟಿ ಭತ್ಯೆ ನಿರ್ಧರಿಸುವುದು.

ಕನಿಷ್ಠ ಕುಟುಂಬ ಪಿಂಚಣಿಯನ್ನು ಕನಿಷ್ಠ ರೂ. 16,500 + ತುಟ್ಟಿಭತ್ಯೆ ಮತ್ತು ಗರಿಷ್ಠ ಕುಟುಂಬ ಪಿಂಚಣಿಯನ್ನು ರೂ. 1,50,000+ ತುಟ್ಟಿಭತ್ಯೆ ಎಂಬುದಾಗಿ ಶಿಫಾರಸ್ಸು ಮಾಡುವುದು ಮುಂದುವರೆದು, ಅವಲಂಬಿತ ಪೋಷಕರೂ ಸಹ ಕುಟುಂಬ ಪಿಂಚಣಿಗೆ ಅರ್ಹರೆಂದು ಶಿಫಾರಸ್ಸು ಮಾಡುವುದು ಎಂದು ನೌಕರರ ಸಂಘ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+