ಪರಭಾಷಿಕರು ಕನ್ನಡ ಕಲಿಯಲು ಇಷ್ಟು ಮಾಡಿ ಸಾಕು: ಒಳ್ಳೇ ಐಡಿಯಾ ಗುರೂ ಎಂದ ಕನ್ನಡಿಗರು

ಪರಭಾಷಿಕರು ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬಂದು ದಶಕಗಳ ಕಾಲ ನೆಲೆಸಿದರೂ ಒಂದು ಚೂರಾದ್ರೂ ಕನ್ನಡ ಮಾತನಾಡಿ ಅಂದ್ರೆ ಧಿಮಾಕು ತೋರಿಸೋದೆ ಹೆಚ್ಚು. ಇದಕ್ಕೆ ಬರುವವರನ್ನೆಲ್ಲ ಕೈಬೀಸಿ ಕರೆದುಕೊಳ್ಳುವ ಕನ್ನಡಿಗರ ಗುಣವೇ ದೊಡ್ಡ ಕಾರಣ ಎಂಬ ವಾದವೂ ಇದೆ. ಅದೇನೆ ಇರಲಿ ಇರುವ ನೆಲಕ್ಕೆ ಗೌರವ ಕೊಡಿ ಅಂದ್ರೆ ಅದೆಲ್ಲ ಆಗಲ್ಲ, ಬೇಕಾದ್ರೆ ನೀವೇ ನಮ್ಮ ಭಾಷೆಯಲ್ಲಿ ಮಾತಾಡಿ ಎಂದು ಧಮ್ಕಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ.

ಇತ್ತೀಚೆಗೆ ಪರಭಾಷಿಕರಿಂದ ಕನ್ನಡ, ಕರ್ನಾಟಕ ಹಾಗೂ ಕನ್ನಡಿಗರು ಅಪಾಯಕ್ಕೆ ಸಿಲುಕಿದ್ದಾರೆ. ಇದಕ್ಕೆ ಕಡಿವಾಣ ಹಾಕಿ ಎಂದು ಸೋಶಿಯಲ್‌ ಮೀಡಿಯಾಗಳಲ್ಲಿ ಗೋಗರೆಯುತ್ತಿದ್ದರೂ ಸರ್ಕಾರಗಳು ಮೂಕವಾಗಿವೆ. ಪರಭಾಷಿಕರು ಕನ್ನಡ ಕಲೀಬೇಕು ಅಂದ್ರೆ ಏನು ಮಾಡಬೇಕು ಅಂತಾ ಯುವಕನೊಬ್ಬ ಸಿಂಪಲ್‌ ಟಿಪ್ಸ್‌ ಕೊಟ್ಟಿದ್ದಾನೆ. ಇದಕ್ಕೆ ಹಲವು ಮಂದಿ ಭೇಷ್‌ ಎಂದಿದ್ದಾರೆ.

Kannada Language Test Mandatory For Property Buyers In Karnataka Social Media Debate Heats Up

ಬೆಂಗಳೂರಿನಲ್ಲಿ ಎಲ್ಲೂ ಸಿಗದ ಸೌಕರ್ಯಗಳನ್ನು ಕಂಡು ಬೇರೆ ರಾಜ್ಯಗಳಿಂದ ಜನ ಗಂಟು ಮೂಟೆ ಕಟ್ಟಿಕೊಂಡು ಓಡೋಡಿ ಬರುತ್ತಿದ್ದಾರೆ. ಬಂದ ಸ್ವಲ್ವ ದಿನ ಸುಮ್ಮನಿರೋದು, ಒಂಚೂರು ನೆಲೆ ಸಿಕ್ಕ ತಕ್ಷಣ ಬಾಲ ಬಿಚ್ಚೋದೇ ಚಾಳಿ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇತ್ತೀಚೆಗೆ ವೈರಲ್‌ ಆಗುತ್ತಿರುವ ವಿಡಿಯೋಗಳೇ ಸಾಕ್ಷಿ. ಹೊಟ್ಟೆಪಾಡಿಗಾಗಿ ಕರ್ನಾಟಕದಲ್ಲಿ ಕಾಲಿಡುತ್ತಿದ್ದವರು ಸ್ವಲ್ಪ ದಿನ ಕಳೆದ ಮೇಲೆ ಇಲ್ಲೇ ಸೆಟಲ್‌ ಆಗಿ ಇಲ್ಲೇ ಇಡೀ ಜೀವನ ಕಳೆಯುತ್ತಿದ್ದಾರೆ. ಆದರೂ ಕನ್ನಡ ಕಲಿಯೋಕೆ ಏನು ಕಷ್ಟ? ಅನ್ನೋದು ಕನ್ನಡಿಗರ ದೊಡ್ಡ ಪ್ರಶ್ನೆ.

Take a Poll

ಸರ್ಕಾರವೇ ಬಲವಾದ ಕಾನೂನು ತಂದರೆ ಎಲ್ಲರೂ ದಾರಿಗೆ ಬರ್ತಾರೆ ಅಂತ ಕೂಗಾಡಿದ್ರೂ ನಮ್ಮ ರಾಜಕೀಯ ನಾಯಕರು ಅದಕ್ಕೆ ಮನಸು ಮಾಡೋರೇ ಅಲ್ಲ. ಇದರಿಂದ ಬೇಸತ್ತು ಕೊನೆಗೆ ಮತ್ತೊಂದು ಮಾರ್ಗೋಪಾಯವನ್ನು ಹುಡುಕಿಕೊಂಡಿದ್ದಾರೆ. ಹೀಗೆ ಮಾಡಿದ್ರೆ ಅದು ಯಾಕೆ ಕನ್ನಡ ಕಲಿಯೋದಿಲ್ಲ? ಎಂದು ತೊಡೆತಟ್ಟಿದ್ದಾರೆ.

ಆಸ್ತಿ ಖರೀದಿಗೆ ಹೊಸ ರೂಲ್ಸ್‌ ತನ್ನಿ!

ಕರ್ನಾಟಕ ಬದುಕಲು ನೆಮ್ಮದಿಯ ತಾಣ ಎಂದು ಅರಿತುಕೊಂಡಿರುವ ಪರಭಾಷಿಕರು ಎಲ್ಲವನ್ನೂ ಮಾರಿಕೊಂಡು ಬಂದು ಇಲ್ಲಿ ಆಸ್ತಿ, ಮನೆ, ಸೈಟು, ಫ್ಲ್ಯಾಟು ಖರೀದಿಸಿ ಸೆಟಲ್‌ ಆಗುತ್ತಿದ್ದಾರೆ. ಹಾಗಾಗಿ ಇಲ್ಲಿಯೇ ಅವರ ನಟ್ಟು ಬೋಲ್ಟ್‌ ಟೈಟ್‌ ಮಾಡಿದರೆ ಎಲ್ಲವೂ ಸರಿ ಹೋಗುತ್ತೆ ಅಂತಿದ್ದಾರೆ ಸೋಶಿಯಲ್‌ ಮೀಡಿಯಾ ಕನ್ನಡಿಗರು. ಕರ್ನಾಟಕದಲ್ಲಿ ಪರಭಾಷಿಕರು ಪ್ರಾಪರ್ಟಿ ಖರೀದಿ ಮಾಡಲು ಕನ್ನಡ ಭಾಷಾ ಪರೀಕ್ಷೆ ಕಡ್ಡಾಯವಾಗಿ ತೇರ್ಗಡೆ ಹೊಂದಬೇಕು ಎನ್ನುವ ನಿಯಮ ಜಾರಿಗೆ ತನ್ನಿ. ಆಗ ಯಾಕೆ ಕನ್ನಡ ಕಲಿಯಲ್ಲ ಅಂತ ನಾವೂ ನೋಡ್ತೀವಿ ಎಂದು ಒಳ್ಳೆ ಐಡಿಯಾ ಕೊಟ್ಟಿದ್ದಾರೆ.

Kannada Language Test Mandatory For Property Buyers In Karnataka Social Media Debate Heats Up

ಈ ಟ್ವೀಟ್‌ಗೆ ಕಾಮೆಂಟ್‌ ಮಾಡಿರುವ ಹಲವರು, ಸರಿಯಾದ ಯೋಚನೆ. ದೊಡ್ಡ ಬ್ಯಾಗ್‌ನಲ್ಲಿ ದುಡ್ಡು ಸುರಿಯುವ ಗುಜರಾತಿಗಳು, ಉತ್ತರ ಭಾರತೀಯರ ಮೇಲೆ ಮಮತೆ ತೋರುವಾಗ ನಮ್ಮ ಸರ್ಕಾರಗಳು ಮಂಡಿಯೂರುತ್ತವೆ ಎಂದು ಸರ್ಕಾರಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಖರೀದಿಗೆ ಪರೀಕ್ಷೆ ಬೇಡ, ಅವರು ಕರ್ನಾಟಕದಲ್ಲಿ ಪ್ರಾಪರ್ಟಿ ಖರೀದಿ ಮಾಡೋದನ್ನೇ ನಿಷೇಧ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+