ಕೈಗೆಟಕುವ ದರದಲ್ಲಿ ಭರ್ಜರಿ ಫೀಚರ್ ಫೋನ್ ರಿಲೀಸ್ ಮಾಡಿದ Jio Bharat
ನಿಮ್ಮ ಬಳಿ ಜಿಯೋ ಸಿಮ್ ಇದೆಯಾ.. ಈ ಸಿಮ್ ಫೀಚರ್ ಫೋನ್‌ಗಳಿಗೆ ವರ್ಕ್ ಆಗುತ್ತಿಲ್ಲವೇ.. ನಿಮ್ಮ ಬಳಿ ಇರುವ ಫೀಚರ್ ಫೋನ್‌ನಲ್ಲಿ ಜಿಯೋ ಇಂಟರ್ನೆಟ್ ಸಿಗುತ್ತಿಲ್ಲವೆ.. ಇದರ ಕಿರಿಕಿರಿಯಿಂದ ಗ್ರಾಹಕರನ್ನು ಮುಕ್ತರನ್ನಾಗಿ ಮಾಡಲು ಜಿಯೋ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿದೆ. ಈ ಮೂಲಕ ಬಕೆದಾರರಿಗೆ ತಮ್ಮ ಕಂಪನಿಯ ಫೀಚರ್ ಫೋನನ್ನೇ ಕಡಿಮೆ ಬೆಲೆಯಲ್ಲಿ ನೀಡಲು ಸಜ್ಜಾಗಿದೆ.
ಜಿಯೋ ಭಾರತದಲ್ಲಿ ಹೊಸ ಫೋನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಭಾರತ್ J1 4G ಭಾರತೀಯ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿವೆ. ಕಳೆದ ವರ್ಷವಷ್ಟೇ ಕಂಪನಿ ಜಿಯೋ ಭಾರತ್ ಸರಣಿಯ ಫೋನ್‌ಗಳನ್ನು ಪರಿಚಯಿಸಿತ್ತು. ಈಗಾಗಲೇ ಮಾರುಕಟ್ಟೆಯಲ್ಲಿ ಈ ಕಂಪನಿಯ ಫೋನ್‌ಗಳು ರಿಲೀಸ್ ಆಗಿದ್ದು, ಗ್ರಾಹಕರಿಗೆ ಹತ್ತಿರವಾಗಿವೆ.

Jio Bharat J1 4G ಸುಧಾರಿತ ತಂತ್ರಜ್ಞಾನದೊಂದಿಗೆ ಮಾರುಕಟ್ಟೆ ಬಂದಿದೆ. ಈ ಫೋನಿನಲ್ಲಿ ಬಳಕೆದಾರ 4 ಜಿ ಸೇವೆಗಳ ಆನಂದವನ್ನು ಪಡೆಯಬಹುದು. ಜಿಯೋ ಈ ಇತ್ತೀಚಿನ ಫೀಚರ್ ಫೋನ್‌ನಲ್ಲಿ ಹಲವು ಶಕ್ತಿಶಾಲಿ ವೈಶಿಷ್ಟ್ಯಗಳನ್ನು ನೀಡಿದೆ.
ವೈಶಿಷ್ಟ್ಯಗಳೇನು?
ಈ ಹೊಸ ಫೀಚರ್ ಫೋನ್‌ನಲ್ಲಿ ನೀವು 2.8 ಇಂಚಿನ ಡಿಸ್ಪ್ಲೇಯನ್ನು ಪಡೆಯುತ್ತೀರಿ. ಇದರಲ್ಲಿ 2500mAh ನ ಬ್ಯಾಟರಿ ನೀಡಲಾಗಿದೆ. ಈ ಹೊಸ ಫೀಚರ್ ಫೋನ್‌ನಲ್ಲಿ ನೀವು ಜಿಯೋ ಸಿನಿಮಾವನ್ನು ಆನಂದವನ್ನು ಪಡೆಯಬಹುದು. ಇದರೊಂದಿಗೆ, ನೀವು ಜಿಯೋ ಟಿವಿ ಸಹ ನೋಡಬಹುದು. ಈ ಎರಡು ಆ್ಯಪ್‌ಗಳ ಸಹಾಯದಿಂದ ನೀವು ಸಾಕಷ್ಟು ಮನರಂಜನೆಯನ್ನು ಪಡೆಯಬಹುದು. ಜಿಯೋ ಈ ಫೋನ್‌ನಲ್ಲಿ 23 ಭಾಷೆಗಳನ್ನು ಬೆಂಬಲಿಸಿದೆ.
ಬೆಲೆ ಎಷ್ಟು?
Jio Bharat ಸರಣಿಯ ಈ ಫೋನ್ ಅನ್ನು ಭಾರತದಲ್ಲಿ ರೂ 1,799 ಬೆಲೆಗೆ ಲಾಂಚ್ ಮಾಡಿದೆ. ಇದರಲ್ಲಿ ನೀವು ಬ್ಲ್ಯಾಕ್ ಹಾಗೂ ಗ್ರೇ ಬಣ್ಣದ ಆಯ್ಕೆಯನ್ನು ಪಡೆಯುತ್ತೀರಿ. ನೀವು ಇ-ಕಾಮರ್ಸ್ ವೆಬ್‌ಸೈಟ್ Amazon ನಿಂದ Jio Bharat J1 ಅನ್ನು ಖರೀದಿಸಬಹುದು.
ಆನ್‌ಲೈನ್ ಪಾವತಿ ಲಭ್ಯ
ಈ ಫೀಚರ್ ಫೋನ್‌ನಲ್ಲಿ ನೀವು UPI ವಹಿವಾಟುಗಳಿಗಾಗಿ JioPay ಸೌಲಭ್ಯವನ್ನು ಪಡೆಯುತ್ತೀರಿ. ನೀವು OTT ಸ್ಟ್ರೀಮಿಂಗ್ ಮಾಡಲು ಬಯಸಿದರೆ, ಇದಕ್ಕಾಗಿ ನೀವು Jio ಸಿನಿಮಾದ ಆಯ್ಕೆಯನ್ನು ಸಹ ಪಡೆಯುತ್ತೀರಿ. ಕಂಪನಿಯು ಈ ಫೋನ್ ಅನ್ನು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಪರಿಚಯಿಸಿದೆ.
ರೂ 123 ರೀಚಾರ್ಜ್‌ನಲ್ಲಿ ಅನೇಕ ಕೊಡುಗೆಗಳು ಲಭ್ಯವಿರುತ್ತವೆ
ಜಿಯೋ ಇತ್ತೀಚೆಗೆ ತನ್ನ ರೀಚಾರ್ಜ್ ಯೋಜನೆಗಳ ಬೆಲೆಗಳನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಆದರೆ ನೀವು Jio Bharat J1 4G ಮೊಬೈಲ್‌ನೊಂದಿಗೆ ದುಬಾರಿ ಯೋಜನೆಗಳ ಕಿರಿಕಿರಿ ತಪ್ಪಿಸಲು ಮುಂದಾಗಿದೆ. ಈ ಫೀಚರ್ ಫೋನ್‌ನೊಂದಿಗೆ ನೀವು ರೂ 123 ರ ಅಗ್ಗದ ಯೋಜನೆಯನ್ನು ಪದೆಯಬಹುದು. ಇದು 4G ರೀಚಾರ್ಜ್ ಯೋಜನೆಯಾಗಿದ್ದು, ಇದರಲ್ಲಿ ನೀವು 28 ದಿನಗಳ ಮಾನ್ಯತೆಯೊಂದಿಗೆ ಒಟ್ಟು 14GB ಡೇಟಾದ ಲಾಭ ಪಡೆಯಬಹುದು.












Click it and Unblock the Notifications