Jio New Plan: ಕೇವಲ ₹11ಗೆ 10GB ಇಂಟರ್‌ನೆಟ್ ಯೋಜನೆ, ವಿವರ
ಬೆಂಗಳೂರು, ನವೆಂಬರ್ 23: ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ( BSNL) ಅಗ್ಗದ ದರಕ್ಕೆ ಹೊಸ ಹೊಸ ಮೊಬೈಲ್ ರೀಚಾರ್ಜ್ ಪ್ಲಾನ್ ನೀಡುತ್ತಿದೆ. ಇದರಿಂದಾಗಿ ತನಗೆಲ್ಲಿ ಹೊಡೆತ ಬೀಳುತ್ತದೆಯೇ ಎಂದು ಅರಿತ ಜಿಯೋ ಸಹ ಕಡಿಮೆ ಬೆಲೆಯ ಯೋಜನೆ ಘೋಷಿಸುತ್ತಿದೆ. ಇದೀಗ ತನ್ನ ಬಳಕೆದಾರರು ಬೇರೆ ಕಂಪನಿಗೆ ಮಾರು ಹೋಗದಂತೆ ತಡೆಯಲು ಕೇವಲ 11 ರೂಪಾಯಿಗೆ ಇಂಟರ್‌ನೆಟ್ ಸೇವೆ ಪ್ರಕಟಿಸಿದೆ.
ಹೌದು, ಖಾಸಗಿ ಟೆಲಿಕಾಂ ಕಂಪನಿಗಳ ಮೊಬೈಲ್ ರೀಚಾರ್ಜ್ ದರ ಏರಿಕೆ ಆಗುತ್ತಿದ್ದಂತೆ ಅನೇಕ ಜಿಯೋ ರಿಲಯನ್ಸ್, ಏರ್‌ಟೆಲ್ ಹಾಗೂ ವಿಐ ಬಳಕೆದಾರರು ಬಿಎಸ್‌ಎನ್‌ಎಲ್ ಕಡೆಗೆ ವಾಲುತ್ತಿದ್ದಾರೆ. ಇದನ್ನರಿತ ಟೆಲಿಕಾಂ ವಲಯದ ದೈತ್ಯ ಕಂಪನಿ ಮುಖೇಶ್ ಅಂಬಾನಿ ಮಾಲೀಕತ್ವ ಜಿಯೋ ತಾತ್ಕಾಲಿಕ ಇಂಟರ್‌ನೆಟ್ ಬಳಕೆದಾರರಿಗಾಗಿ ಕೇವಲ 11 ರೂಪಾಯಿ 10 ಜಿಬಿ 4ಜಿಬಿ ಡೇಟಾ ಪ್ಯಾಕೇಜ್ ಘೋಷಿಸಿದೆ.

ವೇಗದ ಇಂಟರ್‌ನೆಟ್ ಲಭ್ಯ
ಈ 11 ರೂಪಾಯಿ 10 ಜಿಬಿ 4ಜಿಬಿ ಡೇಟಾ ಅತ್ಯಧಿಕ ವೇಗದ ಇಂಟರ್‌ನೆಟ್ ಸೌಲಭ್ಯ ಆಗಿರಲಿದೆ ಎಂದು ರಿಲಯನ್ಸ್ ಜಿಯೋ ಖಚಿತಪಡಿಸಿದೆ. ದೈನಂದಿನ ಡೇಟ್ ಖಾಲಿಯಾದ ಬಳಿಕ ಈ ಡೇಟಾವನ್ನು ನೀವು ರೀಚಾರ್ಜ್ ಮಾಡಿಸಿಕೊಂಡು ವೇಗ ಇಂಟರ್‌ನೆಟ್ ಸೇವೆ ಪಡೆಯಬಹುದಾಗಿದೆ.
ಜಿಯೋದ ಈ ಹೊಸ ಇಂಟರ್‌ನೆಟ್ ಪ್ಲಾನ್ ಪ್ರತಿನಿತ್ಯ ಅತ್ಯಧಿಕ ಇಂಟರ್‌ನೆಟ್ ಬಳಕೆ ಮಾಡುವವರಿಗೆ ಅನುಕೂಲವಾಗುತ್ತದೆ. ಕಾರಣ ಇದು ತಾತ್ಕಾಲಿಕ ಇಂಟರ್‌ನೆಟ್ 4ಜಿ ಸೇವೆ ಆಗಿದೆ. ನೀವು ಯಾವುದೇ ಮೊಬೈಲ್ ರೀಚಾರ್ಜ್ ಪ್ಲಾನ್ ಇಲ್ಲದಿದ್ದರೂ ಈ ಬೇಸ್ ಪ್ಲಾನ್ ಅಲ್ಲದೇ 11 ರೂಪಾಯಿ 10 ಜಿಬಿ 4ಜಿಬಿ ಡೇಟಾ ಸೇವೆ ಪಡೆಯಬಹುದು.

ಒಂದು ಗಂಟೆಯ ಪ್ರಯೋಜನ
ಒಮ್ಮೆ ನೀವು ಈ ಸೇವೆ ಪಡೆದರೆ 10 ಜಿಬಿ ಜಿಬಿ ಇಂಟರ್‌ನೆಟ್ ಸೇವೆ ಕೇವಲ ಒಂದು ಗಂಟೆ ಮಾತ್ರ ಇರುತ್ತದೆ. ಬೇರೆ ಯಾವುದೇ ಇತರ ಪ್ರಯೋಜನ ಸಿಗುವುದಿಲ್ಲ. ಮಿತಿ ಮೀರಿದ ಇಂಟರ್‌ನೆಟ್ ಬಳಕೆದಾರರಿಗೆ ಇದು ಪ್ರಯೋಜನ ಆಗಲಿದೆ. ಇಡೀ ದಿನದ ಸೇವೆ, ಅಥವಾ ದೀರ್ಘಾವಧಿ ಸೇವೆ ಈ ಯೋಜನೆಯಿಂದ ಅಸಾಧ್ಯ ಎಂದು ರಿಲಯನ್ಸ ಜಿಯೋ ತಿಳಿಸಿದೆ.
ಒಂದು ವೇಳೆ ನಿಮಗೆ ಈ ಯೋಜನೆ ಬೇಡವಾದರೆ, ನೀವು ಒಂದು ಪೂರ್ತಿ ದಿನದ ಹಾಗೂ 30 ದಿನಗಳ ರೀಚಾರ್ಜ್ ವೋಚರ್ ಇಲ್ಲವೇ ಬೇಸ್ ಪ್ಲಾನ್ ಇಂಟರ್‌ನೆಟ್ ರಿಚಾರ್ಜ್ ಪ್ಲಾನ್ ತೆಗೆದುಕೊಳ್ಳಬಹುದು. ಈ ಮೂಲಕ ಅತೀ ಇಂಟರ್‌ನೆಟ್ ಬಳಕೆದಾರರನ್ನು ಕೈ ತಪ್ಪದಂತೆ ಜಿಯೋ ಈ ಹೊಸ ಯೋಜನೆ ಘೋಷಿಸಿದೆ.
ಜಿಯೋಗೆ ನಷ್ಟ: BSNLಗೆ 8 ಲಕ್ಷ ಹೊಸ ಗ್ರಾಹಕರು
ಟೆಲಿಕಾಂ ರಂಗಕ್ಕೆ ಬಿಎಸ್‌ಎನ್‌ಎಲ್ ಹೊಸ ಹುರುಪಿನ ಜೊತೆಗೆ ದಾಂಗುಡಿ ಇಟ್ಟು ಅಗ್ಗದ ದರಕ್ಕೆ ಮೊಬೈಲ್ ರಿಚಾರ್ಜ್, ಇಂಟರ್‌ನೆಟ್ ಪ್ಲಾನ್ ಘೋಷಿಸುತ್ತಿದ್ದಂತೆ ಜಿಯೋ ಬಳಕೆದಾರರ ಸಂಖ್ಯೆ ಇಳಿಕೆ ಆಗಿದೆ. ಜಿಯೋ ಕಳೆದ ಸೆಪ್ಟೆಂಬರ್‌ನಲ್ಲಿ 79.7 ಲಕ್ಷ ಚಂದಾದಾರರ ನಿವ್ವಳ ನಷ್ಟ ಅನುಭವಿಸಿದೆ ಎಂದು TRAI ವರದಿ ಮಾಡಿದೆ.
ಇನ್ನೂ ಇದೇ ಸೆಪ್ಟಂಬರ್‌ನಲ್ಲಿ ಬಿಎಸ್‌ಎನ್ಎಲ್‌ಗೆ ಬರೋಬ್ಬರಿ 08 ಲಕ್ಷ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ. ಜಿಯೋ ಕಂಪನಿಯು ಟಾಟಾ ಸಮೂಹದ ಜೊತೆಗೆ ಒಪ್ಪಂದದ ಬಳಿಕ ಸತತ ಮೂರನೇ ತಿಂಗಳು ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆಯಲ್ಲಿ ಏರಿಕೆ ಆಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಸೆಪ್ಟಂಬರ್‌ನಲ್ಲಿ ಹೆಚ್ಚಾದ ಹೊಸ ಗ್ರಾಹಕರು ಸೇರಿದಂತೆ ಬಿಎಸ್‌ಎನ್‌ಎಲ್ ಒಟ್ಟು 91 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿದೆ. ಇತ್ತೀಚೆಗೆ ಹೊಸ ಲೋಗೆ ಸಹ ಲೋಕಾರ್ಪಣೆ ಮಾಡಿದ ಕಂಪನಿಯು ಮುಂದಿನ ಕೆಲವೇ ದಿನಗಳಲ್ಲಿ ಗ್ರಾಹಕರ ಸಂಖ್ಯೆಯಲ್ಲಿ ಒಂದು ಕೋಟಿಗೆ ತಲುಪಲಿದೆ ಎಂದು ವಿಶ್ಲೇಷಿಸಲಾಗಿದೆ.












Click it and Unblock the Notifications