Apple iPhone 16 : ಐಫೋನ್ 16 ಬಗ್ಗೆ ಬಿಗ್ ಅಪ್‌ಡೇಟ್: ಸೋರಿಕೆ ಆಗಿವೆ ಹಲವು ಮಾಹಿತಿ: ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಸ್ಮಾರ್ಟ್‌ಫೋನ್ ಮಾರುಕಟ್ಟೆ ಕ್ಷೇತ್ರದಲ್ಲಿ ಪ್ರಾಭಲ್ಯ ಹೊಂದಿರುವ ಆಪಲ್ ಕಂಪನಿ, ಈ ವರ್ಷ ಮತ್ತೊಂದು ಫೋನ್ ಮಾರುಕಟ್ಟೆಗೆ ರಿಲೀಸ್ ಮಾಡಲಿದೆ. ಹೈಫೈ ತಂತ್ರಜ್ಞಾನವನ್ನು ಹೊಂದಿರುವ ಈ ಫೋನ್ ಪ್ರೀಮಿಯಂ ಗ್ರಾಹಕರನ್ನು ಸೆಳೆಯಲಿದೆ. ಪ್ರತಿ ಬಾರಿಯಂತೆ ಈ ಬಾರಿಯೂ ಆಪಲ್ ನಾಲ್ಕು ರೂಪಾಂತರದಲ್ಲಿ ಫೋನ್ ಲಾಂಚ್ ಮಾಡಲಿದೆ.
ಆಪಲ್ ತನ್ನ ಹೊಸ ಫೋನ್‌ಗಳನ್ನು ಸೆಪ್ಟಂಬರ್ ತಿಂಗಳಲ್ಲಿ ಹೆಚ್ಚಾಗಿ ರಿಲೀಸ್ ಮಾಡುತ್ತದೆ. ಈ ವರ್ಷವೂ ಆಪಲ್ iPhone 16 ಸರಣಿಯನ್ನು ಲಾಂಚ್ ಮಾಡಲು ಭರ್ಜರಿ ಪ್ಲ್ಯಾನಿಂಗ್ ಮಾಡಿಕೊಳ್ಳುತ್ತಿದೆ. ಎಂದಿನಂತೆ ಆಪಲ್ ಕಂಪನಿ iPhone 16, iPhone 16 Plus, iPhone 16 Pro ಮತ್ತು iPhone 16 Pro Max ಏಕಕಾಲಕ್ಕೆ ಮಾರುಕಟ್ಟೆ ರಿಲೀಸ್ ಮಾಡಬಹುದು.

ಮಾಹಿತಿ ಸೋರಿಕೆ
ಸಾಮಾನ್ಯವಾಗಿ ಆಪಲ್ ಕಂಪನಿಯ ಪ್ರೊ ಸರಣಿಯ ಫೋನ್‌ಗಳು ಬಲು ದುಬಾರಿ. iPhone 16 Pro Max ಹೆಚ್ಚಿನ ಬೆಲೆಯನ್ನು ಹೊಂದಿರುತ್ತದೆ. ಈ ಎಲ್ಲಾ ಫೋನ್‌ಗಳು ಸೆಪ್ಟೆಂಬರ್ 2024 ರಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಈ ಫೋನ್ ಸರಣಿಯ ಬಿಡುಗಡೆ ದಿನಾಂಕವನ್ನು ಕಂಪನಿಯು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಫೋನ್‌ನ ಕೆಲವು ವಿವರಗಳು ಸೋರಿಕೆಯಾಗಲು ಪ್ರಾರಂಭವಾಗಿವೆ.
ಏನೆಲ್ಲಾ ವಿಶೇಷತೆಗಳಿಂದ ಕೂಡಿರಲಿದೆ ಫೋನ್
ಆಪಲ್ 16 ಪ್ರೊ ಮಾದರಿಯ ಮೊಬೈಲ್ ಡಿಸ್‌ಪ್ಲೇ 6.3 ಇರಬಹುದಾಗಿದೆ. 16 Pro Max ನ ಡಿಸ್‌ಪ್ಲೇ ಗಾತ್ರವು 6.9 ಇರುವ ಸಾಧ್ಯತೆ ಇದೆ. ಐಫೋನ್ 16 ಡಿಸ್‌ಪ್ಲೇ, ಹಳೆದ ಐಫೋನ್ 15ರಂತೆ ಇರಲಿದೆ. ಐಫೋನ್ 16 ಸರಣಿಯ ವಿನ್ಯಾಸದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳನ್ನು ನಿರೀಕ್ಷಿಸಲಾಗುವುದಿಲ್ಲ. ಈ ಫೋನ್‌ಗಾಗಿಯೇ ಆಪಲ್ ಕಂಪನಿ ಹೊಸ A ಸರಣಿಯ ಚಿಪ್‌ಗಳನ್ನು ವಿನ್ಯಾಸಗೊಳಿಸುತ್ತಿದೆ. ಇದನ್ನು N3E 3-ನ್ಯಾನೋಮೀಟರ್ ನೋಡ್‌ನಲ್ಲಿ ನಿರ್ಮಿಸಲಾಗುವುದು. ಆಕ್ಷನ್ ಬಟನ್‌ನ ಸೌಲಭ್ಯವು ಐಫೋನ್ 16 ಸರಣಿಯ ಎಲ್ಲಾ ನಾಲ್ಕು ಮಾದರಿಗಳಲ್ಲಿ ಲಭ್ಯವಿರುತ್ತದೆ.
ಕ್ಯಾಪ್ಚರ್ ಬಟನ್ ಸೌಲಭ್ಯ
ಇನ್ನು ಬಳಕೆದಾರರಿಗೆ ಕ್ಯಾಪ್ಚರ್ ಬಟನ್‌ನ್ನು ನೀಡಲು ಆಪಲ್ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಇದರಿಂದ ಮೊಬೈಲ್ ಬಳಕೆದಾರ ಸುಲಭವಾಗಿ ಫೋಟೋಗಳನ್ನು, ವಿಡಿಯೋಗಳನ್ನು ಶೂಟ್ ಮಾಡಬಹುದಾಗಿದೆ. ಐಫೋನ್ 16 ಪ್ರೊ ತೂಕ 194 ಗ್ರಾಂ ಆಗಿದ್ದರೆ, ಐಫೋನ್ 16 ಪ್ರೊ ಮ್ಯಾಕ್ಸ್‌ನ ತೂಕ 225 ಗ್ರಾಮ್ ಆಗಿರಬಹುದು ಎಂದು ತಿಳಿದು ಬಂದಿದೆ. iPhone 16 ಸರಣಿಯ ನಾಲ್ಕು ಫೋನ್‌ಗಳ ನಕಲಿ ಮಾದರಿಗಳು ಸೋರಿಕೆಯಾಗಿದ್ದು, ಇದರಲ್ಲಿ ಫೋನ್‌ನ ವಿನ್ಯಾಸವನ್ನು ಬಹಿರಂಗವಾಗಿದೆ. ಇನ್ನು ಇದರ ಬೆಲೆಯನ್ನು ಕಂಪನಿ ಬಹಿರಂಗ ಪಡಿಸಿಲ್ಲ. ಆದರೆ ತಂತ್ರಜ್ಞಾನ ತಜ್ಞರ ಪ್ರಕಾರ ಈ ಫೋನ್ ಬೆಲೆ ಒಂದು ಲಕ್ಷ ರೂಪಾಯಿ ಇರಬಹುದು ಎಂದು ಅಂದಾಜಿಸಲಾಗಿದೆ.

ಬ್ಯಾಟರಿ ಕ್ಯಾಪಿಸಿಟಿ ಎಷ್ಟು?
ಬ್ಯಾಟರಿ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ, ಐಫೋನ್ 16 3561mAh, ಐಫೋನ್ 16 ಪ್ಲಸ್ 4006mAh, ಐಫೋನ್ 16 ಪ್ರೊ 3355mAh ಮತ್ತು iPhone 16 ಪ್ರೊ ಮ್ಯಾಕ್ಸ್ 4676mAh ಅನ್ನು ಹೊಂದಿಬಹುದು ಎಂದು ಸೋರಿಕೆಯಾದ ಮಾಹಿತಿಯಿಂದ ತಿಳಿದು ಬಂದಿದೆ. ಇನ್ನು ಈ ಫೋನ್ ಬಗ್ಗೆ ಅಧಿಕೃತವಾಗಿ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸೆಪ್ಟಂಬರ್‌ನಲ್ಲಿ ಈ ಪೋನ್ ರಿಲೀಸ್ ಆಗುವುದಿದ್ದರೆ ಆಪಲ್ ಶೀಘ್ರದಲ್ಲೇ ಈ ಬಗ್ಗೆ ಮಾಹಿತಿಯನ್ನು ನೀಡಲಿದೆ. ಈ ಫೋನ್ ಯಾವಾಗ ಮಾರುಕಟ್ಟೆಗೆ ಬರಲಿದೆ ಎಂದು ಆಪಲ್ ಬಳಸುವ ಗ್ರಾಹಕರು ಎದುರು ನೋಡುತ್ತಾ ಇದ್ದಾರೆ.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
1ನೇ ತರಗತಿ ದಾಖಲಾತಿ: 6 ವರ್ಷ ತುಂಬಿರಬೇಕು ಎಂಬ ನಿಯಮವನ್ನು ಕೊಂಚ ಸಡಿಲಿಕೆ ಮಾಡಿದ ಸರ್ಕಾರ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು












Click it and Unblock the Notifications