ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Women's Day 2022: ಅಂತಾರಾಷ್ಟ್ರೀಯ ಮಹಿಳಾ ದಿನ ಅಸ್ತಿತ್ವಕ್ಕೆ ಬಂದ ಇತಿಹಾಸ ಮತ್ತು ಪ್ರಾಮುಖ್ಯತೆ

|
Google Oneindia Kannada News

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 8 ರಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಈ ದಿನವು ಮಹಿಳೆಯರ ಸಾಧನೆಗಳನ್ನು ಮತ್ತು ಸಾಮಾನ್ಯವಾಗಿ ಅವರ ಅಸ್ತಿತ್ವವನ್ನು ಸ್ಮರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಪ್ರಪಂಚದಾದ್ಯಂತ ಸಾರ್ವಜನಿಕ ರಜಾದಿನವಾಗಿ ಆಚರಿಸಲಾಗುತ್ತದೆ. ಅಷ್ಟೇ ಅಲ್ಲ ಪಾರ್ಲರ್‌ಗಳು ಮತ್ತು ಶಾಪಿಂಗ್ ಸೆಂಟರ್‌ಗಳಲ್ಲಿ ಮಹಿಳೆಯರ ಕೊಡುಗೆಗಳನ್ನು ಅನಾವರಣಗೊಳಿಸುವ ಮೂಲಕ ಆಚರಿಸಲಾಗುತ್ತದೆ. ಅಂತರಾಷ್ಟ್ರೀಯ ಮಹಿಳಾ ದಿನದ ಇತಿಹಾಸ ಮತ್ತು ಅದು ಹೇಗೆ ಪ್ರಾರಂಭವಾಯಿತು? ಈ ದಿನದ ಮಹತ್ವ ಮತ್ತು ಈ ವರ್ಷದ ದಿನದ ಥೀಮ್ ಅನ್ನು ತಿಳಿಯೋಣ.

ಅಂತರರಾಷ್ಟ್ರೀಯ ಮಹಿಳಾ ದಿನ ಮಹಿಳೆಯರ ಸಾಧನೆಗಳನ್ನು ನೆನೆಯುವ ದಿನ. ತನಗಿರುವ ಹಲವಾರು ಸಮಸ್ಯೆಗಳನ್ನು ಮೆಟ್ಟಿ ನಿಂತು ಮಹಿಳೆ ಬಹುತೇಕ ರಂಗದಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ದೌರ್ಜನ್ಯ, ದಬ್ಬಾಳಿಕೆ, ಹಿಂಸೆಯಂತಹ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಿ ಹಲವಾರು ಕ್ಷೇತ್ರಗಳಲ್ಲಿ ಪುರುಷರಷ್ಟೇ ಸರಿಸಮಾನವಾಗಿ ಮುಂದಿದ್ದಾಳೆ. ಕ್ರೀಡೆಯಲ್ಲಿ, ಸೈನ್ಯದಲ್ಲಿ, ಬಾಹ್ಯಾಕಾಶದಲ್ಲಿ, ಯುದ್ಧ ವಿಮಾನಗಳಲ್ಲಿ ಮಹಿಳೆ ಮಹತ್ತರ ಸಾಧನೆ ಮಾಡಿದ್ದಾಳೆ. ಯಾವ ಪುರುಷರಿಗೂ ತಾನು ಕಡಿಮೆ ಇಲ್ಲ ಎಂದು ತೋರಿಸಿಕೊಟ್ಟಿದ್ದಾಳೆ.

ದಿನಾಂಕ

ಪ್ರತಿ ವರ್ಷ ಮಾರ್ಚ್ 8 ರಂದು ಲಿಂಗ ಸಮಾನತೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಎಲ್ಲಾ ವಿಭಾಗಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗುರುತಿಸಲು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಸ್ಮರಿಸಲಾಗುತ್ತದೆ. ನೇರಳೆ ಬಣ್ಣವು ಪ್ರಪಂಚದಾದ್ಯಂತ ಮಹಿಳಾ ದಿನವನ್ನು ಸಂಕೇತಿಸಲು ಬಳಸಲ್ಪಡುತ್ತದೆ.

 International Womens Day 2022 Date, Theme, History, Significance and Why it is Celebrated in Kannada

ಇತಿಹಾಸ

1908ರಲ್ಲಿ ಅಮೆರಿಕದಲ್ಲಿ ಕಾರ್ಮಿಕ ಚಳವಳಿ ನಡೆದಿತ್ತು. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಪಾಲ್ಗೊಂಡಿದ್ದರು. ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು ಮತ್ತು ತಮ್ಮ ಹಕ್ಕುಗಳಿಗಾಗಿ ಧ್ವನಿ ಎತ್ತಿದ್ದರು. ತಮ್ಮ ಕೆಲಸದ ಅವಧಿಯನ್ನು ಕಡಿಮೆ ಮಾಡಬೇಕು ಮತ್ತು ವೇತನ ಶ್ರೇಣಿಯನ್ನು ಹೆಚ್ಚಿಸಬೇಕು ಎಂದು ಕಾರ್ಮಿಕ ಮಹಿಳೆಯರು ಒತ್ತಾಯಿಸಿದ್ದರು. ಮಹಿಳೆಯರಿಗೂ ಮತದಾನದ ಹಕ್ಕನ್ನು ನೀಡಬೇಕೆಂದು ಬೇಡಿಕೆಯಿಟ್ಟಿದ್ದರು. ಮಹಿಳೆಯರ ಧ್ವನಿ ಅಂದಿನ ಸರ್ಕಾರದ ಕಿವಿಗೆ ಬಿದ್ದಿತ್ತು. ನಂತರ 1909 ರಲ್ಲಿ, ಚಳುವಳಿಯ ಒಂದು ವರ್ಷದ ನಂತರ, ಅಮೆರಿಕಾದ ಸಮಾಜವಾದಿ ಪಕ್ಷ ಮಹಿಳಾ ದಿನವನ್ನು ಘೋಷಿಸಿತು. ಅಂದಿನಿಂದ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಗುತ್ತದೆ.

 International Womens Day 2022 Date, Theme, History, Significance and Why it is Celebrated in Kannada

2022 ರ ಥೀಮ್

ವಿಶ್ವಸಂಸ್ಥೆಯ ಪ್ರಕಾರ 2022 ರಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಥೀಮ್ "ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ". ಪ್ರಪಂಚದಾದ್ಯಂತದ ಮಹಿಳೆಯರು ಮತ್ತು ಹುಡುಗಿಯರ ಕೊಡುಗೆಗಳನ್ನು ಥೀಮ್ ಗೌರವಿಸುತ್ತದೆ.

ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಹಲವಾರು ಮಾರ್ಗಗಳಿವೆ. ಈವೆಂಟ್‌ಗಳನ್ನು ಆಯೋಜಿಸುವುದು, ಪ್ರಚಾರಗಳನ್ನು ನಡೆಸುವುದು, ಸಾಧನೆಗಳ ಕುರಿತು ವರದಿ ಮಾಡುವುದು, ಮಹಿಳಾ ಕೇಂದ್ರಿತ ಚಾರಿಟಿಗೆ ದೇಣಿಗೆ ನೀಡುವುದು ಇತ್ಯಾದಿ. ಲಿಂಗ ಸಮಾನತೆಯ ವಿಷಯಕ್ಕೆ ಬಂದಾಗ, ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡಬೇಕಾಗಿದೆ ಮತ್ತು ನಾವೆಲ್ಲರೂ ಸಹಾಯ ಮಾಡಬಹುದು ಎಂಬುದನ್ನು ನೆನಪಿಟ್ಟುಕೊಳ್ಳುವುದು ಈ ದಿನ ಬಹಳ ಮುಖ್ಯವಾಗಿದೆ.

English summary
International Women's Day is celebrated across the world on March 8. Know Theme, History, Significance and Why it is Celebrated in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X