ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆಗೆ ಶುಭ ಕೋರಿದ ರಾಜಕೀಯ ಗಣ್ಯರು
ಬೆಂಗಳೂರು, ಮೇ 1 : ಇಂದು ದೇಶಾದ್ಯಂತ ಕಾರ್ಮಿಕರ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನಲೆ ವರ್ಷ ಪೂರ್ತಿ ಬೆವರು ಹರಿಸಿ ಕಾಯಕವೇ ಕೈಲಾಸ ಎಂದು ಕೆಲಸ ಮಾಡುವ ದೇಶದ ಕಾರ್ಮಿಕರಿಗೆ ರಾಜಕೀಯ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಶುಭಾಶಯ ಕೋರಿದ್ದಾರೆ.

ಕೇಂದ್ರ ಗ್ರಾಹಕ ವ್ಯವಹಾರಗಳು ಮತ್ತು ಆಹಾರ ಹಾಗೂ ಸಾರ್ವಜನಿಕ ವಿತರಣಾ ಸಚಿವ ಪಿಯೋಷ್ ಗೊಯೆಲ್ ಕಾರ್ಮಿಕರ ದಿನಾಚರಣೆಗೆ ಶುಭ ಕೋರಿದ್ದಾರೆ. "ಮಹಾನ್ ರಾಷ್ಟ್ರಗಳು ತಮ್ಮ ಕಾರ್ಮಿಕರ ಬೆವರು ಮತ್ತು ಶ್ರಮದ ಮೇಲೆ ನಿರ್ಮಿಸಲ್ಪಟ್ಟಿವೆ. ಅಂತರರಾಷ್ಟ್ರೀಯ ಕಾರ್ಮಿಕ ದಿನದಂದು ಸದೃಢ ಭಾರತವನ್ನು ನಿರ್ಮಿಸುವಲ್ಲಿ ಕಾರ್ಮಿಕರ ಶ್ರಮವನ್ನ ಶ್ಲಾಘಿಸುತ್ತೇನೆ," ಎಂದು ಕಾರ್ಮಿಕರ ದಿನಾಚರಣೆಯ ಶುಭಾಶಯವನ್ನ ದೇಶದ ಜನತೆಗೆ ತಿಳಿಸಿದ್ದಾರೆ.
Koo AppGreat nations are built on sweat & toil of their workforce. On International Labour Day, I commend their efforts in building a stronger India. अर्थव्यवस्था में योगदान देने वाले सभी श्रमिको को अंतरराष्ट्रीय श्रमिक दिवस की शुभकामनाएं। देश के विकास में आपकी एक विशिष्ट भूमिका है। - Piyush Goyal (@piyushgoyal) 1 May 2022
ಕಾರ್ಮಿಕರ ದಿನಾಚರಣೆ ಹಿನ್ನಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಟ್ವೀಟ್ ಮಾಡಿ ಶುಭ ಕೋರಿದ್ದಾರೆ, "ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿರುವ ವರ್ಗವೆಂದರೇ ಅದು ಕಾರ್ಮಿಕ ವರ್ಗ. ಅವರ ಪರಿಶ್ರಮ ಮತ್ತು ಬದ್ದತೆ ಅವಿಸ್ಮರಣೀಯವಾದುದು. ಕಾರ್ಮಿಕ ದಿನಾಚರಣೆಯ ಈ ಸಂದರ್ಭದಲ್ಲಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ನನ್ನ ಅನಂತ ನಮನಗಳು," ಎಂದು ತಿಳಿಸಿದ್ದಾರೆ.
ದೇಶದ ಪ್ರಗತಿಗೆ ಅಪಾರ ಕೊಡುಗೆ ನೀಡುತ್ತಿರುವ ವರ್ಗವೆಂದರೇ ಅದು ಕಾರ್ಮಿಕ ವರ್ಗ. ಅವರ ಪರಿಶ್ರಮ ಮತ್ತು ಬದ್ದತೆ ಅವಿಸ್ಮರಣೀಯವಾದುದು. ಕಾರ್ಮಿಕ ದಿನಾಚರಣೆಯ ಈ ಸಂದರ್ಭದಲ್ಲಿ ಶ್ರಮಜೀವಿ ಕಾರ್ಮಿಕ ವರ್ಗಕ್ಕೆ ನನ್ನ ಅನಂತ ನಮನಗಳು pic.twitter.com/xkm6nbKm85
— Basavaraj S Bommai (@BSBommai) May 1, 2022
ಇನ್ನು ಕರ್ನಾಟಕ ರಾಜ್ಯದ ಗೃಹ ಸಚಿವರಾದ ಆರಗ ಜ್ಞಾನೇಂದ್ರ ರವರು ಕೂಡ ಕಾರ್ಮಿಕರ ದಿನಾಚರಣೆಯ ಶುಭ ಕೋರಿದ್ದು, "ರಾಜ್ಯದ ಸಮಸ್ತ ಕಾರ್ಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. ಬೆವರು ಸುರಿಸಿ ದುಡಿದು ಸಂಪಾದಿಸಿ ಕುಟುಂಬವನ್ನು ಸಲಹುವುದರ ಜೊತೆಗೆ, ದೇಶದ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಮಿಕರು, ದೇಶದ ಆರ್ಥಿಕ ವ್ಯವಸ್ಥೆಯ ಆಧಾರವಾಗಿದ್ದಾರೆ. ಕಾರ್ಮಿಕರ ಕಲ್ಯಾಣಕ್ಕೆ ಸದಾ ಬದ್ಧರಾಗೋಣ," ಎಂದಿದ್ದಾರೆ.
Koo Appರಾಜ್ಯದ ಸಮಸ್ತ ಕಾರ್ಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. ಬೆವರು ಸುರಿಸಿ ದುಡಿದು ಸಂಪಾದಿಸಿ ಕುಟುಂಬವನ್ನು ಸಲಹುವುದರ ಜೊತೆಗೆ, ದೇಶದ ಆರ್ಥಿಕಾಭಿವೃದ್ಧಿಗೆ ಶ್ರಮಿಸುತ್ತಿರುವ ಕಾರ್ಮಿಕರು, ದೇಶದ ಆರ್ಥಿಕ ವ್ಯವಸ್ಥೆಯ ಆಧಾರವಾಗಿದ್ದಾರೆ. ಕಾರ್ಮಿಕರ ಕಲ್ಯಾಣಕ್ಕೆ ಸದಾ ಬದ್ಧರಾಗೋಣ. #WorldLabourDay - Araga Jnanendra (@aragajnanendra) 1 May 2022
ಸಚಿವ ಎಸ್.ಟಿ.ಸೋಮಶೇಖರ್, "ದುಡಿಮೆಯನ್ನೇ ದೇವರೆಂದು ಭಾವಿಸಿ ದೇಶ ನಿರ್ಮಾಣಕ್ಕೆ ನಿರಂತರವಾಗಿ ಬೆವರು ಸುರಿಸಿ ದುಡಿಯುವ ಎಲ್ಲಾ ವರ್ಗದ ಕಾರ್ಮಿಕರಿಗೆ ವಿಶ್ವ ಕಾರ್ಮಿಕರ ದಿನಾಚರಣೆಯ ಶುಭಾಶಯಗಳು. "ಕಾರ್ಮಿಕರೇ ಜಗತ್ತಿನ ಮಹಾನ್ ಶಕ್ತಿ." ಎಂದು ಕಾರ್ಮಿಕರ ದಿನಾಚರಣೆಯ ಶುಭ ಕೋರಿದ್ದಾರೆ.
ಸಚಿವ ಕೆ.ಗೋಪಾಲಯ್ಯ ಸಹ ಸಾಮಾಜಿಕ ಜಾಲತಾಣದ ಮೂಲಕ "ರಾಜ್ಯದ ಶ್ರಮಿಕ ಬಂಧುಗಳಿಗೆ ವಿಶ್ವ ಕಾರ್ಮಿಕರ ದಿನದ ಹಾರ್ದಿಕ ಶುಭಾಶಯಗಳು. ಪ್ರತಿ ದಿನ ಶ್ರದ್ಧೆಯಿಂದ ದುಡಿದು ಸಂಪಾದನೆ ಮಾಡುವ ಕಾಯಕ ಜೀವಿಗಳು ದೇಶದ ಆರ್ಥಿಕತೆಯ ಬೆನ್ನುಲುಬಾಗಿದ್ದಾರೆ. ಕಾರ್ಮಿಕರ ಆರೋಗ್ಯ ಸೇರಿದಂತೆ ಜೀವನ ಗುಣಮಟ್ಟವನ್ನು ಉತ್ತಮಪಡಿಸುವ ಕಾರ್ಯದಲ್ಲಿ ಕೈ ಜೋಡಿಸೋಣ," ಎಂದಿದ್ದಾರೆ.
ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ್ ಕೂಡ "ಈ ಅಂತರಾಷ್ಟ್ರೀಯ ಕಾರ್ಮಿಕ ದಿನದಂದು ಜಗತ್ತಿನಾದ್ಯಂತ ಕಾರ್ಮಿಕ ಶ್ರಮವನ್ನ ಆಚರಣೆ ಮಾಡೋಣ. ಪ್ರಗತಿಗಾಗಿ ಬೆಳವಣಿಗೆಯ ಏಣಿಯನ್ನು ನಿರ್ಮಿಸುವ ರಾಷ್ಟ್ರದ ನಿಜವಾದದ ವೀರರು ಕಾರ್ಮಿಕರು," ಎಂದು ಹೇಳುವ ಮೂಲಕ ಕಾರ್ಮಿಕರ ದಿನಾಚರಣೆ ಶುಭ ಕೋರಿದ್ದಾರೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ವೈಭವ್ ಸೂರ್ಯವಂಶಿ ಆಕ್ರಮಣಕಾರಿ ಆಟಕ್ಕೆ ಇಂಗ್ಲೆಂಡ್ ಮೈಕೆಲ್ ವಾಘನ್ ಫಿದಾ; ಬಿಸಿಸಿಐಗೆ ವಿಶೇಷ ಮನವಿ -
Viral Video: ವಿದೇಶಿ ಛಾಯಾಗ್ರಾಹಕರ ಫೋಟೋಗ್ರಫಿ ಹುಚ್ಚುತನಕ್ಕೆ ಜೀವ ಕಳೆದುಕೊಂಡಿತೇ ಭಾರತದ ಮುದ್ದಾದ ಆನೆ, ಏನಿದು ಚರ್ಚೆ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ












Click it and Unblock the Notifications