2019 ರಲ್ಲಿ ಭಾರತ ಕಳೆದುಕೊಂಡ 'ರಾಜಕೀಯ ರತ್ನಗಳು'
ವರ್ಷ 2019 ಕೊನೆಗೊಳ್ಳಲು ಕೆಲವೇ ದಿನಗಳು ಬಾಕಿ ಇವೆ. ವರ್ಷದ ಕೊನೆಯಲ್ಲಿ ನಿಂತು ನೋವು-ನಲಿವುಗಳನ್ನು ಲೆಕ್ಕ ಹಾಕಿ ಮುಂದಕ್ಕೆ ಹೋಗುವ ಸಮಯವಿದು.
ರಾಜಕೀಯದ ಮಟ್ಟಿಗೆ 2019 ಅತ್ಯಂತ ಸಕ್ರಿಯ ವರ್ಷ. ಬಾಲಿವುಡ್, ಕ್ರಿಕೆಟ್ ಎರಡನ್ನೂ ಮೀರಿ ರಾಜಕೀಯ ಜನರ ನಡುವಲ್ಲಿ ಚರ್ಚೆ, ವಾಗ್ವಾದ, ಭಿನ್ನಾಭಿಪ್ರಾಯಗಳನ್ನು ಏರ್ಪಡಿಸಿತ್ತು. ಉತ್ತಮ, ಕೆಟ್ಟ ಎರಡೂ ರೀತಿಯ ರಾಜಕೀಯ ಸಂದರ್ಭಗಳನ್ನು 2019 ಕಟ್ಟಿಕೊಟ್ಟಿತು.
ಹಲವು ಪ್ರಮುಖ ಘಟನೆಗಳು 2019 ರಲ್ಲಿ ನಡೆದವು, ಹಲವು ಹೊಸ ನಾಯಕರ ಉದಯವಾಯಿತು, ಹಲವರು ನೇಪಥ್ಯಕ್ಕೆ ಸರಿದರು. ಇದರ ಜೊತೆಗೆ ಇದೇ ವರ್ಷದಲ್ಲಿ ಹಲವು ರಾಜಕೀಯ ನಾಯಕರೂ ಕಾಲವಾಗಿ ತಮ್ಮ ಗುರುತುಗಳನ್ನು ಬಿಟ್ಟುಹೋದರು. ಇಂಥಹವರನ್ನು ಮತ್ತೊಮ್ಮೆ ಲೇಖನದ ಮೂಲಕ ಮತ್ತೊಮ್ಮೆ ನೆನಪಿಸಿಕೊಳ್ಳುವ ಪ್ರಯತ್ನವಿದು.
2019 ರಲ್ಲಿ ನಿಧನರಾದ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದ ರಾಜಕೀಯ ನಾಯಕರುಗಳ ಪಟ್ಟಿ ಇಲ್ಲಿದೆ.

ಶಿವಾಜಿರಾವ್ ದೇಶ್‌ಮುಖ್-ಜನವರಿ 14
ಕಾಂಗ್ರೆಸ್‌ನ ಹಿರಿಯ ನಾಯಕ ಶಿವಾಜಿರಾವ್ ದೇಶ್‌ಮುಖ 84ನೇ ವಯಸ್ಸಿನಲ್ಲಿ ಜನವರಿ 14 ರಂದು ನಿಧನರಾದರು. ಅವರು ಎರಡು ಬಾರಿ ಸಂಸದರಾಗಿ, ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಮಹಾರಾಷ್ಟ್ರದ ಪ್ರಮುಖ ಕಾಂಗ್ರೆಸ್ ನಾಯಕರಲ್ಲಿ ಒಬ್ಬರಾಗಿದ್ದರು.

ವಿವೇಕಾನಂದ ರೆಡ್ಡಿ- ಮಾರ್ಚ್ 15
ವಿವೇಕಾನಂದ ರೆಡ್ಡಿ ಅವಿಭಜಿತ ಆಂಧ್ರಪ್ರದೇಶದ ಪ್ರಮುಖ ರಾಜಕೀಯ ನಾಯಕರಲ್ಲಿ ಒಬ್ಬರಾಗಿದ್ದರು. ಆಂಧ್ರಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಚಿಕ್ಕಪ್ಪ, ಮಾಜಿ ಸಿಎಂ ರಾಜಶೇಖರ ರೆಡ್ಡಿ ಅವರ ತಮ್ಮ ವಿವೇಕಾನಂದ ರೆಡ್ಡಿ ಎರಡು ಬಾರಿ ಶಾಸಕರಾಗಿ, ಮೂರು ಬಾರಿ ಸಂಸದರಾಗಿ ಆಯ್ಕೆ ಆಗಿದ್ದರು. ಅಣ್ಣನೊಂದಿಗೆ ಕಾಂಗ್ರೆಸ್ ನಲ್ಲಿದ್ದ ವೆಂಕನ್ನ ನಂತರ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್ ಕಾಂಗ್ರೆಸ್ ಸೇರಿದ್ದರು. ಅವರು ಮಾರ್ಚ್ 15 ರಂದು ಹೃದಯಾಘಾತದಿಂದ ನಿಧನಹೊಂದಿದರು.

ಮನೋಹರ ಪರಿಕ್ಕರ್- ಮಾರ್ಚ್ 17
ಬಿಜೆಪಿ ಯ ಪ್ರಮುಖ ನಾಯಕರಾಗಿದ್ದ ಮನೋಹರ ಪರಿಕ್ಕರ್ ಅವರು ಮಾರ್ಚ್ 17 ರಂದು ನಿಧನರಾದರು. ಅವರಿಗೆ 63 ವರ್ಷ ವಯಸ್ಸಾಗಿತ್ತು. ಗೋವಾ ಸಿಎಂ ಆಗಿದ್ದ ಪರಿಕ್ಕರ್ ಕೇಂದ್ರ ರಕ್ಷಣಾ ಮಂತ್ರಿಯಾಗಿ ಹಲವು ಮಹತ್ವದ ಬದಲಾವಣೆಗಳಿಗೆ ಕಾರಣರಾಗಿದ್ದರು.

ಶೀಲಾ ದೀಕ್ಷಿತ್- ಜುಲೈ 20
ಕಾಂಗ್ರೆಸ್ ಹಿರಿಯ ನಾಯಕಿ ಶೀಲಾ ದೀಕ್ಷಿತ್ ಜುಲೈ 20 ರಂದು ನಿಧನ ಹೊಂದಿದರು. ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್, ಕಾಂಗ್ರೆಸ್ ನ ಹಿರಿಯ ನಾಯಕರಲ್ಲಿ ಒಬ್ಬರಾಗಿದ್ದರು. ಕಳೆದ ದೆಹಲಿ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆ ಎರಡರಲ್ಲೂ ಅವರು ಸೋತರು.

ಸುಷ್ಮಾಸ್ವರಾಜ್- ಆಗಸ್ಟ್ 6
ಭಾರತ ಕಂಡ ದಿಟ್ಟ ಮಹಿಳಾ ರಾಜಕಾರಣಿಗರಲ್ಲಿ ಒಬ್ಬರಾದ ಸುಷ್ಮಾ ಸ್ವರಾಜ್ ಅವರು ಆಗಸ್ಟ್ 6 ರಂದು ಅನಾರೋಗ್ಯದಿಂದ ನಿಧನರಾದರು. ಅವರಿಗೆ 67 ವರ್ಷ ವಯಸ್ಸಾಗಿತ್ತು. ಬಿಜೆಪಿ ನಾಯಕಿಯಾಗಿ ಕೇಂದ್ರ ಸಚಿವೆಯಾಗಿ ಅವರು ಮೂಡಿಸಿದ ಛಾಪು ಬಹುಕಾಲ ಭಾರತದ ರಾಜಕೀಯ ಇತಿಹಾಸದಲ್ಲಿ ಅಚ್ಚಳಿಯದೇ ಉಳಿಯಲಿದೆ. ಟ್ವಿಟ್ಟರ್ ಅನ್ನು ಹೆಲ್ಪ್‌ಲೈನ್ ಆಗಿ ಬದಲಿಸಿದ ಶ್ರೇಯ ಅವರಿಗೇ ಸಲ್ಲಬೇಕು.

ಅರುಣ್ ಜೇಟ್ಲಿ- ಆಗಸ್ಟ್ 24
ಬಿಜೆಪಿಯ ಎತ್ತರದ ನಾಯಕರಲ್ಲಿ ಅರುಣ್ ಜೇಟ್ಲಿ ಸಹ ಒಬ್ಬರು. ನೋಟ್ ರದ್ದು, ಜಿಎಸ್‌ಟಿ ಅಂತಹಾ ಮಹತ್ವದ ನಿರ್ಣಯ ಕೈಗೊಂಡಾಗ ಅವರು ಹಣಕಾಸು ಸಚಿವರಾಗಿದ್ದರು. ಜೇಟ್ಲಿ ಅವರು ಆಗಸ್ಟ್ 24 ರಂದು ನಿಧನರಾದರು. ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು, ಅವರಿಗೆ 66 ವರ್ಷ ವಯಸ್ಸಾಗಿತ್ತು.

ರಾಮ್‌ಜೆಠ್ ಮಲಾನಿ- ಸೆಪ್ಟೆಂಬರ್ 08
ಕೇಂದ್ರ ಮಂತ್ರಿಗಳೂ, ಹಿರಿಯ ನ್ಯಾಯವಾದಿಗಳೂ ಆಗಿದ್ದ ರಾಮ್‌ಜೇಠ್ ಮಲಾನಿ ಅವರು ಸೆಪ್ಟೆಂಬರ್ 8 ರಂದು ನಿಧನ ಹೊಂದಿದರು. ಅವರಿಗೆ 95 ವರ್ಷ ವಯಸ್ಸಾಗಿತ್ತು. ಆರಂಭದಲ್ಲಿ ಮೋದಿಯನ್ನು ಬೆಂಬಲಿಸಿದ್ದ ಅವರು, ನಂತರ ಮೋದಿಯನ್ನು ತೆಗಳಿದ್ದರು.

ಜೈಪಾಲ್ ರೆಡ್ಡಿ- ಜುಲೈ 28
ಐದು ಬಾರಿ ಸಂಸದರಾಗಿ, ಕೇಂದ್ರದ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್ ನ ಹಿರಿಯ ನಾಯಕ ಜೈಪಾಲ್ ರೆಡ್ಡಿ ಅವರು ಜುಲೈ 28 ರಂದು ಮರಣಹೊಂದಿದರು. ಪಕ್ಷಾತೀತವಾಗಿ ಹಲವಾರು ರಾಜಕೀಯ ನಾಯರ ಆತ್ಮೀಯ ಸ್ನೇಹವನ್ನು ಜೈಪಾಲ್ ರೆಡ್ಡಿ ಸಂಪಾದಿಸಿದ್ದರು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್‌ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications