• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಗೆ ಸಾಕ್ಷಿಯಾಗಲಿದೆ ಭೂಮಿ; ಐಪಿಸಿಸಿ ಎಚ್ಚರಿಕೆ

|
Google Oneindia Kannada News

ನವದೆಹಲಿ, ಆಗಸ್ಟ್ 10: ಮುಂಬರುವ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಪ್ರಬಲ ಪರಿಣಾಮಗಳು ಎದುರಾಗಲಿದ್ದು, ಭಾರತ ಈಗಲೇ ಕಾರ್ಯೋನ್ಮುಖವಾಗಬೇಕು ಎಂದು ಮಂಗಳವಾರ ಪರಿಸರ ತಜ್ಞರು ಎಚ್ಚರಿಕೆ ನೀಡಿದ್ದಾರೆ. ತುರ್ತಾಗಿ, ಹಸಿರುಮನೆ ಅನಿಲ ಹೊರಸೂಸುವಿಕೆಯ ನಿಯಂತ್ರಣ ಸೇರಿದಂತೆ ಹವಾಮಾನ ಬದಲಾವಣೆ ಎದುರಿಸಲು ಸ್ಥಿತಿಸ್ಥಾಪಕ ಮೂಲಸೌಕರ್ಯ ಅಭಿವೃದ್ಧಿಪಡಿಸುವತ್ತ ಗಮನ ಹರಿಸಬೇಕು ಎಂದು ಐಪಿಸಿಸಿ ವರದಿಯಲ್ಲಿ ಎಚ್ಚರಿಸಲಾಗಿದೆ.

ಇಂಟರ್‌ಗವರ್ನಮೆಂಟಲ್ ಪ್ಯಾನೆಲ್ ಆನ್ ಕ್ಲೈಮೇಟ್ ಚೇಂಜ್ (IPCC) ತನ್ನ ಆರನೇ ಮೌಲ್ಯಮಾಪನ ವರದಿಯಲ್ಲಿ ಈ ಎಚ್ಚರಿಕೆಯನ್ನು ನೀಡಿದೆ. ಭೂಮಿಯ ಪ್ರತಿ ಭಾಗವು ಮುಂಬರುವ ವರ್ಷಗಳಲ್ಲಿ ಹವಾಮಾನ ಬದಲಾವಣೆಯ ಗಂಭೀರ ಪರಿಣಾಮವನ್ನು ಎದುರಿಸಲಿವೆ. ಸಮುದ್ರ ಮಟ್ಟದ ಏರಿಕೆ ಸೇರಿದಂತೆ ಶಾಖದ ಅಲೆಗಳು, ಭಾರೀ ಮಳೆ, ಬರ, ಕಾಡ್ಗಿಚ್ಚು ಹಾಗೂ ಪ್ರವಾಹಗಳಂಥ ಹವಾಮಾನ ಬದಲಾವಣೆಯ ಕೆಟ್ಟ ಪರಿಣಾಮಗಳಿಗೆ ಭೂಮಿ ಸಾಕ್ಷಿಯಾಗಲಿದೆ ಎಂದು ತಿಳಿಸಿದೆ.

ಭಾರತದಲ್ಲಿ ಇನ್ನಷ್ಟು ತೀವ್ರವಾಗಲಿದೆ ಮುಂಗಾರು; ಐಪಿಸಿಸಿಭಾರತದಲ್ಲಿ ಇನ್ನಷ್ಟು ತೀವ್ರವಾಗಲಿದೆ ಮುಂಗಾರು; ಐಪಿಸಿಸಿ

ತುರ್ತಾಗಿ ಇಂಗಾಲದ ಹೊರಸೂಸುವಿಕೆಯನ್ನು ಶೇ 50ರಷ್ಟು ಕಡಿಮೆ ಮಾಡುವುದು ಬಹಳ ಮುಖ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಹಸಿರುಮನೆ ಅನಿಲ ಹೊರಸೂಸುವಿಕೆ ಶೂನ್ಯವಾಗುವವರೆಗೂ ಭೂಮಿ ಮೇಲಿನ ಈ ಪರಿಣಾಮಗಳು ಮುಂದುವರೆಯುತ್ತವೆ ಎಂದು ವರದಿಯ ಲೇಖಕರಲ್ಲಿ ಒಬ್ಬರಾದ ಕೃಷ್ಣ ಅಚ್ಯುತರಾವ್ ಪಿಟಿಐಗೆ ನೀಡಿರುವ ಲಿಖಿತ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ. ಹವಾಮಾನ ಬದಲಾವಣೆಯ ಪರಿಣಾಮಗಳ ಕುರಿತು ಇನ್ನಷ್ಟು ಮಾಹಿತಿಗಳನ್ನು ವರದಿಯಲ್ಲಿ ಹಂಚಿಕೊಳ್ಳಲಾಗಿದೆ. ಮುಂದೆ ಓದಿ...

 ಹವಾಮಾನ ಬದಲಾವಣೆ ಪರಿಣಾಮ ಸಂದೇಶ ಸ್ಪಷ್ಟವಾಗಿದೆ

ಹವಾಮಾನ ಬದಲಾವಣೆ ಪರಿಣಾಮ ಸಂದೇಶ ಸ್ಪಷ್ಟವಾಗಿದೆ

ಹವಾಮಾನ ಬದಲಾವಣೆಯ ಪರಿಣಾಮ ಭಾರತ ಹಾಗೂ ವಿಶ್ವದ ಇತರೆ ದೇಶಗಳಿಗೆ ಒಂದೇ ಆಗಿರುತ್ತವೆ. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು, ಇಂಗಾಲದ ಡೈ ಆಕ್ಸೈಡ್ ಮಟ್ಟ ತಗ್ಗಿಸಲು ತುರ್ತಾಗಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅವಶ್ಯಕ ಎಂದು ವರದಿ ತಿಳಿಸಿದೆ.
ನಾವು ಈಗಾಗಲೇ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಅನುಭವಿಸುತ್ತಿದ್ದೇವೆ ಮತ್ತು ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ಶೂನ್ಯವಾಗುವವರೆಗೂ ಬಲವಾದ ಪರಿಣಾಮಗಳನ್ನು ಅನುಭವಿಸುತ್ತಲೇ ಇರುತ್ತೇವೆ ಎಂಬ ಸಂದೇಶ ಸ್ಪಷ್ಟವಾಗಿವೆ. ಈ ಬದಲಾವಣೆಗೆ ನಾವು ಹೇಗೆ ಹೊಂದಿಕೊಳ್ಳಬೇಕು ಎಂಬುದರ ಕುರಿತು ಕೂಡ ಗಮನ ಹರಿಸಬೇಕು. ಜನಸಂಖ್ಯೆ, ಆರ್ಥಿಕತೆ ಹಾಗೂ ಮೂಲಸೌಕರ್ಯದ ಮೇಲೆ ಹವಾಮಾನ ಬದಲಾವಣೆ ಪರಿಣಾಮವನ್ನು ಕಡಿಮೆ ಮಾಡುವ ಕುರಿತು ಯೋಚಿಸಬೇಕು ಎಂದು ರಾವ್ ಹೇಳಿದ್ದಾರೆ.

ತಾಪಮಾನ ಏರಿಕೆಯ ಗಂಭೀರ ಸವಾಲುಗಳು: ಐಪಿಸಿಸಿ ವರದಿ ಏನು ಹೇಳುತ್ತೆ?ತಾಪಮಾನ ಏರಿಕೆಯ ಗಂಭೀರ ಸವಾಲುಗಳು: ಐಪಿಸಿಸಿ ವರದಿ ಏನು ಹೇಳುತ್ತೆ?

 ಹವಾಮಾನ ಬದಲಾವಣೆಗೆ ತುತ್ತಾಗಿರುವ ದುರ್ಬಲ ದೇಶ

ಹವಾಮಾನ ಬದಲಾವಣೆಗೆ ತುತ್ತಾಗಿರುವ ದುರ್ಬಲ ದೇಶ

ಹವಾಮಾನ ಬದಲಾವಣೆಗೆ ತುತ್ತಾಗಿರುವ ಅತ್ಯಂತ ದುರ್ಬಲ ದೇಶಗಳಲ್ಲಿ ಭಾರತ ಕೂಡ ಒಂದಾಗಿದೆ. ಮುಂಬರುವ ವರ್ಷಗಳಲ್ಲಿ ಪ್ರವಾಹ, ಚಂಡಮಾರುತ, ಶಾಖದ ಅಲೆಗಳು, ಕಾಡ್ಗಿಚ್ಚು, ಬರಗಾಲದಂಥ ಹವಾಮಾನ ಘಟನೆಗಳ ತೀವ್ರತೆ ಹೆಚ್ಚಳವಾಗಲಿದೆ ಎಂದು ಕ್ಲೈಮೇಟ್ ಚೇಂಜ್ ಅಂಡ್ ಎನರ್ಜಿ ಪ್ರೋಗ್ರಾಮ್ ನಿರ್ದೇಶಕ ಎಸ್ ಪನ್ವಾರ್ ತಿಳಿಸಿದ್ದಾರೆ.

ಈ ಐಪಿಸಿಸಿಯ ವರ್ಕಿಂಗ್ ಗ್ರೂಪ್ 1ರ ಈ ಪರಿಸರ ವರದಿಯನ್ನು 195 ಸರ್ಕಾರಗಳು ಮತ್ತು ವಿವಿಧ ದೇಶಗಳ 234 ವಿಜ್ಞಾನಿಗಳು ಅನುಮೋದಿಸಿದ್ದಾರೆ. ಈ ಹವಾಮಾನ ಬದಲಾವಣೆಯನ್ನು 'Climate change 2021: The Physical Science Basis' ಎಂದು ಕರೆಯಲಾಗಿದೆ. ಮಾನವನಿಂದ ಪರಿಸರದ ಮೇಲೆ ಉಂಟಾಗಿರುವ ಪರಿಣಾಮಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದೆ. 47 ದೇಶಗಳ ಸರ್ಕಾರಗಳು ಈ ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿವೆ.
 ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಭಾರತ ಸಜ್ಜಾಗಬೇಕಿದೆ

ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಭಾರತ ಸಜ್ಜಾಗಬೇಕಿದೆ

ಗ್ರೀನ್ ಪೀಸ್ ಇಂಡಿಯಾದ ಹವಾಮಾನ ಪ್ರಚಾರಕ ಅವಿನಾಶ್ ಚಂಚಲ್ ಕೂಡ ಈ ಎಚ್ಚರಿಕೆಯನ್ನು ಪುನರುಚ್ಚರಿಸಿದ್ದಾರೆ. ಭಾರತ ತಾಪಮಾನ ಏರಿಕೆಯನ್ನು ಸೀಮಿತಗೊಳಿಸಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳಲೇಬೇಕಿದೆ ಎಂದು ಹೇಳಿದ್ದಾರೆ. ಹವಾಮಾನ ಬಿಕ್ಕಟ್ಟನ್ನು ತಗ್ಗಿಸಲು ಬಲವಾದ ಹಾಗೂ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಸನ್ನದ್ಧತೆ, ಅಪಾಯ ನಿರ್ವಹಣೆ ಕ್ರಮಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ಇದು ಭಾರತವನ್ನು ಮುನ್ನಡೆಸುವ ಹಾಗೂ ಜಾಗತಿಕ ಸಮುದಾಯಕ್ಕೆ ಬಲವಾದ ಸಂದೇಶವನ್ನು ನೀಡುವ ಸಮಯ ಎಂದು ಹೇಳಿದ್ದಾರೆ.

 ಬರಗಾಲ, ಪ್ರವಾಹ, ಕಾಡ್ಗಿಚ್ಚು ಹೆಚ್ಚಾಗಲಿದೆ

ಬರಗಾಲ, ಪ್ರವಾಹ, ಕಾಡ್ಗಿಚ್ಚು ಹೆಚ್ಚಾಗಲಿದೆ

ಜಾಗತಿಕ ತಾಪಮಾನ ಏರಿಕೆಯಿಂದಾಗಿ ಭೂಮಿಯಲ್ಲಿನ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ ಮಣ್ಣಿನ ತೇವಾಂಶ ಕಡಿಮೆಯಾಗುತ್ತದೆ. ಇದರಿಂದ ಬರಗಾಲ ಉಂಟಾಗುತ್ತದೆ. ಜೊತೆಗೆ ಮುಂಗಾರು ತೀವ್ರತೆ ದೇಶದಲ್ಲಿ ಹೆಚ್ಚಾಗಲಿದೆ ಎಂದು ಐಪಿಸಿಸಿ ವರದಿ ತಿಳಿಸಿದೆ. ಭಾರತದಲ್ಲಿ ಹಾಗೂ ದಕ್ಷಿಣ ಏಷ್ಯಾದಲ್ಲಿ ಮುಂಗಾರು ತೀವ್ರತೆ ಹೆಚ್ಚಾಗುವ ಸಾಧ್ಯತೆಯಿದ್ದು, ಅಲ್ಪಾವಧಿ ತೀವ್ರ ಮಳೆಯ ದಿನಗಳು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಬದಲಾವಣೆ ಕುರಿತು ಹೇಳಿದೆ. 2006ರಿಂದಲೂ ಪರಿಸರದ ಮೇಲೆ ಗಂಭೀರ ಪರಿಣಾಮ ಮುಂದುವರೆದಿದೆ. ನಗರೀಕರಣದ ಪ್ರಭಾವವಾಗಿ ಜಾಗತಿಕ ತಾಪಮಾನ ಏರಿಕೆಯಾಗುತ್ತಿದೆ. 1.5 ಡಿಗ್ರಿ ಮತ್ತು 2 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆಯಾಗಿದೆ. ಇದರಿಂದ ಸರಾಸರಿ ಮಳೆ ಹಾಗೂ ಮುಂಗಾರು ವಿಸ್ತರಿಸಲಿದೆ. ದಕ್ಷಿಣ ಏಷ್ಯಾದಲ್ಲಿ ಮುಂಗಾರು ತೀವ್ರಗೊಳ್ಳುವ ನಿರೀಕ್ಷೆಯಿದೆ ಎಂದು ವರದಿ ಹೇಳಿದೆ.

 ತಾಪಮಾನ ಏರಿಕೆಯಿಂದಾಗು ಸಮಸ್ಯೆಗಳು

ತಾಪಮಾನ ಏರಿಕೆಯಿಂದಾಗು ಸಮಸ್ಯೆಗಳು

ಮಳೆ, ಪ್ರವಾಹ, ಬರ ಹಾಗೂ ಕಾಡ್ಗಿಚ್ಚಿನ ಪ್ರಕರಣಗಳು ಹೆಚ್ಚಾಗಲಿವೆ. ತಾಪಮಾನ ಏರಿಕೆಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಆವಿಯಾಗಿ, ಮಣ್ಣಿನಲ್ಲಿ ತೇವಾಂಶ ಕಡಿಮೆಯಾಗುತ್ತದೆ. ಇದು ಬರಕ್ಕೆ ಕಾರಣವಾಗುತ್ತದೆ ಎಂದು ಸೆಂಟರ್ ಫಾರ್ ಕ್ಲೈಮೇಟ್ ಚೇಂಜ್ ರಿಸರ್ಚ್, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ರಿಸರ್ಚ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಕೃಷ್ಣನ್ ತಿಳಿಸಿದ್ದಾರೆ.

2030ರ ಹೊತ್ತಿಗೆ, ಭೂಮಿಯ ಉಷ್ಣತೆಯು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚಾಗುತ್ತದೆ ಮತ್ತು ಆನಂತರ 1.6 ಡಿಗ್ರಿ ಸೆಲ್ಸಿಯಸ್ ನ ಹೆಚ್ಚಳವನ್ನು ಅತಿ ಶೀಘ್ರವಾಗಿ ದಾಖಲಿಸಲಿದೆ. ಇಂಗಾಲದ ಡೈಆಕ್ಸೈಡ್ ಹೊರತಾಗಿ, ಇತರೆ ಅನೇಕ ಹಸಿರುಮನೆ ಅನಿಲಗಳು ಕೂಡ ಹೊರಸೂಸಲ್ಪಡುತ್ತದೆ. ಮಾನವಕುಲವು ಹವಾಮಾನದ ಉಷ್ಣತೆಯನ್ನು ಹೆಚ್ಚಿಸಿದೆ. ಇದರಿಂದಾಗಿ ಭೂಮಿಯ ಮೇಲೆ ತ್ವರಿತ ಬದಲಾವಣೆಗಳು ಆಗಲಿವೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
English summary
Intergovernmental Panel on Climate Change cautioned earth will witness the worst irreversible effects of climate change in the coming years,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X