Get Updates
Get notified of breaking news, exclusive insights, and must-see stories!

ಹುಡುಗರೇ ಇಲ್ಲಿ ಕೇಳಿ.. ನಿಮ್ಮಿಷ್ಟದ ಹುಡುಗಿಯನ್ನು ಒಲಿಸಿಕೊಳ್ಳಲು ಈ ಸರಳ ಸೂತ್ರಗಳನ್ನು ಅನುಸರಿಸಿ- ಒಂದಲ್ಲ ಹತ್ತು ಮಾರ್ಗಗಳಿವೆ

ನೀವು ಹೃತಿಕ್‌ ರೋಷನ್‌ನಂತೆ ಕಾಣದ ಹೊರತು ಹುಡುಗಿ ಅಥವಾ ಮಹಿಳೆಯನ್ನು ಮೆಚ್ಚಿಸುವುದು ಬಹುಶಃ ವಿಶ್ವದ ಅತ್ಯಂತ ಕಠಿಣ ಸವಾಲುಗಳಲ್ಲಿ ಒಂದಾಗಿದೆ. ಹುಡುಗಿಯನ್ನು ಓಲೈಸುವುದು ಅಪ್ಪಟ ಕಲೆಯೆಂದೇ ಹೇಳಬಹುದು. ಇದನ್ನು ಮೋಡಿ ಮಾಡುವುದು ಎನ್ನಬಹುದು. ಇದು ಚಾಣಾಕ್ಷತೆಯಿಂದ ಕೂಡಿದ ಪ್ರಕ್ರಿಯೆಯಾಗಿದೆ. ನೀವು ಇಷ್ಟ ಪಡುತ್ತಿರುವ ಹುಡುಗಿ ನಿಮ್ಮನ್ನು ಮೆಚ್ಚುತ್ತಿಲ್ಲವೇ? ಈ 12 ಸರಳ ಸೂತ್ರಗಳನ್ನು ಅನುಸರಿಸಿ ನಿಮ್ಮಷ್ಟದ ಹುಡುಗಿಯನ್ನು ಒಲಿಸಿಕೊಳ್ಳಬಹುದು.

ಏನವು ಸರಳ ಸೂತ್ರಗಳು?

1. ನೀವು ಆಕೆಯನ್ನು ಮೊದಲ ಬಾರಿಗೆ ಭೇಟಿಯಾದಾಗ ಆಕೆಗೆ ಮಾತನಾಡಲು ಬಿಡಿ. ಹುಡುಗಿಯರನ್ನು ಕತೆಗಳನ್ನು ಹೇಳಲು ಇಷ್ಟಬಯಸುತ್ತಾರೆ. ತಮ್ಮಷ್ಟದ ನಟ, ಹಾಡು, ಸಿನಿಮಾ ಹಾಗೂ ಹವ್ಯಾಸಗಳ ಕುರಿತು ಮಾತನಾಡಲು ಬಯಸುತ್ತಾರೆ. ಮಾನವನ ಮನಸ್ಸು ನೆನಪುಗಳೊಂದಿಗೆ ಸಾಂಗ್ಯತವನ್ನು ರೂಪಿಸುತ್ತದೆ. ಈ ಸಂದರ್ಭದಲ್ಲಿ ಆಕೆ ತನ್ನ ಅನುಭವ ಅಥವಾ ನೆನಪುಗಳನ್ನು ಹೇಳಲು ಅವಕಾಶ ಮಾಡಿ ಕೊಡಿ.

How you make a girl fall in love with you? 10 Psychology Tricks to Attract Girls

2. ನೀವು ಆಕೆಯೊಂದಿಗೆ ಫ್ಲರ್ಟ್‌ ಮಾಡುವುದನ್ನು ಇಷ್ಟಪಡುತ್ತಾಳೆ. ಆದರೆ, ಈ ಫ್ಲರ್ಟ್‌ ಅನ್ನೋದು ಅತಿರೇಕವಾಗಿ ನಾಟಕದ ಸ್ವರೂಪ ಪಡೆಯದಂತೆ ನೋಡಿಕೊಳ್ಳಿ. ಈ ಮೂಲಕ ನೀವು ಪ್ರಾಮಾಣಿಕವಾಗಿದ್ದೀರಿ ಅನ್ನೋದನ್ನು ಆಕೆಗೆ ತಿಳಿಯುವಂತೆ ಮಾಡಿ. ಎಲ್ಲರಂತೆಯೂ ನಿಮಗೂ ಲೈಂಗಿಕ ಆಸಕ್ತಿ ಇರಬಹುದು. ಆದರೆ, ಲೈಂಗಿಕತೆಯ ಕುರಿತು ತೀರಾ ಮಾತನಾಡಲು ಹೋಗಬೇಡಿ. ಪ್ರಾಮಾಣಿಕವಾಗಿ ಪ್ರೀತಿಸುತ್ತಿರುವ ಕುರಿತು ತಿಳಿಹೇಳಿ. ಅದೂ ದಟ್ಟ ಪ್ರೇಮದ ಅನುಭವವನ್ನು ಎತ್ತಿ ತೋರಿಸುವಂತಿರಬಾರದು.

3. ಆಕೆ ಬೆಳೆದುಬಂದಿರುವ ಪರಿಸರ, ಸಾಮಾಜಿಕ ನೆಲೆಗಳ ಬಗ್ಗೆ ತಿಳಿದುಕೊಳ್ಳಿ. ಆಕೆಯ ಭಾವನೆಗಳಿಗೆ ದಕ್ಕೆಯಾಗದಂತೆ ನೋಡಿಕೊಳ್ಳಿ. ನೀವು ಆಕೆಯ ಸನಿಹ ಹೋಗುವಾಗ ನಿಧಾನಗತಿಯನ್ನು ಅನುಸರಿಸಿ. ಅವಸರಕ್ಕೆ ಬಿದ್ದು ಆಕೆಯ ತಿರಸ್ಕಾರಕ್ಕೆ ಒಳಗಾಗದಂತೆ ನೋಡಿಕೊಳ್ಳಿ. ನೀವು ಮೊದಲ ಡೇಟಿಂಗ್‌ನಲ್ಲೇ ಪಾರ್ಟಿ ಮಾಡುವುದಾದರೆ, ಜಾಸ್ತಿ ಕುಡಿಯಬೇಡಿ. ನಿಧಾನಗತಿಯ ಸ್ಪರ್ಷದಿಂದ ಆಕೆ ಪುಳಕಿತಗೊಳಿಸಬಹುದು. ನೀವು ಆಕೆಯ ದೈಹಿಕ ಹಾಗೂ ಮಾನಸಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಭರವಸೆ ನೀಡಿ.

4. ನಿಮಗಿರುವ ಟ್ಯಾಲೆಂಟ್‌ ಅನ್ನು ಅತ್ಯಂತ ಸೂಕ್ಷ್ಮವಾಗಿ ಬಳಸಿಕೊಳ್ಳಿ. ಇವುಗಳನ್ನು ಬಡಾಯಿ ಅಲ್ಲದ ರೀತಿಯಲ್ಲಿ ಪ್ರದರ್ಶಿಸಿ. ಮಹಿಳೆಯರು ಟ್ಯಾಲೆಂಟ್‌ ಹೊಂದಿರುವ ಪುರುಷರನ್ನು ಪ್ರೀತಿಸುತ್ತಾರೆ. ವಾಸ್ತವವಾಗಿ, ಪ್ರತಿಯೊಬ್ಬರೂ ಟ್ಯಾಲೆಂಟ್‌ ಹೊಂದಿರುವ ವ್ಯಕ್ತಿಯನ್ನು ಇಷ್ಟಪಡುತ್ತಾರೆ. ನೀವು ಸಂಗೀತ ವಾದ್ಯವನ್ನು ನುಡಿಸುತ್ತೀರಬಹುದು, ಹಾಡಬಹುದು, ಕ್ರೀಡೆಯಲ್ಲಿ ಉತ್ತಮವಾಗಿರಬಹುದು, ಕವನ ಬರೆಯುತ್ತಿರಬಹುದು ಈ ಟ್ಯಾಲೆಂಟ್‌ಗಳನ್ನು ಆಕೆಯ ಜೊತೆಗೆ ಹಂಚಿಕೊಳ್ಳಿ. ಆಕೆಯ ಮುಂದೆ ಅದನ್ನು ಪ್ರದರ್ಶಿಸಲೂ ಬಹುದು.

5. ಆಕೆಯ ಜೊತೆ ಬುದ್ದಿವಂತರಾಗಿ ವರ್ತಿಸಲು ಪ್ರಯತ್ನಿಸಿ. ಇದೂ ಸಹ ಅತಿರೇಕವಾಗದಂತೆ ನೋಡಿಕೊಳ್ಳಿ. ಸಹಜವಾಗಿ ತಮಾಷೆಯಾಗಿ ನಿಮ್ಮ ಬಳಿಗೆ ಮರಳಲು ಆಕೆಗೆ ಅವಕಾಶ ಕಲ್ಪಿಸಿ. ವಿಷಯಗಳನ್ನು ನೈಜವಾಗಿ ಹೇಳಲು ಪ್ರಯತ್ನಿಸಿ. ಆಕೆ ಒಪ್ಪದಿದ್ದರೆ ಅದಕ್ಕೆ ವಿರೋಧ ವ್ಯಕ್ತಪಡಿಸಬೇಡಿ. ಆಕೆ ತನ್ನ ನಂಬಿಕೆ ದೈವಭಕ್ತಿಯ ಕುರಿತು ಮಾತನಾಡಿದರೆ ಅದನ್ನು ಕೇಳಿಸಿಕೊಳ್ಳಿ. ಆಕೆಯ ಅಭಿಪ್ರಾಯ ನಿಮಗಿಂತ ಭಿನ್ನವಾಗಿದ್ದರೂ ಅದನ್ನು ನೀವು ಗೌರವಿಸಿ.

How you make a girl fall in love with you? 10 Psychology Tricks to Attract Girls

6. ನೀವು ಡೇಟಿಂಗ್‌ ಆರಂಭಿಸಿದ ಬಳಿಕ ಆಕೆಯನ್ನು ನಿಧಾನವಾಗಿ ಸ್ಪರ್ಶಿಸಿ. ಸಹಜವಾಗಿ, ಅವಳು ನಿನ್ನನ್ನು ಇಷ್ಟಪಡಬೇಕೆಂದು ನೀವು ನಿಜವಾಗಿಯೂ ಬಯಸಿದರೆ, ಆಕೆಯ ಬೆರಳುಗಳನ್ನು ಸ್ಪರ್ಶಿಸಿ. ನಿಮ್ಮ ಕೈಯನ್ನು ಆಕೆಯ ಬೆನ್ನಿನ ಹಿಂದೆ ನಿಧಾನವಾಗಿ ಇರಿಸಿ. ಆಕೆ ನಿಮ್ಮನ್ನು ಬಯಸುವಂತೆ ಮಾಡಲು ಆಕೆಯನ್ನು ನಿಧಾನವಾಗಿ ಪ್ರಚೋದಿಸಿ. ಇದು ಅತಿರೇಕಕ್ಕೆ ಹೋಗದಂತೆ ನೋಡಿಕೊಳ್ಳಿ. ಇಂದ್ರಿಯ ಸ್ಪರ್ಶ ಎಂದಿಗೂ ವಿಕೃತವಾಗದಂತೆ ನೋಡಿಕೊಳ್ಳಿ.

7. ನೀವು ಆಸಕ್ತಿ ಹೊಂದಿರುವ ಮಹಿಳೆಯನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಆಕೆಯನ್ನು ಗಮನಿಸಿ, ಆಕೆ ಮಾತನಾಡುವ ರೀತಿ, ಆಕೆ ಇಷ್ಟಪಡುವ ವಿಷಯಗಳು, ಆಕೆಯನ್ನು ಅಸಮಾಧಾನಗೊಳಿಸುವ ವಿಷಯಗಳ ಕುರಿತು ಗಮನಹರಿಸಿ. ಆಕೆ ಮಾತನಾಡುವ ರೀತಿ, ಆಕೆ ನಿಜವಾಗಿಯೂ ಏನೆಂಬುದನ್ನು ಅರ್ಥೈಸಿಕೊಳ್ಳಿ. ಆಕೆಗಿರುವ ದೊಡ್ಡ ಭಯದ ಕುರಿತು ಮಾತನಾಡಿ. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಆಕೆ ಸಾಕಷ್ಟು ಆರಾಮದಾಯಕಳಾಗಿದ್ದಾಳೆಯೇ ಎಂದು ಗಮನಿಸಿ. ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡಿ.

8. ಆಗೊಮ್ಮೆ ಈಗೊಮ್ಮೆ ಆಕೆಯ ತುಟಿಗಳು ಹಾಗೂ ಕಣ್ಣುಗಳನ್ನು ನೋಡಿ. ಮೌನವಾಗಿ ಆಕೆಯನ್ನು ಮೆಚ್ಚಿಸಿ. ಕಣ್ಣುಗಳು ನೋಡುವುದು ಎಂದರೆ ಆಕೆಯನ್ನು ನೀವು ತಿಳಿದುಕೊಳ್ಳಲು ಬಯಸುತ್ತಿದ್ದೀರಿ ಎಂದರ್ಥ. ಆಕೆಯ ಬಗ್ಗೆ ಆಸಕ್ತಿ ಹೊಂದಿದ್ದೀರಿ ಎಂದು ಸೂಚಿಸುತ್ತದೆ. ತುಟಿಗಳನ್ನು ನೋಡುವುದು ಪ್ರಚೋದನೆಯ ಅಭಿವ್ಯಕ್ತಿಯಾಗಿದ್ದು ಅದು ನೀವು ಅವಳನ್ನು ಚುಂಬಿಸಲು ಬಯಸುತ್ತೀರಿ ಎಂಬರ್ಥವನ್ನು ಹೇಳುತ್ತದೆ.

9. ಆಕೆಯೊಂದಿಗೆ ಕಳೆಯುತ್ತಿರುವ ಕ್ಷಣದಲ್ಲಿ ಜೀವಿಸಿ ಮತ್ತು ಅವಳ ಮಾತನ್ನು ಆಲಿಸಿ. ಆಕೆಗೆ ವೈನ್ ಇಷ್ಟವಾಗುತ್ತದೆಯೇ ಎಂದು ಕೇಳಿ. ಅವಳು ನೃತ್ಯ ಮಾಡಲು ಬಯಸುತ್ತಾಳಾ ಎಂದು ಕೇಳಿ. ನಮ್ರತೆಯನ್ನು ಅಭ್ಯಾಸ ಮಾಡಿಕೊಳ್ಳಿ.

10. ಆಕೆಯನ್ನು ಭೋಜನಕ್ಕೆ ಕರೆದೊಯ್ಯಿರಿ. ಮಸಾಲೆಯುಕ್ತ ಆಹಾರಗಳನ್ನು ಸೇವಿಸಿ. ನಾಲಿಗೆಯ ಮೇಲೆ ಬಿಸಿಯಾದ ಮಸಾಲೆಯುಕ್ತ ಆಹಾರದ ಸ್ಪರ್ಶವು ಆಕೆಗೆ ಉತ್ಸಾಹವನ್ನು ಇಮ್ಮಡಿಗೊಳಿಸುವಂತೆ ಮಾಡುತ್ತವೆ. ಮಸಾಲೆಯುಕ್ತ ಆಹಾರಗಳು ಅಪಾಯ ಮತ್ತು ಭಯದ ಪ್ರಜ್ಞೆಯನ್ನು ಪ್ರಚೋದಿಸುತ್ತದೆ ಎಂದು ನಂಬಲಾಗಿದೆ. ಆದರೆ, ಇದು ಸಂಪೂರ್ಣವಲ್ಲ. ಆಕೆಯ ಮುಂದೆ ನೀವು ಇಡಿಯಟ್ ಅಥವಾ ಸ್ಟುಪಿಡ್‌ ಆಗಲು ಹಿಂಜರಿಯದಿರಿ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+