ಅಪಾಯಕಾರಿ ಮಧುಮೇಹಕ್ಕೆ ವಾಕಿಂಗ್ ಬೆಸ್ಟ್ ಮದ್ದಂತೆ! ಏಕೆ ಗೊತ್ತಾ?
ಅದ್ಯಾಕೋ ಗೊತ್ತಿಲ್ಲ ನಮ್ಮನ್ನು ಬಹುಬೇಗವೇ ಮಧುಮೇಹ ಅಪ್ಪಿಕೊಳ್ಳಲು ಶುರುಮಾಡಿದ್ದು ಅದನ್ನು ನಿಯಂತ್ರಿಸುವ ಸಲುವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಇಂತಹ ಸಂದರ್ಭದಲ್ಲಿ ವಾಕಿಂಗ್, ವ್ಯಾಯಾಮ ಹೀಗೆ ಒಂದಷ್ಟು ದೈಹಿಕ ಚಟುವಟಿಕೆಗಳನ್ನು ನಡೆಸಿ ಮಧುಮೇಹ ಬರದಂತೆ ನೋಡಿಕೊಳ್ಳಬೇಕಾಗಿದೆ. ಈಗಾಗಲೇ ಮಧುಮೇಹದಿಂದ ಬಳಲುತ್ತಿರುವವರು ಅದನ್ನು ಸಮತೋಲದಲ್ಲಿಟ್ಟುಕೊಳ್ಳು ಪ್ರಯತ್ನಿಸಬೇಕಾಗಿದೆ. ಇದೆರಡು ಆಗಬೇಕಾದರೆ ವಾಕಿಂಗ್ ಮಾಡುವುದನ್ನು ರೂಢಿಸಿಕೊಳ್ಳಬೇಕಿದೆ.
ನಮ್ಮ ಜೀವನ ಶೈಲಿ ಬದಲಾಗಿರುವುದರಿಂದ ಮತ್ತು ನಾವು ಉತ್ತಮ ವೇತನ ಸಿಗುವ ನೌಕರಿ, ಆದಾಯ ತರುವ ವ್ಯಾಪಾರ ಹೀಗೆ ನಾವು ಹಣವನ್ನು ಗಳಿಸುವ ಧಾವಂತದಲ್ಲಿ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ಕಷ್ಟಪಟ್ಟು ಗಳಿಸಿದ ಹಣವನ್ನೆಲ್ಲ ಆರೋಗ್ಯ ಕಾಪಾಡಲು ಆಸ್ಪತ್ರೆಗೆ ಸುರಿಯುತ್ತಿದ್ದೇವೆ. ಎಲ್ಲವನ್ನು ಕೊಂಡುಕೊಳ್ಳುವ ನಾವು ಆರೋಗ್ಯವನ್ನು ಕಾಪಾಡಿಕೊಳ್ಳಲಾಗದೆ ಒದ್ದಾಡುತ್ತಿದ್ದೇವೆ. ಏಕೆ ಹೀಗೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಅಲ್ಲವೆ?

ಮೊದಲಿಗೆ ಹೋಲಿಸಿದರೆ ಈಗ ನಿತ್ಯದ ಬದುಕಿನಲ್ಲಿ ನಾವು ಯಂತ್ರಗಳಿಗೆ ಮೊರೆ ಹೋಗಿದ್ದೇವೆ ಆ ಮೂಲಕ ಶ್ರಮವನ್ನು ಕಡಿಮೆ ಮಾಡಿಕೊಂಡು ಆರಾಮದಾಯಕ ಬದುಕಿಗೆ ಒಗ್ಗಿಕೊಂಡಿದ್ದೇವೆ. ಬಹಳಷ್ಟು ಜನಕ್ಕೆ ನಡೆಯೋದೇ ಮರೆತು ಹೋಗಿದೆ. ಮನೆಯಿಂದ ನಾಲ್ಕು ಹೆಜ್ಜೆ ಹೊರ ಹೋಗಬೇಕೆಂದರೂ ವಾಹನವನ್ನೇ ಬಳಸುವುದು, ಜೊತೆಗೆ ಕುಳಿತಲ್ಲೇ ಯಾವುದೇ ದೈಹಿಕ ಶ್ರಮವಿಲ್ಲದ ಕೆಲಸವನ್ನೇ ಮಾಡುವುದು, ಅಷ್ಟೇ ಅಲ್ಲದೆ ನಾವ್ಯಾರು ದೈಹಿಕ ಶ್ರಮದ ಕೆಲಸವನ್ನು ಆರಿಸಿಕೊಳ್ಳಲು ತಯಾರಿಲ್ಲ. ಎಲ್ಲವೂ ಕಷ್ಟವಿಲ್ಲದೆ ಆಗಬೇಕೆಂಬುದು ನಮ್ಮ ಬಯಕೆಯಾಗಿದೆ.
ಮಾನಸಿಕ ಆಯಾಸ ಅಪಾಯಕಾರಿ
ಮನುಷ್ಯನಾಗಿ ಹುಟ್ಟಿದ ಮೇಲೆ ಯಾವುದೇ ದೈಹಿಕ ಶ್ರಮವಿಲ್ಲದೆ ಆರಾಮದಾಯಕವಾಗಿ ಕುಳಿತು, ಮಲಗಿ ಬದುಕುವುದು ಎಂದರೆ ಅದು ನಮ್ಮನ್ನು ನಾವು ಅನಾರೋಗ್ಯಕ್ಕೆ ತಳ್ಳಿಕೊಳ್ಳುವ ಸ್ವಯಂ ಅಪರಾಧ ಎಂದರೆ ತಪ್ಪಾಗಲಾರದು. ಇನ್ನು ಆಧುನಿಕ ಡಿಜಿಟಲ್ ಯುಗದಲ್ಲಿ ಕೈಕಾಲು, ದೇಹಕ್ಕೆ ಶ್ರಮವಿಲ್ಲದೆ ಕೇವಲ ಮಿದುಳಿಗಷ್ಟೆ ಸೀಮಿತವಾದ ಕೆಲಸವನ್ನು ಮಾಡುತ್ತಿರುವುದರಿಂದ ನಮಗರಿವಿಲ್ಲದಂತೆ ಮಾನಸಿಕ ಆಯಾಸ ಕಾಣಿಸಿಕೊಳ್ಳುತ್ತಿದೆ. ದೇಹ ಸದಾ ಶ್ರಮವನ್ನು ಬಯಸುತ್ತದೆ. ಅದು ಸಾಧ್ಯವಾಗದಿದ್ದಾಗ ನಮಗೆ ಗೊತ್ತಿಲ್ಲದಂತೆ ಕಾಯಿಲೆಗಳು ನಮ್ಮನ್ನು ಅಪ್ಪಿಕೊಳ್ಳುತ್ತವೆ.

ನಾವು ಏನೇನು ಕೆಲಸ ಮಾಡುತ್ತೇವೆಯೋ ಅದೆಲ್ಲವನ್ನು ಬದಿಗಿಟ್ಟು ನೋಡಿದರೆ ಒಂದಿಷ್ಟು ಮನೆ ಕೆಲಸಗಳನ್ನು ಮಾಡಿದರೆ ಸಾಕು ಅದುವೇ ದೇಹಕ್ಕೆ ವ್ಯಾಯಾಮವಾಗಿ ಬಿಡುತ್ತದೆ. ಅದರಾಚೆಗೆ ಯಾವುದೇ ಜಂಜಾಟವಿಲ್ಲವೆಂದರೆ ಒಂದಷ್ಟು ದೂರ ವಾಕಿಂಗ್ ಮಾಡುವುದು ದೇಹಕ್ಕೊಂದಿಷ್ಟು ಕೆಲಸ ನೀಡಿ ಆರೋಗ್ಯ ಕಾಪಾಡಿಕೊಳ್ಳುವ ಮಾರ್ಗವಾಗಿದೆ. ಇವತ್ತು ಹೆಚ್ಚಿನ ಜನ ಆರೋಗ್ಯ ಕೈಕೊಟ್ಟು ವೈದ್ಯರು ಸಲಹೆ ನೀಡಿದ ಬಳಿಕವೇ ವಾಕಿಂಗ್ ಶುರು ಮಾಡುತ್ತಾರೆ.
ನಾವ್ಯಾಕೆ ವಾಕಿಂಗ್ ಮಾಡಬೇಕು?
ನಾವೆಲ್ಲರೂ ನಿತ್ಯವೂ ವಾಕಿಂಗ್ ಸೇರಿದಂತೆ ಒಂದಷ್ಟು ವ್ಯಾಯಾಮವಾಗುವಂತಹ ಆಟ, ಓಟ, ಬೆಟ್ಟವೇರುವುದು, ಮೆಟ್ಟಿಲು ಹತ್ತುವುದು ಹೀಗೆ ದೇಹಕ್ಕೆ ಶ್ರಮ ನೀಡುವಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ನಾವು ಸೇವಿಸಿದ ಆಹಾರ ಜೀರ್ಣವಾಗುವುದಲ್ಲದೆ ದೇಹಕ್ಕೆ ವ್ಯಾಯಾಮವೂ ಸಿಗುತ್ತದೆ. ಆದರೆ ಅದನ್ನು ಎಷ್ಟು ಮಂದಿ ಮಾಡುತ್ತಾರೆ? ಕೆಲವೇ ಕೆಲವರು ಮಾತ್ರ.

ಮುಂಜಾನೆ ಅಥವಾ ಸಂಜೆ ವಾಕಿಂಗ್ ಮಾಡುವುದನ್ನು ರೂಢಿಸಿಕೊಳ್ಳುವುದು ತುಂಬಾ ಒಳ್ಳೆಯದು ಅದರಲ್ಲೂ ರಕ್ತದೊತ್ತಡ(ಬಿಪಿ) ಮತ್ತು ಮಧುಮೇಹ(ಶುಗರ್) ಕಾಯಿಲೆಯಿಂದ ಬಳಲುವವರು ಮುಂಜಾನೆಯ ಸವಿ ನಿದ್ದೆಯನ್ನು ತ್ಯಜಿಸಿ ಹೊರಗೆ ವಾಕಿಂಗ್ ಮಾಡುವುದು ಅಗತ್ಯವಾಗಿದೆ. ಆದರೆ ಹೆಚ್ಚಿನವರಿಗೆ ಅದರಲ್ಲೂ ಮಹಿಳೆಯರಿಗೆ ಮುಂಜಾನೆ ಎದ್ದು ವಾಕಿಂಗ್ ಮಾಡುವುದು ಕಷ್ಟವಾಗುವುದಿಲ್ಲ. ಆದರೆ ಪರಿಸ್ಥಿಿತಿಗೆ ಹೆದರಿ ನಮಗೆ ಏಕೆ ಬೇಕು ತೊಂದರೆ ಎಂದು ಸುಮ್ಮನಾಗಿ ಬಿಡುತ್ತಾರೆ.
ವೈದ್ಯರು ನೀಡುವ ಸಲಹೆಗಳೇನು?
ಇತ್ತೀಚೆಗೆ ಸರಗಳ್ಳರ ಹಾವಳಿ ಹೆಚ್ಚಾಗಿದೆ. ಜತೆಗೆ ಪುಂಡರ ಕಾಟವೂ ಇಲ್ಲದಿಲ್ಲ. ಆದರೆ ಅದಕ್ಕೆ ಹೆದರಿ ಕುಳಿತರೆ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಅದರ ಬದಲಿಗೆ ಹೆಚ್ಚಿನ ಜನ ಓಡಾಡುವ ಪ್ರದೇಶದಲ್ಲಿ ಮತ್ತು ಚಿನ್ನಾಭರಣಗಳನ್ನು ಧರಿಸದೆ ಮನೆಯಲ್ಲೇ ಇಟ್ಟು ವಾಕಿಂಗ್ ಮಾಡುವುದು ಒಳ್ಳೆಯದು. ಮಧುಮೇಹ ಪೀಡಿತರು ವ್ಯಾಯಾಮ ಹೇಗೆ ಮಾಡಬೇಕು ಎಂಬುದರ ಬಗ್ಗೆ ವೈದ್ಯರು ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. ಅದನ್ನು ಪಾಲಿಸುವುದು ಒಳ್ಳೆಯದು.

ವೈದ್ಯರ ಪ್ರಕಾರ ಪ್ರತಿದಿನ ಕನಿಷ್ಠ ಮೂವತ್ತು ನಿಮಿಷಗಳಾದರೂ ವ್ಯಾಯಾಮ ಮಾಡಲೇ ಬೇಕಂತೆ. ಒಂದು ನಿರ್ದಿಷ್ಟ ಸಮಯದಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ದೈನಂದಿನ ಚಟುವಟಿಕೆಗಳಾದ ನಡಿಗೆ ಅಥವಾ ಮೆಟ್ಟಿಲುಗಳನ್ನು ಹತ್ತಿ ಇಳಿಯುವ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುವುದು ಒಳ್ಳೆಯದು. ಒಬ್ಬರೇ ಹೇಗಪ್ಪಾ ಎಂದು ಯೋಚಿಸದೆ ಸ್ನೇಹಿತ(ತೆ)ರ ಜತೆ ಸೇರಿ ಗುಂಪಾಗಿ ವ್ಯಾಯಾಮ ಮಾಡುವುದು ಒಳ್ಳೆಯದು. ಇದು ಪ್ರೇರಣೆ ನೀಡುತ್ತದೆ. 60 ವರ್ಷ ಮೇಲ್ಪಟ್ಟವರಿಗೆ ಇದು ಒಳ್ಳೆಯ ಅನುಭವ ನೀಡುತ್ತದೆ ಜತೆಗೆ ಉತ್ತೇಜನ ನೀಡುತ್ತದೆ.
ಆರೋಗ್ಯವಾಗಿದ್ದರೆ ಜೀವನ ಸುಖಮಯ
ವಾರಕ್ಕೆ ಕನಿಷ್ಠ ಮೂರು ದಿನವಾದರೂ ಸುಮಾರು 30ನಿಮಿಷಗಳ ನಡಿಗೆಯನ್ನು ಮಾಡಿ. ಇದಕ್ಕೊಂದು ಗುರಿಯಿರಲಿ. ಮನೆಯಲ್ಲಿ ವ್ಯಾಯಾಮ ಮಾಡುವುದು ಕಷ್ಟವಾದರೆ ವ್ಯಾಯಾಮ ಶಾಲೆಗೆ ಸೇರಿಕೊಳ್ಳುವುದು ಒಳ್ಳೆಯದು. ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಕೆಲವೊಂದು ಸಮಸ್ಯೆ, ರಗಳೆಗಳನ್ನು ಸಹಿಸಿಕೊಳ್ಳಲೇ ಬೇಕು. ಬಿಡುವಿಲ್ಲದ ಕೆಲಸ ಕಾರ್ಯಗಳಲ್ಲಿ ಹೇಗಪ್ಪಾ ವ್ಯಾಯಾಮ, ವಾಕಿಂಗ್ ಮಾಡುವುದು ಎಂದು ಯೋಚಿಸುತ್ತಾ ಕೂರದೆ ಅದಕ್ಕೆ ಒಂದಷ್ಟು ಸಮಯವನ್ನು ಮೀಸಲಿಡುವುದು ಒಳಿತು. ಆರೋಗ್ಯ ಇದ್ದರೆ ತಾನೆ ಇತರೆ ಎಲ್ಲವನ್ನೂ ಮಾಡಲು ಸಾಧ್ಯ.
-
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ












Click it and Unblock the Notifications