ಶಿವಕುಮಾರ ಸ್ವಾಮೀಜಿ ಸಿದ್ದಗಂಗಾ ಮಠಾಧೀಶರಾಗಿದ್ದು ಹೀಗೆ
Recommended Video

ತುಮಕೂರು, ಜನವರಿ 21: ಶಿವಕುಮಾರ ಸ್ವಾಮೀಜಿ ಅವರು ಸಿದ್ದಗಂಗಾ ಮಠಾಧೀಶರಾಗಿ ಆಯ್ಕೆ ಆದ ಘಟನೆ ಬಹು ಸ್ವಾರಸ್ಯಕರವಾದದ್ದು. ಮಠಾಧೀಶರಾಗುವ ಅವಕಾಶ ಬಹು ಹಠಾತ್ತಾಗಿ ಶಿವಕುಮಾರಸ್ವಾಮೀಜಿ ಅವರನ್ನು ಹುಡುಕಿಕೊಂಡು ಬಂದಿತ್ತು. ಅದನ್ನು ಅಷ್ಟೇ ವಿನಯವಾಗಿ ಅವರು ಸ್ವಾಗತಿಸಿದ್ದರು.
1930ರಲ್ಲಿ ಸಿದ್ದಗಂಗಾ ಮಠದ ಮಠಾಧೀಶರಾಗಿದ್ದದು ಉದ್ದಾನ ಸ್ವಾಮೀಜಿಗಳು. ಅದೇ ವರ್ಷ ಅಚಾನಕ್ಕಾಗಿ ಮಠದ ಕಿರಿಯ ಸ್ವಾಮಿಗಳಾದ ಮರುಳಾರಾಧ್ಯರು ನಿಧನ ಹೊಂದುತ್ತಾರೆ. ಶಿವಣ್ಣ (ಶಿವಕುಮಾರಸ್ವಾಮೀಜಿ) ಅವರು ಮರುಳಾರಾಧ್ಯರ ಅಂತಿಮ ಕಾರ್ಯದಲ್ಲಿ ಭಾಗವಹಿಸಿದ್ದರು.
ಉತ್ತರಾಧಿಕಾರಿಯ ಹುಡುಕಾಟದಲ್ಲಿದ್ದ ಉದ್ದಾನ ಸ್ವಾಮಿಗಳ ಗಮನ ಸರಳ, ಸಜ್ಜನಿಕೆಯಿಂದ ಗುರುತಿಸಿಕೊಂಡಿದ್ದ ಶಿವಣ್ಣ ಅವರ ಮೇಲೆ ಬೀಳುತ್ತದೆ. ಆಗಿನ್ನೂ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ತರುಣ ಶಿವಣ್ಣ ಅವರು, ಉದ್ದಾನ ಸ್ವಾಮಿಯವರ ಮಾತಿನಂತೆ ಸನ್ಯಾಸ ಸ್ವೀಕರಿಸುತ್ತಾರೆ. ಸಾಮಾನ್ಯರಂತೆ ಬಂದಿದ್ದ ಶಿವಣ್ಣ ಹೋಗಬೇಕಾದರೆ ಕಾವಿ, ಮಾಲೆ ಧರಿಸಿ ಸನ್ಯಾಸಿ ಆಗಿ ಹೋಗುತ್ತಾರೆ.

ಸನ್ಯಾಸಿಯಾಗಿ ವಿದ್ಯಾಭ್ಯಾಸ ಪೂರೈಸಿದರು
ಸನ್ಯಾಸ ಸ್ವೀಕರಿಸಿದ ಮೇಲೆ ಸ್ವಾಮಿ ಅವರು ಪದವಿ ಶಿಕ್ಷಣ ಪೂರೈಸುತ್ತಾರೆ. ಪದವಿ ಮುಗಿದ ಕೂಡಲೆ ಸಿದ್ದಗಂಗಾ ಮಠಕ್ಕೆ ಮರಳಿ. ಮಠದ ಏಳಿಗೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಯಾವ ಮಟ್ಟಿಗೆ ಆ ಕಾರ್ಯದಲ್ಲಿ ತಲ್ಲಿನರಾಗುತ್ತಾರೆಂದರೆ 25 ವರ್ಷಗಳ ಕಾಲ ಅವರು ತಮ್ಮ ಸ್ವಗ್ರಾಮಕ್ಕೆ ಹೋಗುವುದೇ ಇಲ್ಲ.

ಕಷ್ಟದ ಸ್ಥಿತಿಯಲ್ಲಿತ್ತು ಮಠ
ಕೆಲ ವರ್ಷಗಳ ಬಳಿಕ ಉದ್ದಾನ ಸ್ವಾಮಿಗಳು ಶಿವೈಕ್ಯರಾಗುತ್ತಾರೆ. ಆಗ ಮಠವೂ ಬಹು ಕಷ್ಟದ ಪರಿಸ್ಥಿತಿಯಲ್ಲಿರುತ್ತದೆ. ಉದ್ದಾನ ಸ್ವಾಮಿಗಳ ಅಂತ್ಯಸಂಸ್ಕಾರ ಮಾಡುವುದು ಸಹ ಶಿವಕುಮಾರ ಸ್ವಾಮಿಗಳಿಗೆ ಕಷ್ಟವಾಗಿತ್ತು. ಆದರೆ ಎಂತಹಾ ಕಷ್ಟದ ಸನ್ನಿವೇಶದಲ್ಲೂ ಮಠದಲ್ಲಿ ಸೇವೆಗಳು ನಿಲ್ಲಲು ಶ್ರೀಗಳು ಬಿಟ್ಟಿರಲಿಲ್ಲ. ಭಿಕ್ಷೆ ಬೇಡಿಯೂ ದಾಸೋಹ ನಡೆಸಿದ್ದರು ಎಂಬ ಕತೆ ಕೂಡ ಚಾಲ್ತಿಯಲ್ಲಿದೆ.

ಆರ್ಥಿಕ ಸಂಕಷ್ಟದಲ್ಲಿದ್ದಾಗ ಪೀಠಾಧಿಪತಿಗಳಾದರು
ಮಠವು ಆರ್ಥಿಕವಾಗಿ ಕಷ್ಟಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಮಠಾಧಿಪತಿಗಳಾದ ಶ್ರೀಗಳು ಆ ನಂತರ ತಮ್ಮ , ಸೇವಾ ಮನೋಭಾವ, ಶ್ರಮದಿಂದ ಸಿದ್ದಗಂಗಾ ಮಠವನ್ನು ಆಗಸದೆತ್ತರಕ್ಕೆ ಬೆಳೆಸಿದರು.

ದಶಕಗಳಿಂದ ವಿದ್ಯಾದಾನ
ಸಾವಿರಾರು ವಿದ್ಯಾರ್ಥಿಗಳಿಗೆ ದಶಕಗಳಿಂದ ವಿದ್ಯಾದಾನ ಮಾಡುತ್ತಾ, ಹಸಿದವರಿಗೆ ಅನ್ನ ನೀಡುತ್ತಾ, ಬಡವರಿಗೆ ಸುಲಭದ ದರದಲ್ಲಿ ಆರೋಗ್ಯ ನೀಡುತ್ತಾ ತ್ರಿವಿದ ದಾಸೋಹಿಗಳು ಎನಿಸಿಕೊಂಡರು ಶ್ರೀಗಳು. ದಾಸೋಹಕ್ಕೆ ಇರುವುದೇ ಸಿದ್ದಗಂಗೆ ಎಂಬಂತೆ ಮಠವನ್ನು ಬೆಳೆಸಿದರು.
-
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್ -
Education: CBSE 9 ಮತ್ತು 10ನೇ ತರಗತಿಯ ಹೊಸ ಪಠ್ಯಕ್ರಮ ಇಂದು ಬಿಡುಗಡೆ -
ಮುಂದಿನ 2 ರಿಂದ 3 ವಾರಗಳಲ್ಲಿ ಇರಾನ್ ಮೇಲೆ ಅತ್ಯಂತ ಭೀಕರ ದಾಳಿ: ಟ್ರಂಪ್ ಎಚ್ಚರಿಕೆ -
ವಿದ್ಯಾರ್ಥಿಗಳ ಮೊಬೈಲ್ ಗೀಳಿಗೆ ಬ್ರೇಕ್: ಹೊಸ 'ಡಿಜಿಟಲ್ ನೀತಿ' ಪ್ರಕಟಿಸಿದ ಆರೋಗ್ಯ ಇಲಾಖೆ -
Raghav Chadha: ಸಂಸದ ರಾಘವ್ ಚಡ್ಡಾಗೆ ಶಾಕ್ ಕೊಟ್ಟ ಎಎಪಿ, ಬಿಜೆಪಿ ಸೇರಲಿದ್ದಾರೆಯೇ ಸ್ಟಾರ್ ರಾಜಕಾರಣಿ -
Nuwan Thushara: ಆರ್ಸಿಬಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ವಿರುದ್ಧವೇ ತಿರುಗಿ ಬಿದ್ದ ಸ್ಟಾರ್ ಆಟಗಾರ ನುವಾನ್ ತುಷಾರ












Click it and Unblock the Notifications