ಕಸದಿಂದ ಕಟ್ಟಿದ ಮನೆ! ಸಾರ್ವಜನಿಕ ತ್ಯಾಜ್ಯ ಬಳಸಿ 3 ಅಂತಸ್ತಿನ ಮನೆ ನಿರ್ಮಿಸಿದ ಪೌರಕಾರ್ಮಿಕ!

ಮನಸ್ಸಿದ್ದರೆ ಮಾರ್ಗ ಅನ್ನೋ ಮಾತಿದೆ. ಯಾವುದೇ ಕೆಲಸ ಇರಲಿ ಮಾಡಲೇಬೇಕು ಎನ್ನುವ ಛಲ ಒಂದಿದ್ದರೆ ಸಾಕು ಅದಕ್ಕೊಂದು ಅಂತ್ಯ ಕಾಣಿಸೋದು ಕಷ್ಟ ಅಲ್ಲವೇ ಅಲ್ಲ. ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನೋ ಗಾದೆ ಮಾತಿದೆ. ಅಂದರೆ ಈ ಎರಡೂ ಕೆಲಸಗಳನ್ನು ಪೂರ್ಣ ಮಾಡುವುದು ಎಷ್ಟು ಕಷ್ಟ ಎನ್ನುವುದು ಅನುಭವಿಸಿದವರಿಗೆ ಮಾತ್ರ ತಿಳಿಯುತ್ತೆ.

ಜೀವನದಲ್ಲಿ ಸಣ್ಣದೋ ದೊಡ್ಡದೋ ಒಂದು ಸ್ವಂತ ಮನೆ ಬೇಕು ಎನ್ನುವ ಆಸೆ ಪ್ರತಿಯೊಬ್ಬರದ್ದೂ ಆಗಿರುತ್ತದೆ. ಅದರಲ್ಲೂ ಕೆಲವರು ಮನೆ ಹೀಗಿಯೇ ಇರಬೇಕು, ಇಷ್ಟೇ ದೊಡ್ಡದಿರಬೇಕು, ಇಂಟಿರಿಯರ್‌ ಡಿಸೈನ್‌ ಹೇಗಿರಬೇಕು ಎನ್ನುವುದ ಬಗ್ಗೆ ಬಹಳ ಸೊಷ್ಟ ಕಲ್ಪನೆ ಇಟ್ಟುಕೊಂಡಿರ್ತಾರೆ.

House From Trash American Garbage collector Built Three Story House From Beer Can Car Bumper Shells

ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿದೆ ಅಪರೂಪದ ಮನೆ

ಸಾಮಾನ್ಯವಾಗಿ ಮನೆ ಕಟ್ಟುವುದಕ್ಕೆ ಏನೆಲ್ಲಾ ಬೇಕು? ಕಲ್ಲು, ಮರಳು, ಸಿಮೆಂಟ್‌, ಕಬ್ಬಿಣ, ಮರ, ಸುಣ್ಣ ಬಣ್ಣ ಹೀಗೆ ಪಟ್ಟಿ ಬೆಳೀತಾ ಹೋಗುತ್ತೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಯಾರಿಗೂ ಬೇಡ ಎಂದು ಎಸೆದಿರುವ ಕಸವನ್ನೇ ಬಳಸಿ ಮನೆ ಕಟ್ಟಿಕೊಂಡಿದ್ದಾನೆ. ಅಂದ ಹಾಗೆ ಈ ಮನೆಯಿರುವುದು ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ.

ಒಂದೂವರೆ ಎಕರೆ ಜಾಗ ಖರೀದಿ

ಆರ್ಟ್ ಬೀಲ್ ಎನ್ನುವ ಪೌರ ಕಾರ್ಮಿಕನೇ ಈ ಸಾಧನೆ ಮಾಡಿರುವುದು. 1928 ರಲ್ಲಿ ಕ್ಯಾಲಿಫೋರ್ನಿಯಾದ ಕ್ಯಾಂಬ್ರಿಯಾದಲ್ಲಿ 500 ಡಾಲರ್‌ ಕೊಟ್ಟು ಸುಮಾರು ಒಂದೂವರೆ ಎಕರೆ ಜಾಗವನ್ನು ಈತ ಖರೀದಿ ಮಾಡ್ತಾನೆ. ಆರ್ಟ್ ಬೀಲ್ ವಿಲಿಯಂ ರಾಂಡೋಲ್ಫ್ ಹರ್ಸ್ಟ್ ಎನ್ನುವವರ ಸುಂದರ ಮತ್ತು ವಿಶಾಲ ಎಸ್ಟೇಟ್‌ನ ಹತ್ತಿರದ ನಿರ್ಮಾಣ ಸ್ಥಳಕ್ಕೆ ಸಾಮಾನು ಸರಂಜಾಮುಗಳನ್ನು ಸಾಗಿಸ್ತಾ ಇದ್ದ. ಹೀಗೆ ಸಾಮಾಗ್ರಿಗಳನ್ನು ಸಾಗಿಸೋವಾಗಲೂ ಬೀಲ್‌ಗೆ ಹರ್ಸ್ಟ್ ಅವರ ಬಂಗಲೆಯ ವಾಸ್ತುಶಿಲ್ದ ಬಗ್ಗೆ ಯಾವತ್ತೂ ಆಸಕ್ತಿ ಮೂಡಲೇ ಇಲ್ಲ.

ಎಸೆದಿರುವ ಕಸದಿಂದಲೇ ನಿರ್ಮಾಣವಾದ ಮನೆ

ತನಗೊಂದು ಮನೆ ಬೇಕು ಎನ್ನುವುದು ಮಾತ್ರ ಆರ್ಟ್ ಬೀಲ್ ಕನಸಾಗಿತ್ತು. ಆ ಕನಸಿನಂತೆಯೇ ತಾನು ಖರೀದಿ ಮಾಡಿದ ಜಾಗಲದಲ್ಲಿ ಒಂದು ಕೋಣೆಯ ಸಣ್ಣ ಮನೆ ಕಟ್ಟುತ್ತಾನೆ. ಈ ಸಣ್ಣ ಕೋಣೆಯನ್ನು ಕಟ್ಟಿರುವುದು ಕೂಡಾ ಗುಜರಿ ಸಾಮಾನುಗಳಿಂದಲೇ. ಈ ಮನೆ ಕಟ್ಟುವುದಕ್ಕೆ ಆರ್ಟ್ ಬೀಲ್ ಬಳಸಿರುವುದು ಬಿಯರ್‌ ಕ್ಯಾನ್‌ಗಳು, ಕಾರಿನ ಬಂಪರ್‌, ಹಳೆಯ ವಾಹನದ ಚಕ್ರಗಳು, ಸಮುದ್ರದ ಬದಿಯಲ್ಲಿ ಸಿಗುವ ಶಂಖ ಮತ್ತು ಮರದ ತುಂಡುಗಳನ್ನು.

ಇಲ್ಲಿ ಈ ಮನುಷ್ಯ ತನ್ನ ಮನೆಗಾಗಿ ಖರ್ಚು ಮಾಡಿರುವುದು ಎಂದರೆ ಸಿಮೆಂಟ್‌ಗಾಗಿ ಮಾತ್ರ. ಮತ್ತೆಲ್ಲವೂ ಗುಜರಿ ಸಾಮಾನುಗಳೇ. ಈ ಮನೆಯ ಗೋಡೆಗಳನ್ನು ಚಿಪ್ಪು, ಗೊಂಬೆಗಳಿಂದ ಡೆಕೊರೇಟ್‌ ಮಾಡಲಾಗಿದೆ.ಒಂದು ಕೋಣೆಯಿಂದ ಶುರುವಾದ ಈ ಮನೆಯ ಕನಸು ಅಲ್ಲಿಗೇ ನಿಲ್ಲಲಿಲ್ಲ.ನೋಡ ನೋಡುತ್ತಾ ಮನೆ ಮೂರು ಅಂತಸ್ತಿನ ಭವ್ಯ ಕಟ್ಟಡವಾಗಿ ಬದಲಾಗುತ್ತದೆ. ಈ ಮೂರು ಅಂತಸ್ತಿನ ಮನೆಗೂ ಬಳಸಿದ್ದೂ ಅದೇ ಹಳೆಯ ಸಾಮಾನುಗಳನ್ನು. ಈ ಮನೆಯನ್ನು ಎಲ್ಲರೂ ನಿಟ್ ವಿಟ್ ರಿಡ್ಜ್ ಎಂದು ಕರೀತಾ ಇದ್ರು.

ಐತಿಹಾಸಿಕ ಹೆಗ್ಗುರುತು

1970 ರ ದಶಕದ ಹೊತ್ತಿಗೆ, ಕ್ಯಾಂಬ್ರಿಯಾ ವೆಕೇಶನ್‌ ಕಮ್ಯುನಿಟಿಯಾಗಿ ಬದಲಾಯಿತು. ಬೀಲ್‌ನ ಈ ಮನೆಯ ಸುತ್ತ ಹೊಸ ಹೊಸ ವಿನ್ಯಾಸದ ಮನೆಗಳು ತಲೆ ಎತ್ತಿದವು. ಕೆಲವು ನೆರೆಹೊರೆಯವರು ನಿಟ್ ವಿಟ್ ರಿಡ್ಜ್ ಅನ್ನು ಕೆಡವುವ ಸಲಹೆ ಕೂಡಾ ನೀಡಿದರು. ಸುಂದರ ಮನೆಗಳೇ ಇರುವ ಈ ಜಾಗದಲ್ಲಿ ಈ ಮನೆ ದೃಷ್ಟಿಗೊಂಬೆಯಂತೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು. ಆದರೆ, ಇನ್ನು ಕೆಲವರು ಕಸ ಕಡ್ಡಿಗಳಿಂದಲೇ ನಿರ್ಮಾಣವಾದ ಈ ಮನೆಯ ಬಗ್ಗೆ ಬೇರೆಯದ್ದೇ ಅಭಿಪ್ರಾಯ ಹೊಂದಿದ್ದರು.

ಕಲಾವಿದರು, ಇತಿಹಾಸಕಾರರು ಮತ್ತು ಜಾನಪದ-ಕಲಾಭಿಮಾನಿಗಳು ಈ ಮನೆಯನ್ನು ವಿಶಿಷ್ಟವಾದ ಅಮೇರಿಕನ್ ಸಂಪ್ರದಾಯದ ಭಾಗವಾಗಿ ನೋಡಿದರು. ವ್ಯಕ್ತಿಯೊಬ್ಬ ಸಾಮಾನ್ಯ ವಸ್ತುಗಳನ್ನು ಬಳಸಿ ನಿರ್ಮಾಣ ಮಾಡಿರುವ ಗುಜರಿ ಸಾಮಾನುಗಳನ್ನು ಕಲಾಕೃತಿಯಾಗಿ ಪರಿವರ್ತಿಸಿರುವ ಕೌಶಲ್ಯವನ್ನು ಮೆಚ್ಚುತ್ತಾರೆ. ಜಾನಪದ-ಕಲಾ ವಕೀಲ ಸೆಮೌರ್ ರೋಸೆನ್ ನಿಟ್ ವಿಟ್ ರಿಡ್ಜ್‌ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದು ಎಲ್ಲರ ಗಮನ ಸೆಳೆಯುವಂತೆ ಮಾಡಿದರು. ಕೊನೆಗೆ ಈ ಆಸ್ತಿಗೆ ಕ್ಯಾಲಿಫೋರ್ನಿಯಾ ರಾಜ್ಯ ಐತಿಹಾಸಿಕ ಹೆಗ್ಗುರುತು ಸ್ಥಾನಮಾನ ಸಿಗುತ್ತದೆ.

House From Trash: 1992 ರಲ್ಲಿ ಬೀಲ್‌ ನಿಧನ

ಮೂರು ಅಂತಸ್ತಿನ ಮನೆ ನಿರ್ಮಾಣವಾದ ಮೇಲೂ ಬೀಲ್ ಯಾವತ್ತೂ ಈ ಮನೆಯ ಕೆಲಸ ಮುಗಿದಿದೆ ಎಂದು ಭಾವಿಸಲೇ ಇಲ್ಲ. ಈ ಮನೆಯನ್ನು ಸಾಧ್ಯವಾದಷ್ಟು ದೊಡ್ಡದಾಗಿ ಕಟ್ಟುತ್ತಲೇ ಇರಬೇಕು ಎನ್ನುವುದು ಅವರ ಆಸೆಯಾಗಿತ್ತು. ಬೀಲ್ 1992 ರಲ್ಲಿ ಅಂದರೆ ಅವರ 96 ನೇ ವಯಸ್ಸಿನಲ್ಲಿ ನಿಧನರಾಗುತ್ತಾರೆ. ನಂತರ 1999 ರಲ್ಲಿ ಅಲ್ಲಿನ ಪ್ಲಂಬರ್ ಮತ್ತು ಅವರ ಪತ್ನಿ ಬೀಲ್‌ ಅವರ ಆಸ್ತಿಯನ್ನು ಖರೀದಿ ಮಾಡ್ತಾರೆ. ಅದನ್ನು ಆಂಟಿ-ಹರ್ಸ್ಟ್ ಕ್ಯಾಸಲ್ ಎಂದೇ ಪ್ರಚಾರ ಮಾಡಿ ಇಲ್ಲಿಗೆ ಟೂರ್‌ಗಳನ್ನು ವ್ಯವಸ್ಥೆ ಮಾಡುತ್ತಾರೆ.

House From Trash: ವ್ಯಕ್ತಿಯ ಛಲಕ್ಕೆ ಸಾಕ್ಷಿ

ಅಂದ ಹಾಗೆ ನಿಟ್ ವಿಟ್ ರಿಡ್ಜ್ ಬಗ್ಗೆ ಹುಟ್ಟಿಕೊಂಡ ಪ್ರಶ್ನೆ ನಂತರವೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಅದೇನೆಂದರೆ ಈ ಗುಜರಿ ಸಾಮಾನುಗಳಿಂದ ಕಟ್ಟಿರುವ ಈ ಮನೆ ನೋಡುವುದಕ್ಕೆ ಅಸಹ್ಯ ಉಂಟು ಮಾಡುವ ಕಟ್ಟಡವೇ ಅಥವಾ ಮೇರುಕೃತಿಯೇ? ಎನ್ನುವುದು. ಬಹುಶಃ ಅದು ಎರಡೂ ಆಗಿರಬಹುದು. ಹೆಚ್ಚಿನ ಜಾನಪದ ಕಲೆಗಳಂತೆ, ಈ ಮನೆಯ ಶಕ್ತಿಯುನ್ನು ಕೂಡಾ ಎಲ್ಲರೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಅದರೂ ಕಸದಿಂದ ನಿರ್ಮಾಣವಾದ ಈ ಮನೆ ಬೀಲ್‌ ಅವರ ಛಲಕ್ಕೆ ಸಾಕ್ಷಿಯಾಗಿರುವುದಂತೂ ಸುಳ್ಳಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+