ಹೊಸಕೋಟೆ ಕದನ; ಕೋಟ್ಯಾಧಿಪತಿಗಳ ಹೋರಾಟ!
ಬೆಂಗಳೂರು, ನವೆಂಬರ್ 17 : ಬೆಂಝ್, ಪಾಡ್ರೋ, ಆಡಿ, ಮಹೀಂದ್ರಾ ಜೀಪ್, ಹುಂಡೈ ಕಾರು ಸೇರಿದಂತೆ ಬೈರತಿ ಸುರೇಶ್ ಮತ್ತು ಪದ್ಮಾವತಿ ಸುರೇಶ್ 424 ಕೋಟಿ ರೂ. ಆಸ್ತಿಯನ್ನು ಘೋಷಣೆ ಮಾಡಿದರು. ಪದ್ಮಾವತಿ ಸುರೇಶ್ ಹೊಸಕೋಟೆ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ.
ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಎಂಟಿಬಿ ನಾಗರಾಜ್, ಪಕ್ಷೇತರ ಅಭ್ಯರ್ಥಿಯಾಗಿ ಶರತ್ ಬಚ್ಚೇಗೌಡ ಕಣದಲ್ಲಿದ್ದಾರೆ.
ಬೈರತಿ ಸುರೇಶ್ ಮತ್ತು ಪದ್ಮಾವತಿ ಸುರೇಶ್ ಒಟ್ಟು 16.63 ಕೋಟಿ ಚರಾಸ್ಥಿ ಹೊಂದಿದ್ದಾರೆ. ಸ್ಥಿರಾಸ್ಥಿ 407 ಕೋಟಿ. ದಂಪತಿಗಳು ಹೊಂದಿರುವ ಬಹುತೇಕ ಆಸ್ತಿ ಹೆಬ್ಬಾಳ ಮತ್ತು ಸುತ್ತಮುತ್ತಲೇ ಇದೆ. ಉದ್ಯಮ ನಡೆಸುತ್ತಿರುವುದಾಗಿ ಪದ್ಮಾವತಿ ಸುರೇಶ್ ಆದಾಯದ ಮೂಲ ಹೇಳಿದ್ದಾರೆ.

ದಂಪತಿಗಳ ಬಳಿಕ ಪಾಡ್ರೋ, ಆಡಿ, ಹುಂಡೈ ಐ20, ಬೆಂಝ್, ಮೂರು ಇನ್ನೋವಾ, ಒಂದು ಮಹೀಂದ್ರಾ ಜೀಪ್ ಹೊಂದಿದ್ದಾರೆ. 1ಜೆಸಿಬಿಯೂ ಇದ್ದು, ಕಾರುಗಳ ಮೌಲ್ಯವೇ 3.13 ಕೋಟಿ ಆಗುತ್ತದೆ ಎಂದು ಅಫಿಡೆವಿಟ್ ಹೇಳುತ್ತದೆ.
ಬೈರತಿ ಸುರೇಶ್ ದಂಪತಿಗಳ ಬಳಿ 3,512 ಗ್ರಾಂ ಚಿನ್ನ, 60 ಕೆಜಿ ಬೆಳ್ಳಿ ಇದೆ. ನಾಮಪತ್ರ ಸಲ್ಲಿಸುವಾಗ ನೀಡಿದ ಅಫಿಡೆವಿಟ್ ಪ್ರಕಾರ 24.75 ಕೋಟಿ ರೂ. ಸಾಲವಿದೆ. 2018-19ನೇ ಸಾಲಿನಲ್ಲಿ ಪದ್ಮಾವತಿ ಸುರೇಶ್ 9,11,585 ಕೋಟಿ ರೂ. ಆದಾಯ ತೆರಿಗೆ ಕಟ್ಟಿದ್ದಾರೆ.
ಎದುರಾಳಿಗಳ ಆಸ್ತಿ ಎಷ್ಟು?
* ಶರತ್ ಬಚ್ಚೇಗೌಡ, ಪ್ರತಿಭಾ ದಂಪತಿ 138 ಕೋಟಿ ರೂ.
* ಎಂಟಿಬಿ ನಾಗರಾಜ್ 1,223 ಕೋಟಿ ರೂ.












Click it and Unblock the Notifications