Honor: ಭರ್ಜರಿ ಫೀಚರ್ಸ್, ಅಗ್ಗದ ಬೆಲೆಗೆ ಹಾನರ್ ಫೋನ್: ಬಿಡುಗಡೆ ಸಿದ್ಧತೆ
ಭಾರತದ ಮಾರುಕಟ್ಟೆಗೆ ದಿನವೂ ಒಂದಿಲ್ಲಾ ಒಂದು ಫೋನ್‌ಗಳು ಬಿಡುಗಡೆ ಆಗುತ್ತವೆ. ಅಲ್ಲದೆ ಹಲವು ರಿಯಾಯಿತಿಗಳನ್ನು ಈ ಫೋನ್‌ಗಳು ನೀಡುತ್ತವೆ. ಸದ್ದಿಲ್ಲದೆ ಹಾನರ್ ಕಂಪನಿ ತನ್ನ ಇನ್ನೊಂದು ಮೊಬೈಲ್ ಬಿಡುಗಡೆ ಮಾಡಿದೆ. ಈ ಮೊಬೈಲ್ ಕೊಳ್ಳಲು ಗ್ರಾಹಕರು ಮನಸ್ಸು ಮಾಡುತ್ತಿದ್ದಾರೆ. ಅಗ್ಗದ ಹಾಗೂ ಭರ್ಜರಿ ಫೀಚರ್ಸ್ ಹೊಂದಿರುವ ಫೋನ್‌ಗಳನ್ನು ಬಿಡುಗಡೆ ಮಾಡಲಿದೆ.
ಈ ಫೋನ್ ಸದ್ಯ ಚೀನಾ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಫೋನಿಗೆ Honor Play 60 Plus ಎಂದು ಹೆಸರಿಸಲಾಗಿದೆ. ಈ ಅಗ್ಗದ ಸ್ಮಾರ್ಟ್‌ಫೋನ್ ಕ್ವಾಲಕ್ವಾಂ ಸ್ನ್ಯಾಪ್‌ಡ್ರ್ಯಾಗನ್ 4 ಜನರೇಷನ್ 2 ಪ್ರೊಸೆಸರ್‌ನಲ್ಲಿ ಬಿಡುಗಡೆ ಮಾಡಿದೆ. ಈ ಫೋನ್ IP64 ರೇಟಿಂಗ್‌ನ ಬೆಂಬಲವನ್ನು ಹೊಂದಿದೆ, ಅಂದರೆ ಮಳೆ ಒದ್ದೆಯಾದರೂ ಫೋನ್ ಹಾಳಾಗುವುದಿಲ್ಲ.

ಡಿಸ್‌ಪ್ಲೇ ಹೇಗಿದೆ ವೈಶಿಷ್ಠ್ಯಗಳೇನು?
ಈ ಸ್ಮಾರ್ಟ್‌ಫೋನ್ 6.77 ಇಂಚಿನ ಎಚ್‌ಡಿ ಪ್ಲಸ್ ಡಿಸ್‌ಪ್ಲೇಯೊಂದಿಗೆ ಬರುತ್ತಿದ್ದು, ಇದರ ರೆಸಲ್ಯೂಶನ್ 1610 x 720 ಪಿಕ್ಸೆಲ್‌ಗಳಾಗಿವೆ. ಗರಿಷ್ಠ 850 ನಿಟ್ ಹೊಳಪನ್ನು ಈ ಫೋನ್ ಹೊಂದಿದೆ. ಕ್ವಾಲಕ್ವಾಂ ಸ್ನ್ಯಾಪ್‌ಡ್ರ್ಯಾಗನ್ 4 ಜನರೇಷನ್ 2 ಪ್ರೊಸೆಸರ್ ಹೊಂದಿದ್ದು, ಗ್ರಾಹಕರನ್ನು ಸೆಳೆಯಲಿದೆ. ಈ ಫೋನ್ 12 ಜಿಬಿ ರ್ಯಾಮ್, 512 ಇಂಟರ್ನಲ್ ಸ್ಟೋರೇಜ್ ಹೊಂದಿರಲಿದೆ. ಈ ಫೋನಿನ ರ್ಯಾಮ್ ಅನ್ನು ಬಳಕೆದಾರ 20 ಜಿಬಿ ವರೆಗೂ ಎಕ್ಸ್‌ಟೆಂಡ್ ಮಾಡಬಹುದು. ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 14 ಬೆಂಬಲಿಸುತ್ತದೆ.
ಬ್ಯಾಟರಿ ಹೇಗಿದೆ?
ಈ ಸ್ಮಾರ್ಟ್‌ಫೋನ್ 6,000mAh ನ ದೊಡ್ಡ ಬ್ಯಾಟರಿ ಮತ್ತು 35W ವೇಗದ ಚಾರ್ಜಿಂಗ್ ಬೆಬಲಿಸುತ್ತದೆ. ಇದು USB ಟೈಪ್ C ಚಾರ್ಜ್ ಕನೆಕ್ಷನ್ ಹೊಂದಿರಲಿದೆ.
ಕ್ಯಾಮೆರಾ ಹೇಗಿದೆ?
ಹಾನರ್ ಪ್ಲೇ 60 ಪ್ಲಸ್ ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಫೋನಿನ ಪ್ರೈಮರಿ ಕ್ಯಾಮೆರಾ 50MP ಹೊಂದಿದ್ದು, 2MP ಡೆಪ್ತ್ ಸೆನ್ಸಾರ್ ಅನ್ನು ಹೊಂದಿರುತ್ತದೆ. ಅಲ್ಲದೆ, ವಿಡಿಯೋ ಕರೆಗಳು ಹಾಗೂ ಸೆಲ್ಫಿಗಾಗಿ ಈ ಫೋನ್ 5 ಮೆಗಾ ಪಿಕ್ಸಲ್ ಕ್ಯಾಮೆರಾ ಹೊಂದಿದೆ. Honor ನ ಈ ಫೋನ್ ಸ್ವಿಸ್ SGS ಗೋಲ್ಡ್ ಲೆವೆಲ್ ಡ್ರಾಪ್ ರೆಸಿಸ್ಟೆನ್ಸ್ ವೈಶಿಷ್ಟ್ಯವನ್ನು ಹೊಂದಿದೆ.
ಬೆಲೆ ಎಷ್ಟು?
ಸದ್ಯ ಈ ಪೋನ್ ಚೀನಾದಲ್ಲಿ ಬಿಡುಗಡೆ ಆಗಿದೆ. 12GB RAM + 256GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ ಚೀನಾದಲ್ಲಿ CNY 1,499 ಬಿಡುಗಡೆ ಆಗಿದೆ. ಅಂದರೆ ಭಾರತದಲ್ಲಿ ಇದರ ಲಾಂಚ್ ಪ್ರೈಸ್ ಸರಿ ಸುಮಾರು 17200 ರೂಪಾಯಿಯ ಆಸುಪಾಸಿನಲ್ಲಿ ಇರಲಿದೆ. ಈ ಫೋನ್ ಎರಡು ರೂಪಾಂತರಗಳಲ್ಲಿ ಲಭ್ಯ. 12GB RAM + 512GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಫೋನಿನ ಬೆಲೆ ಚೀನಾದಲ್ಲಿ CNY 1,699 ಆಗಿದ್ದು, ಭಾರತದಲ್ಲಿ ಈ ಫೋನ್ 20 ಸಾವಿರ ರೂಪಾಯಿಯ ಒಳಗೆ ಸಿಗುವ ಸಾಧ್ಯತೆ ಇದೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications