ಮಾರುಕಟ್ಟೆಗೆ ಲಗ್ಗೆ ಇಡಲಿದೆ ಹೊಂಡಾ ಆಕ್ಟಿವ್ 7G: ಈ ಸ್ಕೂಟರ್ ಹೈಬ್ರಿಡಾ?
ಭಾರತದಲ್ಲಿ ಈಗ ಪೆಟ್ರೋಲ್ ಹಾಗೂ ಬ್ಯಾಟರಿ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಬ್ಯಾಟರಿ ವಾಹನಗಳನ್ನು ಕೊಳ್ಳುವವರ ಸಂಖ್ಯೆ ದಿನೇ ದಿನೇ ಏರಿಕೆ ಆಗುತ್ತಿದೆ. ಬಜಾಜ್ ಸಹ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿದೆ. ಹೊಂಡಾ ಸಹ ತನ್ನ ಹೊಸ ಆಕ್ಟಿವಾ 7ಜಿ ಬಿಡುಗಡೆ ಪ್ಲ್ಯಾನ್ ಮಾಡಿಕೊಂಡಿದೆ. ವರದಿಗಳ ಪ್ರಕಾರ ಈ ಸ್ಕೂಟರ್ ಹೈಬ್ರಿಡ್ ಆಗಿರುವ ಸಾಧ್ಯತೆ ಇದೆ. ಇದು ಪೆಟ್ರೋಲ್, ಎಲೆಕ್ಟ್ರಿಕ್, ಬ್ಯಾಟರಿ ಸೆಟಪ್‌ನ್ನೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡುವ ಸಾಧ್ಯತೆ ಇದೆ.
ಹೈಬ್ರಿಡ್ ಸ್ಕುಟರ್ ತರಲು ಹೊಂಡಾ ತಯಾರಿ ನಡೆಸಿದೆಯಾ ಎಂಬ ಬಗ್ಗೆ ಸುದ್ದಿಗಳು ಬರಲು ಆರಂಭವಾಗಿವೆ. ಈ ಸ್ಕೂಟರ್‌ಗಳು ಪೆಟ್ರೋಲ್‌ನಲ್ಲಿ ಮಾತ್ರ ಚಲಿಸುತ್ತವೆ. ಎಲ್ಲ ಸ್ಕುಟರ್‌ಗಳಲ್ಲಿ ಇದ್ದಂತೆ ಎಂಜಿನ ಆರಂಭವಾದನಂತರ, ಬ್ಯಾಟರಿ ಚಾರ್ಜ್ ಆಗಲು ಆರಂಭಿಸುತ್ತದೆ. ಇನ್ನು ದಿಬ್ಬ, ಹಳ್ಳ, ಗುಂಡಿಗಳಲ್ಲಿ ಪ್ರಯಾಣಿಸುವಾಗ ಹೆಚ್ಚಿನ ಇಂಧನ ವ್ಯಯವಾಗುತ್ತದೆ. ಆದರೆ ಇದನ್ನು ತಪ್ಪಿಸಲು ಕಾರ್ಯ ನಡೆದಿದೆ. ಇದರಿಂದ ಪೆಟ್ರೊಲ್ ಬಳಕೆ ಕಡಿಮೆ ಆಗುತ್ತದೆ.

ಭಾರತೀಯ ಮಾರುಕಟ್ಟೆಗೆ ಎಂಟ್ರಿ ಯಾವಾಗ?
ಹೊಂಡಾ ಆಕ್ಟಿವಾ ಭಾರತದಲ್ಲಿ ಉತ್ತಮ ಮಾರುಕಟ್ಟೆಯನ್ನು ಹೊಂದಿದೆ. ಇದನ್ನೇ ತನ್ನ ಮಾರುಕಟ್ಟೆಯ ಬಂಡವಾಳವಾಗಿಟ್ಟುಕೊಂಡು ಹೊಂಡಾ, 80 ರಿಂದ 90 ಸಾವಿರ ಎಕ್ಸ್ ಶೋರಮ್ ಆರಂಭಿಕ ಬೆಲೆಯಲ್ಲಿ ಹೊಂಡಾ ಆಕ್ಟಿವಾ 7ಜಿ ಲಾಂಚ್ ಮಾಡುವ ಸಾಧ್ಯತೆ ಇದೆ. ಈ ಸ್ಕೂಟರ್ ಭಾರತೀಯ ರಸ್ತೆಗಳಲ್ಲಿ ಅಕ್ಟೋಬರ್‌ನಲ್ಲಿ ಕಾಣಿಸಿಕೊಳ್ಳಬಹುದು ಎಂದು ಅಂದಾಜಿಸಲಾಗುತ್ತಿದೆ.
ವಿಶೇಷತೆ ಏನು?
ಹೋಂಡಾ ಆಕ್ಟಿವಾ 7G ಸ್ಕೂಟರ್, 109 ಸಿಸಿ ಸಿಂಗಲ್ ಸಿಲೆಂಡರ್ ಹೊಂದಿರುವ ಸಾಧ್ಯತೆ ಇದೆ. ಅಲ್ಲದೆ ಲಾಂಗ್ ಡ್ರೈವ್‌ಗಳಲ್ಲಿ ಇರುವ ಉತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ. ಹೆಚ್ಚಿನ ವೇಗಕ್ಕಾಗಿ, ಇದು 7.6bhp ಮತ್ತು 8.8Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇದರ ಎಂಜಿನ್ 45 ರಿಂದ 50 ಕೆಎಂಪಿಎಲ್ ಮೈಲೇಜ್ ನೀಡುವ ಸಾಧ್ಯತೆ ಇದೆ. ಎಂದಿನಂತೆ ಈ ಸ್ಕೂಟರ್‌ನಲ್ಲೂ ಎಂಜಿನ ಆನ್ ಆಫ್ ಬಟನ್ ಸಿಗಲಿದೆ. ಈ ಟೂವಿಲರ್ 5.3 ಲೀಟರ್ ಟ್ಯಾಂಕ್ ಹೊಂದಿರಲಿದೆ. ಮಿಶ್ರ ಲೋಹದ ಚಕ್ರ, ಡಿಸ್ಕ್ ಬ್ರೇಕ್ಗಳು ಇದರ ವಿಶೇಷತೆಗಳಾಗಿವೆ.

ಈ ಸ್ಕೂಟರ್ ಇದೇ ಶ್ರೇಣಿಯಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ವಿವಿಧ ಕಂಪನಿಯ ಸ್ಕೂಟರ್‌ಗಳಿಗೆ ಪೈಪೋಟಿ ನೀಡುವುದಂತು ಸುಳ್ಳಲ್ಲ. ಈಗಾಗಲೇ ಮಾರುಕಟ್ಟೆಯಲ್ಲಿ ಹೈಬ್ರಿಡ್ ಮಾದರಿಯ ಹಲವು ಸ್ಕೂಟರ್‌ಗಳು ಇದ್ದು, ಈ ರೇಂಜ್‌ನಲ್ಲಿ ಗ್ರಾಹಕನನ್ನು ಸೆಳೆಯುತ್ತಿವೆ.












Click it and Unblock the Notifications