ಅತೀ ಹೆಚ್ಚು ಕಾರುಗಳ ಮಾರಾಟದಲ್ಲಿ ಮಾರುತಿ ನಂಬರ್‌ 1.. ಬೈಕ್‌ಗಳಲ್ಲಿ ಮೊದಲ ಸ್ಥಾನ ಯಾವುದಕ್ಕೆ.?

ಆಟೋಮೊಬೈಲ್‌ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ದ್ವಿಚಕ್ರ ವಾಹನಗಳ ವಿಭಾಗಕ್ಕೆ ಬಂದರೆ ಎಲ್ಲಾ ಕಂಪನಿಗಳು ತಾವೇನು ಕಡಿಮೆಯಿಲ್ಲ ಎನ್ನುವ ರೀತಿಯಲ್ಲಿ ಹೊಸ ಹೊಸ ಮಾದರಿಯ ಬೈಕ್‌, ಸ್ಕೂಟರ್‌ಗಳನ್ನು ಬಿಡುಗಡೆ ಮಾಡುತ್ತಲೇ ಇವೆ. ಇನ್ನು 2024ರಲ್ಲಿ ಕಾರುಗಳ ವಿಭಾಗದಲ್ಲಿ ಅತೀ ಹೆಚ್ಚು ಮಾರುತಿ ಕಂಪನಿಯ ಕಾರುಗಳು ಹೆಚ್ಚು ಮಾರಾಟವಾಗಿದ್ದು, ಈ ಕಂಪನಿ ನಂಬರ್‌ 1 ಸ್ಥಾನ ಅಲಂಕರಿಸಿತ್ತು. ಹಾಗಾದರೆ ದ್ವಿಚಕ್ರ ವಾಹನಗಳ ವಿಭಾಗದಲ್ಲಿ ಮಾರಾಟದಲ್ಲಿ ಯಾವ ಬೈಕ್‌ ಮೊದಲ ಸ್ಥಾನದಲ್ಲಿದೆ ಎಂದು ಇಲ್ಲಿ ತಿಳಿಯಿರಿ.

ಕಾರುಗಳ ಮಾರಾಟದಲ್ಲಿ ಪೈಪೋಟಿ ಹೇಗಿದೆಯೋ ಬೈಕ್‌ಗಳ ಮಾರಾಟದಲ್ಲಿ ಹಾಗೆಯೇ ಪೈಪೋಟಿ ಇದೆ. ಹಾಗಾದರೆ 2024ರ ಜೂನ್‌ನಲ್ಲಿ ಅತೀ ಹೆಚ್ಚು ಮಾರಾಟವಾಗಿದ್ದು ಯಾವ ಕಂಪನಿಯ ಬೈಕ್‌ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

Hero bike is the number 1 in selling know details

ರಾಯಲ್‌ ಎನ್‌ಫೀಲ್ಡ್‌, ಯಮಹಾ ಕಂಪನಿಗಳ ಬೈಕ್‌ಗಳ ವಿನ್ಯಾಸಕ್ಕೆ ಹೆಚ್ಚು ಗ್ರಾಹಕರು ಮಾರುಹೋಗಿಬಿಡುತ್ತಾರೆ. ಆದರೆ ಕೊನೆಗೆ ಮೈಲೇಜ್‌ ವಿಚಾರವಾಗಿ ಇದಕ್ಕಿಂತಲೂ ಹೆಚ್ಚಿನ ಗ್ರಾಹಕರು ಬಜಾಜ್‌, ಹಿರೋ, ಹೋಂಡಾ ಬೈಕ್‌ಗಳ ಕಡೆಗೆ ಗಮನಹರಿಸುತ್ತಾರೆ. ಹಾಗೆಯೇ 2024ರ ಜೂನ್‌ನಲ್ಲಿ ಅತೀ ಹೆಚ್ಚು ಮೈಲೇಜ್‌ ನೀಡುವ ಬೈಕ್‌ಗಳಲ್ಲಿ ಒಂದಾದ ಹೀರೋ ಕಂಪನಿಯ ಬೈಕ್‌ ಮಾರಾಟದಲ್ಲಿ ನಂಬರ್‌ 1 ಸ್ಥಾನವನ್ನು ಅಲಂಕರಿಸಿದೆ.

2024ರ ಜೂನ್‌ನಲ್ಲಿ ದ್ವಿಚಕ್ರ ವಾಹನಗಳ ಒಟ್ಟಾರೆ ಮಾರಾಟದಲ್ಲಿ ಶೇಕಡ 21ರಷ್ಟು ಹೆಚ್ಚಳವನ್ನು ಕಂಡರೆ, ಇದರಲ್ಲಿ ಮೋಟಾರ್‌ಸೈಕಲ್‌ಗಳು ಶೇಕಡ 5.2ರಷ್ಟು ಬೆಳವಣಿಗೆಯನ್ನು ಕಂಡಿವೆ. ಬಜಾಜ್, ಹೀರೋ ಮೋಟೊಕಾರ್ಪ್, ರಾಯಲ್ ಎನ್‌ಫೀಲ್ಡ್‌ನಂತಹ ಕಂಪನಿಗಳು ಮುಖ್ಯವಾಗಿ ಮೋಟಾರ್‌ಸೈಕಲ್ ಮಾರಾಟವನ್ನು ಅವಲಂಬಿಸಿವೆ.

ಜೂನ್ 2024ರಲ್ಲಿ ಭಾರತದಲ್ಲಿ ಹೀರೋ ಮೋಟೊಕಾರ್ಪ್ 4,62,545 ಬೈಕ್‌ಗಳನ್ನು ಮಾರಾಟ ಮಾಡಿ ನಂಬರ್ 1 ಪಟ್ಟವನ್ನು ಅಲ್ಲಂಕರಿಸಿದೆ. ಇನ್ನು 2023ರ ಜೂನ್‌ 3,93,049 ಮೋಟಾರ್ ‌ಸೈಕಲ್‌ಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ, ಶೇಕಡಾ 17.6 ರಷ್ಟು ಬೆಳವಣಿಗೆಯನ್ನು ಕಂಡಿದೆ. ಮಾರಾಟದಲ್ಲಿ ಎಂದಿನಂತೆ ಸ್ಪ್ಲೆಂಡರ್ ಮುನ್ನುಗ್ಗುತ್ತಲೇ ಸಾಗಿದೆ.

ಇನ್ನು ಹೋಂಡಾ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನವನ್ನು ಗಿಟ್ಟಿಸಿಕೊಳ್ಳಲು ಹಿಂಬಾಲಿಸಿದೆ. ಜೂನ್ 2024ರಲ್ಲಿ, ಹೋಂಡಾದ ಮೋಟಾರ್‌ ಸೈಕಲ್ ಮಾರಾಟವು 2,16,637 ಯುನಿಟ್‌ಗಳಷ್ಟಿದ್ದು, ಜೂನ್ 2023ರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾದ 1,62,737 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಇದು ಶೇಕಡಾ 33.1ರಷ್ಟು ಬೆಳವಣಿಗೆಯನ್ನು ಕಂಡಿದೆ ಎಂದು ತಿಳಿದುಬಂದಿದೆ.

ಬಜಾಜ್‌ ಕಂಪನಿಯು 2024ರ ಜೂನ್‌ನಲ್ಲಿ 1,59,516 ಬೈಕ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಸ್ಥಾನದಲ್ಲಿದೆ. ಇನ್ನು 2023ರ ಜೂನ್‌ನಲ್ಲಿ 1,59,161 ಬೈಕ್‌ಗಳನ್ನು ಮಾರಾಟ ಮಾಡಿದೆ. ಪಲ್ಸರ್ ಸರಣಿಯ ಜೊತೆಗೆ ತನ್ನ ಪ್ರಯಾಣಿಕ ಬೈಕ್‌ಗಳ ಮಾರಾಟದಲ್ಲಿ ಮುಂಚೂಣಿಯಲ್ಲಿದ್ದು, ವಿಶ್ವದ ಮೊದಲ ಸಿಎನ್‌ಜಿ ಮೋಟಾರ್ ಸೈಕಲ್ ಫ್ರೀಡಂ 125 ಬಿಡುಗಡೆಯು ಬಜಾಜ್‌ನಲ್ಲಿ ಮತ್ತೊಂದು ಕ್ರಾಂತಿ ಸೃಷ್ಟಿ ಮಾಡಲಿದೆ.

4ನೇ ಸ್ಥಾನದಲ್ಲಿ ಟಿವಿಎಸ್ ಇದ್ದು, ಜೂನ್ 2024ರಲ್ಲಿ 91,425 ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡಿ ಶೇಕಡ 4.7ರಷ್ಟು ಅಭಿವೃದ್ಧಿ ಸಾಧಿಸಿದೆ. ಇನ್ನು ಜೂನ್‌ 2023ರ ಅವಧಿಯಲ್ಲಿ, ಟಿವಿಎಸ್ ದೇಶೀಯ ಮಾರುಕಟ್ಟೆಯಲ್ಲಿ 87,275 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಟಿವಿಎಸ್‌ಗೆ, ಅಪಾಚೆ ಸರಣಿಯ ಜೊತೆಗೆ ಅದರ ಕಮ್ಯೂಟರ್ ಮೋಟಾರ್ ಸೈಕಲ್‌ಗಳು ಹೆಚ್ಚು ಮಾರಾಟ ಆಗಿವೆ.

5ನೇ ಸ್ಥಾನದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪನಿಯಿದ್ದು, ಜೂನ್ 2024ರಲ್ಲಿ 66,117 ಯುನಿಟ್‌ ವಾಹನಗಳನ್ನು ಮಾರಾಟ ಮಾಡಿದೆ. ಜೂನ್ 2023ರಲ್ಲಿ ಮಾರಾಟವಾದ 67,495 ಯುನಿಟ್‌ಗಳಿಗೆ ಹೋಲಿಕೆ ಮಾಡಿದರೆ, ಇದು ಶೇಕಡ 2ರಷ್ಟು ಕುಸಿತ ಕಂಡಿದೆ.

ಒಟ್ಟಿನಲ್ಲಿ ಬೈಕ್‌ಗಳ ವಿಭಾಗದಲ್ಲಿ ಜೂನ್‌ನಲ್ಲಿ ಹೆಚ್ಚು ಮಾರಾಟವಾದ ಬೈಕ್‌ ಹೀರೋ ಆಗಿದ್ದು, ಈ ದಾಖಲೆಯನ್ನು ಸರಿಗಟ್ಟಲು ಹೋಡಾ ಕಂಪನಿ ಪೈಪೋಟಿಗೆ ಬಿದ್ದಿದೆ ಎಂದರೆ ತಪ್ಪಾಗಲಾರದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+