Migraine: ನಿಮ್ಮನ್ನು ಕಾಡುವ ತಲೆನೋವು ಮೈಗ್ರೇನ್ ಆಗಿರಬಹುದು!
ಮೊದಲೆಲ್ಲ ಜನ ತಲೆನೋವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿರಲಿಲ್ಲ. ಅದಕ್ಕೆ ಮನೆ ಮದ್ದು ಮಾಡಿದರೆ ಅಥವಾ ಯಾವುದಾದರೂ ಮುಲಾಮು ಹಚ್ಚಿದರೆ ಹೋಗಿಬಿಡುತ್ತಿತ್ತು. ಆದರೆ ಈಗ ತಲೆನೋವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ. ಅದು ಕೂಡ ಪ್ರಾಣ ಹಿಂಡುವಂತೆ ಮಾಡುತ್ತಿದೆ. ಹೀಗಾಗಿ ಅದು ಮೈಗ್ರೇನ್ ಆಗಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಆದ್ದರಿಂದ ಮೊದಲಿಗೆ ನಮ್ಮನ್ನು ಬಾಧಿಸುವ ತಲೆನೋವು ಮೈಗ್ರೇನಾ ಎಂಬುದನ್ನು ಅರಿತುಕೊಳ್ಳುವುದು ಬಹುಮುಖ್ಯವಾಗಿದೆ.
ವಿಶ್ವದ ಶೇ.10ರಷ್ಟು ಮಂದಿ ಇದರ ಬಾಧೆಗೆ ಒಳಗಾಗಿದ್ದಾರೆ. ಇದು ಬರೀ ತಲೆನೋವಲ್ಲ ಅದಕ್ಕಿಂತಲೂ ಹೆಚ್ಚಿನದ್ದಾಗಿದೆ. ಮೈಗ್ರೇನ್ ಹೊಳೆಯುವ ಬೆಳಕು, ಕುರುಡು ಚುಕ್ಕೆಗಳು, ತೋಳು ಮತ್ತು ಕಾಲುಗಳಲ್ಲಿ ಚುಳುಚುಳುಗುಟ್ಟುವಿಕೆ, ವಾಂತಿ, ಬೆಳಕು ಮತ್ತು ಶಬ್ದಕ್ಕೆ ಅಧಿಕ ಸಂವೇದನಾಶೀಲತೆ ಮುಂತಾದ ಇಂದ್ರಿಯ ಸಂಬಂಧಿತ ಎಚ್ಚರಿಕೆಯ ಚಿಹ್ನೆಯ ಬಳಿಕ ಅಥವಾ ಅವುಗಳೊಂದಿಗೆ ಇರಬಹುದಾದ ತೀವ್ರವಾದ ತಲೆನೋವು ಇದಾಗಿದೆ ಎಂದು ವೈದ್ಯಲೋಕ ಹೇಳುತ್ತದೆ.

ಮೈಗ್ರೇನ್ ಕುರಿತಂತೆ ವೈದ್ಯರು ಒಂದಷ್ಟು ವಾಸ್ತವಿಕ ವಿಚಾರಗಳನ್ನು ತೆರೆದಿಡುತ್ತಾರೆ. ಅವರ ಪ್ರಕಾರ ಇದಕ್ಕೆ ಕಾರಣ ಇನ್ನೂ ಸರಿಯಾಗಿ ತಿಳಿದು ಬಂದಿಲ್ಲವಂತೆ. ಮೊದಲು ಬೆಳಕಿನ ಹೊಳೆಯುವಿಕೆ, ಮುಸುಕು ದೃಷ್ಠಿಯಂತಹ ಅನೇಕ ಇಂದ್ರಿಯ ಸಂಬಂಧಿತ ತೊಂದರೆಗಳು ಉಂಟಾಗಬಹುದಾಗಿದ್ದು ಆ ಬಳಿಕ ಒಂದು ಭಾಗದಲ್ಲಿ ತೀವ್ರನೋವು ಕಾಣಿಸುವ ಸಾಧ್ಯತೆಯಿರುತ್ತದೆ.
ಕೆಲವೊಂದು ತಪ್ಪು ಕಲ್ಪನೆಗಳು ಇಲ್ಲದಿಲ್ಲ
ಇನ್ನು ಶೇ. 50ರಷ್ಟು ರೋಗಿಗಳಲ್ಲಿ ಮೈಗ್ರೇನ್ ಪತ್ತೆಹಚ್ಚಲ್ಪಡುವುದಿಲ್ಲವಂತೆ ಅಷ್ಟೇ ಅಲ್ಲ ಅದಕ್ಕೆ ಸೂಕ್ತ ಚಿಕಿತ್ಸೆಯನ್ನೂ ಮಾಡಿರುವುದಿಲ್ಲವಂತೆ. ಮತ್ತೊಂದು ವಿಚಾರವೇನೆಂದರೆ ಕೆಲವೊಮ್ಮೆ ಶೇ.50ಕ್ಕಿಂತ ಕಡಿಮೆ ಮೈಗ್ರೇನ್ ರೋಗಿಗಳು ವೈದ್ಯರ ಸಲಹೆ ಪಡೆದಿರುತ್ತಾರೆ ಎಂಬುದು ಸಮೀಕ್ಷೆಯಿಂದ ತಿಳಿದು ಬಂದಿದೆ. ಮೈಗ್ರೇನ್ನ ನೋವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರಲೂ ಸಾಧ್ಯವಿದೆ. ಕೆಲವರಿಗೆ ಕೆಲ ಗಂಟೆಗಳ ಕಾಲ ನೋವು ಕಾಣಿಸಿಕೊಂಡು ಶಮನವಾಗಬಹುದು. ಮತ್ತೆ ಕೆಲವರಿಗೆ ದಿನಪೂರ್ತಿ ಇದ್ದರೂ ಇರಬಹುದು. ಆದರೆ ಈ ತಲೆನೋವಿನ ಕುರಿತಂತೆ ಕೆಲವೊಂದು ತಪ್ಪು ಕಲ್ಪನೆಗಳಿದ್ದು, ಅವುಗಳನ್ನು ನಮ್ಮ ತಲೆಯಿಂದ ತೆಗೆದು ಹಾಕುವ ತನಕ ತಲೆನೋವು ತಪ್ಪಿದಲ್ಲ.

ಮೈಗ್ರೇನ್ ಎಂದರೆ ಕೆಟ್ಟದಾದ, ಸಹಿಸಲಾರದ ತಲೆನೋವು, ಮಕ್ಕಳಲ್ಲಿ ಉಂಟಾಗಲ್ಲ, ಸ್ತೀಯರು ಮಾತ್ರ ಇದಕ್ಕೆ ತುತ್ತಾಗುತ್ತಾರೆ, ಮೈಗ್ರೇನ್ ಬಂದರೆ ಏನೂ ಮಾಡಲಾಗುವುದಿಲ್ಲ ಮೊದಲಾದ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತದೆ. ವೈದ್ಯರು ಈ ಕುರಿತಂತೆ ಕೆಲವು ವಾಸ್ತವ ವಿಚಾರಗಳನ್ನು ತೆರೆದಿಡುತ್ತಾರೆ. ಅವರು ಹೇಳುವುದೇನೆಂದರೆ ಮೈಗ್ರೇನ್ ವಾಕರಿಕೆ ಅಥವಾ ವಾಂತಿಯಂತಹ ಇತರೆ ಲಕ್ಷಣಗಳೊಂದಿಗೆ ತಲೆಯ ಒಂದು ಭಾಗದಲ್ಲಿ ತೀವ್ರವಾಗಿ ಮಿಡಿಯುವ ನೋವನ್ನು ಹೊಂದಿರುವ ನರಸಂಬಂಧಿತ ಕಾಯಿಲೆಯಾಗಿದೆ. ತಲೆನೋವು ಮೈಗ್ರೇನ್ ಇತರೆ ಲಕ್ಷಣಗಳ ಪೈಕಿ ಒಂದಾಗಿದೆ.
ಮಹಿಳೆಯರಲ್ಲಿ ಮೈಗ್ರೇನ್ ತುಸು ಜಾಸ್ತಿ
ಮಕ್ಕಳು ಮೈಗ್ರೇನ್ಗೆ ತುತ್ತಾಗುವುದಿಲ್ಲ ಎನ್ನಲಾಗುವುದಿಲ್ಲ. ಶೇ. 7ರಿಂದ 8ರಷ್ಟು ಮಕ್ಕಳು ಮೈಗ್ರೇನ್ ತೊಂದರೆ ಅನುಭವಿಸಿರುತ್ತಾರಂತೆ. ಇನ್ನು ಸ್ತ್ರೀಯರಲ್ಲಿ ಹಾರ್ಮೋನ್ ನಲ್ಲಿ ಬದಲಾವಣೆಗಳು ಆಗುವುದರಿಂದ ಹೆಚ್ಚು ಪರಿಣಾಮ ಬೀರುತ್ತಿದ್ದು ಆದ್ದರಿಂದ ಮೈಗ್ರೇನ್ ಪುರುಷರಿಗಿಂತ ಹೆಚ್ಚು ಸ್ತ್ರೀಯಲ್ಲಿ ಕಾಣಿಸಿಕೊಳ್ಳುತ್ತಿದೆಯಂತೆ. ಮೈಗ್ರೇನ್ ನನ್ನು ವೈದ್ಯರು ಶಿಫಾರಸ್ಸು ಮಾಡುವ ಸೂಕ್ತ ಚಿಕಿತ್ಸೆಯೊಂದಿಗೆ ಪರಿಸ್ಥಿತಿ ಮತ್ತು ಪ್ರಚೋದಕಗಳ ಉತ್ತಮ ತಿಳುವಳಿಕೆಯಿಂದ ನಿರ್ವಹಿಸಲು ಸಾಧ್ಯವಿದೆ.
ನಮ್ಮನ್ನು ಆಗಾಗ್ಗೆ ಕಾಡುವ ತಲೆನೋವು ಮೈಗ್ರೇನ್ ಆಗಿರಬಹುದು. ಆದರೆ ಅದು ಮೈಗ್ರೇನ್ ಎಂದು ಕಂಡುಕೊಳ್ಳಬೇಕಾದರೆ ತಲೆನೋವು ಬಂದಾಗ ಆಗುವ ಕೆಲವೊಂದು ಅನುಭವಗಳನ್ನು ಪತ್ತೆ ಹಚ್ಚಬೇಕು. ಅದೇನೆಂದರೆ ತಲೆನೋವು ಕಾಣಿಸಿಕೊಂಡಾಗ ವಾಕರಿಕೆ ಬರುವುದು, ಹೊಟ್ಟೆಯಲ್ಲಿ ಅಸ್ವಸ್ಥತೆ, ತಲೆನೋವಿದ್ದಾಗ ಬೆಳಕನ್ನೇ ನೋಡಲಾರದ ಸ್ಥಿತಿ, ತಲೆನೋವು ಕನಿಷ್ಠ ಒಂದು ದಿನದ ನಮ್ಮ ಕೆಲಸ ಅಥವಾ ಅಧ್ಯಯನವನ್ನು ಮಾಡದಂತೆ ನಮ್ಮ ಸಾಮರ್ಥ್ಯ ಕುಗ್ಗಿಸಿದ್ದರೆ ಅದು ಮೈಗ್ರೇನ್ನ ಲಕ್ಷಣಗಳಾಗಿರಲು ಸಾಧ್ಯವಿರುತ್ತದೆ.
-
ವಾಸ್ತು ಪ್ರಕಾರ ಮನೆ ನಿರ್ಮಾಣದಲ್ಲಿ ದೇವರ ಕೋಣೆ ಪ್ರತ್ಯೇಕವಾಗಿರಬೇಕಾ? ಇಲ್ಲಿದೆ ಸ್ಪಷ್ಟನೆ -
8 ವರ್ಷ ಕೆಲಸ ಮಾಡಿದರೂ ಕ್ಷಣಾರ್ಧದಲ್ಲಿ ವಜಾ: ವೈರಲ್ ಪೋಸ್ಟ್ ನೋಡಿ ನೆಟ್ಟಿಗರು ಶಾಕ್ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ -
Prakash Raj: ನಾಸ್ತಿಕನಾದರೂ ತಾಯಿಯ ನಂಬಿಕೆಗೆ ಗೌರವ ಕೊಟ್ಟು; ಕ್ರೈಸ್ತ ಧರ್ಮದ ಸಂಪ್ರದಾಯ ಪಾಲನೆ: ನಟ ಪ್ರಕಾಶ್ ರಾಜ್












Click it and Unblock the Notifications