ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಗಲು-ರಾತ್ರಿ ಟಿವಿ ನೋಡುವವರೇ ಹುಷಾರ್; ನಿಮ್ಮ ಹೃದಯಕ್ಕೆ ಇಷ್ಟೆಲ್ಲಾ ಅಪಾಯ!

|
Google Oneindia Kannada News

ಟಿವಿ ನೋಡುವುದು ಎಂದರೆ ಯಾರಿಗೆ ತಾನೇ ಇಷ್ಟವಾಗುವುದಿಲ್ಲ ಹೇಳಿ. ಒಂದು ಕಾಲದಲ್ಲಿ ಸಾಮಾನ್ಯವಾಗಿ ಜನರ ಮನರಂಜನೆಗಾಗಿ ಬಳಕೆ ಆಗುತ್ತಿದ್ದ ಈ ದೂರದರ್ಶನವೇ ಇಂದು ಸಾರ್ವಜನಿಕರ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿವೆ.

ಪ್ರತಿನಿತ್ಯ ಜನರು ತಮ್ಮ ದಿನವನ್ನು ಇದೇ ಟಿವಿಗಳನ್ನು ನೋಡುವುದರಿಂದ ಆರಂಭಿಸುತ್ತಾರೆ. ಅದೇ ರೀತಿ ಇನ್ನೊಂದು ವರ್ಗದ ಮಂದಿ ಟಿವಿ ನೋಡುವುದರಿಂದಲೇ ಅಂದಿನ ದಿನವನ್ನು ಮುಕ್ತಾಯಗೊಳಿಸುತ್ತಾರೆ. ಇಂಥ ಟಿವಿಗಳು ನಿಮ್ಮ ಹೃದಯಕ್ಕೆ ಹಾನಿಕಾರಕ ಎಂಬ ಸಂಶೋಧನೆಯೊಂದು ಹೊರ ಬಿದ್ದಿದೆ.

ಸರಿಯಾಗಿ ನಿದ್ರೆ ಮಾಡದಿದ್ದರೆ ಮೆದುಳು, ಹೃದಯಕ್ಕೆ ಅಪಾಯ ತಪ್ಪಿದ್ದಲ್ಲ!ಸರಿಯಾಗಿ ನಿದ್ರೆ ಮಾಡದಿದ್ದರೆ ಮೆದುಳು, ಹೃದಯಕ್ಕೆ ಅಪಾಯ ತಪ್ಪಿದ್ದಲ್ಲ!

ಜಗತ್ತಿನಲ್ಲಿ ಅತಿಹೆಚ್ಚು ಟಿವಿ ನೋಡುವುದರಿಂದಲೇ ಜನರು ಹೆಚ್ಚು ಹೆಚ್ಚು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬುದು ಈಗ ಬಯಲಾಗಿದೆ. ಟಿವಿಗೂ ಆರೋಗ್ಯ ಕೆಡುವುದಕ್ಕೂ ಎಲ್ಲಿಂದ ಎಲ್ಲಿಗೆ ಸಂಬಂಧ? ಎಂಬ ನಿಮ್ಮ ಕುತೂಹಲದ ಪ್ರಶ್ನೆಗೆ ಈ ವರದಿಯೇ ಉತ್ತರವಾಗಿದೆ.

ಟಿವಿ ನೋಡುವುದನ್ನು ಕಡಿಮೆ ಮಾಡಿದರೆ ಹೃದಯಕ್ಕಿಲ್ಲ ಅಪಾಯ

ಟಿವಿ ನೋಡುವುದನ್ನು ಕಡಿಮೆ ಮಾಡಿದರೆ ಹೃದಯಕ್ಕಿಲ್ಲ ಅಪಾಯ

ಪ್ರತಿನಿತ್ಯ ನಾವು ಟಿವಿ ನೋಡುವುದನ್ನು ಎಷ್ಟು ಕಡಿಮೆ ಮಾಡುತ್ತೇವೆಯೋ ಅಷ್ಟು ನಮ್ಮ ಹೃದಯಗಳಿಗೆ ಅಪಾಯ ಕಡಿಮೆಯಾಗುತ್ತದೆ ಎಂಬುದನ್ನು ವೈದ್ಯಕೀಯ ಸಂಶೋಧನಾ ಅಧ್ಯಯನವೊಂದು ಬಹಿರಂಗಪಡಿಸಿದೆ. ಸಾಮಾನ್ಯವಾಗಿ ಪರಿಧಮನಿಯ ಅಪಧಮನಿಗಳೊಳಗೆ ಕೊಬ್ಬಿನ ಪದಾರ್ಥ ಸಂಗ್ರಹವಾದ ಸಂದರ್ಭದಲ್ಲಿ ಪರಿಧಮನಿಯ ಹೃದಯ ಕಾಯಿಲೆ ಉಂಟಾಗುತ್ತದೆ. ಇದು ರಕ್ತನಾಳವನ್ನು ಕಿರಿದಾಗುವಂತೆ ಮಾಡುವುದರಿಂದ ಹೃದಯದ ರಕ್ತ ಪೂರೈಕೆಯನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯು ತಿಳಿಸಿದೆ.

ಹೆಚ್ಚಿನ ಟಿವಿ ವೀಕ್ಷಣೆ ಪರಿಧಮನಿಯ ಹೃದಯ ಕಾಯಿಲೆಗೆ ಕಾರಣ

ಹೆಚ್ಚಿನ ಟಿವಿ ವೀಕ್ಷಣೆ ಪರಿಧಮನಿಯ ಹೃದಯ ಕಾಯಿಲೆಗೆ ಕಾರಣ

"ಅನುವಂಶಿಕ ಹೃದಯ ಸಂಬಂಧಿ ಕಾಯಿಲೆಯ ಹೊರತಾಗಿ ಈ ಪರಿಧಮನಿಯ ಹೃದಯ ಕಾಯಿಲೆಗೆ ಹೆಚ್ಚಿನ ಟಿವಿ ವೀಕ್ಷಣೆಯೇ ಕಾರಣವಾಗಿದೆ. ಟಿವಿ ನೋಡುವಿಕೆ ಪ್ರಮಾಣವನ್ನು ಕಡಿಮೆಗೊಳಿಸುವ ವರ್ತನೆಯು ತೀರಾ ಅತ್ಯವಶ್ಯಕವಾಗಿದೆ. ಟಿವಿ ನೋಡುವುದನ್ನು ಕಡಿಮೆ ಮಾಡುವುದರಿಂದ ಈ ಪರಿಧಮನಿ ಹೃದಯ ಕಾಯಿಲೆಯನ್ನು ಕಡಿಮೆಗೊಳಿಸಬಹುದು," ಎಂದು ಹಾಂಗ್ ಕಾಂಗ್

ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಯಂಗ್ವಾನ್ ಕಿಮ್ ಹೇಳಿದ್ದಾರೆ. "ಈ ಕಾರ್ಡಿಯೊಮೆಟಬಾಲಿಕ್ ಅಪಾಯದ ಗುರುತುಗಳ ಪ್ರತಿಕೂಲ ಮಟ್ಟವು ಪರಿಧಮನಿಯ ಹೃದಯ ಕಾಯಿಲೆಯನ್ನು ಹುಟ್ಟುಹಾಕುವ ಅಪಾಯವನ್ನು ಹೆಚ್ಚಿಸಬಹುದು," ಎಂದು ಹೇಳಿದರು.

ಟಿವಿ ವೀಕ್ಷಣೆಯು ಹೆಚ್ಚಾದಂತೆ ಅಪಾಯವೂ ಹೆಚ್ಚು!

ಟಿವಿ ವೀಕ್ಷಣೆಯು ಹೆಚ್ಚಾದಂತೆ ಅಪಾಯವೂ ಹೆಚ್ಚು!

ಟಿವಿ ವೀಕ್ಷಿಸುವ ಪ್ರಮಾಣ ಹೆಚ್ಚಾದಷ್ಟು ಪರಿಧಮನಿಯ ಹೃದಯ ಕಾಯಿಲೆ ಬರುವ ಅಪಾಯ ಹೆಚ್ಚುತ್ತದೆ ಎಂದು ಅಧ್ಯಯನವು ಹೇಳಿದೆ. ಇದು ವಯಸ್ಸು, ಲಿಂಗ, ಧೂಮಪಾನದ ಅಭ್ಯಾಸ, ಆಹಾರ, ಬಾಡಿ ಮಾಸ್ ಇಂಡೆಕ್ಸ್ ಮತ್ತು ದೈಹಿಕ ಚಟುವಟಿಕೆಯನ್ನು ಒಳಗೊಂಡಿರುವಂತೆ ಹಲವಾರು ಇತರ ಅಂಶಗಳಿಗೆ ಸಂಬಂಧಿಸಿದ್ದಾಗಿದೆ.

ಯುಕೆ ಸಂಸ್ಥೆ ನಡೆಸಿದ ಅಧ್ಯಯನದ ಪರಿ ಮತ್ತು ಫಲಿತಾಂಶ

ಯುಕೆ ಸಂಸ್ಥೆ ನಡೆಸಿದ ಅಧ್ಯಯನದ ಪರಿ ಮತ್ತು ಫಲಿತಾಂಶ

ಯುಕೆ ಬಯೋಬ್ಯಾಂಕ್ ಸ್ಟಡಿ ನಡೆಸಿದ ಅಧ್ಯಯನದ ಭಾಗವಾಗಿ 40 ರಿಂದ 69 ವರ್ಷದ 373,026 ಜನರನ್ನು ಸಂಶೋಧನೆಯಲ್ಲಿ ಬಳಸಿಕೊಳ್ಳಲಾಗಿತ್ತು ಎಂದು ಕಿಮ್ ಮತ್ತು ಸಹೋದ್ಯೋಗಿಗಳ ವರದಿಯು ತಿಳಿಸಿದೆ.

ದಿನಕ್ಕೆ ನಾಲ್ಕು ಅಥವಾ ನಾಲ್ಕಕ್ಕಿಂತ ಹೆಚ್ಚು ಗಂಟೆಗಳ ಕಾಲ ಟಿವಿ ನೋಡುವವರೊಂದಿಗೆ ಬೇರೆಯ ಜನರನ್ನು ಹೋಲಿಕೆ ಮಾಡಿ ನೋಡಲಾಗಿದೆ. ಈ ವೇಳೆ ದಿನಕ್ಕೆ ಒಂದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಟಿವಿ ನೋಡುವವರಲ್ಲಿ ಶೇ.16ರಷ್ಟು ಅಪಾಯದ ಪ್ರಮಾಣ ಕಡಿಮೆ ಆಗಿರುತ್ತದೆ. ಅದೇ ರೀತಿ ದಿನಕ್ಕೆ ನಾಲ್ಕರ ಬದಲಿಗೆ ಎರಡರಿಂದ ಮೂರು ಗಂಟೆಗಳ ಕಾಲ ಟಿವಿ ನೋಡುವವರಲ್ಲಿ ಪರಿಧಮನಿ ಹೃದಯ ಕಾಯಿಲೆಯ ಅಪಾಯವು ಶೇ.6ರಷ್ಟು ಕಡಿಮೆಯಾಗಿರುತ್ತದೆ ಎಂದು ಅಧ್ಯಯನವು ತಿಳಿಸಿದೆ.

Recommended Video

ಭಾರತದ ವಿರುದ್ಧ ಇಂಗ್ಲೆಂಡ್ ಹೀನಾಯವಾಗಿ ಸೋತ್ಮೇಲೆ ನಗೆ ಪಾಟಲಿಗೀಡಾದ Michael Vaughan | *Cricket | OneIndia

English summary
Health News: Too much TV Watching is how to lead heart disease. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X