ನಿಮ್ಮ ಹೆಸರಿನಲ್ಲಿ 9ಕ್ಕೂ ಹೆಚ್ಚು ಸಿಮ್ ಇದ್ದರೆ ಕಾದಿದೆ ಗಂಡಾಂತರ
ಜನರು ತರಹೇವಾರಿ ಶೋಕಿ ಮಾಡುತ್ತಾರೆ. ತಂತ್ರಜ್ಞಾನ ಬದಲಾದಂತೆ ಮೊಬೈಲ್‌ಗಳನ್ನು ಚೇಂಜ್ ಮಾಡುವುದು ಕಾಮನ್. ಆದರೆ ಸೀಮಿತ ಅವಧಿಗಳಿಗೆ ಒಂದು ಸಿಮ್ ತೆಗೆದುಕೊಳ್ಳುವುದು ಸಹ ಶೋಕಿ ಆಗಿದೆ. ಮೊದಲೆಲ್ಲಾ ನಿಮ್ಮ ಹೆಸರಿನಲ್ಲಿ ಎಷ್ಟೇ ಸಿಮ್‌ಗಳು ಇದ್ದರೂ ಸಹ ಅದಕ್ಕೆ ನೀವು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇಂದಿನಿಂದ ಹಾಗಲ್ಲ. ನಿಯಮ ಬದಲಾಗಿದೆ.
ಸಿಮ್ ಕಾರ್ಡ್ ನಿಯಮ ಬದಲಾಗಿದೆ. ಇಂದಿನಿಂದ ಹೊಸ ಟೆಲಿಕಾಂ ಕಾಯಿದೆ 2023 ಜಾರಿಗೆ ಬರಲಿದೆ. ಈ ಹೊಸ ಟೆಲಿಕಾಂ ಕಾಯಿದೆಯು ಸಿಮ್ ಕಾರ್ಡ್‌ಗಳ ಖರೀದಿ, ನಕಲಿ ಸಂಪರ್ಕಗಳು ಮತ್ತು ಕರೆ ಟ್ಯಾಪಿಂಗ್‌ಗೆ ಸಂಬಂಧಿಸಿದಂತೆ ಕಟ್ಟುನಿಟ್ಟಾದ ನಿಬಂಧನೆಗಳನ್ನು ಹೊಂದಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆದಿದ್ದ ಲೋಕಸಭಾ ಅಧಿವೇಶದಲ್ಲಿ ಹೊಸ ಟೆಲಿಕಾಂ ಮಸೂದೆಗೆ ಅಂಗಿಕಾರ ಸಹ ಸಿಕ್ಕಿತ್ತು. ಈ ಮಸೂದೆ ಮಂಡನೆಯಾದ ಬಳಿಕ ರಾಷ್ಟ್ರಪತಿಯಿಂದ ಅನುಮೋದನೆ ಗೊಂದಿದೆ. ಈಗ ಈ ಕಾಯ್ದಿಯ ಕೆಲವು ನಿಯಮಗಳು ಇಂದಿನಿಂದ ಜಾರಿ ಆಗಲಿವೆ. ಈ ಕಾಯ್ದೆಯ ಅನ್ವಯ 9 ಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನು ಖರೀದಿಸುವವರಿಗೆ ಸಮಸ್ಯೆ ತಂದು ಒಡ್ಡುತ್ತದೆ.
150 ವರ್ಷಗಳ ಹಳೆಯ ಕಾಯ್ದೆಯ ಅನುಷ್ಠಾನದ ನಂತರ ರದ್ದುಗೊಳಿಸಲಾಗಿದೆ. ಈಗ ಟೆಲಿಕಾಂ ಆಕ್ಟ್ 2023 ಅನುಷ್ಠಾನ ಗೊಳ್ಳಲಿದೆ. ನಕಲಿ ಸಿಮ್ ಕಾರ್ಡ್‌ಗಳು ಮತ್ತು ವಂಚನೆಯನ್ನು ತಡೆಯಲು ಸರ್ಕಾರವು ಹೊಸ ಟೆಲಿಕಾಂ ಕಾಯಿದೆಯಲ್ಲಿ ಅನೇಕ ನಿಬಂಧನೆಗಳನ್ನು ಸೇರಿಸಿದೆ.
ಸಿಮ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆ
ಬಳಕೆದಾರ ತನ್ನ ಆಧಾರಕಾರ್ಡ್ ಬಳಿಸಿ 9ಕ್ಕಿಂತ ಹೆಚ್ಚಿನ ಸಿಮ್ ಕಾರ್ಡ್ ಪಡೆದರೆ, ಮೊದಲ ಅಪರಾಧಕ್ಕೆ 50 ಸಾವಿರ ದಂಡ, ಇದೇ ಅಪರಾದ ಮುಂದು ವರೆದಲ್ಲಿ 2 ಲಕ್ಷದ ವರೆಗೂ ದಂಡ ವಿಧಿಸಬಹುದು. ಇಷ್ಟೇ ಅಲ್ಲದೆ ನಕಲಿ ಯೂಸರ್ ಐಡಿ ಬಳಸಿ ಸಿಮ್ ಕಾರ್ಡ್ ಪಡೆದರೂ, 3 ವರ್ಷಗಳ ವರೆಗೆ ಕಂಬಿ ಏಣಿಸಬೇಕಾಗುತ್ತದೆ. ಅಥವಾ 50 ಲಕ್ಷ ದಂಡ ವಿಧಿಸಬೇಕು. ಇದರಲ್ಲಿ ಸಿಮ್ ಕಾರ್ಡ್ ಪಡೆಯುವಾಗ ಸಿಮ್ ಕಾರ್ಡ್ ನೀಡುವವನಿಗೆ ನಿಮ್ಮ ಗುರುತು ಮರೆಮಾಚುವುದು ಸಹ ಸೇರಿದೆ. ಇದಲ್ಲದೆ ಟೆಲಿಕಾಂ ಆಪರೇಟರ್‌ಗಳು, ಬಳಕೆದಾರರ ಬಯೋಮೆಟ್ರಿಕ್ ಆಧರಿತ ಗುರುತು ಅಂದರೆ ನಿಮ್ಮ ಆಧಾರ ಕಾರ್ಡ್ ಮೂಲಕ ಮಾತ್ರ ಮಾತ್ರ ಪರಿಶೀಲಿಸಬೇಕಾಗುತ್ತದೆ.

ನಿಮ್ಮ ಆಧಾರ್ ಕಾರ್ಡ್‌ನಲ್ಲಿ ಎಷ್ಟು ಸಿಮ್‌ಗಳಿವೆ ಪರಿಶಿಲಿಸಿ
ನಿಮ್ಮ ಆಧಾರ್ ಕಾರ್ಡ್‌ನಿಂದ ಎಷ್ಟು ಸಿಮ್ ಕಾರ್ಡ್‌ಗಳನ್ನು ನೀಡಲಾಗಿದೆ ಎಂದು ನಿಮಗೆ ತಿಳಿದಿಲ್ಲದಿದ್ದರೆ, ನೀವು ಅದನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸಬಹುದು.
ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
- ಬಳಕೆದಾರ ಸರ್ಕಾರ ಆರಂಭಿಸಿದರುವ Sancharsathi.gov.in ವೆಬ್‌ಸೈಟ್ ಓಪನ್ ಮಾಡಬೇಕು.
- ಇದರಲ್ಲಿ ನೋ ಯುವರ್ ಮೊಬೈಲ್ ಕನೆಕ್ಷನ್ (know your mobile connection) ಆಯ್ಕೆ ಒತ್ತ ಬೇಕು. ಆಗ ಇನ್ನೊಂದು ಪೇಜ್ ಓಪನ್ ಆಗುತ್ತದೆ.
- ಇದರಲ್ಲಿ ನಿಮ್ಮ 10 ಅಂಕಿ ಮೊಬೈಲ್ ಸಂಖ್ಯೆ ನಮೂದಿಸಿ
- ಸ್ಕ್ರೀನ್ ಮೇಲೆ ಡಿಸ್‌ಪ್ಲೇ ಆಗುವ ಕೋಡ್ ಹಾಗೂ ನಿಮ್ಮ ನಂಬರ್‌ಗೆ ಬರುವ ಒನ್ ಟೈಮ್ ಪಾಸ್‌ವರ್ಡ್ (OTP) ನಮೂದಿಸಿ
- ಎರಡೂ ಮ್ಯಾಚ್ ಆಗುತ್ತಿದ್ದಂತೆ ಇನ್ನೊಂದು ಪುಟ ಓಪನ್ ಆಗುತ್ತದೆ. ಇಲ್ಲಿ ನೀವು ನಿಮ್ಮ ಆಧಾರ್ ಸಂಖ್ಯೆಯಿಂದ ನೀಡಲಾದ ಮೊಬೈಲ್ ಸಂಖ್ಯೆಗಳು ತೋರಿಸುತ್ತವೆ.












Click it and Unblock the Notifications