Happy Mother's Day: ಅಮ್ಮ ನಿನಗೆ ಅಮ್ಮಂದಿರ ದಿನದ ಶುಭಾಶಯಗಳು...
ಸದಾ ಮಕ್ಕಳ ಸುಖ ಬಯಸೋ ತ್ಯಾಗಮಯಿ ಅಮ್ಮ.. ನಮ್ಮ ಊರಿನಲ್ಲಿ ಶಾಲೆ ಹತ್ತಿರವಿಲ್ಲದ ಕಾರಣ ಚಿಕ್ಕಿಂದಿನಿಂದಲೂ ಹಾಸ್ಟೆಲ್‌ನಲ್ಲಿ ಬೆಳೆಯಬೇಕಾದ ಪರಿಸ್ಥಿತಿ ನನಗು ತಂಗಿಗೂ ಎದುರಾಯಿತು. ಅಪ್ಪ ಮತ್ತು ಅಮ್ಮ ಹಾಸ್ಟೆಲ್‌ಗೆ ಬಂದು ಬಿಟ್ಟುಹೋಗುವಾಗ ಅಳುತ್ತ ಹಿಂದೆ ಓಡುತ್ತಿದ್ವಿ. ಆಗ ಟೀಚರ್ ನಮಗೆ ಚಾಕ್ಲೇಟ್ ಕೊಟ್ಟು ಶಾಲೇಲಿ ಕೂರಿಸುತ್ತಿದ್ದರು. ಅಮ್ಮ ಸೆರಗಲ್ಲಿ ಮುಖ ಒರುಸ್‌ಕೊಂಡ್ ಒಂದ್ ಕೈಯಲ್ಲಿ ಬಾಯ್ ಮಾಡ್ತ ಹೋಗ್ತ ಇದ್ದರು. ಅಪ್ಪ ಬೇಜಾರು ಕೈಯಲ್ಲಿ ಬಾಯ್ ಮಾಡ್ತ ಹೋಗ್ತ ಇದ್ದರು. ಅಪ್ಪನಿಗೆ ಬೇಜಾರ್ ಆಗಿದ್ರು ನಮ್ಮ ಮುಂದೆ ತೋರಿಸಿಕೊಳ್ಳದೆ ಹೋಗುತ್ತಿದ್ದರು.
ರಜೆ ಸಿಗ್ತು ಅಂದ್ರೆ ಹಬ್ಬನೇ ಮತ್ತೆ ಹಾಸ್ಟೆಲ್‌ಗೆ ಮುಖ ಮಾಡೋದು ಅಂದ್ರೆ ಉಸಿರುಗಟ್ಟುತ್ತಿತ್ತು. ಈ ರೀತಿ ದಿನ ಕಳಿತ ವಿದ್ಯಾಭ್ಯಾಸ ಮಗಿಸಿ ಉದ್ಯೋಗ ಹರಸಿ ಬೆಂಗಳೂರಿಗೆ ಪಯಣ ಬೆಳೆಸಿದೆ. ಭಯ ಇದ್ರು ಧೈರ್ಯದಿಂದ ಹೆಜ್ಜೆ ಇಟ್ಟೆ. ಅಮ್ಮ ಮಾತ್ರ ನೂರೆಂಟು ನೂರೆಂಟು ದೇವ್ರಿಗೆ ಹರಿಕೆ ಕಟ್ಟಿ ಹುಷಾರು ಮಗಳೇ ಅಂತ ಅಳುತ್ತಾ ಕಳಿಸಿಕೊಟ್ಲು. ಬೆಳ್ಳಗೆ ಏಳೋದು ತಡ ಅಂತ ನನ್ನಮ್ಮನಿಗೆ ಗೊತ್ತು. ಎಲ್ಲರು ಸುಪ್ರಭಾತ ಕೇಳಿ ಎದ್ರೆ ನನಗೆ ಅಮ್ಮನ ಕರೆನೆ ಅಲರಮ್. ಅಮ್ಮ ಒಂದು ಕಂಡಿಷನ್ ಹಾಕಿದ್ಲು ಬೆಳ್ಳಗೆ ಆಫಿಸ್‌ಗೆ ಹೋದ ಒಂದ್‌ಕಾಲ್ ಸಂಜೆ ಮೇಲೆ ಒಂದ್‌ಕಾಲ್ ಸಂಜೆ ಮೇಲೆ ಒಂದ್‌ಕಾಲ್ & ಪಿಜಿಗೆ ಬಂದ್‌ಮೇಲೆ ಒಂದ್‌ಕಾಲ್ ಮಾಡ್‌ಬೇಕು. ಒಕೆ ಅಂದೆ ಐದ್ ನಿಮಿಷ ವ್ಯತ್ಯಾಸ ಆಗೋದ್ರೆ ನನ್ನ ಗ್ರಹಚಾರ ಕೆಟ್ಟಿದೆ ಅಂತನೇ ಅರ್ಥ.

ಬೆಂಗಳೂರಿನಿಂದ ಮನೆಗೆ ಹೋಗ್ತ ಇದೀವಿ ಅಂದ್ರೆ ಅಪ್ಪ ಅಮ್ಮನ ಖುಷಿಗೆ ಪಾರವೇ ಇಲ್ಲ. ಕೆಲಸದಲ್ಲಿ ಇದ್ರೂ ಪ್ರತಿಬಾರಿ ಮನೆಗೆ ಹೋದಾಗ ಬೆಂಗಳೂರಲ್ಲಿ ದುಡ್ಡು ಇದ್ರೂ ಸಾಕಗಲ್ಲ ನಾವೆಲ್ಲ ಮನೆಲಿ ನಾನ್‌ವೆಜ್ ತಿಂತೀವಿ. ನೀನು ತಂಗಿ ಪಿಜಿಲಿ ಚೆನ್ನಾಗಿರಲ್ಲ. ಹೊರಗೆ ಹೋಗಿ ತಿನ್ನಿ ಅಂತ ಬ್ಯಾಗಲ್ಲಿ ಕದ್ದು ದುಡ್ಡು ಇಟ್ಟು ನಿನ್ನ ನಿಷ್ಕಲ್ಮಶ ಪ್ರೀತಿಗೆ ಏನೆಂದು ಹೇಳಲಿ ನಾ... ನಿಮ್ಮಂತಹ ಅಪ್ಪ ಅಮ್ಮನ ಪಡೆದಿರುವ ನಮ್ಮದು ಸಾವಿರ ಜನ್ಮದ ಪುಣ್ಯವೇ ಸರಿ.
ಸುರಭಿ ಗಣೇಶ್ ಗೌಡ, ನಿಡ್ನಳ್ಳಿ ಮೂಡಿಗೆರೆ












Click it and Unblock the Notifications