Get Updates
Get notified of breaking news, exclusive insights, and must-see stories!

ಬೈಕ್‌ನಲ್ಲಿ ಯುವತಿಯ ಅಪಹರಣ: ಕ್ಯಾಮರಾದಲ್ಲಿ ಸೆರೆಯಾದ ಭಯಾನಕ ದೃಶ್ಯ ವೈರಲ್!

ಗ್ವಾಲಿಯರ್ ನವೆಂಬರ್ 21: ಹಾಡಹಗಲೇ ಯುವತಿಯೊಬ್ಬಳನ್ನು ಬೈಕ್‌ನಲ್ಲಿ ಅಪಹರಿಸಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನರನ್ನು ಬೆಚ್ಚಿ ಬೀಳಿಸಿದೆ. ಸೋಮವಾರ 19 ವರ್ಷದ ಯುವತಿಯನ್ನು ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಪೆಟ್ರೋಲ್ ಬಂಕ್‌ನಿಂದ ಅಪಹರಿಸಿದ್ದಾರೆ. ಇಡೀ ಘಟನೆ ಪೆಟ್ರೋಲ್‌ ಬಂಕ್‌ನಲ್ಲಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಗ್ವಾಲಿಯರ್‌ನ ಝಾನ್ಸಿ ರಸ್ತೆ ಪ್ರದೇಶದಲ್ಲಿರುವ ಪೆಟ್ರೋಲ್ ಬಂಕ್‌ನಲ್ಲಿ ಈ ಘಟನೆ ನಡೆದಿದೆ. ಹಗಲು ಹೊತ್ತಿನಲ್ಲಿ ಇಬ್ಬರು ವ್ಯಕ್ತಿಗಳು ಅವಳನ್ನು ಬಲವಂತವಾಗಿ ದ್ವಿಚಕ್ರ ವಾಹನದಲ್ಲಿ ಕರೆದೊಯ್ದಿದ್ದಾರೆ. ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ತನ್ನ ಮುಖಕ್ಕೆ ಕಪ್ಪು ಬಟ್ಟೆಯನ್ನು ಧರಿಸಿದ್ದು, ಮತ್ತೊಬ್ಬ ಹೆಲ್ಮೆಟ್ ಧರಿಸಿದ್ದನ್ನು ವೀಡಿಯೊದಲ್ಲಿ ಕಾಣಿಸಿದೆ. ಅವರಲ್ಲಿ ಒಬ್ಬ ಪೆಟ್ರೋಲ್ ಬಂಕ್ ಬಳಿ ಬೈಕ್‌ನಲ್ಲಿ ಕಾಯುತ್ತಿರುತ್ತಾನೆ. ಮತ್ತೊಬ್ಬ ವ್ಯಕ್ತಿ ಯುವತಿಯನ್ನು ಎಳೆದೊಯ್ದು ಬೈಕ್‌ನಲ್ಲಿ ಕೂರಿಸುತ್ತಾನೆ. ಹಿಂದಿನ ಸೀಟಿನಲ್ಲಿ ಹುಡುಗಿಯನ್ನು ಬಲವಂತವಾಗಿ ಕೂರಿಸಿ ವ್ಯಕ್ತಿ ಅವಳ ಹಿಂದೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಾನೆ. ಆದರೆ ವಿಫಲನಾಗಿ ಬೈಕನ್ನು ಹಿಂಬಾಲಿಸಿಕೊಂಡು ಓಡಿ ಹೋಗುತ್ತಾನೆ. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

abduction-of-young-woman-on-bike

ಭಿಂಡ್ ಮೂಲದ ಯುವತಿ ತನ್ನ ಕುಟುಂಬದೊಂದಿಗೆ ಬಸ್ ಮೂಲಕ ಗ್ವಾಲಿಯರ್‌ಗೆ ಆಗಮಿಸಿದ್ದಳು. ಆಗ ಯುವಕರು ಆಕೆಯನ್ನು ಬೈಕ್‌ನಲ್ಲಿ ಅಪಹರಿಸಿದ್ದಾರೆ. ಕೆಲ ದಿನಗಳ ಹಿಂದೆ ಅವರ ಗ್ರಾಮಕ್ಕೆ ಬಂದಿದ್ದ ಬಾಲಕನ ವಿರುದ್ಧ ಕುಟುಂಬ ದೂರು ಕೂಡ ನೀಡಿತ್ತು. ಸದ್ಯ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಶೀಘ್ರವೇ ಆರೋಪಿಗಳನ್ನು ಬಂದಿಸುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ಭರವಸೆ ನೀಡಿದ್ದಾರೆ.

ಆದರೆ ಅಪಹರಣಕ್ಕೆ ಕಾರಣವೇನು ಎಂಬುದು ಇಲ್ಲಿಯವರೆಗೂ ತಿಳಿದು ಬಂದಿಲ್ಲ. ಜೊತೆಗೆ ಆರೋಪಿಗಳು ಯುವತಿಗೆ ಪರಿಚಯಸ್ಥರೇ ಅಥವಾ ಪರಿಚಯ ಇಲ್ಲದವರೇ ಎಂಬ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಯುವತಿಯನ್ನು ಬಲವಂತವಾಗಿ ಅಪಹರಿಸುವಾಗ ಸ್ಥಳದಲ್ಲಿದ್ದ ಸುಮಾರು ಆರು ಮಂದಿ ಇದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಕಂಡುಬಂದಿದೆ.

ಕುಟುಂಬದ ಸದಸ್ಯರ ಪ್ರಕಾರ ಹುಡುಗಿಯ ಗ್ರಾಮದ ಯುವಕರು ಆಕೆಗೆ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿತ್ತು. ಸಂತ್ರಸ್ತೆ ತನ್ನ ತಂದೆ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ಭಿಂಡ್‌ನಿಂದ ಗ್ವಾಲಿಯರ್‌ಗೆ ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬಂದಿದ್ದಳು. ಈ ವೇಳೆ ಅಪಹರಣ ಮಾಡಲಾಗಿದೆ.

ಯುವತಿಯ ಸಂಬಂಧಿಕರು ಪೆಟ್ರೋಲ್ ಬಂಕ್‌ನ ವಾಶ್‌ರೂಮ್‌ಗೆ ಹೋದಾಗ ಈ ಘಟನೆ ಸಂಭವಿಸಿದೆ. ಎರಡು ದ್ವಿಚಕ್ರವಾಹನದಲ್ಲಿ ಬಂದ ಯುವಕರು ಆಕೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಶಂಕಿತ ಅಪಹರಣಕಾರರ ಗುರುತು ಪತ್ತೆಯಾಗಿಲ್ಲ. ಝಾನ್ಸಿ ರಸ್ತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಇಬ್ಬರಿಗಾಗಿ ಹುಡುಕಾಟ ನಡೆಸಿದ್ದಾರೆ.

ಯುವತಿಯ ಅಪಹರಣದ ನಂತರ ಆಕೆಯ ಸಂಬಂಧಿಕರ ದೂರಿನ ಮೇರೆಗೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಅವಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಸಿಂಗ್ ಚಂದೇಲ್ ಹೇಳಿದ್ದಾರೆ.

ಮಧ್ಯಪ್ರದೇಶದ ಇಂದೋರ್‌ನ ಬಸ್‌ ನಿಲ್ದಾಣದಲ್ಲಿ ಬಸ್‌ಗೆ ಬೆಂಕಿ

ಮಧ್ಯಪ್ರದೇಶದ ಇಂದೋರ್‌ನಲ್ಲಿಂದು ಮತ್ತೊಂದು ಘಟನೆ ನಡೆದಿದೆ. ನೌಲಾಖಾ ಬಸ್ ನಿಲ್ದಾಣದ ಹೊರಗೆ ಬಸ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ಬಸ್‌ನಲ್ಲಿದ್ದ 50 ಮಂದಿ ಪ್ರಯಾಣಿಕರು ಪ್ರಣಾಪಾಯದಿಂದ ಪಾರಾಗಿದ್ದಾರೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಸಂಚಾರವನ್ನು ಬದಲಾಯಿಸಿತು. ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‌ನಲ್ಲಿದ್ದ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬಸ್‌ಗೆ ಬೆಂಕಿ ಹೊತ್ತಿಕೊಂಡ ತಕ್ಷಣ ನೌಲಖಾ ಬಸ್ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಬೆಂಕಿ ಹೊತ್ತಿಕೊಂಡ ತಕ್ಷಣ ಚಾಲಕ ಬಸ್ ನಿಂದ ಜಿಗಿದಿದ್ದಾನೆ ಎಂದು ತಿಳಿದು ಬಂದಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+