ಪ್ರವಾಸಿಗರಿಗೆ ಸಿಹಿ ಸುದ್ದಿ: ರೈಲ್ವೆಯಿಂದ ಭಾರತ್ ಗೌರವ್ ಎಸಿ ಟೂರಿಸ್ಟ್ ರೈಲು ಆರಂಭ

ಗುಜರಾತ್‌ನ ಪರಂಪರೆಯನ್ನು ಪ್ರದರ್ಶಿಸಲು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನದ ಪರಿಕಲ್ಪನೆಯ 'ಏಕ್ ಭಾರತ್ ಶ್ರೇಷ್ಠ ಭಾರತ' ಯೋಜನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

ಅಹಮದಾಬಾದ್‌, ಫೆಬ್ರವರಿ 6: ಏಕ್ ಭಾರತ್ ಶ್ರೇಷ್ಠ ಭಾರತ್ ಕಾರ್ಯಕ್ರಮದಡಿಯಲ್ಲಿ ಗುಜರಾತ್‌ನ ಪರಂಪರೆಯನ್ನು ಪ್ರದರ್ಶಿಸಲು ಭಾರತೀಯ ರೈಲ್ವೆಯು ಭಾರತ್ ಗೌರವ್ ಡಿಲಕ್ಸ್ ಎಸಿ ಟೂರಿಸ್ಟ್ ರೈಲನ್ನು ಪರಿಚಯಿಸಲು ಸಜ್ಜಾಗಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಗರ್ವಿ ಗುಜರಾತ್" ಪ್ರವಾಸದ ರೈಲು ಫೆಬ್ರವರಿ 28ರಂದು ದೆಹಲಿಯ ಸಫ್ದರ್ಜಂಗ್ ನಿಲ್ದಾಣದಿಂದ ಹೊರಡಲಿದೆ. ಈ ರೈಲಿನ ಪ್ರವಾಸವನ್ನು ಜನಪ್ರಿಯ ಗುಜರಾತ್‌ನ ಪರಂಪರೆಯನ್ನು ಪ್ರದರ್ಶಿಸಲು ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜೀವನದ ಪರಿಕಲ್ಪನೆಯ 'ಏಕ್ ಭಾರತ್ ಶ್ರೇಷ್ಠ ಭಾರತ' ಯೋಜನೆಯ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ರೈಲ್ವೇ ಸಚಿವಾಲಯದ ಹೇಳಿಕೆ ತಿಳಿಸಿದೆ.

ಪ್ರವಾಸಿಗರ ಅನುಕೂಲಕ್ಕಾಗಿ ಗುರುಗ್ರಾಮ್, ರೇವಾರಿ, ರಿಂಗಾಸ್, ಫುಲ್ಲೆರಾ ಮತ್ತು ಅಜ್ಮೀರ್ ರೈಲು ನಿಲ್ದಾಣಗಳಲ್ಲಿ ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಈ ರೈಲು ಪ್ರವಾಸದ ಪ್ಯಾಕೇಜ್‌ನ ಮೊದಲ ನಿಲುಗಡೆಯನ್ನು ಕೆವಾಡಿಯಾದಲ್ಲಿ ಇರಿಸಲಾಗಿದ್ದು, ಇದರಲ್ಲಿ ಏಕತೆಯ ಪ್ರತಿಮೆಯು ಆಕರ್ಷಣೆಯ ಕೇಂದ್ರವಾಗಿದೆ. 8 ದಿನಗಳ ಪ್ರಯಾಣದ ಅವಧಿಯಲ್ಲಿ ಸಂಪೂರ್ಣ ರೈಲು ಸುಮಾರು 3,500 ಕಿಮೀ ದೂರವನ್ನು ಕ್ರಮಿಸುತ್ತದೆ.

ಅಕ್ಷರಧಾಮ ದೇವಾಲಯ, ಸಬರಮತಿ ಆಶ್ರಮ ಭೇಟಿ

ಅಕ್ಷರಧಾಮ ದೇವಾಲಯ, ಸಬರಮತಿ ಆಶ್ರಮ ಭೇಟಿ

ಪ್ರವಾಸವು ಗುಜರಾತ್‌ನ ಪ್ರಮುಖ ಯಾತ್ರಾಸ್ಥಳಗಳು ಮತ್ತು ಪಾರಂಪರಿಕ ಸ್ಥಳಗಳಾದ ಏಕತಾ ಪ್ರತಿಮೆ, ಚಂಪನೇರ್, ಸೋಮನಾಥ, ದ್ವಾರಕಾ, ನಾಗೇಶ್ವರ, ಬೇಟ್ ದ್ವಾರಕಾ, ಅಹಮದಾಬಾದ್, ಮೊಧೇರಾ ಮತ್ತು ಪಟಾನ್‌ಗಳಿಗೆ ಭೇಟಿ ನೀಡುವುದನ್ನು ಒಳಗೊಂಡಿರುತ್ತದೆ. "ಏಕತೆಯ ಪ್ರತಿಮೆ, ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಚಂಪನೇರ್ ಪುರಾತತ್ವ ಉದ್ಯಾನವನದ ಭೇಟಿ, ಅಡ್ಲೆಜ್ ಸ್ಟೆಪ್ ವೆಲ್, ಅಹಮದಾಬಾದ್‌ನ ಅಕ್ಷರಧಾಮ ದೇವಾಲಯ, ಸಬರಮತಿ ಆಶ್ರಮ, ಮೊಧೇರಾ ಸೂರ್ಯ ದೇವಾಲಯ ಮತ್ತು ಯುನೆಸ್ಕೋದ ಮತ್ತೊಂದು ಪ್ರಮುಖ ಪಾರಂಪರಿಕ ತಾಣ ಪಟಾನ್‌ನಲ್ಲಿರುವ ರಾಣಿ ಕಿ ವಾವೊವನ್ನು ಪ್ರವಾಸದ ಯೋಜನೆಯಲ್ಲಿ ಸೇರಿಸಲಾಗಿದೆ ಎಂದು ಅದು ಹೇಳಿದೆ.

ಹೋಟೆಲ್‌ಗಳಲ್ಲಿ ಎರಡು ರಾತ್ರಿ ತಂಗುವ ವ್ಯವಸ್ಥೆ

ಹೋಟೆಲ್‌ಗಳಲ್ಲಿ ಎರಡು ರಾತ್ರಿ ತಂಗುವ ವ್ಯವಸ್ಥೆ

ಇದಲ್ಲದೆ ಸೋಮನಾಥದ ಜ್ಯೋತಿರ್ಲಿಂಗ, ನಾಗೇಶ್ವರ ಜ್ಯೋತಿರ್ಲಿಂಗ, ದ್ವಾರಕಾಧೀಶ ದೇವಾಲಯ ಮತ್ತು ಬೇಟ್ ದ್ವಾರಕಾಗಳ ಭೇಟಿಯು 8 ದಿನಗಳ ಪ್ರವಾಸದಲ್ಲಿ ಒಳಗೊಂಡಿರುವ ಧಾರ್ಮಿಕ ಸ್ಥಳಗಳಾಗಿವೆ. ಹೋಟೆಲ್‌ಗಳಲ್ಲಿ ಕ್ರಮವಾಗಿ ಕೆವಾಡಿಯಾ ಮತ್ತು ಅಹಮದಾಬಾದ್‌ನಲ್ಲಿ ತಲಾ ಒಂದರಂತೆ ಹೋಟೆಲ್‌ಗಳಲ್ಲಿ ಎರಡು ರಾತ್ರಿ ಉಳಿದುಕೊಳ್ಳಲಾಗುವುದು. ಸೋಮನಾಥ ಮತ್ತು ದ್ವಾರಕಾದಲ್ಲಿನ ಸ್ಥಳಗಳ ಭೇಟಿಯ ವೇಳೆ ಹಗಲು ನಿಲುಗಡೆಯನ್ನು ಒಳಗೊಂಡಿರುತ್ತದೆ ಎಂದು ಸಚಿವಾಲಯ ತಿಳಿಸಿದೆ.

ದೇಶೀಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

ದೇಶೀಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ

ಸಂಪೂರ್ಣ ಹವಾನಿಯಂತ್ರಿತ ರೈಲು 1ನೇ ಎಸಿ ಮತ್ತು 2ನೇ ಎಸಿ ಎಂಬ ಎರಡು ರೀತಿಯ ತಂಗುವ ಸೌಕರ್ಯಗಳನ್ನು ಒದಗಿಸುತ್ತದೆ. ಭಾರತ್ ಗೌರವ್ ಪ್ರವಾಸಿ ರೈಲು ಪ್ರಾರಂಭವು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು "ದೇಖೋ ಅಪ್ನಾ ದೇಶ್" ನ ಭಾರತ ಸರ್ಕಾರದ ಉಪಕ್ರಮಕ್ಕೆ ಅನುಗುಣವಾಗಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಗ್ರಾಹಕರಿಗೆ ಇಎಂಐ ಪಾವತಿ ಆಯ್ಕೆಗಳನ್ನು ಒದಗಿಸಲು ಪಾವತಿ ವಿಧಾನಳೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ರೈಲ್ವೆ ಹೇಳಿದೆ.

35 ಹೈಡ್ರೋಜನ್ ರೈಲುಗಳ ಸಂಚಾರ

35 ಹೈಡ್ರೋಜನ್ ರೈಲುಗಳ ಸಂಚಾರ

ಈ ಮಧ್ಯೆ ಕೇಂದ್ರ ಸಂವಹನ ಮತ್ತು ಎಲೆಕ್ಟ್ರಾನಿಕ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು ಭಾರತೀಯ ರೈಲ್ವೇ (ಐಆರ್) "ಹೈಡ್ರೋಜನ್ ಫಾರ್ ಹೆರಿಟೇಜ್" ಅಡಿಯಲ್ಲಿ 35 ಹೈಡ್ರೋಜನ್ ರೈಲುಗಳನ್ನು ಅಂದಾಜು 80 ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಪಾರಂಪರಿಕ ಮತ್ತು ಬೆಟ್ಟದ ಮಾರ್ಗಗಳಲ್ಲಿ ಪ್ರತಿ ಮಾರ್ಗಕ್ಕೆ 70 ಕೋಟಿ ರೂಪಾಯಿ ಅನುದಾನದೊಂದಿಗೆ ಓಡಿಸಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+