ಈ ಊರಿನಲ್ಲಿ ತಾಯಿಗೆ ಮಗಳೇ ಸವತಿ.. ತಂದೆಯನ್ನೇ ಮದುವೆಯಾಗಬೇಕು ಮಗಳು: ಇದೆಂಥಾ ವಿಚಿತ್ರ ಪದ್ಧತಿ !
ಮದುವೆ ಮನುಷ್ಯ ಜೀವನದ ಅತ್ಯಂತ ಪ್ರಮುಖವಾದ ಘಟ್ಟ. ಒಂಟಿಯಾಗಿದ್ದ ಜೀವ ಜಂಟಿಯಾಗಿ ಹೊಸ ಜೀವನ ಆರಂಭಿಸಲು ಭದ್ರಬುನಾದಿಯೇ ಈ ಮದುವೆ. ಎರಡು ಕುಟುಂಬಗಳು ಒಂದಾಗಿ ಎರಡು ಜೀವಗಳನ್ನು ಬೆಸೆಯುವ ಕಾರ್ಯ. ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳನ್ನು ಒಂದುಗೂಡಿಸುವ ಸಂಪ್ರದಾಯವೂ ಆಗಿದೆ.
ಒಬ್ಬ ವ್ಯಕ್ತಿ ತನ್ನ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ತಮ್ಮ ಮುಂದಿನ ಜೀವ ನಡೆಸಲು ಸಾಮಾಜಿಕ ಮತ್ತು ಧಾರ್ಮಿಕ ಮಾನ್ಯತೆ ಪಡೆಯುವುದೇ ಮದುವೆ. ವಿವಿಧ ಸಂಸ್ಕೃತಿಗಳಲ್ಲಿ ವಿವಿಧ ರೀತಿಯ ಮದುವೆಗಳಿವೆ. ಪ್ರಪಂಚದಾದ್ಯಂತ ವಿವಿಧ ರೀತಿಯಲ್ಲಿ ಮದುವೆಯ ಸಂಪ್ರದಾಯಗಳಿವೆ. ವಿವಿಧ ಸಮುದಾಯಗಳ ನಂಬಿಕೆಗಳು ಹಾಗೂ ಅವರ ಆಚರಣೆಯ ಮೇಲೆ ಮದುವೆಗಳು ನಡೆಯುತ್ತದೆ.

ಸಾಮಾನ್ಯವಾಗಿ ಮದುವೆಯ ಬಳಿಕ ಎರಡು ಬೇರೆ ಬೇರೆ ಕುಟುಂಬಗಳು ಒಂದು ಕುಟುಂಬಗಳಾಗುತ್ತದೆ. ಕೆಲವೊಮ್ಮೆ ಒಂದೇ ಕುಟುಂಬದಲ್ಲಿ ಮದುವೆ ನಡೆದರೂ ಸಹ ಅಚ್ಚರಿ ಎನ್ನುವ ಸಂಗತಿಯೇನಲ್ಲ. ಆದರೆ ಬಾಂಗ್ಲಾದೇಶದ ಈ ಸಮುದಾಯದಲ್ಲಿ ನಡೆಯುವ ಮದುವೆ ಇಡೀ ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದೆ. ಇಲ್ಲಿ ನಡೆಯುವ ಮದುವೆ ಹಾಗೂ ಹುಟ್ಟಿಕೊಳ್ಳುವ ಸಂಬಂಧ ಅಚ್ಚರಿಯಾಗಿದೆ.
ಬಾಂಗ್ಲಾದೇಶದ ಮಂಡಿ ಸಮುದಾಯದಲ್ಲಿ ವಿಚಿತ್ರವಾದ ಸಂಪ್ರದಾಯ ಇನ್ನೂ ಆಚರಣೆಯಲ್ಲಿದೆ. ಬಾಂಗ್ಲಾದೇಶದ ಮಂಡಿ ಸಮುದಾಯದಲ್ಲಿ ತಂದೆಯೇ ಮಗಳನ್ನು ಮದುವೆಯಾಗುವ ಸಂಪ್ರದಾಯವಿದೆ. ವರದಿಗಳ ಪ್ರಕಾರ, ಈ ಸಮುದಾಯದ ತಂದೆಯು ತಮ್ಮ ಹೆಣ್ಣು ಮಕ್ಕಳನ್ನು ಮದುವೆಯಾಗುತ್ತಾರೆ. ಈ ಮೂಲಕ ಈ ಸಂಪ್ರದಾಯವು ಕೆಟ್ಟ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುತ್ತಿದೆ ಎನ್ನುವ ಆಕ್ರೋಶ ಕೇಳಿ ಬಂದಿದೆ.

ಮಂಡಿ ಬುಡಕಟ್ಟು ಬಾಂಗ್ಲಾದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಅನೇಕ ಸ್ಥಳೀಯ ಸಮುದಾಯಗಳಲ್ಲಿ ಒಂದಾಗಿದೆ. ತಮ್ಮ ಭಾಷೆ, ಪದ್ಧತಿಗಳು ಮತ್ತು ಸಾಮಾಜಿಕ ಆಚರಣೆಗಳಿಂದ ಈ ಸಮುದಾಯ ಭಿನ್ನವಾಗಿದೆ. ಈ ಸಮುದಾಯದ ಆಚರಣೆಯ ಪ್ರಕಾರ ಮಗಳು ದೊಡ್ಡವಳಾದ ಕೂಡಲೇ ತಂದೆಗೆ ಆಕೆಯನ್ನು ಕೊಟ್ಟು ಮದುವೆ ಮಾಡುವ ಪದ್ಧತಿ ಈಗಲೂ ಚಾಲ್ತಿಯಲ್ಲಿದೆ.
ಈ ಆಚರಣೆಯ ಪ್ರಕಾರ ಮಗಳು ತನಗಿಂತ ವಯಸ್ಸಿನಲ್ಲಿ ಅತೀ ಹಿರಿಯನಾದ ತಂದೆಯನ್ನು ಮದುವೆಯಾಗಬೇಕು. ಒಂದು ವೇಳೆ ಆತ ಬೇಗ ಸಾವನ್ನಪ್ಪಿದರೆ. ಅದೇ ಸಮುದಾಯ ಮತ್ತೊಬ್ಬ ವ್ಯಕ್ತಿ ಆಕೆಯನ್ನು ಮದುವೆಯಾಗಬಹುದು. ಮದುವೆಯಾದ ಮಹಿಳೆಗೆ ಮಗಳಿದ್ದರೆ ಆಕೆ ಮಲತಂದೆಯನ್ನು ಮೊದಲು ಅಪ್ಪ ಎಂದು ಕಾಣಬೇಕು. ಹಾಗೂ ಕರೆಯಬೇಕು. ಆದರೆ ಆಕೆ ವಯಸ್ಸಿಗೆ ಬರುತ್ತಿದ್ದಂತೆ ಅದೇ ತಂದೆಯನ್ನು ಗಂಡನೆಂದು ಕಂಡು ಮದುವೆಯಾಗಬೇಕಿದೆ. ಈ ಮದುವೆ ಚಕ್ರ ಹೀಗೆ ಮುಂದುವರಿದುಕೊಂಡು ಬಂದಿದೆ. ಇನ್ನು ಮಲತಂದೆ ಸಾವನ್ನಪ್ಪಿದ ಮೇಲೆ ಎಲ್ಲ ಮಕ್ಕಳಿಗೆ ಕೊಡುವಂತೆ ಆಸ್ತಿಯಲ್ಲಿ ಪಾಲು ಈಕೆಗೂ ಸಿಗುತ್ತದೆ.
ಈ ಸಂಪ್ರದಾಯ ಶತಶತಮಾನಗಳಿಂದಲೂ ನಡೆದುಕೊಂಡು ಬರುತ್ತಿದೆ. ಆದರೆ ಈ ಬಗ್ಗೆ ಪ್ರಶ್ನಿಸಿದವರು ಯಾರಿಲ್ಲ. ಅಜ್ಜ ನಟ್ಟ ಆಲದ ಮರಕ್ಕೆ ಜೋತು ಬಿದ್ದ ಬಾಂಗ್ಲಾದೇಶದ ಮಂಡಿ ಬುಡಕಟ್ಟು ಜನರು, ಇಂದಿಗೂ ಇದೇ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ ಇತ್ತೀಚಿಗೆ ಈ ಸಂಪ್ರದಾಯದ ವಿರುದ್ಧ ಓರೋಲಾ ಎನ್ನುವ ಯುವತಿ ಧ್ವನಿ ಎತ್ತಿದ್ದಳು. ಈಕೆ ತನ್ನ ಮಲ ತಂದೆಯನ್ನು ಮದುವೆಯಾಗಲು ನಿರಾಕರಿಸಿದ್ದಳು. ತಾಯಿಯ 2ನೇ ಗಂಡನನ್ನು ಮದುವೆಯಾಗಬೇಕು ಎನ್ನುವ ಕುಟುಂಬಸ್ಥರ ಒತ್ತಾಯವನ್ನು ಆಕೆ ಪ್ರಶ್ನಿಸಿದ್ದಾಳೆ. ಇನ್ನು ಈಕೆಯ ಹೋರಾಟಕ್ಕೆ ಜಯ ಸಿಗುತ್ತಾ ಕಾದು ನೋಡಬೇಕಿದೆ.
-
ಮಗುವನ್ನ ಸಾಕಲು ಹಣ ಬೇಕಾದ್ರೆ ಯಾರ ಜೊತೆ ಬೇಕಿದ್ರೂ ಮಲಗುವೆ: ಬಿಗ್ಬಾಸ್ ಖ್ಯಾತಿಯ ಚಂದ್ರಿಕಾ ದೀಕ್ಷಿತ್ -
Karnataka Weather: ಬೆಂಗಳೂರು ಸೇರಿದಂತೆ ರಾಜ್ಯದ 17 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
SSLC ಪರೀಕ್ಷೆ 2026: ವೇಳಾಪಟ್ಟಿ, ಸಮಯ, ಡ್ರೆಸ್ಕೋಡ್ ಹಾಗೂ ಪ್ರಮುಖ ಮಾರ್ಗಸೂಚಿಗಳ ಮಾಹಿತಿ ಇಲ್ಲಿದೆ -
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್












Click it and Unblock the Notifications