ಮರಿ ಅಳಿಲು ಬೆನ್ನಟ್ಟಿ ಕಾಡಿದ ವ್ಯಕ್ತಿಯನ್ನು ಕಾಪಾಡಿದ ಜರ್ಮನಿ ಪೊಲೀಸರು

ಇದು ಜರ್ಮನಿ ಪೊಲೀಸರ ವೀರಗಾಥೆ. ಬೆನ್ನಟ್ಟಿ ಬಂದ ಮರಿ ಅಳಿಲಿನಿಂದ ವ್ಯಕ್ತಿಯೊಬ್ಬರನ್ನು ರಕ್ಷಿಸಿ, ಆ ಮರಿ ಅಳಿಲಿಗೂ ಒಂದು 'ವ್ಯವಸ್ಥೆ' ಮಾಡಿದ ರೋಚಕ ವರದಿ ಇದು. ಈ ಘಟನೆ ನಡೆದದ್ದು ಎರಡು ದಿನದ ಹಿಂದೆ. ಅದೂ ಜರ್ಮನಿಯ ಕಾರ್ಲ್ಸ್ ರೂಹೆ ನಗರದಲ್ಲಿ.

ಬಹಳ ಭಯಗೊಂಡಿದ್ದ ವ್ಯಕ್ತಿಯೊಬ್ಬರು ಪೊಲೀಸರಿಗೆ ಕರೆ ಮಾಡಿದ್ದಾರೆ. ಮರಿ ಅಳಿಲೊಂದು ನನ್ನ ಬೆನ್ನಟ್ಟಿದೆ. ಅದರಿಂದ ಕಾಪಾಡಿ ಎಂದಿದ್ದಾರೆ. ಸರಿ, ಆ ವ್ಯಕ್ತಿ ಸಹಾಯಕ್ಕೆ ಪೊಲೀಸರು ತಕ್ಷಣವೇ ಧಾವಿಸಿದ್ದಾರೆ. ಅದೂ ಹೇಗೆ ಅಂತೀರಾ, ಕಾರು-ಒಂದಷ್ಟು ಪೊಲೀಸರು ಎಲ್ಲರೂ ಅಲ್ಲಿಗೆ ಹೋಗಿದ್ದಾರೆ.

ಪಾಪ, ಆ ವ್ಯಕ್ತಿಯ ಮಾತು ನಿಜವಾಗಿದೆ. ಮರಿ ಅಳಿಲೊಂದು ಬೆನ್ನಟ್ಟಿದ್ದು ನಿಜ ಅನ್ನೋದು ಗೊತ್ತಾಗಿದೆ. ಆದರೆ ಈ ಪೊಲೀಸರು, ಅವರ ಕಾರು, ಹೈ ಡ್ರಾಮಾ... ಇವೆಲ್ಲದರಿಂದ ಸ್ವಲ್ಪ ಮಟ್ಟಿಗೆ ದಣಿದಂತೆ ಆದ ಆ ಮರಿ ಅಳಿಲು ಹಾಗೇ ಮಲಗಿಬಿಟ್ಟಿದೆ.

Germany police saved a person who chased by baby squirrel

ಗಾಬರಿ ಬಿದ್ದಿದ್ದ ವ್ಯಕ್ತಿ ಒಂದು ಬಗೆಯಲ್ಲಿ ನಿರಾಳರಾಗಿದ್ದಾರೆ. ಇನ್ನು ಪೊಲೀಸರು ಮರಿ ಅಳಿಲಿಗೆ ಕಾರ್ಲ್ ಫ್ರೆಡ್ರಿಚ್ ಎಂದು ನಾಮಕರಣ ಮಾಡಿ, ಇದೀಗ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಬಿಟ್ಟಿದ್ದಾರೆ. ತಾಯಿಯಿಂದ ಬೇರ್ಪಟ್ಟಿದ್ದ ಮರಿ ಅಳಿಲು ಆ ವ್ಯಕ್ತಿಯ ಬೆನ್ನಟ್ಟಿರಬಹುದು ಎಂಬುದು ಒಂದು ಊಹೆ.

ಇದು ಆಗಾಗ ಹೀಗೆ ಆಗುತ್ತದೆ. ತಾಯಿಯಿಂದ ಬೇರ್ಪಟ್ಟ ಮರಿ ಅಳಿಲು ಹೀಗೆ ಒಬ್ಬ ವ್ಯಕ್ತಿಯ ಹಿಂದೆ ಸಾಗುವುದು ಬಹಳ ಸಾಮಾನ್ಯವಾದ ವಿದ್ಯಮಾನ ಎಂದು ಪೊಲೀಸ್ ವಕ್ತಾರರಾದ ಕ್ರಿಸ್ಟಿನಾ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+