Viral Video: ಜೀವಂತ ಹಾವನ್ನೇ ಗುಳುಂ ಗುಳುಂ ನುಂಗಿದ ಕಪ್ಪೆ
ಇದು ಕಲಿಯುಗ, ಇಲ್ಲಿ ಏನು ಬೇಕಾದರೂ ಆಗಬಹುದು, ಕಪ್ಪೆ ಹಾವನ್ನೇ ನುಂಗಬಹುದು ಎನ್ನುವ ಮಾತನ್ನು ಸಾಮಾನ್ಯವಾಗಿ ಮಾತನಾಡುವಾಗ ಕೇಳಿರುತ್ತೀರಾ ಆದರೆ ಇದು ಈಗ ನಿಜವಾಗಿದೆ. ನಮಗೆಲ್ಲಾ ಗೊತ್ತಿರುವ ಹಾಗೆಯೇ ಪ್ರಕೃತಿ ನಿಯಮದ ಪ್ರಕಾರ ಒಂದು ಆಹಾರ ಸರಪಳಿ ಇದೆ. ನಮ್ಮ ಪ್ರಾಥಮಿಕ ಶಾಲೆಯ ಕಲಿಕೆಯಲ್ಲೇ ಜೀವಶಾಸ್ತ್ರದಲ್ಲಿ ಆಹಾರ ಸರಪಳಿಯನ್ನು ಓದಿರುತ್ತೇವೆ.
ಪರಿಸರದಲ್ಲಿ ಒಂದು ಜೀವಿ ಮತ್ತೊಂದು ಜೀವಿಯನ್ನು ತಿಂದು ಬದುಕುತ್ತದೆ. ಇದರಿಂದ ಆಹಾರ ಸರಪಳಿಯು ಜೀವಿಗಳ ರೇಖೀಯ ಅನುಕ್ರಮವಾಗಿದ್ದು, ಪೋಷಕಾಂಶಗಳು ಮತ್ತು ಶಕ್ತಿಯನ್ನು ಒಂದು ಜೀವಿಯಿಂದ ಇನ್ನೊಂದಕ್ಕೆ ವರ್ಗಾಯಿಸಲಾಗುತ್ತದೆ. ಸಾಮಾನ್ಯವಾಗಿ ನಮಗೆ ಗೊತ್ತಿರುವ ಆಹಾರ ಸರಪಳಿ ಪ್ರಕಾರ ಸಸ್ಯವನ್ನು ಕೀಟ ತಿನ್ನುತ್ತದೆ, ಕೀಟವನ್ನು ಕಪ್ಪೆ ತಿನ್ನುತ್ತದೆ, ಕಪ್ಪೆಯನ್ನು ಹಾವು ತಿನ್ನುತ್ತದೆ. ಇದು ಹೀಗೆ ಮುಂದುವರಿಯುತ್ತದೆ.

ಆದರೆ ಇತ್ತೀಚಿಗೆ ವೈರಲ್ ಆದ ವಿಡಿಯೋ ಒಂದರಲ್ಲಿ ಇದರ ಉಲ್ಟಾ ಆಗಿದ್ದು, ನೋಡುಗರಿಗೆ ಆಶ್ಚರ್ಯವಾಗಿದೆ. ಹೌದು ಕಪ್ಪೆಯನ್ನು ಹಾವು ತಿನ್ನುವುದು ಸಾಮಾನ್ಯವಾದ ಆಹಾರ ಸರಪಳಿ, ಆದರೆ ಕಪ್ಪೆಯೇ ಹಾವನ್ನು ನುಂಗುವುದು ಇದು ಕಪ್ಪೆಯ ಅಸಮಾನ್ಯ ಧೈರ್ಯ ಹಾಗೂ ಸಾಮರ್ಥ್ಯವೇ ಸರಿ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಕಪ್ಪೆಯೊಂದು ಹಾವನ್ನು ತಿನ್ನುವ ವಿಡಿಯೋ ವೈರಲ್ ಆಗಿದೆ. ಇನ್ನೂ ವಿಶೇಷವೆಂದರೆ ಈ ಕಪ್ಪೆ ಜೀವಂತ ಹಾವನ್ನೇ ನುಂಗಿದೆ.
ಈ ವಿಡಿಯೋದಲ್ಲಿ ದೊಡ್ಡ ಗಾತ್ರದ ಕಪ್ಪೆಯೊಂದು ಜೀವಂತ ಹಾವನ್ನು ನುಂಗಿರುವುದನ್ನು ಕಾಣಬಹುದಾಗಿದೆ. ಕಪ್ಪೆಯ ಬಾಯಿಯಿಂದ ಹಾವು ತಪ್ಪಿಸಿಕೊಳ್ಳಲು ಒದ್ದಾಡುತ್ತಿದ್ದು, ಸಾವು ಬದುಕಿನ ಮಧ್ಯ ಹೋರಾಡುತ್ತಿದೆ. ಆದರೆ ಕಪ್ಪೆ ಮಾತ್ರ ಬಿಲ್‌ಕುಲ್ ಹಾವನ್ನು ಬಿಟ್ಟುಕೊಡದಂತೆ ಹಂತ ಹಂತವಾಗಿ ಹಾವನ್ನು ನುಂಗುತ್ತಿದೆ. ತನ್ನ ಮುಂದಿನ ಕಾಲುಗಳಿಂದ ಹಾವನ್ನು ಹಿಡಿದು ಕೂಡ ಕಪ್ಪೆ ಹಾವನ್ನು ನುಂಗುವುದು ಕೂಡ ಈ ವಿಡಿಯೋದಲ್ಲಿ ಕಾಣಬಹುದುದಾಗಿದೆ.
ಸದ್ಯ ವಿಡಿಯೋ ಸಖತ್ ವೈರಲ್ ಆಗಿದ್ದು, ನೋಡುಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇನ್ನು ವಿಡಿಯೋಗೆ ಜನರು ವಿವಿಧ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಇದು ಕಲಿಯುಗ ಸ್ವಾಮಿ ಎಂದು ಒಬ್ಬರು ಕಮೆಂಟ್ ಮಾಡಿದರೆ, ಮತ್ತೊಬ್ಬರು ಇದು ವಿಜ್ಞಾನಕ್ಕೆ ಸವಾಲಾಗಿದೆ ಎಂದಿದ್ದಾರೆ. ಇನ್ನೂ ಕೆಲವರು ಈ ದೃಶ್ಯ ವಿಜ್ಞಾನವನ್ನೇ ಸುಳ್ಳು ಎನ್ನುವಂತೆ ಮಾಡಿದೆ ಎಂದು ಕಮೆಂಟ್ ಮಾಡಿದರೆ, ಯಾವುದು ಅಸಾಧ್ಯವಲ್ಲ ಎನ್ನುವುದನ್ನು ಕಪ್ಪೆ ಸಾಬೀತು ಮಾಡಿದೆ ಎಂದು ಕಪ್ಪೆಯನ್ನೇ ಹೊಗಳಿದ್ದಾರೆ.
ಕಪ್ಪೆಗಳು ಸಾಮಾನ್ಯವಾಗಿ ಸತ್ತ ಹಾವುಗಳ ದೇಹವನ್ನು ತಿನ್ನುತ್ತವೆ. ಆದರೆ ಜೀವಂತ ಹಾವನ್ನೇ ನುಂಗುವ ಈ ಕಪ್ಪೆಯ ಧೈರ್ಯ ಮೆಚ್ಚಲೇ ಬೇಕು ಎಂದು ಹಲವರು ಕಮೆಂಟ್ ಮಾಡಿದ್ದಾರೆ. ವಿವಿಧ ರೀತಿಯ ಕಮೆಂಟ್‌ಗಳನ್ನು ಈ ವಿಡಿಯೋದ ಕೆಳಗೆ ನೋಡಬಹುದಾಗಿದೆ. ಇನ್ನು ಡಿಸೆಂಬರ್ 20 ರಂದು ಹಂಚಿಕೊಳ್ಳಲಾದ ಈ ವಿಡಿಯೋ 7.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 2 ಲಕ್ಷಕ್ಕೂ ಅಧಿಕ ಲೈಕ್‌ಗಳನ್ನು ಪಡೆದುಕೊಂಡಿದೆ. ಅಲ್ಲದೇ ಇನ್ನೂ ಕೂಡ ವಿಡಿಯೋ ಶೇರ್ ಆಗುತ್ತಲೇ ಇದೆ.











Click it and Unblock the Notifications