Weight Loss: ತೂಕ ಕಡಿಮೆ ಮಾಡ್ಬೇಕಾ? ಈ ಪಾನೀಯ ಕುಡಿದರೆ ಸಾಕು..
ವಿಶ್ವದಲ್ಲಿ ಮಹಾಮಾರಿಯಂತೆ ಹಬ್ಬುತ್ತಿರು ರೋಗಗಳು ಹೇಗೆ ಜನರ ನಿದ್ದೆಯನ್ನು ಹಾಳು ಮಾಡಿವೆಯೋ ಹಾಗೆ, ಬೊಜ್ಜು ಸಹ ಜನರ ಜೀವನ್ನು ಹಿಂಡುತ್ತಿದೆ. ಬದಲಾದ ಜೀವನ ಕ್ರಮದಿಂದಾಗಿ ಜನ ಬೊಜ್ಜಿಗೆ ದಾಸರಾಗುತ್ತಿದ್ದಾರೆ. ಹೆಚ್ಚುತ್ತಿರುವ ತೂಕವು ಮುಂಬರುವ ದೊಡ್ಡ ಸಮಸ್ಯೆಗೆ ಹಿಡಿದ ಕೈಗನ್ನಡಿಯಾಗಿದೆ. ಆದರೂ, ಇದರಿಂದ ಬಚಾವ್ ಆಗುವುದಕ್ಕೆ ಜನ ಪಡಬಾರದ ಕಷ್ಟ ಪಡುತ್ತಾರೆ.
ಕೊಬ್ಬು ನಿಧಾನವಾಗಿ ನಮ್ಮ ಶರೀರದಲ್ಲಿ ಖಾಯಂ ಸ್ಥಾನ ಪಡೆಯುತ್ತೆದ. ಸೊಂಟ, ತೋಳುಗಳು, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಹೆಚ್ಚುತ್ತಿರುವ ತೂಕದಿಂದಾಗಿ, ನಡೆಯಲು ಸಹ ಕಷ್ಟವಾಗುತ್ತದೆ. ಉಸಿರಾಟವು ವೇಗವಾಗಿ ಆಗುತ್ತದೆ. ಇಷ್ಟೆಲ್ಲಾ ಆದ ಮೇಲೆ ಆಲಸ್ಯ ಮನುಷ್ಯನನ್ನು ಎರಡೂ ಕೈಗಳಿಂದ ಅಪ್ಪಿಕೊಂಡಿದೆ. ಹೀಗಾಗಿ ಈಗಿನ ಜನರು ಸ್ಥೂಲಕಾಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ.

ಬೊಜ್ಜು ನಿಯಂತ್ರಿಸುವುದು ಹೇಗೆ?
ಬೊಜ್ಜು ನಿಯಂತ್ರಿಸಲು ಹಲವು ಮಾರ್ಗಗಳಿವೆ. ಇವುಗಳಲ್ಲಿ ನಿಮ್ಮ ಆರೋಗ್ಯಕ್ಕೆ ಯಾವುದು ಸೂಕ್ತ ಎಂಬುದನ್ನು ನಿಮ್ಮ ವೈದ್ಯರಿಗೆ ಕೇಳಿ ಫಾಲೋ ಮಾಡಬಹುದು. ಬೊಜ್ಜು ಕಡಿಮೆ ಆಗುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಅಲ್ಲದೆ ಉತ್ತಮ ನಿದ್ದೆಗೆ ಸಹಾಯಕ.. ಬೊಜ್ಜು ಕರಗಿಸಲು ಶೇಕಡಾ 70 ರಷ್ಟು ಆಹಾರ ನಿಯಂತ್ರಣ ಸಹಕಾರಿ ಆದರೆ, ಇನ್ನು 30 ರಷ್ಟು ಭಾಗ ವ್ಯಾಯಮದಿಂದ ಸರಿ ಪಡಿಸಿಕೊಳ್ಳಬಹುದು.
ತಜ್ಞರ ಪ್ರಕಾರ ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುವ ಕೆಲವು ಆಹಾರಗಳಿವೆ. ಇದನ್ನು ಸೇವನೆ ಮಾಡುವುದರಿಂದ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ಪಡೆಯಬಹುದಾಗಿದೆ.
ನೆಲ್ಲಿಕಾಯಿ ರಸವನ್ನು ಸೇವಿಸಿ
ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿರುವ ನೆಲ್ಲಿಕಾಯಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮತ್ತು ದೇಹವನ್ನು ಆರೋಗ್ಯಕರವಾಗಿರಿಸುತ್ತದೆ. ನೆಲ್ಲಿಕಾಯಿ ಸೇವನೆಯು ಕೊಬ್ಬಿನ ಕೋಶಗಳನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ಚಯಾಪಚಯವನ್ನು ಹೆಚ್ಚಿಸುತ್ತದೆ. ಇದನ್ನು ಸೇವನೆ ಮಾಡುವುದರಿಂದ ತೂಕವು ವೇಗವಾಗಿ ಕಡಿಮೆಯಾಗಲು ಪ್ರಾರಂಭಿಸುತ್ತದೆ.
ದಿನವನ್ನು ಹೀಗೆ ಆರಂಭಿಸಿ
ನೀವು ಎದ್ದ ತಕ್ಷಣ ಒಂದು ಗ್ಲಾಸ್ ಬಿಸಿ ನೀರನ್ನು ಕುಡಿಯುವುದರಿಂದ ಹತ್ತು ಹಲವು ಪ್ರಯೋಜನಗಳನ್ನು ಪಡೆಯಬಹುದು. ಹೀಗೆ ಮಾಡುವುದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಅಲ್ಲದೆ ಕ್ಯಾಲರಿ ಸುಡುವುದಕ್ಕೆ ಇದು ಸಹಾಯಕ.
ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಬಿಸಿನೀರನ್ನು ಸೇವಿಸುವುದರಿಂದ ಚಯಾಪಚಯ ದರವು ಶೇಕಡಾ 30 ರಷ್ಟು ಹೆಚ್ಚಾಗುತ್ತದೆ. ದಿನಕ್ಕೆ ಒಂದು ಅಥವಾ ಎರಡು ಬಾರಿ ಬಿಸಿ ನೀರು ಕುಡಿಯಿರಿ ಮತ್ತು ನಿಮ್ಮ ಬೊಜ್ಜು ಕಡಿಮೆಯಾಗಲು ಪ್ರಾರಂಭಿಸುತ್ತದೆ.
ಶುಂಠಿ ನೀರು ಕುಡಿಯಿರಿ
ಬಿಸಿ ನೀರಿನಂತೆ ಕೊಬ್ಬು ಕಡಿಮೆ ಮಾಡಲು ಶುಂಠಿಯ ಪ್ರಯೋಗವು ಸಹ ಉತ್ತಮ. ಶುಂಠಿಯಲ್ಲಿ ಜಿಂಜರಾಲ್ ಎಂಬ ಸಂಯುಕ್ತವನ್ನು ಹೊಂದಿದ್ದು, ಚಯಾಪಚಯವನ್ನು ಹೊಂದಿದೆ. ಈ ನೀರನ್ನು ಸೇವಿಸುವುದರಿಂದ ಕೊಬ್ಬನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬಾರ್ಲಿ ನೀರನ್ನು ಸೇವಿಸಿ
ನೀವು ತೂಕವನ್ನು ಕಡಿಮೆ ಮಾಡಲು ಬಯಸಿದರೆ ಬಾರ್ಲಿ ನೀರನ್ನು ಸೇವಿಸಿ. ಬಾರ್ಲಿ ಅಥವಾ ಬಾರ್ಲಿ ನೀರು ಹೊಟ್ಟೆಯನ್ನು ಸ್ವಚ್ಛಗೊಳಿಸುತ್ತದೆ, ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.












Click it and Unblock the Notifications