ಜಗತ್ತಿನಲ್ಲಿ ಯಾವ ನಗರ ಸೇಫ್? ಭಾರತದಲ್ಲಿ ಯಾವ ಸಿಟಿ ಸುರಕ್ಷಿತ?
ಸಿಟಿ ಬೆಳೆದರೆ ಮಾತ್ರ ಸಾಲದು, ಕಟ್ಟಡ, ಮೂಲಸೌಕರ್ಯದ ಜೊತೆ ಅಲ್ಲಿ ವಾಸಿಸುವ ಜನರ ಸುರಕ್ಷತೆಯೂ ಮುಖ್ಯವಾಗಿರುತ್ತದೆ. ಹೀಗೆ 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ಅಧ್ಯಯನ ವರದಿ ಜಗತ್ತಿನಲ್ಲೇ ಅತಿ ಸುರಕ್ಷಿತ ನಗರ ಯಾವುದು ಎಂಬ ಮಾಹಿತಿ ಹೊರಹಾಕಿದೆ. ಅಂದ ಹಾಗೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ವರದಿ ಪ್ರಕಾರ ಡೆನ್ಮಾರ್ಕ್ ರಾಜಧಾನಿ 'ಕೋಪನ್ ಹೇಗನ್' ಜಗತ್ತಿನಲ್ಲೆ ಅತ್ಯಂತ ಸುರಕ್ಷಿತ ನಗರ ಎನಿಸಿಕೊಂಡಿದೆ.
100ಕ್ಕೆ 82.4 ಅಂಕ ಪಡೆದಿರುವ ಕೋಪನ್ ಹ್ಯಾಗನ್ ಎಲ್ಲಾ ಆಯಾಮದಲ್ಲೂ ಮನುಷ್ಯರು ವಾಸ ಮಾಡಲು ಯೋಗ್ಯವಾದ ನಗರ ಎಂದು 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ವರದಿ ಹೇಳಿದೆ. ಇದಾದ ನಂತರ ಕೆನಡಾ ರಾಜಧಾನಿ ಟೊರೊಂಟೊ ಹಾಗೂ ಸಿಂಗಾಪುರ್ ಕ್ರಮವಾಗಿ 2ನೇ ಮತ್ತು 3ನೇ ಸ್ಥಾನ ಪಡೆದಿವೆ.
ಆದ್ರೆ 'ಟಾಪ್-10' ಸುರಕ್ಷಿತ ನಗರಗಳಲ್ಲಿ ಭಾರತದ ನಗರಗಳು ಸ್ಥಾನ ಪಡೆದಿಲ್ಲ. 'ದಿ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್' ವರದಿಯಲ್ಲಿ ಪ್ರತಿ ನಗರದ ಡಿಜಿಟಲ್, ಆರೋಗ್ಯ, ಮೂಲಸೌಕರ್ಯ, ವೈಯಕ್ತಿಕ ಮತ್ತು ಪರಿಸರ ಭದ್ರತೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಇಷ್ಟೂ ಮಾಹಿತಿ ಆಧಾರದಲ್ಲಿ ಜಗತ್ತಿನ ಸುರಕ್ಷಿತ ನಗರಗಳ ಪಟ್ಟಿಯನ್ನು ರಿಲೀಸ್ ಮಾಡಲಾಗಿದೆ.

ದೆಹಲಿ 48, ಮುಂಬೈ 50..!
ಮೊದಲೇ ತಿಳಿಸಿದಂತೆ ಭಾರತದ ಯಾವುದೇ ನಗರ ಜಗತ್ತಿನ 'ಟಾಪ್-10' ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ. ಆದರೆ ರಾಷ್ಟ್ರ ರಾಜಧಾನಿ ದೆಹಲಿ 56.1 ಅಂಕಗಳೊಂದಿಗೆ 48ನೇ ಸ್ಥಾನ ಪಡೆದಿದೆ. ಮಹಾರಾಷ್ಟ್ರದ ರಾಜಧಾನಿ ಹಾಗೂ ಭಾರತದ 'ವಾಣಿಜ್ಯ ರಾಜಧಾನಿ' ಎಂಬ ಬಿರುದು ಪಡೆದಿರುವ ಮುಂಬೈ 54.4 ಅಂಕ ಪಡೆದು 50 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಹಾಗಾದರೆ ಯಾವ ಯಾವ ನಗರಕ್ಕೆ ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್ ವರದಿಯಲ್ಲಿ ಯಾವ ಸ್ಥಾನ ಸಿಕ್ಕಿದೆ ಎಂಬುದನ್ನು ಸಂಪೂರ್ಣವಾಗಿ ತಿಳಿಯೋಣ.
Recommended Video
| ಸುರಕ್ಷಿತ ನಗರಗಳ ಪಟ್ಟಿ | |||
|---|---|---|---|
| ರ‍್ಯಾಂಕ್ | ನಗರದ ಹೆಸರು | ಮಾರ್ಕ್ಸ್ | ದೇಶ |
| 01 | ಕೋಪನ್ ಹೇಗನ್ | 82.4 | ಡೆನ್ಮಾರ್ಕ್ |
| 02 | ಟೊರೊಂಟೊ | 82.2 | ಕೆನಡಾ |
| 03 | ಸಿಂಗಪುರ | 80.7 | ಸಿಂಗಪುರ |
| 04 | ಸಿಡ್ನಿ | 80.1 | ಆಸ್ಟ್ರೇಲಿಯಾ |
| 05 | ಟೋಕಿಯೊ | 80.0 | ಜಪಾನ್ |
| 06 | ಆಂಸ್ಟರ್ಡ್ಯಾಮ್ | 79.3 | ನೆದರ್ಲ್ಯಾಂಡ್ಸ್ |
| 07 | ವೆಲ್ಲಿಂಗ್ಟನ್ | 79.0 | ನ್ಯೂಜಿಲ್ಯಾಂಡ್ |
| 08 | ಹಾಂಗ್ ಕಾಂಗ್ | 78.6 | ಹಾಂಗ್ ಕಾಂಗ್ |
| 09 | ಮೆಲ್ಬರ್ನ್ | 78.6 | ಆಸ್ಟ್ರೇಲಿಯಾ |
| 10 | ಸ್ಟಾಕ್ಹೋಮ್ | 78.0 | ಸ್ವೀಡನ್ |
| 48 | ದೆಹಲಿ | 56.1 | ಭಾರತ |
| 50 | ಮುಂಬೈ | 54.4 | ಭಾರತ |
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications