Eating Rules: ಸಾಂಪ್ರದಾಯಿಕ ಭಾರತೀಯ ಆಹಾರ (ಊಟ) ಪದ್ಧತಿ ಎಷ್ಟು ಮುಖ್ಯ: ಕಾರಣಗಳು ಇಲ್ಲಿವೆ!
ಊಟ ಮಾಡುವ ಪದ್ಧತಿ: ನಾವು ಜೀವಿಸಲು ನಮ್ಮ ದೇಹಕ್ಕೆ ಗಾಳಿ, ನೀರು ಎಷ್ಟು ಮುಖ್ಯವೋ ಆಹಾರ ಕೂಡ ಅಷ್ಟೇ ಮುಖ್ಯ. ಆದರೆ ಬದಲಾದ ಜೀವನ ಶೈಲಿಯಲ್ಲಿ ನಾವು ಸೇವಿಸುವ ಆಹಾರ ಪೌಷ್ಠಿಕತೆಯನ್ನು ಕಳೆದುಕೊಂಡು ಬಿಟ್ಟಿದೆ. ಮಾತ್ರವಲ್ಲದೇ ತಾವು ಆಹಾರ ಸೇವಿಸುವ ಪದ್ಧತಿ ಕೂಡ ಬದಲಾಗಿದೆ.
ಆಹಾರ ತಯಾರಿಸುವ ಪಾತ್ರೆಗಳು, ಊಟ ಮಾಡುವ ತಟ್ಟೆಗಳು, ಕೈ ಚಮಚಗಳು ಎಲ್ಲದರಲ್ಲೂ ಬದಲಾವಣೆಯಾಗಿದೆ. ಫಾಸ್ಟ್ ಫುಡ್ ಸೇವನೆಗೆ ಬೇಕಾದ ವ್ಯವಸ್ಥೆ ಸದ್ಯ ಮನೆಮಾತಾಗಿ ಹೋಗಿದೆ. ಆದರೆ ಇದೆಲ್ಲವನ್ನು ನಮ್ಮ ದೇಹ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತದೆ ಎನ್ನುವ ಅರಿವು ಯಾರಿಗೂ ಕೂಡ ಇಲ್ಲ.

ಪ್ರಾಚೀನ ಕಾಲದಲ್ಲಿ ಆಹಾರ ತಯಾರಿಸಲು ಮಣ್ಣಿನ ಪಾತ್ರೆಗಳನ್ನು ತಯಾರಿಸಲಾಗುತ್ತಿತ್ತು. ಊಟಕ್ಕೆ ನಾನಾ ಎಲೆಗಳನ್ನು ಬಳಸಲಾಗುತ್ತಿತ್ತು. ಅಷ್ಟೇ ಯಾಕೆ ಊಟಕ್ಕೆ ಯಾವ ಕೈ ಚಮಚಗಳನ್ನು ಬಳಕೆ ಮಾಡುತ್ತಿರಲಿಲ್ಲ. ಕೈಯಿಂದಲೇ ಊಟ ಮಾಡಲಾಗುತ್ತಿತ್ತು. ಈ ಪದ್ಧತಿಯನ್ನು ರೂಡಿಸಿಕೊಳ್ಳಲು ಕಾರಣವೂ ಇದೆ. ಹಾಗಾದರೆ ನಮ್ಮ ಪೂರ್ವಜರು ಸೇವಿಸುತ್ತಿದ್ದ ಆಹಾರ ಪದ್ಧತಿ ಹೇಗಿತ್ತು? ಅದರಿಂದಾಗುವ ಆರೋಗ್ಯಕರ ಪ್ರಯೋಜನಗಳು ಯಾವವು ಎಂದು ನೋಡೋಣ.
ಸಾಂಪ್ರದಾಯಿಕ ಭಾರತೀಯ ಆಹಾರ ಪದ್ಧತಿ
ಕೈಯಿಂದ ತಿನ್ನುವುದು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ತೃಪ್ತಿಯನ್ನು ನೀಡುತ್ತದೆ. ರುಚಿ, ವಾಸನೆ, ಆಹಾರದ ಮೇಲೆ ದೃಷ್ಟಿ ಮತ್ತು ಸ್ಪರ್ಶ ಇದೆಲ್ಲವೂ ತಿನ್ನುವ ಆಹಾರದೊಂದಿಗೆ ಆಗಬೇಕು. ಆಗಲೇ ಹೊಟ್ಟೆ ಸಂತೃಪ್ತಿಯಾಗಿ ತುಂಬಿದ ಭಾವನೆ ಮೂಡುತ್ತದೆ.
ಆದರೆ ಬದಲಾದ ಕಾಲದಲ್ಲಿ ಚಮಚಗಳು ಅಥವಾ ಫೋರ್ಕ್‌ಗಳೊಂದಿಗೆ ತಿನ್ನುವುದು ರೂಡಿಯಲ್ಲಿದೆ. ಇಲ್ಲಿ ಆಹಾರವನ್ನು ಕೈ ಸ್ಪರ್ಶಿಸುವುದಿಲ್ಲ. ನಮ್ಮ ಗಮನ ತಿನ್ನುವ ಆಹಾರದ ಕಡೆಗೆ ಇರದೆ ಮೋಬೈಲ್, ಫೋನ್ ಮತ್ತಿತರ ಸಾಧನಗಳ ಕಡೆಗೆ ಇರುತ್ತದೆ. ಗಮನವಿಲ್ಲದ ಆಹಾರ ಸೇವನೆ ನಾಲಿಗೆಗೆ ರುಚಿಸುವುದಿಲ್ಲ. ಅಂದರೆ ಈ ಸಮಯದಲ್ಲಿ ನಾಲಿಗೆ ರುಚಿ ನೋಡುವುದಿಲ್ಲ. ಜೊತೆಗೆ ನಾವು ಕೂಡವ ವಿಧಾನ ಕೂಡ ಆಹಾರ ನಮ್ಮ ಹೊಟ್ಟೆ ಸೇರಲೂ ಸಾಧ್ಯವಾಗದಂತ ಸ್ಥಿತಿಗೆ ತಲುಪಿಸಿಬಿಟ್ಟಿದೆ.
ಹಿಂದೆ ಒಂದು ಕಾಲವಿತ್ತು. ಭಾರತೀಯ ಕುಟುಂಬಗಳಲ್ಲಿ ಊಟಕ್ಕೆ ನೆಲದ ಮೇಲೆಯೇ ಕುಳಿತುಕೊಳ್ಳಲಾಗುತ್ತಿತ್ತು. ಮಣ್ಣಿನ ಪಾತ್ರೆಗಳಿಂದ ಮಾಡಿದ ಆಹಾರವನ್ನು ಬಾಳೆ ಎಲೆಯ ಮೇಲೆ ಬಡಿಸಲಾಗುತ್ತಿತ್ತು. ಆಹಾರವನ್ನು ಅನುಭವಿಸಿ ತಿನ್ನಲು ಕೈಗಳನ್ನು ಬಳಸಲಾಗುತ್ತಿತ್ತು. ಕೈಗಳಿಂದ ಆಹಾರವನ್ನು ತಿನ್ನುವುದು ದೇಹಕ್ಕೆ ಮಾತ್ರವಲ್ಲದೆ ಮನಸ್ಸಿನ ಮತ್ತು ಆತ್ಮದೊಂದಿಗೆ ಸಂಬಂಧಿಸಿದೆ ಎನ್ನಲಾಗುತ್ತದೆ.

1. ಊಟಕ್ಕೆ ಕೈ ಆರೋಗ್ಯಕ್ಕೆ ಕಾವಲು
ಕೈಗಳು ಆಹಾಯ ಬೇಯಿಸಲು ಮೂಲ ಸಾಧನವಾಗಿದೆ. ತರಕಾರಿಗಳನ್ನು ತೊಳೆಯುವುದು, ಕತ್ತರಿಸುವುದು, ಮಿಶ್ರಣ ಮಾಡುವವರೆಗೆ ಪ್ರತಿಯೊಂದು ಅಡುಗೆ ಪ್ರಕ್ರಿಯೆಯಲ್ಲಿ ಕೈಗಳು ಅತ್ಯಾವಶ್ಯಕ. ಕೈಗಳನ್ನು ಬಳಸಿ ಪದಾರ್ಥಗಳನ್ನು ಸಂಪೂರ್ಣವಾಗಿ ಮಿಶ್ರಣ ಮಾಡುವುದರಲ್ಲಿರುವ ಪಕ್ವತೆ ಬೇರೆ ಯಾವ ಸಾಧನದಿಂದ ಮಾಡಲು ಸಾಧ್ಯವಾಗದು. ಉದಾಹರಣೆಗೆ, ಚಪಾತಿ, ಪರಾಠ ಇತ್ಯಾದಿಗಳನ್ನು ತಯಾರಿಸಲು ಹಿಟ್ಟು ಮಿಶ್ರಣ ಮಾಡುವುದಾಗಿರಬಹುದು.
ವೇದಗಳ ಪ್ರಕಾರ, ನಮ್ಮ ಬೆರಳುಗಳು ಮತ್ತು ಕಾಲ್ಬೆರಳುಗಳು ಪಂಚ ಮಹಾಭೂತಗಳಿಗೆ (ಐದು ಘಟಕಗಳು) ಸಂಬಂಧಿಸಿವೆ. ಹೆಬ್ಬೆರಳು ಅಗ್ನಿ, ತೋರುಬೆರಳು ವಾಯು, ಮಧ್ಯದ ಬೆರಳು ಆಕಾಶ, ಉಂಗುರದ ಬೆರಳು ಪೃಥ್ವಿ (ಭೂಮಿ), ಮತ್ತು ಕಿರುಬೆರಳು ಜಲ (ನೀರು) ಗೆ ಸಂಬಂಧಿಸಿದೆ. ಇದರಂತೆ ನಮ್ಮ ಕೈಗಳಿಗೆ ಆಹಾರವನ್ನು ಎಷ್ಟು ಪ್ರಮಾಣದಲ್ಲಿ ಬೇಯಿಸಬೇಕು(ಅಗ್ನಿ) ಎನ್ನುವುದು ತಿಳಿದಿರುತ್ತದೆ. ನಮ್ಮ ಆಹಾರದಲ್ಲಿ ಎಷ್ಟು ಪ್ರಮಾಣದಲ್ಲಿ ನೀರಿನಾಂಶ ಇರಬೇಕು, ಯಾವ ಮಣ್ಣಿನಲ್ಲಿ ಬೆಳೆದ ತರಕಾರಿಗಳು ಎನ್ನುವ ಗುರುತಿಸುವ ಶಕ್ತಿ ಇವೆಲ್ಲವನ್ನು ಕೈಯಿಂದಲೇ ತಿಳಿಯಲು ಸಾಧ್ಯ ಎಂದು ನಮ್ಮ ಪೂರ್ವಜನರು ನಂಬುತ್ತಾರೆ.
ಈ ಕೈಗಳಿಂದ ಮಾಡಿದ ಆಹಾರವೂ ಪ್ರತಿಯೊಂದರ ಅಳತೆ, ಪ್ರಮಾಣ, ರುಚಿಯನ್ನೂ ಗುರುತಿಸಬಲ್ಲದು. ಈ ತಿಳುವಳಿಕೆ ನಾವು ಬಳಕೆ ಮಾಡು ಚಮಚಗಳಿಂದ ಬರಲು ಸಾಧ್ಯವಿಲ್ಲ. ಹೀಗಾಗಿ ಊಟಕ್ಕೆ ಕೈ ಬಳಕೆ ಆರೋಗ್ಯಕರ ಹಾಗೂ ತೃಪ್ತಿಕರವಾಗಿದೆ.

2. ನೆಲದ ಮೇಲೆ ಕುಳಿತು ಊಟ ವೃದ್ಧಿಸುವುದು ನಿಮ್ಮ ಆರೋಗ್ಯದ ನೋಟ
ಬದಲಾದ ಕಾಲದಲ್ಲಿ ನೆಲದ ಮೇಲೆ ಕುಳಿತು ಊಟ ಮಾಡುವುದು ಒಂದು ಕಡೆ ಇರಲಿ, ಮನೆಯಲ್ಲಿ ಬರಿಗಾಲಲ್ಲಿ ನಡೆಯುವುದು ಕಷ್ಟವಾಗಿ ಬಿಟ್ಟಿದೆ. ನೆಲದ ಮೇಲೆ ಕುಳಿತುಕೊಳ್ಲೋದು ಅಂದರೆ ಅದೇನೋ ಅಸಡ್ಡೆ. ಆದರೆ ಇದರಿಂದ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಅನ್ನೋದೇ ಎಷ್ಟೋ ಜನರಿಗೆ ತಿಳಿದಿಲ್ಲ.
ನೆಲದ ಮೇಲೆ ಕಾಲು ಮಡಿಚಿ ಕುಳಿತುಕೊಳ್ಳುವುದು ಹೃದಯಕ್ಕೆ ಅತ್ಯಂತ ಪ್ರಯೋಜನಕಾರಿಯಾಗಿದೆ. ರಕ್ತದ ಪರಿಚಲನೆ ಸುಲಭವಾಗುತ್ತದೆ. ನೆಲದ ಮೇಲೆ ಕುಳಿತುಕೊಳ್ಳುವುದು ಸೊಂಟದ ಪ್ರದೇಶವನ್ನು ಬಲಪಡಿಸುತ್ತದೆ. ಇದು ದೇಹದ ಸಂಕಟವನ್ನು ಕಡಿಮೆ ಮಾಡುತ್ತದೆ. ಸೊಂಟ ಮತ್ತು ಕಾಲುಗಳನ್ನು ಹೆಚ್ಚು ಹೊಂದಿಕೊಳ್ಳುವಂತೆ ಮಾಡುತ್ತದೆ. ಸ್ನಾಯುಗಳನ್ನು ಬಲಪಡಿಸಲಾಗುತ್ತದೆ.
ಸೂಕ್ತವಾದ ಭಂಗಿಯಲ್ಲಿ ತಿನ್ನಲು ಕುಳಿತಾಗ, ಜೀರ್ಣಕ್ರಿಯೆಗೆ ಸಂಬಂಧಿಸಿದ ರಸವು ಹೊಟ್ಟೆಯಲ್ಲಿ ಸ್ರವಿಸುತ್ತದೆ. ಅದು ಆಹಾರವನ್ನು ಸಂಸ್ಕರಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ನೆಲದ ಮೇಲೆ ಕುಳಿತು ಆಹಾರ ಸೇವನೆ ಮಾಡುವುದು ತೃಪಿಯನ್ನು ನೀಡುತ್ತದೆ. ಜೊತೆಗೆ ನೆಲದ ಮೇಲೆ ಕುಳಿತಾಗ, ನರವು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ನೆಲದ ಮೇಲೆ ಕುಳಿತು ತಿನ್ನುವುದರಿಂದ ಹಲವಾರು ಪ್ರಯೋಜನಗಳು ಇವೆ.
3. ಎಲೆಗಳ ಮೇಲೆ ಬಡಿಸಿ ಆಹಾರ ಸೇವನೆಗೆ ಆಗದಿರಲಿ ಮುಜುಗರ
ಎಲೆಗಳು ಆಹಾರವನ್ನು ಬಡಿಸಲು ಬಳಸುವ ಪ್ರಧಾನ ಫಲಕಗಳಾಗಿವೆ. ಮಾನವರು ಕಾಡಿನಲ್ಲಿ ವಾಸಿಸುತ್ತಿದ್ದ ಕಾಲದಿಂದಲೂ ಎಲೆಗಳನ್ನು ವಿವಿಧ ಕಾರಣಗಳಿಗಾಗಿ ಬಳಸಲಾಗುತ್ತದೆ. ಉದಾಹರಣೆಗೆ- ಎಲೆಗಳ ಮೇಲೆ ಆಹಾರವನ್ನು ತಿನ್ನುವುದು. ಆಹಾರ ತಯಾರಿಕೆಗೆ ಎಲೆಗಳನ್ನು ಬಳಕೆ ಮಾಡುವುದು ಇದೆ.
ಎಲೆಗಳ ಮೇಲೆ ತಿನ್ನುವುದು ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಅದನ್ನು ಸ್ವಚ್ಚಗೊಳಿಸುವುದು ಸುಲಭ ಜೊತೆಗೆ ಪರಿಸರಕ್ಕೂ ಇದರಿಂದ ಹಾನಿಯಾಗದು. ಮರದ ಪಾತ್ರೆಗಳನ್ನು ಬಳಸುವುದಕ್ಕಿಂತ ತಾಜಾ ಎಲೆಗಳನ್ನು ಬಳಸುವುದು ಖರ್ಚನ್ನೂ ಕಡಿಮೆ ಮಾಡುತ್ತದೆ. ಹೀಗೆ ಊಟಕ್ಕೆ ಹೆಚ್ಚು ಬಳಸಲಾಗುವ ಎಲೆ ಅಂದರೆ ಬಾಳೆ ಎಲೆ.
ಭಾರತೀಯ ಸಂಸ್ಕೃತಿಯಲ್ಲಿ, ವಿವಿಧ ರೀತಿಯ ಎಲೆಗಳನ್ನು ಆಹಾರಕ್ಕಾಗಿ ಬಳಸಲಾಗುತ್ತದೆ. ಸಾಮಾನ್ಯವಾಗಿ, ಶುದ್ಧೀಕರಣದ ಪ್ರದರ್ಶನವಾಗಿ ಬಳಸುವ ಮೊದಲು ಬಾಳೆ ಎಲೆಗಳ ಮೇಲೆ ನೀರನ್ನು ಚಿಮುಕಿಸಲಾಗುತ್ತದೆ. ಲೋಹಗಳ ಬಳಕೆಯು ಕಟ್ಲೇರಿಯ ಬೆನ್ನೆಲುಬಾಗುವ ಮೊದಲು ಆಹಾರವನ್ನು ಬಡಿಸಲು ಬಾಳೆ ಎಲೆಗಳ ಬಳಕೆಯು ಹಿಂದಿನದಾಗಿದೆ. ಮರದ ಪಾತ್ರೆಗಳನ್ನು ಬಳಸುವುದಕ್ಕಿಂತ ತಾಜಾ ಎಲೆಗಳನ್ನು ಬಳಸುವುದನ್ನು ಹೆಚ್ಚು ಬರಡಾದ ಮತ್ತು ಖರ್ಚು ಮಾಡಬಹುದೆಂದು ಪರಿಗಣಿಸಲಾಗಿದೆ. ಬಾಳೆ ಎಲೆಗಳು ಅಕ್ಷಯ, ಬೃಹತ್, ದಪ್ಪ ಮತ್ತು ಸುಲಭವಾಗಿ ಚುಚ್ಚುವುದಿಲ್ಲ.
ಬಾಳೆ ಎಲೆಗಳು ಬಹಳಷ್ಟು ಪಾಲಿಫಿನಾಲ್‌ಗಳನ್ನು ಹೊಂದಿರುತ್ತವೆ, ಇದು ಅನೇಕ ಸಸ್ಯ ಆಧಾರಿತ ಆಹಾರಗಳಲ್ಲಿ ಕಂಡುಬರುವ ವಿಶಿಷ್ಟವಾದ ಕ್ಯಾನ್ಸರ್-ತಡೆಗಟ್ಟುವಲ್ಲಿ ಕೆಲಸ ಮಾಡುತ್ತದೆ. ಬಾಳೆ ಎಲೆ ಹೆಚ್ಚುವರಿಯಾಗಿ ಆಹಾರಕ್ಕೆ ವಾಸನೆಯನ್ನು ನೀಡುತ್ತದೆ. ರುಚಿಯನ್ನು ಸುಧಾರಿಸುತ್ತದೆ.
ಹಲಸಿನ ಎಲೆಯನ್ನು ಆಹಾರ ಸೇವನೆಗೆ ಬಳಸಲಾಗುತ್ತದೆ. ಈ ಎಲೆಯನ್ನು ದೀರ್ಘಕಾಲದವರೆಗೆ ಆಹಾರ ಸೇವನೆಗೆ ಬಳಸುವುದರಿಂದ ಜೀರ್ಣಕ್ರಿಯೆಗೆ ಉತ್ತಮ ಎಂದು ಹೇಳಲಾಗುತ್ತದೆ.
ಇನ್ನೂ ಋಷಿಗಳು ಕಮಲದ ಎಲೆಗಳಿಗೆ ಆದ್ಯತೆ ನೀಡುತ್ತಾರೆ. ಕಮಲದ ಎಲೆಯು ಯಾವಾಗಲೂ ನೀರಿನಲ್ಲಿದ್ದರೂ ನೀರಿನ ಹನಿಗಳಿಗೆ ಅಂಟಿಕೊಳ್ಳುವುದಿಲ್ಲ ಎಂಬುದು ಇದಕ್ಕೆ ವಿವರಣೆಯಾಗಿದೆ. ಕಮಲದ ಎಲೆಯ ಮೇಲಿರುವ ಜಿಡ್ಡಿನ ಪದರ ನೀರನ್ನು ಹಿಮ್ಮೆಟ್ಟಿಸುತ್ತದೆ. ಅಂತೆಯೇ, ಋಷಿಗಳು ಆಂತರಿಕ ಶಕ್ತಿಯಿಂದಾಗಿ ಹೊರಗಿನ ಪ್ರಪಂಚದ ಅತಿರಂಜಿತ ವಿಷಯಕ್ಕೆ ಅಂಟಿಕೊಳ್ಳುವುದಿಲ್ಲ ಎಂದರ್ಥವನ್ನು ಇದು ಸೂಚಿಸುತ್ತದೆ ಎನ್ನಲಾಗುತ್ತದೆ. ಈ ಮಾರ್ಗಗಳಲ್ಲಿ ಋಷಿಗಳು ಕಮಲದ ಎಲೆಯಲ್ಲಿ ಪ್ರಸಾದವನ್ನು ಬಡಿಸಲು ತಿಳಿಸುತ್ತಾರೆ.
4. ಪಾತ್ರೆಗಳ ಬಳಕೆ
ಪಾತ್ರೆ ಅಂದರೆ ಆಹಾರವನ್ನು ಬೀಳದಂತೆ ರಕ್ಷಿಸುವ ವಸ್ತು. ಪ್ರಸ್ತುತ ಬಹುತೇಕ ಅಡುಗೆಮನೆಗಳಲ್ಲಿ ಅಲ್ಯೂಮಿನಿಯಂ, ತಾಮ್ರ, ಬೆಲೆಬಾಳುವ ಕಲ್ಲುಗಳು ಇತ್ಯಾದಿಗಳಿಂದ ಮಾಡಿದ ವಿವಿಧ ಪಾತ್ರೆಗಳು ಕಂಡು ಬರುತ್ತವೆ. ಬಹುತೇಕರು ಇಂತಹ ಪಾತ್ರೆಗಳಲ್ಲಿ ಆಹಾರವನ್ನು ಬೇಯಿಸುತ್ತಾರೆ ಜೊತೆಗೆ ಶೇಖರಿಸುತ್ತಾರೆ. ಆದರೆ ಯಾವ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸಬೇಕು, ಸಂಗ್ರಹಿಸಬೇಕು ಎನ್ನುವುದು ಬಹುತೇಕರಿಗೆ ತಿಳಿದೇ ಇಲ್ಲ.
ಪ್ರತಿಯೊಂದು ಪಾತ್ರೆಗಳ ಬಳಕೆ ತನ್ನದೇ ಆದ ಪ್ರಯೋಜನವನ್ನು ಹೊಂದಿದೆ. ಯಾವ ಪಾತ್ರೆಯಲ್ಲಿ ಯಾವ ಪದಾರ್ಥ ಅಥವಾ ಆಹಾರವನ್ನು ಇಟ್ಟರೆ ಒಳ್ಳೆಯದು ಎಂದು ತಿಳಿಯೋಣ. ಆಚಾರ್ಯ ಸುಶ್ರುತರ ಪ್ರಕಾರ ಕಬ್ಬಿಣದ ಪಾತ್ರೆಗಳಲ್ಲಿ ತುಪ್ಪವನ್ನು ಇಡಬೇಕು. ಎಲೆಗಳಿಂದ ಮಾಡಿದ ಪಾತ್ರೆಗಳಲ್ಲಿ ಎಲ್ಲಾ ತಿನ್ನಬಹುದಾದ ತಿಂಡಿಗಳನ್ನು ಇಡಬಹುದು. ಬೇಯಿಸಿದ ಮಾಂಸ ಬೆಳ್ಳಿ ಪಾತ್ರೆಗಳಲ್ಲಿ, ಕಲ್ಲಿನಿಂದ ಮಾಡಿದ ಪಾತ್ರೆಗಳಲ್ಲಿ ಹುಳಿ ಆಹಾರ ಅಥವಾ ಮಜ್ಜಿಗೆ, ನೀರು ಚೆನ್ನಾಗಿ ಕುದಿಸಿ ನಂತರ ತಾಮ್ರದ ಪಾತ್ರೆಗಳಲ್ಲಿ ಹಾಕುವುದು, ಫ್ರಿಜ್ ಗಿಂತಲು ಮಣ್ಣಿನ ಮಡಿಕೆಯಲ್ಲಿಟ್ಟು ನೀರು ಕುಡಿಯುವುದು, ಮಣ್ಣು, ಗಾಜು ಅಥವಾ ರಾಕ್ ಸ್ಫಟಿಕ (ಕಲ್ಲು) ನಿಂದ ಮಾಡಿದ ಪಾತ್ರೆಗಳಲ್ಲಿ ಸಿರಪ್‌ಗಳು ಮತ್ತು ವೈನ್ ಇಡುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಹೀಗೆ ನಾವು ಅನಾಧಿಕಾಲದಿಂದ ಬಳಸಿಕೊಂಡು ಬಂದ ಪದ್ಧತಿಯನ್ನು ಮುಂದುವರೆಸಿದರೆ ಉತ್ತಮ ಆರೋಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು.
-
ಆಂಧ್ರಪ್ರದೇಶದಲ್ಲಿ ಕಲಬೆರಕೆ ಹಾಲು ಸೇವಿಸಿ 16 ಮಂದಿ ಸಾವು: ಹಲವು ರಾಜ್ಯಗಳಲ್ಲಿ ಅಧಿಕಾರಿಗಳಿಂದ ದಾಳಿ -
ರೈಲಿನಲ್ಲಿ ಆಹಾರ ಗುಣಮಟ್ಟ, ಅಧಿಕೃತ ವೆಂಡರ್ ಮಾಹಿತಿ ತಿಳಿಯಲು QR ಕೋಡ್ ವ್ಯವಸ್ಥೆ, ಏನಿದು? -
CBSE ಶಾಲೆಗಳಲ್ಲಿ ಋತುಚಕ್ರ ನೈರ್ಮಲ್ಯ ಕಡ್ಡಾಯ: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಹೊಸ ನಿಯಮ ಜಾರಿ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications