Virat Kohli: ಅಯೋಧ್ಯೆಯಲ್ಲಿ ಡುಪ್ಲಿಕೇಟ್ ವಿರಾಟ್ ಕೊಹ್ಲಿ: ಮುಗಿಬಿದ್ದು ಫೋಟೋ ತೆಗೆಸಿಕೊಂಡ ಜನ
ನೀಲಿ ಬಣ್ಣದ ಟೀ ಶರ್ಟ್, ಸನ್ ಗ್ಲಾಸ್ ಹಾಗೂ ಕ್ಯಾಪ್ ಹಾಕಿಕೊಂಡು ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿ ಅಯೋಧ್ಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಶೇಕ್‌ಹ್ಯಾಂಡ್ ಮಾಡುತ್ತಾ ಅಪ್ಪಿಕೊಳ್ಳುತ್ತಾ ಫೋಟೋ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದಿದ್ದಾರೆ. ಜನರ ನಡುವೆ ಯಾವುದೇ ಸೆಕ್ಯೂರಿಟಿ ಇಲ್ಲದೆ ವಿರಾಟ್ ಕೊಹ್ಲಿ ಹೀಗೆಲ್ಲಾ ಓಡಾಡಿದ್ರಾ ಅಂತಾ ನೀವು ಆಶ್ಚರ್ಯ ಪಡಬಹುದು. ಹೀಗೆ ಓಡಾಡಿದ್ದೇನೋ ನಿಜ ಆದರೆ ಈ ವ್ಯಕ್ತಿ ನಿಜವಾದ ವಿರಾಟ್ ಕೊಹ್ಲಿ ಅಲ್ಲ ಬದಲಿಗೆ ಡುಪ್ಲಿಕೇಟ್ ಕೊಹ್ಲಿ.
ರಾಮಮಂದಿರ ಪ್ರಾಣ ಪ್ರತಿಷ್ಠಾ ಸಮಾರಂಭ ನಡೆದು ಕೆಲವೇ ಗಂಟೆಗಳ ನಂತರ ಅಯೋಧ್ಯೆಯಲ್ಲಿ ವಿರಾಟ್ ಕೊಹ್ಲಿಯಂತೆ ಕಾಣುವ ವ್ಯಕ್ತಿಯ ವೀಡಿಯೊ ಸೋಮವಾರ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಾಣಿಸಿಕೊಂಡ ವ್ಯಕ್ತಿ ಭಾರತೀಯ ಕ್ರಿಕೆಟ್ ಆಟಗಾರ ವಿರಾಟ್ ಕೊಹ್ಲಿಯಂತೆ ಕಾಣಿಸಿಕೊಂಡಿದ್ದಾನೆ. ವಿರಾಟ್ ಕೊಹ್ಲಿ ಲುಕ್‌ನಲ್ಲಿ ಕಾಣಿಸಿಕೊಂಡ ವ್ಯಕ್ತಿಯನ್ನು ಜನ ಸ್ವಾಗತಿಸಿದ್ದಾರೆ. ಜೊತೆಗೆ ಫೋಟೋಗಾಗಿ ವಿನಂತಿಸಿದ್ದಾರೆ.

ನೋಡಲು ಸ್ವಲ್ಪ ವಿರಾಟ್ ಕೊಹ್ಲಿಯಂತೆ ಕಾಣುವ ಈ ವ್ಯಕ್ತಿ ಕೊಹ್ಲಿಯಂತೆ ಉಡುಪು ಧರಿಸಿ ಅಯೋಧ್ಯೆಯಲ್ಲಿ ಓಡಾಡಿದ್ದಾನೆ. ಈತ ಜನರೊಂದಿಗೆ ಫೋಟೋಗಳನ್ನು ತೆಗೆದುಕೊಳ್ಳುತ್ತಲೇ ಇರುವುದು ಕಂಡುಬಂದಿದೆ. ಆದರೆ ಗುಂಪು ಹೆಚ್ಚಾದಾಗ ಅವನು ತಪ್ಪಿಸಿಕೊಳ್ಳಲು ಪ್ರಯತ್ನಿಸಿರುವುದು ವೈರಲ್ ವೀಡಿಯೊದಲ್ಲಿ ಕಂಡುಬರುತ್ತದೆ. ಆದರೆ ಜನಸಂದಣಿಯಿಂದ ತಪ್ಪಿಸಿಕೊಳ್ಳಲು ಅವನ ಪ್ರಯತ್ನಗಳು ವಿಫಲವಾದವು. ಬಳಿಕ ಆತ ನಿಜವಾದ ವಿರಾಟ್ ಕೊಹ್ಲಿ ಅಲ್ಲ ಎಂಬುದು ತಿಳಿದು ಬಂದಿದೆ. ಕೂಡಲೆ ಜನ ತಾವು ಕ್ಲಿಕ್ಕಿಸಿಕೊಂಡ ಫೋಟೋಗಳನ್ನು ಡಿಲಿಟ್ ಮಾಡಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ಸಚಿನ್ ತೆಂಡೂಲ್ಕರ್ ಅವರಂತೆ ಉಡುಪು ಧರಿಸಿ ಅವರಂತೆ ಕಾಣಿಸುವ ಕೆಲ ಪುರುಷರು ಅಯೋಧ್ಯೆಯಲ್ಲಿ ಓಡಾಡುತ್ತಿರುವುದು ಸೋಮವಾರ ಎಲ್ಲರ ಗಮನ ಸೆಳೆದಿದೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಸೋಮವಾರ ಮಧ್ಯಾಹ್ನ ಪೂರ್ಣಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.
Virat Kohli's doppelganger in Ayodhya.pic.twitter.com/DoQteQhoS7
— Mufaddal Vohra (@mufaddal_vohra) January 22, 2024
ಸೋಮವಾರ ನಡೆದ ರಾಮಮಂದಿರ ಸಮಾರಂಭದಲ್ಲಿ ಪಾಲ್ಗೊಳ್ಳಲು ಸಾವಿರಾರು ಭಕ್ತರು ಅಯೋಧ್ಯೆಗೆ ಆಗಮಿಸಿದ್ದರು. ಉದ್ಯಮಿಗಳು ಮತ್ತು ಕ್ರೀಡಾ ನಾಯಕರಿಂದ ಹಿಡಿದು ಬಾಲಿವುಡ್ ತಾರೆಯರವರೆಗೂ ದೇಶಾದ್ಯಂತದ ಹಲವಾರು ಪ್ರಸಿದ್ಧ ವ್ಯಕ್ತಿಗಳು ರಾಮ ಮಂದಿರ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸೋಮವಾರ ನಡೆದ ರಾಮಮಂದಿರ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ರವೀಂದ್ರ ಜಡೇಜಾ, ಮಿಥಾಲಿ ರಾಜ್ ಮತ್ತು ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಸೇರಿದಂತೆ ಕ್ರೀಡಾ ತಾರೆಗಳು ಪಾಲ್ಗೊಂಡಿದ್ದರು. ಆದರೆ ಈ ಡುಪ್ಲಿಕೇಟ್ ವಿರಾಟ್ ಕೊಹ್ಲಿ ಹೆಚ್ಚಿನ ಸೆಲೆಬ್ರಿಟಿಗಳಿಗಿಂತ ಹೆಚ್ಚು ಪ್ರಸಿದ್ಧವಾಗಿದ್ದು ಕಂಡು ಬಂದಿದೆ.

ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರನ್ನು ರಾಮಮಂದಿರ ಸಮಾರಂಭಕ್ಕೆ ತಿಂಗಳ ಹಿಂದೆ ಅವರ ನಿವಾಸದಲ್ಲಿ ಆಹ್ವಾನಿಸಲಾಗಿತ್ತು. ಆದರೂ ಸೋಮವಾರ ಅಯೋಧ್ಯೆಯಲ್ಲಿ ನಡೆದ ಸಮಾರಂಭದಲ್ಲಿ ಕೊಹ್ಲಿ ಗೈರುಹಾಜರಾದವರಲ್ಲಿ ಪ್ರಮುಖರು.
ನಿಜವಾದ ಕೊಹ್ಲಿ ಅಯೋಧ್ಯೆಗೆ ಭೇಟಿ ನೀಡಿಲ್ಲ
ವಿರಾಟ್ ಕೊಹ್ಲಿ ವೈಯಕ್ತಿಕ ಕಾರಣಗಳನ್ನು ನೀಡಿ ಅಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಹಾಜರಾಗಿರಲಿಲ್ಲ. ಈ ಸಂದರ್ಭದಲ್ಲಿ ಬೇರೆ ಬೇರೆ ಆಟಗಾರರು ಅಯೋಧ್ಯೆಗೆ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದರು.












Click it and Unblock the Notifications