ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿ ಸೆಕೆಂಡಿಗೆ 48000 ಕ್ಯೂಬಿಕ್ ಅಡಿ ನೀರನ್ನು ನುಂಗುವ 'Portal to Hell'

|
Google Oneindia Kannada News

ಕ್ಯಾಲಿಫೋರ್ನಿಯಾ, ಏಪ್ರಿಲ್ 16: ನಮ್ಮ ಭೂಮಿಯು ನೂರಾರು ರಹಸ್ಯಗಳನ್ನು ಹೊಂದಿದೆ. ಅದರ ಬಗ್ಗೆ ವಿಜ್ಞಾನಿಗಳು ಸಹ ಇಲ್ಲಿಯವರೆಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ನೀವು ನೆಲದೊಳಗೆ ಅನೇಕ ಹೊಂಡಗಳನ್ನು ನೋಡಿರಬೇಕು. ಆದರೆ ನದಿ, ಸರೋವರದ ಮಧ್ಯದಲ್ಲಿ ನೀವು ಎಂದಾದರೂ ದೊಡ್ಡ ರಂಧ್ರವನ್ನು ನೋಡಿದ್ದೀರಾ? ಯುಎಸ್‌ನ ಕ್ಯಾಲಿಫೋರ್ನಿಯಾದಲ್ಲಿ ಈ ರೀತಿಯ ರಂಧ್ರವಿದೆ. ಇದರ ಬಗ್ಗೆ ನೀವು ತಿಳಿಯದ ಕೆಲವು ವಿಚಾರಗಳು ಇಲ್ಲಿದೆ.

ಸ್ಥಳೀಯ ಜನರು ಸರೋವರದ ಮಧ್ಯದಲ್ಲಿರುವ ಈ ರಂಧ್ರವನ್ನು 'ಪೋರ್ಟಲ್ ಟು ಹೆಲ್' ಅಂದರೆ ನರಕದ ಬಾಗಿಲು ಎಂದು ಕರೆಯುತ್ತಾರೆ. ನೀರಿನಲ್ಲಿ ಮುಚ್ಚಿಹೋಗಿದ್ದ ಈ ಬೃಹತ್ ಗಾತ್ರದ ರಂಧ್ರ ಇದೀಗ ಮತ್ತೆ ತೆರೆದುಕೊಂಡಿದೆ. ಇದರಿಂದ ಅವರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಈ ರಂಧ್ರದ ಅಧಿಕೃತ ಹೆಸರು 'ಗ್ಲೋರಿ ಹೋಲ್', ಇದು ಸುಮಾರು 72 ಅಡಿ ಅಗಲವಿದೆ.

7 ತಿಂಗಳಲ್ಲಿ 7 ಬಾರಿ ಕಚ್ಚಿದ ಸರ್ಪ: ಇದರ ಸೇಡಿಗೆ ಕಾರಣವೇನು ಗೊತ್ತಾ?7 ತಿಂಗಳಲ್ಲಿ 7 ಬಾರಿ ಕಚ್ಚಿದ ಸರ್ಪ: ಇದರ ಸೇಡಿಗೆ ಕಾರಣವೇನು ಗೊತ್ತಾ?

ಸರೋವರದ ಮಧ್ಯದಲ್ಲಿ ನೀರನ್ನು ನುಂಗುವ 'ನರಕದ ಬಾಗಿಲು'

ಸರೋವರದ ಮಧ್ಯದಲ್ಲಿ ನೀರನ್ನು ನುಂಗುವ 'ನರಕದ ಬಾಗಿಲು'

ವಾಸ್ತವವಾಗಿ ಪೂರ್ವ ನಾಪಾ ಕೌಂಟಿಯಲ್ಲಿ ಮೊಂಟಿಸೆಲ್ಲೋ ಅಣೆಕಟ್ಟಿನ ಮೇಲೆ ಒಂದು ಸರೋವರವಿದೆ. ಅಲ್ಲಿ ಈ 'ಪೋರ್ಟಲ್ ಟು ಹೆಲ್' ರಂಧ್ರವಿದೆ. ಕೆರೆಯ ಮಟ್ಟ ಹೆಚ್ಚಾದ ಬಳಿಕ ಮತ್ತೆ ತೆರೆಯಲಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ ಅದು ನಿಜಕ್ಕೂ ನರಕದ ಬಾಗಿಲು ಅನ್ನಿಸುತ್ತದೆ. ಅದರ ಸುತ್ತಲೂ ನೀರಿನ ಸುಳಿಗಳಿದ್ದು ಅವು ಸಾಕಷ್ಟು ದೊಡ್ಡದಾಗಿವೆ.

ಪ್ರತಿ ಸೆಕೆಂಡಿಗೆ 48000 ಕ್ಯೂಬಿಕ್ ಅಡಿ ನೀರು ನುಂಗುವ ಹೋಲ್

ಪ್ರತಿ ಸೆಕೆಂಡಿಗೆ 48000 ಕ್ಯೂಬಿಕ್ ಅಡಿ ನೀರು ನುಂಗುವ ಹೋಲ್

72 ಅಡಿ ಅಗಲ ಮತ್ತು 245 ಅಡಿ ಉದ್ದದ ಸುರಂಗವು ಡ್ರೈನ್ ಹೋಲ್ ಆಗಿರುತ್ತದೆ. ಸರೋವರದಲ್ಲಿ 15.5 ಅಡಿಗಿಂತ ನೀರಿನ ಮಟ್ಟ ಹೆಚ್ಚಾದಾಗ ಸೆಕೆಂಡಿಗೆ ಸುಮಾರು 48,000 ಕ್ಯೂಬಿಕ್ ಅಡಿಗಳಷ್ಟು ನೀರನ್ನು ಈ ರಂಧ್ರ ನುಂಗುತ್ತದೆ ಎಂದು ಅಣೆಕಟ್ಟಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2017 ರಲ್ಲಿ ಈ ಹೋಲ್ ತೆರೆದಾಗ ಜನರು ಇದನ್ನು ನೋಡಿ ಹೆದರುತ್ತಿದ್ದರು. ಬಳಿಕ ನೀರಿನ ಮಟ್ಟ ಕಡಿಮೆಯಾಗಿ ರಂಧ್ರಕ್ಕೆ ನೀರು ಹೋಗುವುದು ನಿಂತಿತ್ತು. ಇದಾದ ನಂತರ 2019ರಲ್ಲಿ ಮಳೆಯಾದ ನಂತರ ಕೆರೆಯ ನೀರಿನ ಮಟ್ಟ ಹೆಚ್ಚಾಗಿದ್ದು ಮತ್ತೆ ತೆರೆಯಿತು. ನಂತರ ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದ್ದರು.

ಸ್ನಾನ ಮತ್ತು ಈಜುವುದು ನಿಷೇಧ

ಸ್ನಾನ ಮತ್ತು ಈಜುವುದು ನಿಷೇಧ

2019 ರ ಮಾರ್ಚ್‌ನಲ್ಲಿ ಈ ರಂಧ್ರದೊಳಗೆ ಹೋಗಿ ಬಾತುಕೋಳಿಗಳು ಬಲಿಯಾದವು. ಜೊತೆಗೆ ಮಹಿಳೆಯೊಬ್ಬಳು ಇದರಲ್ಲಿ ಬಿದ್ದಳು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಆಕೆ ಸುರಕ್ಷಿತವಾಗಿ ಪಾರಾಗಿದ್ದಾಳೆ ಎಂದು ಅಣೆಕಟ್ಟೆ ಆಡಳಿತ ಮಂಡಳಿ ಹೇಳಿದ್ದರು. ಆದರೆ ಆಕೆಯ ಸಾವನ್ನಪ್ಪಿದ್ದಾಳೆ ಎನ್ನುವ ವಿಡಿಯೋ ವೈರಲ್ ಆಗಿತ್ತು. ಅಂದಹಾಗೆ, ಈ ರಂಧ್ರವು ಜನರ ಸುರಕ್ಷತೆಗೆ ಬೆದರಿಕೆಯಾಗಿಲ್ಲ ಏಕೆಂದರೆ ಅಲ್ಲಿ ಈಜುವುದು ಮತ್ತು ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ.

'ಪೋರ್ಟಲ್ ಟು ಹೆಲ್'ನಲ್ಲಿ ಬಿದ್ದ ಮಹಿಳೆ

'ಪೋರ್ಟಲ್ ಟು ಹೆಲ್'ನಲ್ಲಿ ಬಿದ್ದ ಮಹಿಳೆ

ಅಧಿಕಾರಿಗಳ ಪ್ರಕಾರ, ಇದು ನರಕದ ಬಾಗಿಲಲ್ಲ. 1950 ರ ದಶಕದಲ್ಲಿ ಎಂಜಿನಿಯರ್‌ಗಳು ಇದನ್ನು ನಿರ್ಮಿಸಿದರು. ಇದು ಅಣೆಕಟ್ಟಿನಿಂದ ನೀರಿನ ಹೊರಹರಿವನ್ನು ನಿಯಂತ್ರಿಸುತ್ತದೆ. ಇದು ಸಂಪೂರ್ಣವಾಗಿ ಸಿಮೆಂಟ್‌ನಿಂದ ಮಾಡಲ್ಪಟ್ಟಿದೆ. 1997 ರಲ್ಲಿ ಒಂದು ದೊಡ್ಡ ಅಪಘಾತ ಸಂಭವಿಸಿದೆ. ಅಲ್ಲಿ ಎಮಿಲಿ ಶ್ವಾಲೆಕ್ ಎಂಬ ಮಹಿಳೆ ಅದರಲ್ಲಿ ಬಿದ್ದಳು. ನಂತರ ಅವಳು ಸಾವನ್ನಪ್ಪಿದ್ದಾಳೆ ಎನ್ನಲಾಗುತ್ತದೆ.

English summary
'Portal to Hell' is a swallow of 48000 cubic feet of water per second. Learn more about this hell door.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X