ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದ್ದು ಕದ್ದು ನೋಡೋ ಕಳ್ಳ ನಾಯಿ: ವಿಡಿಯೋ ಹಂಚಿಕೊಂಡ ಆನಂದ್ ಮಹಿಂದ್ರ

|
Google Oneindia Kannada News

ಮನುಷ್ಯ ಸಂಗ ಜೀವಿ. ಆತನಿಗೆ ಮಾತು ಬೇಕು. ಹೀಗಾಗಿ ಬೆಳಿಗ್ಗೆ, ಸಂಜೆ ಜನರಿಗೆ ಊಟ ಆಯ್ತಾ? ಕೆಲಸಕ್ಕೆ ಹೊರಟರಾ? ಎಂಬಿತ್ಯಾದಿ ಮಾತುಗಳನ್ನಾಡಿ ನೆರೆಹೊರೆಯವರ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿರುತ್ತಾನೆ. ಹೀಗಾಗಿ ಅಕ್ಕಪಕ್ಕದಲ್ಲಿ ಏನೇ ಆದರು ಅದನ್ನು ನೋಡುವ ಕೇಳಿಸಿಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಇದಕ್ಕೆ ಯಾವ ತಡೆಗೋಡೆ ಅಡ್ಡ ಬಂದರೂ ಮನುಷ್ಯ ತಲೆ ಕೆಡಿಸಿಕೊಳ್ಳುವುದಿಲ್ಲ.

ಒಂದು ವೇಳೆ ಜಗಳ, ಗಲಾಟೆ ಆದರಂತೂ ಕಿಟಕಿಯಿಂದಲೂ, ಮಾಳಿಗೆ ಹತ್ತಿಯೋ ಅಥವಾ ಕಾಂಪೌಂಡ್ ಮೇಲಿಂದನೋ ನೋಡುವುದು ನಾವು ಇಂದಿಗೂ ನೋಡುತ್ತೇವೆ. ಮನುಷ್ಯನ ಇಂಥಹ ನಡುವಳಿಕೆಗಳನ್ನು ಪ್ರಾಣಿಗಳು ಅದೆಷ್ಟು ಗಮನಿಸುತ್ತವೆ ಅನ್ನೋದಕ್ಕೆ ಇಲ್ಲೊಂದು ವಿಡಿಯೋ ಸಾಕ್ಷಿಯಾಗಿದೆ.

1 ಲಕ್ಷ ಮೌಲ್ಯದ ನಾಯಿ ಮರಿ ಖರೀದಿಸಿದ ಉಡುಪಿಯ ಶ್ವಾನ ಪ್ರೇಮಿ1 ಲಕ್ಷ ಮೌಲ್ಯದ ನಾಯಿ ಮರಿ ಖರೀದಿಸಿದ ಉಡುಪಿಯ ಶ್ವಾನ ಪ್ರೇಮಿ

ಇಲ್ಲೊಂದು ನಾಯಿ ಮನುಷ್ಯ ಗೋಡೆಯಿಂದಾಚೆಗೆ ನೆರೆಹೊರೆಯವರ ಗಲಾಟೆ ವೀಕ್ಷಿಸುವಂತೆ ವೀಕ್ಷಿಸಿದೆ. ಮರವೇರಲು ಆಗದೆ ಗೋಡೆಯನ್ನು ಹತ್ತಲು ಆಗದ ನಾಯಿ ಎರಡರ ಸಹಾಯದಿಂದ ನೆರೆಯ ಘಟನೆಯನ್ನು ವೀಕ್ಷಿಸಿದೆ. ಅಷ್ಟಕ್ಕೂ ಆ ನಾಯಿ ಕುತೂಹಲಕಾರಿಯಾಗಿ ನೋಡುವಂತದ್ದು ಅಲ್ಲಿ ಏನಾಗಿತ್ತೋ ಯಾರಿಗೂ ತಿಳಿಯದು. ಆದರೂ ನಾಯಿ ಮಾತ್ರ ಗೋಡೆಗೆ ಎರಡು ಕಾಲು ಇಟ್ಟು ಮತ್ತು ಮರಕ್ಕೆ ಎರಡು ಕಾಲು ಇಟ್ಟು ಗೋಡೆಯನ್ನು ಹತ್ತುತ್ತಾ ಕಾಂಪೌಂಡ್ ಆಚೆಗೆ ವೀಕ್ಷಿಸಿದೆ. ಈ ಕುತೂಹಲಕಾರಿ ವಿಡಿಯೋವನ್ನು ಆನಂದ್ ಕಂಪನಿಯ ಚೇರ್ಮನ್ ಆನಂದ್ ಮಹಿಂದ್ರ ಹಂಚಿಕೊಂಡಿದ್ದಾರೆ.

Dog Video shared by Anand Mahindra

''T20WorldCup2022 ರ ಫೈನಲ್‌ನಲ್ಲಿ ಯಾರು ಇರುತ್ತಾರೆ ಎಂದು ಹೇಳಲು ನಾನು ಈ ನಾಯಿಯನ್ನು ಕೇಳಿದೆ. ಇದು 'ಗೋಡೆ'ಯನ್ನು ಹತ್ತಲು ಈ ಚತುರ ಮಾರ್ಗವನ್ನು ಕಂಡುಹಿಡಿಯಿತು. ಅದು ಏನು ನೋಡಿತು ಎಂದು ನೀವು ಹೇಳಬಹುದೆ?'' ಎಂದು ಬರೆದು ಆನಂದ್ ಮಹಿಂದ್ರ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋಕ್ಕೆ 29.1 ಲೈಕ್ಸ್ ಬಂದಿದೆ.

ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ಸಿಲುಕಿಕೊಂಡ ನಾಯಿ

ಬೆಂಗಳೂರಿನ ವೈಟ್‌ಫೀಲ್ಡ್ ಮೆಟ್ರೋ ಮಾರ್ಗದಲ್ಲಿ ನಾಯಿಯೊಂದು ಸಿಲುಕಿಕೊಂಡಿತ್ತು. ಈ ಶ್ವಾನವನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಬ್ರಿಗೇಡ್ ಮೆಟ್ರೊಪೊಲಿಸ್ ಬಳಿ ಗರುಡಾಚಾರ್ ಪಾಳ್ಯ ಮೆಟ್ರೋ ಹಳಿಯಲ್ಲಿ ಶ್ವಾನ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ BMRCL, BBMP ಮತ್ತು ಕೆಲವು ಸ್ವಯಂಸೇವಕರು ತಕ್ಷಣ ಕಾರ್ಯಾಚರಣೆಗೆ ಧುಮುಕಿದರು.

Dog Video shared by Anand Mahindra

ಎಚ್‌ಟಿ ವಿದ್ಯುತ್ ಸಂಪರ್ಕವನ್ನು ತಕ್ಷಣವೇ ಸ್ಥಗಿತಗೊಳಿಸಿ ಪಶುಸಂಗೋಪನಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಯಿತು. ಇಡೀ ತಂಡದ ಸತತ ಪ್ರಯತ್ನದ ನಂತರ ಅಂತಿಮವಾಗಿ ಶ್ವಾನವನ್ನು ರಕ್ಷಿಸಲಾಯಿತು ಮತ್ತು ಈಗ ಕಾರ್ಟ್‌ಮ್ಯಾನ್ ಆಸ್ಪತ್ರೆಯಲ್ಲಿ ಅದರ ಆರೈಕೆ ನಡೆಸಲಾಗುತ್ತಿದೆ.

English summary
''I asked this dog to tell me who will be in the final of T20WorldCup2022. It found this ingenious way to climb the 'wall'. Can you tell me what it saw?'' tweeted Anand Mahindra. ''I asked this dog to tell me who will be in the final of T20WorldCup2022. It found this ingenious way to climb the 'wall'. Can you tell me what it saw?'' tweeted Anand Mahindra.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X