ವಿಡಿಯೋ ನೋಡಿ; ಕುಂಟನೆಂದು ನಾಟಕವಾಡಿದ ನಾಯಿ
ಕುಂಟನಂತೆ ನಾಟಕವಾಡಿ ಭಿಕ್ಷೆ ಬೇಡುವುದು, ಹಣ ಕೇಳುವುದು, ಅನುಕಂಪ ಗಿಟ್ಟಿಸಿಕೊಳ್ಳುವುದು ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದುಡಿಯಲು ಆಗದವರು, ಅಂಗವಿಕಲರಿಗೆ, ವಯಸ್ಸಾದವರಿಗೆ ಜನ ಬಹುಬೇಗ ಹಣ ಅಥವಾ ಇನ್ನಿತರ ಸಹಾಯ ಮಾಡುತ್ತಾರೆಂಬ ಕಲ್ಪನೆಯಿಂದ ಕೆಲ ಜನ ಇಂಥಹ ಕೆಲಸಕ್ಕೆ ಕೈ ಹಾಕುತ್ತಾರೆ.
ಜನರ ಕಣ್ಣಿಗೆ ಮಣ್ಣೆರೆಚಿ ದುಡ್ಡು ಮಾಡುವ ಪ್ಲ್ಯಾನ್ ಇದು. ಇದನ್ನು ಮನುಷ್ಯರು ಮಾಡುತ್ತಾರೆ ಅನ್ನೋದು ನಮಗೆಲ್ಲರಿಗೂ ಗೊತ್ತಿರೋ ವಿಚಾರ. ಆದರೆ ಇದನ್ನು ಪ್ರಾಣಿ ಮಾಡಿದರೆ ಹೇಗಿರುತ್ತೆ. ನೀವು ಒಂದು ಬಾರಿ ಪ್ರಾಣಿ ಹೀಗೆ ಮಾಡಲು ಸಾಧ್ಯವಿಲ್ಲ ಬಿಡಿ ಅಂದು ಬಿಡಬಹುದೆನೋ. ಆದರೆ ಈ ವಿಡಿಯೋ ನೋಡಿದ ಬಳಿಕ ನಿಮ್ಮ ಆಲೋಚನೆ ಬದಲಾಗಬಹುದು.
ನಾಯಿಯೊಂದು ಕುಂಟನೆಂದು ನಾಟಕವಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ದೃಶ್ಯದಲ್ಲಿ ನಾಯಿಯೊಂದು ರಸ್ತೆ ಬದಿ ನಿಂತಿರುತ್ತದೆ. ಅದರ ಹಿಂದೆ ಒಂದು ಸೈಕಲ್ ಹೋಗುವುದು ವಿಡಿಯೋದಲ್ಲಿ ಕಾಣಬಹುದು. ಹೀಗೆ ಕುಂಟುತ್ತಾ ಬಂದ ನಾಯಿ ಬ್ರೆಡ್ ಎತ್ತಿಕೊಂಡು ಸಲೀಸಾಗಿ ನಾಲ್ಕು ಕಾಲಿನಲ್ಲಿ ಓಡಿಕೊಂಡು ಹೋಗುತ್ತದೆ. ಈ ವಿಡಿಯೋ ನೋಡುಗರನ್ನು ಬೆರಗುಗೊಳಿಸಿದೆ. ಈಗಿನ ಕಾಲದಲ್ಲಿ ಯಾರನ್ನೂ ನಂಬಲು ಅಸಾಧ್ಯವಾಗಿದೆ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾನ್ಯವಾಗಿ ಕೆಲವರು ಹಣ ಅಥವಾ ಯಾರಿಂದಲಾದರೂ ವಸ್ತು ಕದಿಯಲು ಕಣ್ಣಿಲ್ಲದವರಂತೆ, ಕಾಲಿಲ್ಲದವರಂತೆ ನಟಿಸುವುದು ನಾವು ನೋಡಿರುತ್ತೇವೆ. ಬಹುತೇಕರಿಗೆ ಹೀಗೆ ಮೋಸ ಹೋಗಿರುವ ಅನುಭವ ಕೂಡ ಆಗಿರಬಹುದು. ಹೀಗೆ ಮಾಡುವ ಜನರ ಉದ್ದೇಶ ಕಳ್ಳತನ ಅಥವಾ ಹಣ ಪಡೆಯುವುದಾಗಿರುತ್ತದೆ. ವಿಡಿಯೋದಲ್ಲಿ ನಾಯಿ ಕೂಡ ಕುಂಟನಂತೆ ನಾಟಕವಾಡಿ ಬ್ರೆಡ್ ತೆಗೆದುಕೊಂಡು ಹೋಗುತ್ತದೆ.
ಇದರರ್ಥ ನಾಯಿ ಬ್ರೆಡ್ ತೆಗೆದುಕೊಳ್ಳುವವರಿಗೇ ವಾಹನ ಸವಾರರು ಅದರ ಮೇಲೆ ವಾಹನ ಚಲಾಯಿಸದೇ ಇರಲಿ ಅನ್ನೋ ಕಾರಣ ಕೂಡ ಆಗಿರಬಹುದು. ನಾಯಿ ಅಂದ್ರೆ ಪ್ರಾಣ ಬಿಡುವ ಜನ ಅಧಿಕ ಜನ ನಮ್ಮ ನಡುವೆ ಇದ್ದಾರೆ. ಹೀಗಿರುವಾಗ ನಾಯಿ ಕುಂಟುತ್ತಾ ರಸ್ತೆಗೆ ಬಂದರೆ ಎಂಥವರೇ ಆಗಲಿ ವಾಹನ ನಿಲ್ಲಿಸೇ ನಿಲ್ಲಿಸುತ್ತಾರೆ. ಇದು ನಾಯಿ ಪ್ಲ್ಯಾನ್ ಆಗಿರಬಹುದು.
ನಾಯಿ ನಿಯತ್ತಿನ ಪ್ರಾಣಿ. ಅದನ್ನು ಒಂದು ಬಾರಿ ನಂಬಿದರೆ ತನ್ನ ಪ್ರಾಣವನ್ನು ಲೆಕ್ಕಿಸದೇ ಕಾಪಾಡುವಷ್ಟು ಪ್ರೀತಿ ಅದು ಬೆಳಸಿಕೊಂಡಿರುತ್ತದೆ. ಒಂದು ಹೊತ್ತಿನ ಊಟ ಹಾಕಿದರೆ ಸಾಕು ಮನುಷ್ಯ ಮೋಸ ಮಾಡಬಹುದು ನಾಯಿ ಮೋಸ ಮಾಡುವುದಿಲ್ಲ ಎನ್ನುವ ನಂಬಿಕೆ ನಮ್ಮಲ್ಲಿ ಗಾಡವಾಗಿದೆ. ಹೀಗಾಗಿ ನಾಯಿಯನ್ನು ಮನೆಯ ಸದಸ್ಯರಂತೆ ಪ್ರೀತಿಯಿಂದ ಸಾಕಲಾಗುತ್ತದೆ.

''ಈಗಿನ ಕಾಲದಲ್ಲಿ ಯಾರನ್ನು ನಂಬುವುದು? ಯಾರನ್ನು ಬಿಡುವುದು? ಅಂತ ಗೊತ್ತಾಗ್ತಾ ಇಲ್ಲ. ಮನುಷ್ಯರು ಬಿಡಿ... ಪ್ರಾಣಿಗಳು ಕೂಡಾ ಹೀಗೆ?!!!...'' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಎಲ್ಲಿಯದ್ದು ಅನ್ನೋ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಈ ವಿಡಿಯೋ ಕಂಡು ಜನ ಆಶ್ಚರ್ಯಗೊಂಡದ್ದಾರೆ.











Click it and Unblock the Notifications