ಒಣ ಶುಂಠಿ, ಜೇನುತುಪ್ಪ ಸೇರಿಸಿ ಸೇವಿಸಿದರೆ ಶೀತ, ಕೆಮ್ಮಿಗೆ ಮುಕ್ತಿ
ಈಗ ದೇಶದ ಹಲವು ಪ್ರದೇಶಗಳಲ್ಲಿ ವ್ಯಾಪಕವಾಗಿ ಮಳೆ ಆಗುತ್ತಿದೆ. ರಾಜ್ಯದ ಹಲವು ಕಡೆಗಳಲ್ಲಿ ಮಳೆ ತನ್ನ ನರ್ತನ ತೋರಿಸುತ್ತದೆ. ವಾಡಿಕೆಗೆ ಹೋಲಿಸಿದರೆ, ಈ ಬಾರಿ ಕಡಿಮೆ ಮಳೆ ಆಗುತ್ತಿದೆ. ಆದರೆ, ಖುಷಿಯ ವಿಚಾರ ಅಂದರೆ ರಾಜ್ಯದ ಹಲವು ಭಾಗಗಳಲ್ಲಿ ಮಳೆ ಆಗುತ್ತಿವೆ. ಜೀನ ನದಿಗಳು ತುಂಬಿವೆ. ಇನ್ನೇನು ಮಳೆ ತನ್ನ ಜೊತೆಗೆ ಹಲವು ಖಾಯಿಲೆಗಳನ್ನು ತಂದಿರುತ್ತದೆ.
ಮಳೆಗಾಯದಲ್ಲಿ ತಂಪಾದಾ ವಾತಾವರಣ ಇದ್ದು, ಇದು ಹಲವರ ದೇಹಕ್ಕೆ ಒಗ್ಗುವುದಿಲ್ಲ. ಹೀಗಾಗಿ ಜನ ಮುಂಜಾಗರುಕತಾ ಕ್ರಮವನ್ನು ಕೈಗೊಳ್ಳುತ್ತಾರೆ. ಈ ಋತುವಿನಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಹೀಗಾಗಿ ಜನರು ಈ ಋತುವಿನಲ್ಲಿ ಹೆಚ್ಚಾಗಿ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ.

ರೋಗ ನಿರೋಧಕಗಳನ್ನು ಹೆಚ್ಚಿಸುವ ಅದೆಷ್ಟೋ ಚೂರಣ್‌ಗಳು ಮಾರುಕಟ್ಟೆಯಲ್ಲಿವೆ. ನೀವು ನಿಮ್ಮ ಮನೆಯಲ್ಲಿಯೇ ರೋಗಗಳು ಬರದಂತೆ ತಡೆಯುವ ಶಕ್ತಿ ಹೊಂದಿರುತ್ತದೆ. ನಿಮ್ಮ ಅಡುಗೆ ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ರೋಗಗಳಿಂದ ಮುಕ್ತಿ ಪಡೆಯಬಹುದು. ಪ್ರತಿದಿನ ಜೇನುತುಪ್ಪ ಮತ್ತು ಒಣ ಶುಂಠಿಯನ್ನು ಸೇವಿಸಿ. ಒಣ ಶುಂಠಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದು ಸಹ ಅನೇಕ ಗಂಭೀರ ಸಮಸ್ಯೆಗಳನ್ನು ಪರಿಹರಿಸುತ್ತದೆ.
ಏನು ಮಾಡಬೇಕು?
1 ಚಮಚ ಜೇನುತುಪ್ಪವನ್ನು ತೆಗೆದುಕೊಂಡು ಅದರಲ್ಲಿ 2 ಚಿಟಿಕೆ ಒಣ ಶುಂಠಿ ಪುಡಿಯನ್ನು ಮಿಶ್ರಣ ಮಾಡಿ. ಕೊಂಚ ಬಿಸಿ ಮಾಡಿ ನೆಕ್ಕಬೇಕು.
ಒಣ ಶುಂಠಿ, ಜೇನುತುಪ್ಪ ಸೇವನೆಯಿಂದ ಏನೆಲ್ಲಾ ಲಾಭ
ಇದನ್ನು ಸೇವಿಸುವುದರಿಂದ ಶೀತ ಮತ್ತು ಕೆಮ್ಮು ದೂರವಾಗುತ್ತದೆ. ಒಣ ಶುಂಠಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನುವುದರಿಂದ ವೈರಲ್ ಸೋಂಕುಗಳು ಮತ್ತು ಶೀತ, ಕೆಮ್ಮು ದೂರವಾಗುತ್ತದೆ. ಒಣ ಶುಂಠಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ಪ್ರತಿದಿನ ಸೇವಿಸಬಹುದು. ಇದು ಕೆಮ್ಮನ್ನು ದೀರ್ಘಕಾಲ ದೂರ ಇಡುತ್ತದೆ.

ದೇಹದಲ್ಲಿನ ದೌರ್ಬಲ್ಯವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಯಾವುದೇ ವಯಸ್ಸಿನ ಜನರು ಇದನ್ನು ಸೇವಿಸಬಹುದು. ಒಣ ಶುಂಠಿ ಮತ್ತು ಜೇನುತುಪ್ಪವು ಮಳೆಗಾಲದ ದಿನಗಳಲ್ಲಿ ಮಕ್ಕಳಿಗೆ ಹೆಚ್ಚು ಪ್ರಯೋಜನಕಾರಿ.
ಶ್ವಾಸಕೋಶ ಸಮಸ್ಯೆಯಿಂದ ಮುಕ್ತಿ
ಇದನ್ನು ಪ್ರತಿ ದಿನ ಸೇವಿಸುವುದರಿಂದ ಶ್ವಾಸಕೋಶಕ್ಕೆ ಪ್ರಯೋಜನ. ಧೂಮಪಾನ ಮಾಡುವವರು ಪ್ರತಿದಿನ ಒಣ ಶುಂಠಿ ಮತ್ತು ಜೇನುತುಪ್ಪವನ್ನು ತಿನ್ನಬೇಕು. ಇದು ಶ್ವಾಸಕೋಶವನ್ನು ಬಲಪಡಿಸುತ್ತದೆ ಮತ್ತು ಉಸಿರಾಟದ ಸಮಸ್ಯೆಯನ್ನು ಸುಧಾರಿಸುತ್ತದೆ. ಅಸ್ತಮಾ ರೋಗಿಗಳಿಗೆ ಇದು ರಾಮ ಬಾಣವಿದ್ದಂತೆ.
ಇದನ್ನು ಪ್ರತಿ ದಿನ ತಿನ್ನುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಿಂದ ಮೂಳೆ ನೋವು ಮತ್ತು ಊತದ ಸಮಸ್ಯೆಯೂ ನಿವಾರಣೆಯಾಗುತ್ತದೆ. ನೀವು ಒಣ ಶುಂಠಿ, ಜೇನುತುಪ್ಪ ಮತ್ತು ಅರಿಶಿಣವನ್ನು ಬೆರೆಸಿ ಸೇವಿಸಿದಾಗ ಅದು ನಿಮ್ಮ ಮೂಳೆಯ ಆರೋಗ್ಯವನ್ನು ಬಲಪಡಿಸುತ್ತದೆ.
ತೂಕ ಇಳಿಸಲು ಸಹಾಯಕ
ತೂಕ ಇಳಿಸಲು ಸಹಾಯ- ತೂಕ ಇಳಿಸಿಕೊಳ್ಳಲು ಬಯಸುವವರು ಸ್ಥೂಲಕಾಯತೆಯನ್ನು ಕಡಿಮೆ ಮಾಡಲು ಇದು ಸಹಾಯಕ.

ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಜೇನುತುಪ್ಪ ಮತ್ತು ಒಣ ಶುಂಠಿಯನ್ನು ಸೇವಿಸಬಹುದು. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ದೇಹವು ಬೆಚ್ಚಗಿರುತ್ತದೆ.
ಇನ್ನು ಶುಂಠಿ ನಿಮ್ಮ ದೇಹಕ್ಕೆ ಒಗ್ಗಿಕೊಳ್ಳುತ್ತದಾ ಎಂಬುದನ್ನು ನಿಮ್ಮ ವೈದ್ಯರನ್ನು ಸಂಪರ್ಕಿಸಿ ಸೇವಿಸಿದರೆ ಒಳ್ಳೆಯದು.












Click it and Unblock the Notifications