ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ, ಅದಕ್ಕೆ ಅಂತ್ಯವೂ ಇಲ್ಲ...
ಮನುಷ್ಯ ಪ್ರಾಣಿಯೇ ಆದರೂ ಇತರೆ ಪ್ರಾಣಿಗಳಿಗೆ ಹೋಲಿಸಿದರೆ ಬುದ್ದಿವಂತ, ಆತ್ಮಸಂಯಮಿ. ಹಾಗಾಗಿ ಪ್ರಾಣಿಗಳಿಂದ ಪ್ರತ್ಯೇಕಿಸಿ ಮನುಷ್ಯನನ್ನು ನೋಡಬಹುದು. ಪ್ರಾಣಿಗಳು ತಮ್ಮನ್ನು ತಾವು ಸಂಯಮಿಸಿಕೊಳ್ಳಲಾರವು. ಆದರೆ ಮನುಷ್ಯ ಪ್ರಯತ್ನಪಟ್ಟರೆ ಅಥವಾ ಇಚ್ಛಿಸಿದರೆ ಖಂಡಿತಾ ಸಂಯಮಿಯಾಗಬಲ್ಲ ಎಂಬುದಂತೂ ಸತ್ಯ.
ಕೆಲವೊಮ್ಮೆ ಪ್ರಾಣಿಗಳಲ್ಲಿರುವ ಕೆಲವೊಂದು ಗುಣ ಮನುಷ್ಯನಲ್ಲಿಯೂ ಕಾಣಬಹುದು. ಕಾಮ, ವಿಕಾರತೆ, ದ್ವೇಷ, ಲೋಭ, ಲಾಲಸೆ, ಮೃಗೀಯ ಹಸಿವು ಎಲ್ಲವನ್ನೂ ನಾವು ಬೆನ್ನಿಗೆಳೆದುಕೊಂಡೇ ಬಂದಿದ್ದೇವೆ. ಒಂದು ಕ್ಷಣ ನಮ್ಮನ್ನು ನಾವೇ ಸೂಕ್ಷ್ಮವಾಗಿ ಗಮನಿಸಿದರೆ ನಮ್ಮ ಬದುಕಿನ ವಿಕಾರತೆಯನ್ನು ಕಾಣಬಹುದು.
ಅಷ್ಟೇ ಅಲ್ಲ ಆಧ್ಯಾತ್ಮಿಕತೆಯ ಹಾದಿಯಲ್ಲಿ ನಡೆದರೆ ಅದನ್ನು ಸರಿಪಡಿಸಿಕೊಳ್ಳಲೂಬಹುದು. ಹಾಗೆ ನೋಡಿದರೆ ನಾವ್ಯಾರು ನಮ್ಮ ಬಯಕೆಗಳನ್ನು ನಿಯಂತ್ರಿಸುವತ್ತ ಯೋಚಿಸುವುದೇ ಇಲ್ಲ. ಬದಲಿಗೆ ದಿನೇ ದಿನೇ ಅಥವಾ ಕ್ಷಣ ಕ್ಷಣಕ್ಕೂ ಬಯಕೆಯ ಕುದುರೆಯೇರಿ ಸಾಗುತ್ತಲೇ ಇರುತ್ತೇವೆ.
ಬಯಕೆ ಎಂಬುದು ಅಂತ್ಯವಿಲ್ಲದ್ದು, ಅದರ ದಾಸರಾಗಿ ಮುನ್ನಡೆದರೆ ಪರಿಣಾಮದ ತೀವ್ರತೆ ಭಯಾನಕ. ಹಾಗೆಂದು ಬಯಕೆಯನ್ನು ಪೂರ್ಣವಾಗಿ ತ್ಯಜಿಸುವಂತೆಯೂ ಇಲ್ಲ. ಬಯಕೆಯಿಲ್ಲದ ಮನುಷ್ಯ ಮನುಷ್ಯನೇ ಅಲ್ಲ... ಆದರೆ ಬಯಕೆಯ ಹಾದಿ ಸನ್ನಡತೆಯದ್ದಾಗಿರಬೇಕು.

ಇಂದ್ರಿಯಗಳನ್ನು ಹತೋಟಿಗಿಳಿಸಬೇಕು
ಬಹಳಷ್ಟು ಸಾರಿ ನಮಗೆ ತಿಳಿದಿರುತ್ತದೆ. ಈ ಬಯಕೆ ಹೆಬ್ಬಯಕೆ ಇದು ನಮ್ಮ ಕೈಗೆಟುಕುವುದಿಲ್ಲವೆಂದು. ಆದರೂ ಆ ಬಯಕೆಯ ಈಡೇರಿಕೆಯ ಹಠ ನಮ್ಮನ್ನು ಮತ್ತೆ, ಮತ್ತೆ ಅದರತ್ತ ಸೆಳೆಯುತ್ತಲೇ ಇರುತ್ತದೆ.
ಲಾಟರಿ ಟಿಕೇಟು ಕೊಂಡು ಒಮ್ಮೆಲೇ ಶ್ರೀಮಂತನಾಗಬೇಕೆನ್ನುವ ವ್ಯಕ್ತಿಯ ಬಯಕೆಗೂ ಕಷ್ಟಪಟ್ಟು ದುಡಿದು ಸಂಪಾದಿಸಬೇಕೆನ್ನುವ ವ್ಯಕ್ತಿಯ ಬಯಕೆಗೂ ಎಷ್ಟೊಂದು ವ್ಯತ್ಯಾಸವಿದೆಯಲ್ಲವೆ?. ಒಬ್ಬ ವ್ಯಕ್ತಿ ಬಯಕೆಯ ಹಾದಿಯಲ್ಲಿ ನಡೆಯುವಾಗ ಅದರ ಒಳಿತು ಕೆಡಕುಗಳ ಬಗ್ಗೆಯೂ ಯೋಚಿಸುವುದು ಅತ್ಯಗತ್ಯ. ಬಯಕೆಯ ಹಾದಿ ಸುಗಮವಾದುದಲ್ಲ.
ಅಲ್ಲಿ, ಕಷ್ಟ, ನಷ್ಟ, ಅವಮಾನ, ನಿರಾಶೆ ಹೀಗೆ ಎಲ್ಲವೂ ಇದೆ. ಬಯಕೆಯನ್ನು ನಿಯಂತ್ರಿಸಬೇಕೆಂದರೆ ಇಂದ್ರಿಯಗಳನ್ನು ಹತೋಟಿಗಿಳಿಸಬೇಕು ಹಾಗಿದ್ದರೆ ಮಾತ್ರ ಸಾಧ್ಯ.

ಭಗವದ್ಗೀತೆಯಲ್ಲಿ ಹೀಗೆ ಹೇಳಲಾಗಿದೆ
"ಇಂದ್ರಿಯಗಳಿಗೆ ವಿಷಯಗಳಾದ ರೂಪಾದಿಗಳಲ್ಲಿ ಇಂದ್ರಿಯಗಳು ಅನುಕೂಲವಾದಾಗ ರಾಗವೂ, ಪ್ರತಿಕೂಲವಾದಾಗ ದ್ವೇಷವೂ ಅವಶ್ಯವಾಗಿ ಸಂಭವಿಸುತ್ತದೆ. ಪುರುಷರನ್ನು ದುಷ್ಟ ಕಾರ್ಯಗಳಲ್ಲಿ ಪ್ರವೃತ್ತರನ್ನಾಗಿ ಮಾಡುವ ಕಾಮವೇ (ಬಯಕೆ) ಕ್ರೋಧವಾಗಿದೆ. ಆದ್ದರಿಂದ ಈ ಕಾಮವು ರಜೋಗುಣಗಳಿಂದ ಹುಟ್ಟಿದೆ. ಅಧಿಕವಾದ ವಿಷಯಗಳುಳ್ಳ ಹಾಗೂ ಮಹಾಪಾಪಕ್ಕೆ ಕಾರಣವಾದ ಈ ಕಾಮ (ಬಯಕೆ)ವನ್ನು ವೈರಿಯಾಗಿ ತಿಳಿಯಿರಿ".

ಶಾಮೀಲಾಗಿ ಬಿಡುತ್ತವೆ
ನಾವು ಬಯಕೆಯ ಕುದುರೆಯೇರಿ ಸಾಗುವಾಗ ನಮ್ಮ ಇಂದ್ರಿಯ ಮತ್ತು ಮನಸ್ಸು ಅದರ ಸೆಳೆತಕ್ಕೆ ಸಿಕ್ಕಿ ಅದರೊಂದಿಗೆ ಶಾಮೀಲಾಗಿ ಬಿಡುತ್ತವೆ. ಹೀಗಿರುವಾಗ ಒಳಿತು ಕೆಡಕುಗಳ ಬಗೆಗೆ ಯೋಚಿಸುವ ಜ್ಞಾನವಾದರೂ ಎಲ್ಲಿರುತ್ತದೆ?. ಬಯಕೆಯೆಂಬುವುದು ಚಕ್ಷುರಾದಿ ಇಂದ್ರಿಯಗಳಿಂದ ಜ್ಞಾನವನ್ನು ಆಗಲೇ ಮುಚ್ಚಿ ಹಾಕಿ ಜೀವವನ್ನು ಮೋಹದಲ್ಲಿ ಬಂಧಿಸಿಟ್ಟಿರುತ್ತದೆ.

ಬಯಕೆಗೊಂದು ಪರಿದಿ ಎಳೆಯಿರಿ
ಆದುದರಿಂದ ಇಂದ್ರಿಯಗಳನ್ನು ಸ್ವಾಧೀನದಲ್ಲಿಟ್ಟುಕೊಂಡು ಸಾಮಾನ್ಯವಲ್ಲದ ವಿಶೇಷ ಜ್ಞಾನದಿಂದ ಬಯಕೆಯನ್ನು ನಾಶಪಡಿಸಬೇಕು. ಬಯಕೆಗೊಂದು ಪರಿದಿ ಎಳೆದು ಅದರೊಳಗೆ ಸುಖ ಕಾಣಬೇಕು. ಹಾಗಿದ್ದರೆ ಮಾತ್ರ ಸ್ವಚ್ಛಂದ, ಅಷ್ಟೇ ಅಲ್ಲ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications