ಕೋರ್ಟ್ ಶೂಟೌಟ್: ಮೋಸ್ಟ್ ವಾಂಟೆಡ್ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿ ಯಾರು?
ನವದೆಹಲಿ, ಸೆಪ್ಟೆಂಬರ್ 24: ದೆಹಲಿಯ ರೋಹಿಣಿ ಕೋರ್ಟ್ ಆವರಣದಲ್ಲೇ ನಡೆದ ಗುಂಡಿನ ದಾಳಿಯಲ್ಲಿ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿ ಮೃತನಾಗಿದ್ದಾನೆ. ಜಿತೇಂದರ್ ಗೋಗಿ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರೋಹಿಣಿ ಡಿಸಿಪಿ ಪ್ರಣವ್ ತಾಯಲ್, "ವಕೀಲರ ಸಮವಸ್ತ್ರದಲ್ಲಿ ಇಬ್ಬರು ದಾಳಿಕೋರರು ನ್ಯಾಯಾಲಯದಲ್ಲಿ ಗೋಗಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬಳಿಕ ಪೊಲೀಸರು ನಡೆಸಿದ ಪ್ರತಿ ದಾಳಿಯಲ್ಲಿ ದಾಳಿಕೋರರು ಸಾವನ್ನಪ್ಪಿದ್ದಾರೆ," ಎಂದು ತಿಳಿಸಿದ್ದಾರೆ.
ಹಾಗಾದರೆ ಈ ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿಯ ಯಾರು?. ಗ್ಯಾಂಗ್‌ಸ್ಟರ್ ಜಿತೇಂದರ್ ಗೋಗಿ ಈ ವರ್ಷದ ಎಪ್ರಿಲ್ ತಿಂಗಳಿನಲ್ಲಿ ಮಹಾರಾಷ್ಟ್ರ ನಿಯಂತ್ರಣ ಸಂಘಟಿತ ಅಪರಾಧ ಕಾಯ್ದೆ (ಎಮ್‌ಸಿಒಸಿಎ) ಅಡಿಯಲ್ಲಿ ದೆಹಲಿ ಪೊಲೀಸ್ ವಿಶೇಷ ಪಡೆ ಬಂಧನ ಮಾಡಿದೆ. ಆದರೆ ಈತ ಜೈಲಿನಲ್ಲೇ ಇದ್ದು ತನ್ನ ಕಾರ್ಯ ನಿರ್ವಹಣೆ ಮಾಡಿಕೊಳ್ಳುತ್ತಿದ್ದನು ಎಂದು ಹೇಳಲಾಗಿದೆ.
ಈತನ ವಿರುದ್ದ ಸುಮಾರು 19 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಎಮ್‌ಸಿಒಸಿಎ ಅಡಿಯಲ್ಲಿ ಕೊಲೆ ಹಾಗೂ ಕೊಲೆ ಯತ್ನ ಆರೋಪದಲ್ಲಿ ಈ ಜಿತೇಂದರ್ ಗೋಗಿ ವಿರುದ್ದ 19 ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಇದಲ್ಲದೆ ಸುಲಿಗೆಗಳು, ದರೋಡೆಗಳು, ಕಳ್ಳತನಗಳು ಮತ್ತು ದರೋಡೆ ಆರೋಪದಲ್ಲಿ ಇನ್ನು ಹಲವಾರು ಪ್ರಕರಣಗಳು ದಾಖಲಾಗಿದೆ. ಶಾಲೆಯನ್ನು ತೊರೆದ ಜಿತೇಂದರ್ ಗೋಗಿ ಬಳಿಕ ಜಾಗದ ಡೀಲಿಂಗ್ ವ್ಯವಹಾರಗಳನ್ನು ಮಾಡಲು ಆರಂಭಿಸಿದ್ದಾನೆ. ಈತನ ತಂದೆ 2010 ರಲ್ಲಿ ಸಾವನ್ನಪ್ಪಿದ್ದು ಆ ಬಳಿಕ ಈತ ಅಪರಾಧ ಕೃತ್ಯದಲ್ಲಿ ತೊಡಗಿಕೊಂಡಿದ್ದಾನೆ.

ಇನ್ನು ಮಹಾರಾಷ್ಟ್ರ ನಿಯಂತ್ರಣ ಸಂಘಟಿತ ಅಪರಾಧ ಕಾಯ್ದೆಯು (ಎಮ್‌ಸಿಒಸಿಎ), "ಈತ ತನ್ನ ಎಲ್ಲಾ ಸಂಪಾದನೆಯನ್ನು ಶಸ್ತ್ರಾಸ್ತ್ರ ಹಾಗೂ ವಾಹನಗಳನ್ನು ಖರೀದಿ ಮಾಡಲು ಬಳಸಿಕೊಂಡಿದ್ದಾರೆ. ಆ ಶಸ್ತ್ರಾಸ್ತ್ರ ಹಾಗೂ ವಾಹನಗಳನ್ನು ಇನ್ನಷ್ಟು ಅಪರಾಧ ಕೃತ್ಯವನ್ನು ಮಾಡಲು ಬಳಸಿಕೊಳ್ಳುತ್ತಿದ್ದ," ಎಂದು ತಿಳಿಸಿದ್ದಾರೆ.
ಜಿತೇಂದರ್ ಗೋಗಿ ಈ ಹಿಂದೆ ಹಲವಾರು ಬಾರಿ ಬೇರೆ ಬೇರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. 2016 ರಲ್ಲಿ ಈತನನ್ನು ಪಾಣಿಪತ್ ಪೊಲೀಸರು ಬಂಧನ ಮಾಡಿದ್ದರು. ಆದರೆ ಈತನನ್ನು ಠಾಣೆಯಿಂದ ಕೋರ್ಟ್‌ಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಈತ ತಪ್ಪಿಸಿಕೊಂಡು ಹೋಗಿದ್ದಾನೆ. ಬಳಿಕ 2017 ರ ಫೆಬ್ರವರಿ ತಿಂಗಳಿನಲ್ಲಿ ದೇವೇಂದರ್ ಪ್ರಧಾನ್ ಎಂಬಾತನ ಕೊಲೆ ಮಾಡಿದ್ದನು. ದೇವೇಂದರ್ ಪ್ರಧಾನ್‌ನ ಪುತ್ರ ತನ್ನ ಸಹಚರರನ್ನು ಹತ್ಯೆ ಮಾಡಿದ್ದಾನೆ ಎಂಬ ಕಾರಣಕ್ಕೆ ಜಿತೇಂದರ್ ಗೋಗಿ, ದೇವೇಂದರ್ ಪ್ರಧಾನ್ ಹತ್ಯೆಯನ್ನು ಮಾಡಿದ್ದಾನೆ.
ಕಳೆದ ಅಕ್ಟೋಬರ್‌ನಲ್ಲಿ ಜಿತೇಂದರ್ ಗೋಗಿ ಪ್ರಖ್ಯಾತ ಹರಿಯಾಣ ಜಾನಪದ ಗಾಯಕಿ ಹರ್ಷಿತಾ ದಹಿಯಾರ ಹತ್ಯೆ ಮಾಡಿದ್ದಾನೆ. ಈತನ ಸಹಚರ ದಿನೇಶ್ ಕರಾಳ ಎಂಬಾತ ಮಾಡಿದ ಹತ್ಯೆಯಲ್ಲಿ ಗಾಯಕಿ ಹರ್ಷಿತಾ ದಹಿಯಾ ಸಾಕ್ಷಿಯಾಗಿದ್ದಳು ಎಂಬ ಕಾರಣಕ್ಕೆ ಈತ ಆಕೆಯ ಹತ್ಯೆ ಮಾಡಿದ್ದಾನೆ. ಕಳೆದ ವರ್ಷ ಆತ ಆರೋಪಿ ಎಂದು ತಿಳಿದು ಬಂದಿದೆ. ನವೆಂಬರ್‌ನಲ್ಲಿ ಶಾಲೆಯ ಆವರಣದ ಹೊರಗೆ ಶಿಕ್ಷಕ ದೀಪಕ್ ಎಂಬಾತನ ಹತ್ಯೆಯಾಗಿದೆ. ಈ ವರ್ಷದ ಜನವರಿಯಲ್ಲಿ ಪ್ರಶಾಂತ್ ವಿಹಾರದಲ್ಲಿ ರವಿ ಭಾರದ್ವಾಜ್ ಎಂಬಾತನ ಹತ್ಯೆಯಾಗಿದೆ. ಇದು ಜಿತೇಂದರ್ ಗೋಗಿಯ ಗ್ಯಾಂಗ್ ಮಾಡಿದೆ.
ಜಿತೇಂದರ್ ಗೋಗಿಯ ಬಲಗೈ ಬಂಟ, ಕುಲ್‌ದೀಪ್ ಮನ್ ಅಲಿಯಾಸ್ ಫಜ್ಜಾನನ್ನು ಆಸ್ಪತ್ರೆಯಿಂದ ತಪ್ಪಿಸಿಕೊಂಡ ಬಳಿಕ ಗುಂಡಿನ ದಾಳಿಯಲ್ಲಿ ಹತನಾಗಿದ್ದಾನೆ. ಆ ಬಳಿಕ ಈ ಜಿತೇಂದರ್ ಗೋಗಿ ದುಬೈ ಮೂಲದ ಗ್ಯಾಂಗ್ ಸ್ಟಾರ್ ಸಂದೀಪ್ ಅಲಿಯಾಸ್ ಕಲಾ ಜಾತೇದಿ ಎಂಬಾತನೊಂದಿಗೆ ಮೈತ್ರಿಯನ್ನು ಮಾಡಿಕೊಂಡಿದ್ದಾನೆ. ದುಬೈ ಮೂಲದ ಉದ್ಯಮಿಯೊಬ್ಬರಿಂದ 5 ಕೋಟಿ ರೂ.ಗಳ ಸುಲಿಗೆ ಬಿಡ್‌ನಲ್ಲಿ ಆತ ಕಾಣಿಸಿಕೊಂಡಿದ್ದಾನೆ.
(ಒನ್ ಇಂಡಿಯಾ ಸುದ್ದಿ)












Click it and Unblock the Notifications