Cycling vs Walking: ವಾಕಿಂಗ್, ಸೈಕ್ಲಿಂಗ್ ಇವೆರಡರಲ್ಲಿ ಯಾವುದು ಬೆಸ್ಟ್: ತೂಕ ಕಡಿಮೆ ಮಾಡಲು ಯಾವುದು ಹೆಚ್ಚು ಸಹಾಯಕ?
ಜನರು ಈಗ ತಮ್ಮನ್ನು ತಾವು ಫಿಟ್ ಆಗಿ ಇಟ್ಟುಕೊಳ್ಳಲು ನಾನಾ ರೀತಿಯ ಕಸರತ್ತು ಮಾಡುತ್ತಾರೆ. ಅದರಲ್ಲಿ ಹಲವು ಪ್ರಯೋಜನಗಳಿವೆ. ಕೆಲವರು ವಾಕಿಂಗ್, ಜಾಗಿಂಗ್, ಜಿಮ್, ಯೋಗಾ, ಸೈಕ್ಲಿಂಗ್ ಹೀಗೆ ನಾನಾ ರೀತಿಯ ವ್ಯಾಯಾಮ ಮಾಡುತ್ತಾರೆ. ಇದರಿಂದ ಮನುಷ್ಯನ ಆರೋಗ್ಯ ಸುಧಾರಣೆ ಆಗುತ್ತದೆ. ಜನರು ಹೆಚ್ಚಾಗಿ ವಾಕಿಂಗ್ ಹಾಗೂ ಸೈಕ್ಲಿಂಗ್ ಮಾಡುತ್ತಾರೆ.
ವಾಕಿಂಗ್‌ನ್ನು ಹೆಚ್ಚಾಗಿ ನಿಮಗೆ ಇಷ್ಟವಾದ ಸ್ಥಳದಲ್ಲಿ ನಿಮಗೆ ಲಭ್ಯ ಇರುವ ಸಮಯದಲ್ಲಿ ಮಾಡಬಹುದು. ಇದರಿಂದ ದೇಹವೂ ಉಲ್ಲಾಸ ಭರಿತವಾಗಿರುತ್ತದೆ. ಅಲ್ಲದೆ ಮುಂಬರುವ ದೊಡ್ಡ ಖಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಬಹುದು. ಅಲ್ಲದೆ ಕೊಬ್ಬು ಕರಗಿಸಲು ಸಹ ವಾಕಿಂಗ್ ಬೆಸ್ಟ್. ಆದರೆ ಇದನ್ನು ಮಾಡುವ ಕ್ರಮದಲ್ಲಿ ಮಾಡಿದರೆ ಹಲವು ಅನಕೂಲ ಎಂದು ತಿಳಿದು ಬಂದಿದೆ.

ವಾಕಿಂಗ್ ಮಾಡುವುದರಿಂದ ಲಾಭಗಳೇನು?
ವಾಕಿಂಗ್ ಮಾಡುವುದರಿಂದ ಮೊಣಕಾಲಿನ ಸಮಸ್ಯೆಗಳಿದ್ದಲ್ಲಿ ನಿವಾರಣೆ ಆಗುತ್ತದೆ. ವಾಕ್ ಒಂದು ಪ್ರಮಾಣದಲ್ಲಿ ಮಾಡುವುದರಿಂದ ಕೀಲುಗಳ ಸಮಸ್ಯೆಯಿಂದಲೂ ಪರಿಹಾರ ಪಡೆದುಕೊಳ್ಳಬಹುದು. ಪ್ರತಿ ದಿನವೂ ತಪ್ಪದೇ ನಡೆಯುವುದರಿಂದ ಮೊಣಕಾಲುಗಳ ಸುತ್ತಲಿನ ಸ್ನಾಯುಗಳನ್ನು ಬಲಪಡಿಸುತ್ತವೆ. ದೇಹದಲ್ಲಿನ ಕೊಬ್ಬಿನ ಅಂಶವನ್ನು ಸಹ ವಾಕಿಂಗ್ ಕ್ರಮೇಣ ಮಾಡುತ್ತದೆ.
ವಾಕ್ ಮಾಡುವಾಗ ದಿನವೂ ನೀವು ಕ್ರಮಿಸುವ ದೂರದ ಬಗ್ಗೆ ಗಮನ ಇರಲಿ. ಇದರಿಂದ ದಿನ ಕಳೆದಂತೆ ವಾಕಿಂಗ್ ಮಾಡುವ ದೂರವನ್ನು ಹೆಚ್ಚಿಸಿಕೊಳ್ಳಬಹುದು. ತಜ್ಞರು ಹೇಳುವಂತೆ ವಾಕ್ ಮಾಡಿದಾಗ ನಿಮ್ಮ ಹಣೆ ಅಥವಾ ಬೆನ್ನಿನ ಹಿಂಬಾಗದಲ್ಲಿ ಬೆವರು ಬಂದಿದ್ದರೆ ಅದರ ಲಾಭ ನಿಮಗೆ ಆಗಿದೆ ಎಂದು ಅರ್ಥ ಎನ್ನುತ್ತಾರೆ.

ಸೈಕ್ಲಿಂಗ್ ಎಷ್ಟು ಪ್ರಯೋಜನಕಾರಿ?
ಸೈಕ್ಲಿಂಗ್ ಸಹ ಒಂದು ಒಳ್ಳೆಯ ವ್ಯಾಯಾಮ. ಇದನ್ನು ಮಾಡುವುದರಿಂದ ದೇಹಕ್ಕೆಲ್ಲಾ ವ್ಯಾಯಮ ಆಗುತ್ತದೆ. ಇದನ್ನು ಮಾಡುವುದರಿಂದ ನಿಮ್ಮ ಪಾದಗಳು ಸೈಕಲ್ ಪೆಡಲ್ ಮೇಲೆ ಇರುತ್ತದೆ. ಇದರಿಂದ ಮೊಣಕಾಲಿನ ಕೀಲುಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಮೊಣಕಾಲಿನ ಆರೋಗ್ಯವನ್ನು ಸುಧಾರಿಸಲು ಸೈಕ್ಲಿಂಗ್ ಮಾಡುವುದು ಬೆಸ್ಟ್. ಇನ್ನು ಸೈಕ್ಲಿಂಗ್ ಮಾಡುವುದರಿಂದ ದೇಹದಲ್ಲಿನ ಬೊಜ್ಜನ್ನು ಸಹ ಕರಗಿಸಬಹುದು.
ವಾಕಿಂಗ್, ಸೈಕ್ಲಿಂಗ್ ಬೆಸ್ಟ್ ಯಾವುದು?
ಮೊಣಕಾಲುಗಳನ್ನು ಬಲಪಡಿಸಲು ಸೈಕ್ಲಿಂಗ್ ಅಥವಾ ವಾಕಿಂಗ್ ಎರಡೂ ಉತ್ತಮ. ನಿಮ್ಮ ಮೊಣಕಾಲುಗಳಲ್ಲಿ ತೀವ್ರವಾದ ನೋವು ಇದ್ದರೆ, ವಾಕಿಂಗ್ ಉತ್ತಮ ಆಯ್ಕೆ. ಆದಾಗ್ಯೂ, ನಿಮ್ಮ ಮೊಣಕಾಲುಗಳು ಆರೋಗ್ಯಕರವಾಗಿದ್ದರೆ, ನೀವು ಸೈಕಲ್ ಸವಾರಿ ಮಾಡಬಹುದು. ಮೊಣಕಾಲುಗಳನ್ನು ಬಲಪಡಿಸಲು ನಿಯಮಿತವಾಗಿ ವ್ಯಾಯಾಮ ಮಾಡುವುದು ಮುಖ್ಯ.
ಒಂದು ಗಂಟೆಯ ವೇಗದ ನಡಿಗೆಯು ಪ್ರತಿ ಗಂಟೆಗೆ 300 ರಿಂದ 350 ಕ್ಯಾಲೊರಿಗಳನ್ನು ಸುಡುತ್ತದೆ. ಸೈಕ್ಲಿಂಗ್‌ಗೆ ಹೋಲಿಸಿದರೆ ಇದು ಕಡಿಮೆ. ತೂಕ ಇಳಿಸುವ ಉದ್ದೇಶಕ್ಕಾಗಿ ಸೈಕ್ಲಿಂಗ್ ಉತ್ತಮ ಆಯ್ಕೆ. ಆದರೆ ವಾಕಿಂಗ್ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ.
ಎಲ್ಲಾ ವಯೋಮಾನದವರೂ ವಾಕಿಂಗ್ ಮಾಡಬಹುದು, ಆದರೆ ವಯಸ್ಸಾದವರು ಸೈಕಲ್ ಓಡಿಸುವಂತಿಲ್ಲ ಏಕೆಂದರೆ ಇದು ಮೊಣಕಾಲುಗಳ ಮೇಲೆ ಹೆಚ್ಚು ಒತ್ತಡವನ್ನು ಬೀರುತ್ತದೆ. ನೀವು ಯಾವುದೇ ಸಮಯದಲ್ಲಿ ನಡೆಯಬಹುದು ಮತ್ತು ಅದಕ್ಕೆ ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಬೈಸಿಕಲ್ ಓಡಿಸಲು, ಮೊದಲು ನಿಮಗೆ ಬೈಸಿಕಲ್, ಹೆಲ್ಮೆಟ್ ಬೇಕು ಮತ್ತು ನಂತರ ರಸ್ತೆ ಅಥವಾ ಸೈಕ್ಲಿಂಗ್ ಟ್ರ್ಯಾಕ್ ಇರಬೇಕು. ಸಣ್ಣ ಜಾಗದಲ್ಲಿಯೂ ವಾಕಿಂಗ್ ಮಾಡಬಹುದು.
ನಿಮ್ಮ ಮೊಣಕಾಲುಗಳಲ್ಲಿ ನೋವು ಇದ್ದರೆ, ನಿಮ್ಮ ದೇಹಕ್ಕೆ ಯಾವುದು ಹೊಂದಿಕೊಳ್ಳುತ್ತದೆ ಎಂದು ತಿಳಿಯಲು ನೀವು ನಿಮ್ಮ ವೈದ್ಯರು ಸಂಪರ್ಕಿಸಿ ಸಲಹೆ ಪಡೆಯುವುದು ಒಳ್ಳೆಯದು.
-
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Cricket: ವಿಶ್ವದಾಖಲೆ ಬರೆದ ಕಿವೀಸ್ ವನಿತೆಯರು: ಭಾರತದ ದಾಖಲೆ ಅಳಿಸಿ ಹಾಕಿದ ನ್ಯೂಜಿಲೆಂಡ್ ಅಬ್ಬರ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
ಬೇಸಿಗೆ ರಜೆ -ವಾರಾಂತ್ಯದ ರಶ್: ಹುಬ್ಬಳ್ಳಿ-ರಾಮೇಶ್ವರಂ ಮತ್ತು ಬೆಂಗಳೂರು-ಕಣ್ಣೂರು ವಿಶೇಷ ರೈಲು ಸಂಚಾರ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ












Click it and Unblock the Notifications