Curry Leaves Juice Benefits: ಅಬ್ಬಬ್ಬಾ.. ಕರಿಬೇವಿನ ಎಲೆಗಳ ಜ್ಯೂಸ್ ಸೇವನೆಯಿಂದ ಎಷ್ಟೊಂದು ಉಪಯೋಗ ಗೊತ್ತಾ?
ಆರೋಗ್ಯದ ನಿಧಿ ಎಂದರೇ ಅದು ಕರಿಬೇವಿನ ಸೊಪ್ಪು. ಭಾರತೀಯ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಬಳಸಲಾಗುವ ಸೊಪ್ಪು ಎಂದರೆ ಅದು ಕರಿಬೇವು. ಕರಿಬೇವಿನ ಸೊಪ್ಪು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ ಮಾತ್ರವಲ್ಲ, ಇದು ಆರೋಗ್ಯಕ್ಕೂ ಕೂಡ ಅಮೃತವಿದ್ದಂತೆ. ಕರಿಬೇವಿನ ಬಳಕೆಯಿಂದ ಹಲವಾರು ಪ್ರಯೋಜನಗಳಿವೆ. ಕರಿಬೇವು ಕೇವಲ ಸುವಾಸನೆಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕರಿಬೇವಿನ ಸೇವನೆ ಹಾಗೂ ಕರಿಬೇವಿನ ರಸವನ್ನ ಕುಡಿಯುವುದರಿಂದ ಆಗುವ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ.
ದಿನನಿತ್ಯದ ಅಡಿಗೆಗಳಿಗೆ ಬಳಸುವ ಈ ಕರಿಬೇವಿನ ಎಲೆಗಳಲ್ಲಿ ರಂಜಕ, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ವಿಟಮಿನ್‌ಗಳು ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಕಂಡು ಬರುತ್ತವೆ. ಇದು ದೇಹಕ್ಕೆ ಅನೇಕ ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.

ಕರಿಬೇವು ಕೇವಲ ಸುವಾಸನೆಗೆ ಮಾತ್ರವಲ್ಲ. ಕರಿಬೇವಿನ ರಸ ಹಲವು ಪ್ರಯೋಜನಗಳನ್ನ ಹೊಂದಿದ್ದು, ಕರಿಬೇವಿನ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ತೂಕ ಇಳಿಕೆಗೆ ಮಾತ್ರವಲ್ಲದೆ. ಅಗತ್ಯ ವಿಟಮಿನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್ ಮತ್ತು ಬಾಷ್ಪಶೀಲ ಎಣ್ಣೆಗಳಿಂದ ತುಂಬಿರುವ ಕರಿಬೇವಿನ ಎಲೆಗಳು ಮಧುಮೇಹವನ್ನು ನಿಯಂತ್ರಿಸುವಲ್ಲಿ, ಹೃದಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವಲ್ಲಿ, ಸೋಂಕುಗಳನ್ನು ತಡೆಗಟ್ಟುವಲ್ಲಿ ಹಾಗೂ ಸುಂದರವಾದ ಕೂದಲು ಮತ್ತು ತ್ವಚೆಯನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ತೂಕ ಇಳಿಸುವ ಕ್ಷೇತ್ರದಲ್ಲಿ ಕರಿಬೇವಿನ ಎಲೆಗಳು ಪ್ರಮುಖ ಪಾತ್ರವಹಿಸುತ್ತವೆ. ಎಲೆಗಳನ್ನು ಹಸಿಯಾಗಿ ಸೇವಿಸಿದಾಗ ಅಥವಾ ಜ್ಯೂಸ್ ಆಗಿ ಸೇವಿಸಿದಾಗ, ದೇಹವನ್ನು ಒಳಗಿನಿಂದ ಶುದ್ಧೀಕರಿಸಲು, ಕೊಬ್ಬನ್ನು ಸುಡಲು, ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಡಿಟಾಕ್ಸ್ ಪಾನೀಯವಾಗಿ ಕಾರ್ಯನಿರ್ವಹಿಸುತ್ತದೆ.
100 ಗ್ರಾಂ ಕರಿಬೇವಿನ ಎಲೆಯಲ್ಲಿರುವ ಪೋಷಕಾಂಶಗಳು ಇಲ್ಲಿವೆ
100 ಗ್ರಾಮ ಕರಿಬೇವಿನ ಎಲೆಗಳಲ್ಲಿ ಕಾರ್ಬೋಹೈಡ್ರೇಟ್ಸ್ - 18.7 ಗ್ರಾಂ, ಫೈಬರ್ - 6.4 ಗ್ರಾಂ, ಪ್ರೋಟೀನ್ - 6 ಗ್ರಾಂ, ಖನಿಜಗಳು- 4 ಗ್ರಾಂ, ಕ್ಯಾಲ್ಸಿಯಂ - 830. ಮಿಗ್ರಾಂ, ರಂಜಕ - 57. ಮಿಗ್ರಾಂ ಇರುತ್ತದೆ
ಕರಿಬೇವಿನ ಎಲೆಗಳ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು ಇಲ್ಲಿವೆ?
ತೂಕ ಇಳಿಸಲು ಸಹಾಯಕ
ಕರಿಬೇವಿನ ಎಲೆಗಳಲ್ಲಿ ಇರುವ ಅನೇಕ ಜೀವಸತ್ವಗಳು ಮತ್ತು ಖನಿಜಗಳು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ನೀವೂ ತೂಕ ಇಳಿಸುವ ಪಯಣದಲ್ಲಿದ್ದರೆ, ಕರಿಬೇವಿನ ಸೊಪ್ಪಿನ ಜೂಸ್ ಕುಡಿಯುವುದರಿಂದ ಪ್ರಯೋಜನಗಳು ಸಿಗುತ್ತವೆ ಕರಿಬೇವಿನ ಎಳಿಗಳಲ್ಲಿರುವ ರೋಮರನ್ ಈಥೈಲ್ ಅಸಿಟೇಟ್ ಮತ್ತು ಮುಂಬೈನ್ ನಂತಹ ಪುಮುಖ ಅಂಶಗಳು ತೂಕ ನಷ್ಟದ ಜೊತೆಗೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ

ರಕ್ತಹೀನತೆ
ಕರಿಬೇವಿನ ರಸವನ್ನು ಸೇವಿಸುವುದರಿಂದ ಕಬ್ಬಿಣ ಮತ್ತು ಫೋಲಿಕ್ ಆಮ್ಲ ಹೇರಳವಾಗಿ ಇರುವುದರಿಂದ ದೇಹದಲ್ಲಿನ ರಕ್ತದ ಕೊರತೆಯನ್ನು ನೀಗಿಸಲು ಸಹಾಯ ಮಾಡುತ್ತದೆ. ಕರಿಬೇವಿನ ರಸವನ್ನ ಸೇವಿಸುಸವುದರಿಂದ ಇಮ್ಯುನಿಟಿ ಬೂಸ್ಟ್ ಹೆಚ್ಚಾಗುತ್ತದೆ. ಕರಿಬೇವಿನಲ್ಲಿ ಆಂಟಿಆಕ್ಸಿಡೆಂಟ್ ಗುಣಲಕ್ಷಣಗಳಿದ್ದು, ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಸಹಾಯ ಮಾಡುತ್ತದೆ. ಇನ್ನೂ ಕರಿಬೇವಿನ ಎಲೆಗಳ ಜ್ಯೂಸ್ ಅನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹವನ್ನು ವೈರಸ್‌ಗಳು ಮತ್ತು ಸೋಂಕುಗಳಿಂದ ರಕ್ಷಿಸಲು ಸಹಕಾರಿಯಾಗಿದೆ.
ಮಧುಮೇಹ
ಕರಿಬೇವಿನ ಸೊಪ್ಪಿನ ರಸವನ್ನು ಸೇವಿಸುವುದರಿಂದ ಮಧುಮೇಹವನ್ನು ನಿಯಂತ್ರಣದಲ್ಲಿಡಲು ಸಹಾಯಕ. ಕರಿಬೇವಿನ ಎಲೆಗಳಲ್ಲಿ ಇರುವ ಹೈಪೊಗಿ ಸಿಮಿಕ್ ಗುಣಲಕ್ಷಣಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೇಹದಲ್ಲಿರುವ ಸೋಂಕಿಗೆ ಕರಿಬೇವಿನ ಸೊಪ್ಪಿನ ರಸ ಉತ್ತಮ ಚಿಕಿತ್ಸೆಯಾಗಿದ್ದು, ಕಾಲೋಚಿತ ಸೋಂಕನ್ನು ತಪ್ಪಿಸಲು ಕರಿಬೇವಿನ ಎಲೆಗಳ ರಸವನ್ನು ಸಹ ಬಳಸಬಹುದು. ಈ ಎಲೆಗಳಲ್ಲಿ ಇರುವ ಆಂಟಿಬಯೋಟಿಕ್ ಮತ್ತು ಆಂಟಿಫಂಗಲ್ ಗುಣಗಳು ಸೂಕ್ಷ್ಮಜೀವಿಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಖಾಲಿ ಹೊಟ್ಟೆಯಲ್ಲಿ ಸೇವಿಸಿದರೇ ಉತ್ತಮ
ಹೌದು, ಹಲವಾರು ಆರೋಗ್ಯದ ಗುಣಗಳನ್ನ ಹೊಂದಿರುವ ಕರಿಬೇವಿನ ಎಲೆಗಳಿಂದ ಪರಿಣಾಮಕಾರಿ ಫಲಿತಾಂಶ ಪಡೆಯಲು ನೀವು ಖಾಲಿ ಹೊಟ್ಟೆಯಲ್ಲಿ ಕರಿಬೇವಿನ ಎಲೆಗಳ ರಸವನ್ನ ಸೇವಿಸದರೇ ಉತ್ತಮ. ಇದು ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ, ಕರುಳಿನ ಗೋಡೆಗಳನ್ನು ಸರಿಪಡಿಸುತ್ತದೆ. ಇದು ದೇಹದಿಂದ ವಿಷವನ್ನು ನಿವಾರಿಸುವಂತಹ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳನ್ನೂ ಸಹ ಹೊಂದಿದ್ದು, ತಾಜಾ ಎಲೆಗಳು ವಾಕರಿಕೆ ತಡೆಯಲು ಸಹ ಸಹಾಯ ಮಾಡುತ್ತದೆ. ತಾಜಾ ಎಲೆಗಳನ್ನ ದಿನಕ್ಕೆ ಮೂರರಿಂದ ನಾಲ್ಕು ಎಲೆಗಳನ್ನ ತಿನ್ನುವುದರಿಂದ ಆರೋಗ್ಯ ಉತ್ತಮವಾಗಿರುತ್ತದೆ.
ಕರಿಬೇವಿನ ಸೊಪ್ಪಿನ ರಸ ಮಾಡುವ ವಿಧಾನ
ಮನೆಯಲ್ಲಿ ನಾವು ಕರಿಬೇವಿನ ಸೊಪ್ಪಿನ ರಸವನ್ನು ತಯಾರಿಸುವ ಮೊದಲು. ತಾಜಾ ಎಲೆಗಳನ್ನ ತೆಗೆದುಕೊಂಡು ತಣ್ಣೀರಿನಿಂದ ಚೆನ್ನಾಗಿ ತೊಳೆಯಿರಿ, ಇದರ ನಂತರ, ಎರಡು ಲೋಟ ನೀರು ಹಾಕಿ ಚನ್ನಾಗಿ ಕುದಿಸಿ, ನೀರು ಅರ್ಧಕ್ಕೆ ಕಡಿಮೆಯಾದಾಗ, ಕರಿಬೇವಿನ ಎಲೆಗಳ ನೀರನ್ನು ಜರಡಿ ಸಹಾಯದಿಂದ ಫಿಲ್ಟರ್ ಮಾಡಿ ಈಗ ಈ ನೀರಿಗೆ ರುಚಿಗೆ ತಕ್ಕಂತೆ 1 ಚಮಚ ಜೇನುತುಪ್ಪ ಮತ್ತು ನಿಂಬೆ ರಸವನ್ನು ಸೇರಿಸಿ ಕುಡಿಯಿರಿ. ನಿಮಗೆ ಇಷ್ಟವಿದ್ದರೇ ಈ ರಸಕ್ಕೆ ಕರಿಮೆಣಸು ಅಥವಾ ಉಪ್ಪನ್ನು ಸಹ ಬಳಸಬಹುದು.












Click it and Unblock the Notifications