ಕರ್ನಾಟಕದಲ್ಲಿ ಕೋವಿಡ್ ಭೀತಿ ತಗ್ಗಿಸಲು CRY ನೆರವು ಗುಂಪು
ಬೆಂಗಳೂರು, ಅಕ್ಟೋಬರ್ 6: ಚೈಲ್ಡ್ ರೈಟ್ಸ್ ಅಂಡ್ ಯು (ಸಿಅರವೈ) ಸುಮಾರು 347 ಕೋವಿಡ್ ನೆರವು ಗುಂಪುಗಳನ್ನು ಕುಟುಂಬಗಳಿಗೆ ಸಹಾಯ ಮಾಡಲು ದಕ್ಷಿಣ ಭಾರತದಲ್ಲಿ ಸ್ಥಾಪಿಸಿದೆ.
ಮೂಢನಂಬಿಕೆಗಳನ್ನು ಹೋಗಲಾಡಿಸಿ, ಗ್ರಹಿಕೆಗಳನ್ನು ಸವಾಲು ಮಾಡುತ್ತ ಪ್ರೇರಿತ ಕೋವಿಡ್ ನೆರವು ಗುಂಪು ರಚನೆ ಮಾಡಿ ಜನರಿಗೆ ಕೋವಿಡ್ ಪ್ರೋಟೋಕಾಲ್‌ಗಳನ್ನು ಪಾಲಿಸಲು ಹಾಗು ಲಸಿಕೆಯನ್ನು ಸುರಕ್ಷಾ ಕವಚವಾಗಿ ತೆಗೆದುಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.
ರಾಯಚೂರು ಗ್ರಾಮಗಳಲ್ಲಿ ಲಸಿಕಾ ಕಾರ್ಯವನ್ನು ನಡೆಸುತ್ತಿರುವಾಗ ಕೆಲವು ಅರೋಗ್ಯ ಅಧಿಕಾರಿಗಳು ಕೋವಿಡ್ ಪಾಸಿಟಿವ್ ಎಂದು ತಿಳಿದಾಗ , ಸಮುದಾಯದಲ್ಲಿ ಭಯ-ಭೀತಿ ಉಂಟಾಯಿತು.ಇದರಿಂದ ಲಸಿಕೆಯನ್ನು ಪಡೆಯಲು ಜನ ಮತ್ತಷ್ಟು ಹಿಂಜರಿಯಲಾರಂಭಿಸಿದರು. ಈ ವಿಷಯವು ತಾಯಪ್ಪ, ಸಮುದಾಯ ಸಂಘಟಕರು,ಕ್ರೈ ಪ್ರಾಜೆಕ್ಟ್ ಶ್ರುತಿ ಸಂಸ್ಕೃತಿ ಸಂಸ್ಥೆ ಗಮನಕ್ಕೆ ಈ ಗ್ರಾಮದ ಕೋವಿಡ್ ನೆರವು ಗುಂಪಿನ ಮೂಲಕ ಬಂದಿದೆ.
ತಾಯಪ್ಪನವರು ಗ್ರಾಮ ಪಂಚಾಯತಿಯ ಪಿಡಿಓ , ಪೊಲೀಸ್ ಹಾಗು ಅಂಗನವಾಡಿಯ ಕಾರ್ಮಿಕರೊಡನೆ ಗ್ರಾಮದ ಪ್ರತಿಯೊಂದು ಮನೆಗೆ ಹೋ ಗಿ ಅವರಿಗೆ ಲಸಿಕೆಯ ಮಹತ್ವವನ್ನು ತಿಳಿಸುತ್ತಎಲ್ಲರ ಸುರಕ್ಷತೆಗಾಗಿ ಎಲ್ಲಾ ಕೋವಿಡ್ ಪ್ರೋಟೋಕಾಲ್ ಪಾಲಿಸಲಾಗುವುದು ಎಂದು ಹೇಳಿದರು. ಈ ಜಾಗೃತಿ ಅಭಿಯಾನದ ನಂತರ 200ಕ್ಕೂ ಹೆಚ್ಚು ಜನ ಲಸಿಕೆಯನ್ನು ಪಡೆದರು. ಮೊದಲನೆಯ ಲಸಿಕಾ ಅಭಿಯಾನಕ್ಕಿಂತ ಶೇ 5 ರಷ್ಟು ಹೆಚ್ಚು ಜನ ಬಂದರು.

ತುರ್ತು ವೈದ್ಯಕೀಯ ಚಿಕಿತ್ಸೆಯ ಮಹತ್ವ
ಶೋಷಿತ ಮಕ್ಕಳ ಸುರಕ್ಷಿತವಾದ ಬೆಂಬಲ ವ್ಯವಸ್ಥೆಗೆ ಮತ್ತುಗ್ರಾಮಗಳಲ್ಲಿ ಕೋವಿಡ್ ಪರಿಣಾಮಕಾರಿ ಹಾಗು ವಿಕೇಂದ್ರೀಕೃತವಾಗಿ ನಿರ್ವಹಿಸಲು ಚೈಲ್ಡ್ ರೈಟ್ಸ್ ಅಂಡ್ ಯು (ಸಿಅರವೈ) "ಕೋವಿಡ್ ನೆರವು ಗುಂಪುಗಳನ್ನು" ಪ್ರಾರಂಭಿಸಿದ್ದಾರೆ. ಎರಡನೇ ಅಲೆಯಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಯ ಮಹತ್ವದ ಬಗ್ಗೆಒತ್ತು ನೀಡಿದೆ . ಕರ್ನಾಟಕದಲ್ಲಿ43 ಕೋವಿಡ್ ನೆರವು ಗುಂಪುಗಳಿದ್ದು, 126 ಗ್ರಾಮಗಳು ಒಳಗೊಂಡು ಸುಮಾರು 2 ಲಕ್ಷ ಜನರನ್ನು ರಾಯಚೂರು, ಕಲಬುರ್ಗಿ, ಬೆಳಗಾವಿ ಮತ್ತುಕೋಲಾರ ಜಿಲ್ಲೆಗಳಲ್ಲಿ ತಲುಪುತ್ತಿದೆ.
ಕೋವಿಡ್ ನೆರವು ಗುಂಪುಗಳಲ್ಲಿ6-8 ಜನ ಸ್ಮಾರ್ಟ್ ಫೋನ್ ಅನ್ನು ಹೊಂದಿರಲೇ ಬೇಕು. ಈ ಗುಂಪಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ನರ್ಸ್, ವೈದ್ಯರು, ಪಿಡಿಒ, ಶಿಕ್ಷಕರು, ಗ್ರಾಮ ಪಂಚಾಯಿತಿ ಪ್ರತಿನಿಧಿಗಳು - ಕ್ರೈ ಸಮುದಾಯದ ಸಂಘಟಕರ ಜೊತೆ ಕೈ ಜೋಡಿಸಿ ಕೋವಿಡ್ ನಿವಾರಣೆಗೆ ಪರಿಣಾಮಕಾರಿಯಾಗಿ ಮತ್ತುನಿರಂತರವಾಗಿ ಕೆಲಸ ಮಾಡುತ್ತಿರುವುದು.

347 ಕೋವಿಡ್ ನೆರವು ಗುಂಪುಗಳನ್ನು ರಚಿಸಲಾಗಿದೆ
ಕೋವಿಡ್ ನೆರವು ಗುಂಪುಗಳನ್ನು ಪ್ರಾರಂಭ ಮಾಡುವ ಮುಖ್ಯ ಉದ್ದೇಶ ಮಕ್ಕಳನ್ನು ಒಗ್ಗಟ್ಟಿನಿಂದಿರಿಸಲು, ಸುರಕ್ಷಿತವಾಗಿರಿಸಲು ಹಾಗು ಕೋವಿಡ್ ಇಂದ ಉಂಟಾಗುವ ಅನ್ಯ ದುರ್ಬಲತೆಯನ್ನು ಕಡಿಮೆ ಮಾಡಲು. ಕೋವಿಡ್ ನೆರವು ಗುಂಪುಗಳು ಗ್ರಾಮಸ್ಥರಿಗೆ ಸದಾ ಸಹಾಯ ಮಾಡುವುದಲ್ಲದೆ ಕೋವಿಡ್ ಬಗ್ಗೆಅಧಿಕೃತ ಮಾಹಿತಿಯನ್ನು ನೀಡುವುದು. ದಕ್ಷಿಣ ಭಾರತದ ಮಟ್ಟದಲ್ಲಿ ಸಿಅರ್‌ವೈ ಸಂಸ್ಥೆಯು ಒಟ್ಟು 347 ಕೋವಿಡ್ ನೆರವು ಗುಂಪುಗಳನ್ನು ರಚಿಸಿ ಇದರಲ್ಲಿ1829 ಸದಸ್ಯರುಗಳಿದ್ದು- 302 ಜಾಗೃತಿ ಕಾರ್ಯಕ್ರಮಗಳನ್ನು ಮಾಡಿರುವುದು.
"ಕೋವಿಡ್ ಮಕ್ಕಳ ಮೇಲೆ ನೇರ ಹಾಗು ಪರೋಕ್ಷವಾಗಿ ದುಷ್ಟ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಕೋವಿಡ್ ಬರುವ ಸಾಧ್ಯತೆ ಹೆಚ್ಚಾಗಿರುವುದು ಹಾಗು ಇತರರಿಗೆ ಬರುವ ಸಾಧ್ಯತೆ ಇದೆ . ಮಕ್ಕಳು ಆರ್ಥಿಕ ಶೋಷಣೆ, ಬಾಲ್ಯ ವಿವಾಹ , ಮಕ್ಕಳ ಸಾಗಾಣಿಕೆ , ದೈಹಿಕ ಮತ್ತುಲೈಂಗಿಕ ಶೋ ಷಣೆ, ಭಾವನಾತ್ಮಕ ಮತ್ತು ಮಾನಸಿಕ ಆಘಾತಕ್ಕೆ ಒಳಗಾಗುತ್ತಾರೆ." ಎಂದು ಜಾನ್ ರಾಬರ್ಟ್ಸ್ , ಪ್ರಧಾನ ವ್ಯವಸ್ಥಾಪಕರು , ಡೆವಲಪ್ಮೆಂಟ್ ಸಪೋರ್ಟ್ , ಸಿಅರ್‌ವೈ (ದಕ್ಷಿಣ ಪ್ರಾಂತ್ಯ) ಹೇಳಿದರು.

ಕೋವಿಡ್ ನೆರವು ಗುಂಪುಗಳ ಉದ್ದೇಶ
ಕೋವಿಡ್ ನೆರವು ಗುಂಪುಗಳ ಉದ್ದೇಶ ಅರೋಗ್ಯ ಅಧಿಕಾರಿಗಳು ಸೂಚಿಸಿದಂತೆ ವೈದ್ಯಕೀಯ ಚಿಕಿತ್ಸೆ ಅಥವಾ ಪ್ರತ್ಯೇಕತೆ ದೊರಕಿಸಲು ಸಹಾಯ ಮಾಡುತ್ತದೆ. ವೈದ್ಯಕೀಯ ನೆರವು ಮತ್ತುಸರಿಯಾದ ಕೋವಿಡ್ ಪ್ರೋಟೋಕಾಲ್‌ಗಳನ್ನು ಗ್ರಾಮಸ್ಥರಿಗೆ ನೀಡಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು; ಜಾಗರೂಕತೆಯನ್ನು ಸೃಷ್ಟಿಸಲು ಲಸಿಕೆಯನ್ನು ಪ್ರೋತ್ಸಾಹಿಸುವುದು. ಮಾಹಿತಿ ಮತ್ತು ಕ್ರಿಯೆಯ ಆಧಾರದ ಮೇಲೆ, ರಾಜ್ಯದ ಹಿಂದುಳಿದ ಗ್ರಾಮಗಳಲ್ಲಿ ಸಾಂಕ್ರಾಮಿಕ ರೋಗಕ್ಕೆ ತ್ವರಿತ, ಸುರಕ್ಷಿತ, ನೈಜ, ವಿಶ್ವಾಸಾರ್ಹ ಮತ್ತುಸೂಕ್ತ ಪ್ರತಿಕ್ರಿಯೆಯನ್ನು ಸೃಷ್ಟಿಸಲು ಕಾರ್ಯನಿರ್ವಹಿಸುತ್ತಿದೆ.

ಕೋಲಾರ ಜಿಲ್ಲೆಯಲ್ಲಿ ಎರಡನೇ ಅಲೆ
"ಎರಡನೇ ಅಲೆಯಲ್ಲಿ- ಕೋಲಾರ ಜಿಲ್ಲೆಯಲ್ಲಿ, ಹೆಚ್ಚು ಜನರು ಕೋವಿಡ್ ಸಾಂಕ್ರಾಮಿಕ ರ ಗದಿಂದ ಪ್ರಭಾವಿತರಾಗಿದ್ದರು ಮತ್ತು ಹೆಚ್ಚು ಸಾವುಗಳು ಉಂಟಾಯಿತು. ಕೋವಿಡ್ ನೆರುವು ಗುಂಪುಗಳು, ಕೋವಿಡ್ ಬಗ್ಗೆ ಜಾಗೃತಿ ಮೂಡಿಸಿ, ಹಳ್ಳಿಗಳಲ್ಲಿ ಲಸಿಕೆ ಹಾಕಲು ಆರಂಭಿಸಿದರು. ಅವರು ಮಕ್ಕಳು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರನ್ನು ಸೂಕ್ಷ್ಮ ವಾಗಿ ಗಮನಿಸುತ್ತಿದ್ದರು. ಕೋವಿಡ್ ನೆರವು ಗುಂಪುಗಳು ಸಮುದಾಯ ಒಡೆತನ ತೆಗೆದುಕೊಂಡು ಕೋವಿಡ್ ತಡೆಗಟ್ಟುವಿಕೆ ಮತ್ತು ಲಸಿಕೆ ಹಾಕಲು ಸಮುದಾಯ ಸದಸ್ಯರ ಬೆಂಬಲದೊಂದಿಗೆ ಸ್ವಯಂಸೇವಕರಾಗಿ ಮತ್ತುಆಶಾ / ಎಎನ್ಎಂ ಮತ್ತುಸ್ಥಳೀಯ ಪಿಎಚ್‌ಸಿ ಜೊತೆ ನಿಕಟವಾಗಿ ಕೆಲಸಮಾಡಿದರು. ಇದು ಮುಖ್ಯವಾಗಿ ಸಾಂಕ್ರಾಮಿಕ ರೋಗದ ಭಯ, ಆತಂಕ ಮತ್ತುಮಾನಸಿಕ ಒತ್ತಡದ ವಿರುದ್ಧಹೋರಾಡಲು ಅನುಕೂಲ ಮಾಡಿಕೊಟ್ಟಿತು. ಆರೋಗ್ಯ ಇಲಾಖೆಯ ನಿಕಟ ಸಹಯೋಗದೊಂದಿಗೆ ಹಳ್ಳಿಗಳಲ್ಲಿ 100% ಲಸಿಕೆಯನ್ನು ಖಾತರಿಪಡಿಸುವುದು ಈಗ ಪ್ರಮುಖ ಗುರಿಯಾಗಿದೆ "ಎಂದು ಪ್ರಭಾವತಿ, ಸಿಆರ್‌ವೈ, ಕೋಲಾರ ಪ್ರಾಜೆಕ್ಟ್, ಹೇಳಿದರು.

ಜಾಗೃತಿ ಹಾಗು ಕ್ರಮಗಳು ಜನರಿಗೆ ಹೆಚ್ಚು ಸಹಾಯ
ಮೂರನೇ ಅಲೆಯ ಬೆದರಿಕೆ ದೊಡ್ಡಮಟ್ಟದಲ್ಲಿದ್ದು, ಜಾಗೃತಿ ಹಾಗು ಕ್ರಮಗಳು ಜನರಿಗೆ ಹೆಚ್ಚು ಸಹಾಯ ಮಾಡುತ್ತದೆ. ಈ ಹೆಜ್ಜೆಯು ಸುರಕ್ಷಿತ ವಾತಾವರಣವನ್ನು ನಿರ್ಮಿಸಲು ಒಂದು ಪೂರ್ವಭಾವಿ ಪರಿಹಾರ ಎಂದು ಸಿಆರ್‌ವೈ ನಂಬಿದೆ.
ಕೊರೊನಾ ಸೋಂಕಿನ ವಿರುದ್ಧ ಹಲವು ದೇಶಗಳಲ್ಲಿ ಹೋರಾಟ ಇನ್ನೂ ಮುಂದುವರೆದಿದೆ. ಭಾರತದಲ್ಲಿಯೂ ಸೋಂಕು ಪ್ರತೀಕಾರದೊಂದಿಗೆ ಮರಳಬಹುದು ಎಂದು ಉನ್ನತ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಸೋಂಕಿನ ಪ್ರಮಾಣ ಕಡಿಮೆಯಿದೆ. ಆದರೆ ಪ್ರತೀಕಾರದೊಂದಿಗೆ ಸೋಂಕು ಮರಳಬಹುದು. ಹೀಗಾಗಿ ಎಚ್ಚರಿಕೆಯಿಂದಿರುವುದು ಅತ್ಯವಶ್ಯಕ ಎಂದು ದೆಹಲಿಯ ಏಮ್ಸ್ ಕೊರೊನಾ ಟಾಸ್ಕ್ ಪೋರ್ಸ್ ಅಧ್ಯಕ್ಷ ಡಾ. ನವೀತ್ ವಿಗ್ ಜನರಿಗೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಕೆಲವು ರಾಜ್ಯಗಳಲ್ಲಿ ಪಾಸಿಟಿವಿಟಿ ದರ 10% ಇದೆ. ಹಲವು ದೇಶಗಳಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ಆದ್ದರಿಂದ ನಾವು ಬಹಳ ಜಾಗರೂಕವಾಗಿರಬೇಕು ಸೋಂಕು ರುದ್ರ ರೂಪ ತಾಳಬಹುದು ಎಂದು ಎಚ್ಚರಿಸಿದ್ದಾರೆ.












Click it and Unblock the Notifications