ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Explained: ಈ ಪ್ರಯೋಗಾಲಯವೋ, ಆ ಮಾರುಕಟ್ಟೆಯೋ: ಕೊರೊನಾ ಮೂಲ ಅದ್ಯಾವುದಯ್ಯಾ!?

|
Google Oneindia Kannada News

ವುಹಾನ್, ಆಗಸ್ಟ್ 15: ಇಡೀ ಜಗತ್ತನ್ನು ಬೆಚ್ಚಿ ಬೀಳಿಸಿದ ಕೊರೊನಾ ವೈರಸ್ ಬಗ್ಗೆ ಎಲ್ಲರಿಗೂ ಗೊತ್ತಿದೆ. ಚೀನಾದಲ್ಲೇ ಮೊದಲು ಕಾಣಿಸಿಕೊಂಡ ಈ ಸೋಂಕಿನ ಮೂಲ ಯಾವುದು ಎಂಬ ಪ್ರಶ್ನೆಗೆ ಉತ್ತರವನ್ನು ಇಂದಿಗೂ ಹುಡುಕಲಾಗುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯು ಹೆಸರಿಸಿದ ಕೋವಿಡ್-19 ಮೂಲ ಯಾವುದಯ್ಯಾ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಚೀನಾದ ವುಹಾನ್ ಪ್ರಯೋಗಾಲಯದಿಂದ ಕೊರೊನಾ ವೈರಸ್ ಜಗತ್ತಿಗೆ ಹರಡಿತು ಎಂಬುದರ ಬಗ್ಗೆ ಕೆಲವು ಅಧ್ಯಯನ ಮತ್ತು ಸಂಶೋಧನೆಗಳು ಹೇಳುತ್ತಿವೆ. ಇದರ ಮಧ್ಯೆ ಕಳೆದ ತಿಂಗಳು ಕೋವಿಡ್-19 ಸಾಂಕ್ರಾಮಿಕ ರೋಗದ ಆರಂಭಿಕ ಘಟನೆಗಳ ಅತ್ಯಂತ ವಿವರವಾದ ಅಧ್ಯಯನಗಳನ್ನು ಸೈನ್ಸ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

Recommended Video

BJP ಅವರದ್ದು ನಕಲಿ ದೇಶಭಕ್ತಿ, ಇವರಿಗೆ ಇತಿಹಾಸವೇ ಗೊತ್ತಿಲ್ಲ: ಬಿಜೆಪಿ ಮೇಲೆ ಸಿದ್ದು ಗರಂ | *Karnataka | Oneindia

Black Tea: ಕಪ್ಪು ಚಹಾದಿಂದ ಕೊರೊನಾ ವೈರಸ್ ನಿಯಂತ್ರಣBlack Tea: ಕಪ್ಪು ಚಹಾದಿಂದ ಕೊರೊನಾ ವೈರಸ್ ನಿಯಂತ್ರಣ

2019ರ ಮೊದಲ ಆರು ತಿಂಗಳ ಅವಧಿಯಲ್ಲಿ ವುಹಾನ್ ನಗರದಲ್ಲಿ ಏನಾಯಿತು?, ಜೂನ್ ತಿಂಗಳ ನಂತರದಲ್ಲಿ ಕೋವಿಡ್-19 ಹಾವಳಿ ಶುರುವಾಗಿದ್ದು ಎಲ್ಲಿಂದ? ಹ್ಯೂನಾನ್ ಸಮುದ್ರದ ಸಗಟು ಮಾರುಕಟ್ಟೆಗೆ ವೈರಸ್ ಎಂಟ್ರಿ ಕೊಟ್ಟಿದ್ದು ಹೇಗೆ? ಮೊದಲು ಕೊರೊನಾ ವರೈಸ್ ಪತ್ತೆಯಾಗಿದ್ದು ಎಲ್ಲಿ ಮತ್ತು ಅದರ ಮೂಲ ಯಾವುದು ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಹ್ಯೂನಾನ್ ಮಾರುಕಟ್ಟೆಯೇ ಕೊರೊನಾವೈರಸ್ ಕೇಂದ್ರ

ಹ್ಯೂನಾನ್ ಮಾರುಕಟ್ಟೆಯೇ ಕೊರೊನಾವೈರಸ್ ಕೇಂದ್ರ

ಕಳೆದ 2019ರ ಡಿಸೆಂಬರ್ ತಿಂಗಳಿನಲ್ಲಿ ಮೊದಲ ಕೊರೊನಾ ವೈರಸ್ ಸೋಂಕು ಪತ್ತೆಯಾದ ಪ್ರದೇಶವನ್ನೇ ಕೇಂದ್ರ ಬಿಂದು ಎಂದು ಗುರುತಿಸಲಾಗುತ್ತಿದೆ. ಚೀನಾದ ಹ್ಯೂನಾನ್ ಮಾರುಕಟ್ಟೆಯೇ ಕೋವಿಡ್-19 ಮೂಲ ಎಂದು ಕೆಲವು ವಿಶ್ಲೇಷಕರು ಹೇಳುತ್ತಿದ್ದಾರೆ. ಈ ಮಾರುಕಟ್ಟೆಗೆ ಭೇಟಿ ಕೊಟ್ಟವರಲ್ಲಿ ಮೊದಲು ಸೋಂಕು ಪತ್ತೆಯಾಗಿದ್ದು ಎಂಬುದು ಗೊತ್ತಾಗಿದೆಯೇ ವಿನಃ ಆ ಸೋಂಕು ಎಲ್ಲಿಂದ ಅಂಟಿಕೊಂಡಿತು ಎಂಬುದರ ಬಗ್ಗೆ ಸ್ಪಷ್ಟತೆ ಸಿಕ್ಕಿಲ್ಲ. ಪ್ರಾರಂಭಿಕ ಹಂತದಲ್ಲಿ ಅದೆಷ್ಟು ಸೋಂಕಿತರನ್ನು ಗುರುತಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಇದರ ಜೊತೆಗೆ ಹ್ಯೂನಾನ್ ಮಾರುಕಟ್ಟೆಗೆ ಸೋಂಕಿನ ನಂಟು ಅಂಟಿಕೊಂಡಿದ್ದರಿಂದ ಮೊದಲ ಸೋಂಕಿತ ಪ್ರಕರಣ ಯಾವುದು ಎಂಬುದನ್ನೂ ಗುರುತಿಸುವುದಕ್ಕೆ ಸಾಧ್ಯವಾಗಲಿಲ್ಲ.

ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!

ಹ್ಯೂನಾನ್ To ವುಹಾನ್ ಗೆ ಹೋಗಿದ್ದು ಹೇಗೆ ಕೊರೊನಾ?

ಹ್ಯೂನಾನ್ To ವುಹಾನ್ ಗೆ ಹೋಗಿದ್ದು ಹೇಗೆ ಕೊರೊನಾ?

ಚೀನಾದ ಹ್ಯೂನಾನ್ ಮಾರುಕಟ್ಟೆಯೇ ಕೊರೊನಾ ವೈರಸ್ ಕೇಂದ್ರಬಿಂದು ಎಂದು ಗುರುತಿಸಲಾಯಿತು. ನೋಡನೋಡುತ್ತಿದ್ದಂತೆ ಬೇರೆ ಪ್ರದೇಶಗಳಿಗೆ ಸೋಂಕು ವ್ಯಾಪಿಸಿಕೊಂಡಿತು. 2020ರ ವೇಳೆಗೆ ವುಹಾನ್ ನಗರಕ್ಕೂ ಕೋವಿಡ್-19 ಎಂಟ್ರಿ ಕೊಟ್ಟಿತು. ಹ್ಯೂನಾನ್ ಮಾರುಕಟ್ಟೆಯು ಎರಡು ಫುಟ್ಬಾಲ್ ಮೈದಾನಗಳ ಗಾತ್ರದ ಒಳಾಂಗಣ ಸ್ಥಳವಾಗಿದೆ. ಅದರ ಹೆಸರಿನಲ್ಲಿರುವ "ಸಮುದ್ರ ಆಹಾರ" ಎಂಬ ಪದವು ಅದರ ಕಾರ್ಯಚಟುವಟಿಕೆಯ ಬಗ್ಗೆ ತಪ್ಪು ಅಭಿಪ್ರಾಯ ನೀಡುತ್ತದೆ. 2014ರಲ್ಲಿ ಮಾರುಕಟ್ಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ರಕೂನ್ ನಾಯಿಗಳು ಮತ್ತು ಕಸ್ತೂರಿಗಳು ಸೇರಿದಂತೆ ವಿವಿಧ ಲೈವ್ ವನ್ಯಜೀವಿಗಳು ಮಾರಾಟಕ್ಕಿದ್ದವು.

ಹ್ಯೂನಾನ್ ಮಾರುಕಟ್ಟೆಯ ಪ್ರಾಣಿಗಳ ಮಾದರಿ ಪರೀಕ್ಷೆ

ಹ್ಯೂನಾನ್ ಮಾರುಕಟ್ಟೆಯ ಪ್ರಾಣಿಗಳ ಮಾದರಿ ಪರೀಕ್ಷೆ

ಕೊರೊನಾವೈರಸ್ ಸೋಂಕು ಪತ್ತೆಯಾಗುವುದಕ್ಕೂ ಪೂರ್ವದಲ್ಲಿಯೇ ನಾನು ಹ್ಯೂನಾನ್ ಮಾರುಕಟ್ಟೆಗೆ ಭೇಟಿ ನೀಡಿದ್ದೆವು. ಅಂದು ಪ್ರಾಣಿಗಳಲ್ಲಿನ ಸೋಂಕುಗಳನ್ನು ಪತ್ತೆ ಮಾಡುವುದಕ್ಕಾಗಿ ಮಾದರಿ ಸಂಗ್ರಹಿಸಲು ಸೂಚಿಸಲಾಗಿತ್ತು. ವುಹಾನ್ ಕೇಂದ್ರ ಆಸ್ಪತ್ರೆಯ ರೋಗಾಣು ಅಧ್ಯಯನ ಕೇಂದ್ರದಲ್ಲಿ ಅದನ್ನು ಸಂಗ್ರಹಿಸಲಾಗಿತ್ತು. 2019ರಲ್ಲಿ ಹ್ಯೂನಾನ್ ಮಾರುಕಟ್ಟೆಯಲ್ಲಿ ವನ್ಯಜೀವಿಗಳನ್ನು ಮಾರಾಟಕ್ಕಿಡಲಾಗಿದ್ದು, 2020ರ ಜನವರಿ 1ರಂದು ಮಾರುಕಟ್ಟೆಯನ್ನು ಅಧಿಕಾರಿಗಳು ಮಾರುಕಟ್ಟೆಯನ್ನೇ ಮುಚ್ಚಿದರು. ಈ ಮಾರುಕಟ್ಟೆಯ ನೈಋತ್ಯ ಮೂಲೆಯಲ್ಲಿ ಅತಿಹೆಚ್ಚು ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದವು.

ಕೊರೊನಾವೈರಸ್ ಮನುಷ್ಯರಿಗೆ ಅಂಟಿಕೊಂಡಿದ್ದು ಹೇಗೆ?

ಕೊರೊನಾವೈರಸ್ ಮನುಷ್ಯರಿಗೆ ಅಂಟಿಕೊಂಡಿದ್ದು ಹೇಗೆ?

SARS-CoV-2 ವಂಶಾವಳಿಗಳ ಒಂದು ಶ್ರೇಣಿಯಾಗಿ ಅಭಿವೃದ್ಧಿ ಆಯಿತು. ಡೆಲ್ಟಾ ಮತ್ತು ಓಮಿಕ್ರಾನ್ ರೀತಿಯ ಕೆಲವು "ಕಾಳಜಿಯ ರೂಪಾಂತರ"ಗಳು ಪತ್ತೆಯಾದವು. SARS-CoV-2 ತಳಿಯಲ್ಲಿ ಮೊದಲ ವಿಭಜನೆ - "A" ಮತ್ತು "B" ವಂಶಾವಳಿ ಆಗಿದ್ದವು. ಸಾಂಕ್ರಾಮಿಕ ರೋಗಕ್ಕೂ ಪೂರ್ವದಲ್ಲಿ ಎರಡೂ ರೋಗಾಣುಗಳ ವಂಶಾವಳಿಗೆ ಮಾರುಕಟ್ಟೆಯೇ ಕೇಂದ್ರಬಿಂದು ಆಗಿತ್ತು. ಈ ಬಗ್ಗೆ ಹೆಚ್ಚಿನ ವಿಶ್ಲೇಷಣೆಗಳಲ್ಲಿ ಉಲ್ಲೇಖಿಸಲಾಗಿದೆ. ಎ ವಂಶಾವಳಿಯು ಪ್ರಾಣಿಗಳಿಂದ ಪ್ರಾಣಿಗಳಿಗೆ ಹರಡುವ ರೋಗಾಣುವನ್ನು ಹೊಂದಿದ್ದು, ಹ್ಯೂನಾನ್ ಮಾರುಕಟ್ಟೆಯಲ್ಲಿ ರೋಗಾಣುಗಳು ಮೊದಲೇ ಇತ್ತು. ಆದರೆ ಬಿ ವಂಶಾವಳಿಯ ಮೂಲಕ ಅದು ಪ್ರಾಣಿಗಳಿಗೆ ಮನುಷ್ಯರಿಗೆ ಅಂಟಿಕೊಳ್ಳುವುದಕ್ಕೆ ಶುರುವಾಯಿತು ಎಂದು ಹೇಳಲಾಗುತ್ತಿದೆ.

ಮನುಷ್ಯನಿಗೆ ಕೊರೊನಾ ವೈರಸ್ ಅಂಟಿಸಿದ್ದು ಯಾವ ಪ್ರಾಣಿ?

ಮನುಷ್ಯನಿಗೆ ಕೊರೊನಾ ವೈರಸ್ ಅಂಟಿಸಿದ್ದು ಯಾವ ಪ್ರಾಣಿ?

ಚೀನಾದ ಹ್ಯೂನಾನ್ ಮಾರುಕಟ್ಟೆಯಲ್ಲಿನ ಪ್ರಾಣಿಗಳಲ್ಲಿ ಮೊದಲೇ ಇದ್ದ ರೋಗಾಣುವಿನಿಂದ ಮನುಷ್ಯನಿಗೆ ಕೊರೊನಾವೈರಸ್ ಸೋಂಕು ಹರಡಿತು. ಅದು 2019ರ ನವೆಂಬರ್ ತಿಂಗಳಿಗೂ ಪೂರ್ವದಲ್ಲಿಯೇ ಆಗಿರಬಹುದು. ಆದರೆ ಅದೇ ಮನುಷ್ಯನಿಗೆ ವೈರಸ್ ಅಂಟಿಸಿದ ಆ ಪ್ರಾಣಿ ಯಾವುದು ಎಂಬುದನ್ನು ಸ್ಪಷ್ಟವಾಗಿ ಹೇಳುವುದಕ್ಕೆ ಸಾಧ್ಯವಾಗಿಲ್ಲ. ಚೀನಾದ ತನಿಖಾ ತಂಡವು ಪ್ರವೇಶಿಸುವ ಮೊದಲೇ ವನ್ಯಜೀವಿಗಳನ್ನು ಹ್ಯೂನಾನ್ ಮಾರುಕಟ್ಟೆಯಿಂದ ತೆಗೆದುಹಾಕಲಾಯಿತು. ಇದು ಸಾರ್ವಜನಿಕ ಸುರಕ್ಷತೆಗೆ ಅಗತ್ಯವಾಗಿತ್ತು, ಆದರೆ ಮೂಲ ರೋಗಾಣು ಪತ್ತೆಯಾಗಿದ್ದು ಹೇಗೆ ಎಂಬುದನ್ನು ಕಂಡುಕೊಳ್ಳುವುದಕ್ಕೆ ಅಡ್ಡಿ ಆಯಿತು.

ನೇರವಾಗಿ ಇಂಥದ್ದೇ ಪ್ರಾಣಿಯಿಂದ ಸೋಂಕು ಹರಡಿತು ಎಂಬುದನ್ನು ಕಂಡುಕೊಳ್ಳುವ ಅವಕಾಶ ಬಹುಶಃ ಹಾದುಹೋಗಿದೆ. ಪ್ರಾಣಿಗಳಿಂದ ವೈರಸ್ ವೇಗವಾಗಿ ಹರಡುವುದರಿಂದ ಇಂಥದ್ದೇ ಪ್ರಾಣಿಯಿಂದ ಈ ರೋಗಾಣು ಹರಡುತ್ತಿದೆ ಎಂಬುದನ್ನು ನಿಖರವಾಗಿ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಇನ್ನೊಂದು ಹಂತದಲ್ಲಿ SARS-CoV-2 ರೋಗಾಣು ಚೀನಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದ "ಸೋರಿಕೆಯಾಗಿದೆ" ಎಂದು ಹೇಳಲಾಗುತ್ತಿದೆ.

ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿರುವ ಬಗ್ಗೆ ಲಕ್ಷ್ಯ

ಲ್ಯಾಬ್‌ನಿಂದ ವೈರಸ್ ಸೋರಿಕೆಯಾಗಿರುವ ಬಗ್ಗೆ ಲಕ್ಷ್ಯ

ಕೊರೊನಾವೈರಸ್ ಎಂಬ ರೋಗಾಣು ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಿಂದಲೇ ಸೋರಿಕೆ ಆಗಿದೆ ಎಂಬುದರ ಮೇಲೆ ಹೆಚ್ಚು ಲಕ್ಷ್ಯ ವಹಿಸಲಾಯಿತು. ಇದರಿಂದ ಮೂಲವಾಗಿ ರೋಗಾಣು ಯಾವ ಪ್ರಾಣಿಯಿಂದ ಹರಡುವುಕ್ಕೆ ಪ್ರಾರಂಭಿಸಿತು. ರೋಗಾಣುವಿನ ಮೂಲ ಏನು ಎಂಬುದರ ಬಗ್ಗೆ ಲಕ್ಷ್ಯ ವಹಿಸಲಿಲ್ಲ. ಪ್ರಾರಂಭಿಕ ಹಂತದಲ್ಲಿ ಬಾವಲಿಗಳ ಮೂಲಕವೇ ಸೋಂಕು ಹರಡಿದೆ ಎಂದು ಹೇಳಲಾಯಿತು. ಆದರೆ ಇದಕ್ಕೂ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಾಗಲಿಲ್ಲ.

ಲ್ಯಾಬ್ ಸೋರಿಕೆ ಸಿದ್ಧಾಂತವು ನಿಜವಾಗಬೇಕಾದರೆ, ಸಾಂಕ್ರಾಮಿಕ ರೋಗವು ಪ್ರಾರಂಭವಾಗುವ ಮೊದಲೇ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ SARS-CoV-2 ಇದ್ದಿರಬೇಕು ಎಂಬುದನ್ನು ಅರಿತುಕೊಂಡಿರಬೇಕಾಗುತ್ತದೆ. ಆದರೆ ಇದನ್ನು ಸೂಚಿಸುವ ಒಂದೇ ಒಂದು ಅಂಕಿ-ಅಂಶಗಳಿಲ್ಲ. ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯಲ್ಲಿ ಪೂರ್ವಗಾಮಿ ವೈರಸ್‌ನ ಜೀನೋಮ್ ಅನುಕ್ರಮ ಅಥವಾ ಪ್ರತ್ಯೇಕತೆಗೆ ಸಂಬಂಧಿಸಿದ ಯಾವುದೇ ಪುರಾವೆಗಳಿಲ್ಲ. ಜೀನ್ ಅನುಕ್ರಮ ಡೇಟಾಬೇಸ್‌ಗಳು, ವೈಜ್ಞಾನಿಕ ಪ್ರಕಟಣೆಗಳು, ವಾರ್ಷಿಕ ವರದಿಗಳು, ವಿದ್ಯಾರ್ಥಿ ಪ್ರಬಂಧಗಳು, ಸಾಮಾಜಿಕ ಮಾಧ್ಯಮ ಅಥವಾ ಇಮೇಲ್‌ಗಳೂ ಇಲ್ಲ.

ಈ ಸಂಬಂಧ ಗುಪ್ತಚರ ದಳಕ್ಕೂ ಸಹ ಏನೂ ಸಿಕ್ಕಿಲ್ಲ, ಏನೂ ಇಲ್ಲ. ಸಾಂಕ್ರಾಮಿಕ ರೋಗದ ಮೊದಲು SARS-CoV-2 ಪೂರ್ವಜರ ಯಾವುದೇ ಕೆಲಸವನ್ನು ರಹಸ್ಯವಾಗಿಡಲು ಯಾವುದೇ ಕಾರಣವಿರಲಿಲ್ಲ. ಆದರೆ ರಹಸ್ಯ ಜೈವಿಕ ಶಸ್ತ್ರಾಸ್ತ್ರ ಸಂಶೋಧನೆಯೇ SARS-CoV-2 ಮೂಲ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಎಂದು ಹೇಳುವುದಕ್ಕೆ ಕಾರಣವಾಯಿತು. ಈ ಪ್ರಯೋಗಾಲಯದಲ್ಲಿ ಹೆಸರಿಸಲಾಗದ ರೋಗಾಣುಗಳನ್ನು ಸಂಗ್ರಹಿಸಿಟ್ಟಿರುವುದು ಆರೋಪವನ್ನು ಸುಳ್ಳು ಎಂದು ಹೇಳುವುದಕ್ಕೂ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ಸೃಷ್ಟಿಸಿದೆ.

English summary
Corona virus Leak Story: Study will expose how coronavirus came from Wuhan market. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X