ಅಭಿಮಾನಿಗಳ ಪಾಲಿಗೆ 'ಅಭಿನವ ಇಂದಿರಾ' ಪ್ರಿಯಾಂಕಾ ವಾದ್ರಾ ವ್ಯಕ್ತಿಚಿತ್ರ

ಅಭಿನವ ಇಂದಿರಾಗಾಂಧಿ ಎಂದೇ ಅಭಿಮಾನಿಗಳ ಬಳಿ ಕರೆಸಿಕೊಳ್ಳುತ್ತಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಹು ಮಹತ್ವದ ಪಾತ್ರ ವಹಿಸಲಿದ್ದಾರೆ.

2014 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಕೆಲವೆಡೆ ಪ್ರಚಾರ ನಡೆಸಿದ್ದು ಬಿಟ್ಟರೆ ಹೆಚ್ಚಾಗಿ ಅವರು ಕಾಣಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಅವರು ಕಾಂಗ್ರೆಸ್ ನ ತಾರಾಪ್ರಚಾರಕರಾಗಿ, ಅಭ್ಯರ್ಥಿಯಾಗಿಯೂ ಕಾಣಿಸಿಕೊಂಡರೆ ಅಚ್ಚರಿಯಲ್ಲ.

ಕಳೆದ ತಿಂಗಳಷ್ಟೇ ಪ್ರಿಯಾಂಕಾ ಅವರನ್ನು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯನ್ನಾಗಿ ಆರಿಸುವ ಮೂಲಕ ಸಕ್ರಿಯ ರಾಜಕಾರಣಕ್ಕೆ ಆಹ್ವಾನಿಸಿದೆ.

Congress leader Priyanka Gandhi political profile

ಜನನ: ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಹುಟ್ಟಿದ್ದು, 1972 ರ ಜನವರಿ 12 ರಂದು ದೆಹಲಿಯಲ್ಲಿ.
ತಂದೆ: ರಾಜೀವ್ ಗಾಂಧಿ
ತಾಯಿ: ಸೋನಿಯಾ ಗಾಂಧಿ
ಪತಿ: ರಾಬರ್ಟ್ ವಾದ್ರಾ
ಮಕ್ಕಳು: ಪತ್ರ ರೈಹಾನ್, ಪುತ್ರಿ ಮಿರಾಯ
ವಿದ್ಯಾಭ್ಯಾಸ: ದೆಹಲಿಯ ಜೀಸಸ್ ಅಂಡ್ ಮೇರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣಅ
ಉನ್ನತ ಶಿಕ್ಷಣ: ದೆಹಲಿಯ ಜೀಸಸ್ ಮತ್ತು ಮೇರಿ ವಿಶ್ವವಿದ್ಯಾಲಯದಲ್ಲಿ ಮನಶಾಸ್ತ್ರದಲ್ಲಿ ಪದವಿ.
ಸ್ನಾತಕೋತ್ತರ ಪದವಿ: ಬೌದ್ಧ ತತ್ವಗಳಿಂದ ಅತಿಯಾಗಿ ಪ್ರಭಾವಕ್ಕೊಳಗಾಗಿದ್ದ ಪ್ರಿಯಾಂಕಾ, 'ಬೌದ್ಧ ತತ್ವಗಳ ಬಗ್ಗೆಯೂ ಸಾಕಷ್ಟು ಅಧ್ಯಯನ ನಡೆಸಿ, ಇದೇ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

* ತಮ್ಮ ಹದಿನಾರನೇ ವರ್ಷದಲ್ಲಿ ಮೊಟ್ಟ ಮೊದಲ ಬಾರಿಗೆ ಸಾರ್ವಜನಿಕವಾಗಿ ಭಾಷಣ ಮಾಡಿದ್ದ ಪ್ರಿಯಾಂಕಾ ಗಾಂಧಿ, ಅಂದಿನಿಂದ ರಾಜಕೀಯ ಬದುಕಿನತ್ತ ಆಸಕ್ತಿ ಹೊಂದಿದ್ದರು.

* ಆದರೆ 1991 ರಲ್ಲಿ ತಂದೆ ರಾಜೀವ್ ಗಾಂಧಿ ಹತ್ಯೆಯಿಂದ ಸಾಕಷ್ಟು ನೊಂದ ಪ್ರಿಯಾಂಕಾ ಗಾಂಧಿ ರಾಜಕೀಯಕ್ಕೆ ಬರುವ ಯೋಚನೆಯನ್ನು ಎಂದಿಗೂ ಮಾಡಿರಲಿಲ್ಲ.

* ಆದರೆ ನಿರಂತರವಾಗಿ ತಮ್ಮ ತಾಯಿ ಸೋನಿಯಾ ಗಾಂಧಿಯವರ ರಾಯ್ ಬರೇಲಿ ಮತ್ತು ಸಹೋದರ ರಾಹುಲ್ ಗಾಂಧಿ ಅವರ ಅಮೇಥಿ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದ ಪ್ರಿಯಾಂಕಾ ಅವರ ಗೆಲುವಿಗಾಗಿ ಸಾಕಷ್ಟು ಶ್ರಮಿಸಿದ್ದರು.

Congress leader Priyanka Gandhi political profile

* 1997 ರ ಫೆಬ್ರವರಿ 18 ರಂದು ದೆಹಲಿ ಮೂಲದ ಉದ್ಯಮಿ ರಾಬರ್ಟ್ ವಾದ್ರಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
* ಅತ್ಯುತ್ತಮ ಛಾಯಾಗ್ರಾಹಕಿಯೂ ಆಗಿರುವ ಪ್ರಿಯಾಂಕಾ ಗಾಂಧಿ, ಛಾಯಾಗ್ರಹಣದ ಹವ್ಯಾಸ ಮತ್ತು ಆಸಕ್ತಿಯನ್ನು ತಮ್ಮ ತಂದೆ ರಾಜೀವ್ ಗಾಂಧಿ ಅವರಿಂದ ಬಳುವಳಿಯಾಗಿ ಪಡೆದಿದ್ದರು.

* 2007 ರಲ್ಲಿ ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಪಕ್ಷದ ನಾಯಕರಲ್ಲಿ ಟಿಕೆಟ್ ಹಂಚಿಕೆಯ ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಯವೆದ್ದಿದ್ದಾಗ, ಎರಡು ವಾರಗಳ ಕಾಲ ಅಲ್ಲಿಯೇ ಉಳಿದು, ಭಿನ್ನಾಭಿಪ್ರಾಯವನ್ನು ತಣ್ಣಗಾಗಿಸಿ, ಬಂಡಾಯ ಶಮನಗೊಳಿಸಿದ ಕೀರ್ತಿ ಪ್ರಿಯಾಂಕಾ ಅವರಿಗೆ ಸಲ್ಲುತ್ತದೆ.

* 2009 ರಲ್ಲಿ ಅಮೇಥಿ ಕ್ಷೇತ್ರದಿಂದ ಕಾಂಗ್ರೆಸ್ ಪರ ಪ್ರಚಾರ ನಡೆಸಿದರು ಪ್ರಿಯಾಂಕಾ

* 2012 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯ ಸಮಯದಲ್ಲೂ ಕಾಂಗ್ರೆಸ್ ನ ಸ್ಟಾರ್ ಪ್ರಚಾರಕರಾಗಿದ್ದ ಪ್ರಿಯಾಂಕಾ, ಅಮೇಥಿ ಮತ್ತು ಸುಲ್ತಾನ್ ಪುರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು.

* 2014 ರ ಲೋಕಸಭಾ ಚುನಾವಣೆಯ ಸಮಯದಲ್ಲೂ ಉತ್ತರ ಪ್ರದೇಶದಲ್ಲಿ ಪ್ರಚಾರ ನಡೆಸಿದ್ದ ಪ್ರಿಯಾಂಕಾ ಭದ್ರತಾ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂಬ ದೂರು ಕೇಳಿಬಂದಿತ್ತು.

* ಉತ್ತರ ಪ್ರದೇಶದ ಅಮೇಥಿ ಕ್ಷೇತ್ರ, ಅಂದರೆ ಸಹೋದರ ರಾಹುಲ್ ಗಾಂಧಿ ಪ್ರತಿನಿಧಿಸುವ ಕ್ಷೇತ್ರಕ್ಕೆ ಮಾತ್ರವೇ ಇಷ್ಟು ದಿನ ಪ್ರಿಯಾಂಕಾ ಅವರ ಪ್ರಚಾರ ಸೀಮಿತವಾಗಿತ್ತು.

* ಆದರೆ 2014 ರ ಲೋಕಸಭಾ ಚುನಾವಣೆಯ ಸಮಯದಲಿ ಕಾಂಗ್ರೆಸ್ ಕಾರ್ಯಕರ್ತರೇ ಪ್ರಿಯಾಂಕಾ ಗಾಂಧಿ ಅವರು ರಾಜಕೀಯಕ್ಕೆ ಪ್ರವೇಶಿಸಲಿ, ಅವರೇ ಪಕ್ಷದ ಚುಕ್ಕಾಣಿ ಹಿಡಿಯಲಿ ಎಂದು ಕಾರ್ಯಕರ್ತರು ಒತ್ತಾಯಿಸಿದ್ದರು. ನೋಡುವುದಕ್ಕೂ ಥೇಟ್ ಅಜ್ಜಿ ಇಂದಿರಾ ಗಾಂಧಿ ಅವರಂತೆಯೇ ಇರುವ ಪ್ರಿಯಾಂಕಾ, ಗಟ್ಟಿಗಿತ್ತಿಯೂ ಆಗಿರುವುದರಿಂದ 2014 ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ ಅನ್ನು ಮತ್ತೆ ಮೇಲೆತ್ತುವ ಶಕ್ತಿ ಅವರಿಗಿದೆ ಎಂಬ ಮಾತು ಕೇಳಿಬಂದಿತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

* ಆದರೆ ರಾಜಕೀಯ ಪ್ರವೇಶದ ಬಗ್ಗೆ ಯಾವುದೇ ಸೂಚನೆ ನೀಡದೆ ಇದ್ದ ಪ್ರಿಯಾಂಕ ಇದೀಗ ಪಕ್ಷದಲ್ಲಿ ಮಹತ್ವದ ಹುದ್ದೆಯನ್ನು ಅಲಂಕರಿಸಿದ್ದಾರೆ.

* 2019 ರ ಜನರಿ ತಿಂಗಳಿನಲ್ಲಿ ಉತ್ತರಪ್ರದೇಶ ಪೂರ್ವ ಭಾಗಗಳ ಉಸ್ತುವಾರಿ ನೋಡಿಕೊಳ್ಳುವಂತೆ ಸೂಚಿಸಿ, ಪ್ರಿಯಾಂಕಾ ಗಾಂಧಿ ಅವರಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜವಾಬ್ದಾರಿ ನೀಡಲಾಗಿದೆ.

* ಈ ವರ್ಷ ಪ್ರಿಯಾಂಕಾ ಗಾಂಧಿ ಅವರು ರಾಯ್ಬರೇಲಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಬಹುದು ಎನ್ನಲಾಗುತ್ತಿದೆ. ಯುಪಿಎ ಅಧ್ಯಕ್ಷ ಮತ್ತು ಅವರ ತಾಯಿ ಸೋನಿಯಾ ಗಾಂಧಿ ಅವರು ಅನಾರೋಗ್ಯದಿಂದ ಬಳಲುತ್ತಿರುವುದರಿಂದ ಈ ಕ್ಷೇತ್ರದಿಂದ ಅವರನ್ನೇ ಕಣಕ್ಕಿಳಿಸಲು ಕಾಂಗ್ರೆಸ್ ಯೋಚಿಸಿದರೆ ಅಚ್ಚರಿಯಿಲ್ಲ. ಅದೂ ಆಲ್ಲದೆ, ಇದು ಕಾಂಗ್ರೆಸ್ ನ ಭದ್ರಕೋಟೆಯಾಗಿರುವುದರಿಂದ ಈ ಕ್ಷೇತ್ರವನ್ನು ಕಳೆದುಕೊಳ್ಳುವುದಕ್ಕೆ ಕಾಂಗ್ರೆಸ್ ಸಿದ್ಧವಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+