ಅಕ್ಷಯ ತೃತೀಯದಂದು ಬಾಲ್ಯ ವಿವಾಹ..ಏನಿದು ಅನಿಷ್ಟ ಪದ್ಧತಿ?
ಅಕ್ಷಯ ತೃತೀಯದಂದು ಚಿನ್ನ ಖರೀದಿಸಲು ಮುಗಿಬೀಳುವುದು ಇತ್ತೀಚೆಗೆ ಹೆಚ್ಚಾಗುತ್ತದೆ. ಆದರೆ ಇದನ್ನು ಮೀರಿ ಈ ದಿನಗಳಲ್ಲಿ ಬಾಲ್ಯವಿವಾಹ ಮಾಡಿದರೆ ಒಳಿತಾಗುತ್ತದೆ ಎಂಬ ಮೂಢನಂಬಿಕೆಯೂ ಜನರಲ್ಲಿದೆ ಎಂದರೆ ಅಚ್ಚರಿಯಾಗಬಹುದು ಆದರೆ ಇದು ಸತ್ಯ. ನಾವೆಲ್ಲರೂ ಒಂದಲ್ಲ ಒಂದು ನಂಬಿಕೆಗೆ ಜೋತು ಬಿದ್ದವರೇ ಆದರೆ ಮೂಢನಂಬಿಕೆ ಯಾವುದು? ನಂಬಿಕೆ ಯಾವುದು? ಎಂಬುದನ್ನು ಅರಿತುಕೊಳ್ಳದೆ ವಿವಾಹದ ವಿಚಾರದಲ್ಲಿ ಅನಾದಿ ಕಾಲದಿಂದ ರೂಢಿಗೆ ಬಂದ ಮೂಢನಂಬಿಕೆಯನ್ನು ಅನುಸರಿಸಿದರೆ ಅದು ಹೆತ್ತವರನ್ನು ಸಂಕಷ್ಟಕ್ಕೆ ದೂಡುವುದಲ್ಲದೆ, ಮಕ್ಕಳ ಭವಿಷ್ಯದ ಮೇಲೆಯೂ ಪರಿಣಾಮ ಬೀರಲಿದೆ.
ಹಿಂದಿನ ಕಾಲದಲ್ಲಿ ಬಹುತೇಕರು ಅವಿದ್ಯಾವಂತರಾಗಿದ್ದರು. ಹೀಗಾಗಿ ಯಾವುದನ್ನೂ ವಿಮರ್ಶಿಸಿ ನೋಡುತ್ತಿರಲಿಲ್ಲ. ಅಲ್ಲದೆ ಕೆಲವರು ತಮ್ಮ ಅನುಕೂಲಕ್ಕಾಗಿ ಇತರರನ್ನು ದಾರಿ ತಪ್ಪಿಸುವ ಸಂಪ್ರದಾಯಕ್ಕೆ ಮುನ್ನುಡಿ ಬರೆದಿದ್ದು ಅದನ್ನೇ ಮತ್ತೆ ಕೆಲವರು ಮುಂದುವರೆಸಿದರು. ಅವತ್ತಿನ ಕಾಲಕ್ಕೆ ಅದನ್ನು ಪ್ರಶ್ನೆ ಮಾಡದೆ ಒಪ್ಪಿಕೊಂಡು ಬಂದ ಪರಿಣಾಮ ಮುಂದುವರೆಯುತ್ತಿದೆ. ಆದರೂ ಕೆಲವೊಂದು ಮೂಢನಂಬಿಕೆಗಳಿಗೆ ಆಯಾಯ ಕಾಲಘಟ್ಟದಲ್ಲಿ ಸಮಾಧಿ ಕಟ್ಟಲಾಗಿದೆ. ಕೆಲವೊಂದು ಇವತ್ತಿಗೂ ಮುಂದುವರೆದುಕೊಂಡು ಬಂದಿರುವುದು ದುರಂತದ ಸಂಗತಿಯಾಗಿದೆ.

ಇತ್ತೀಚೆಗಿನ ವರ್ಷಗಳಲ್ಲಿ ಹಲವು ಸಂಪ್ರದಾಯಗಳಿಗೆ ಹೊಳಪು ಬಂದಿದೆ. ಹಾಗೆಯೇ ಗೊಡ್ಡು ಸಂಪ್ರದಾಯಕ್ಕೆ ಎಳ್ಳು ನೀರು ಬಿಡಲಾಗಿದೆ. ಆದರೂ ಕೆಲವು ಇನ್ನೂ ಆಚರಣೆಯಲ್ಲಿದೆ ಎನ್ನುವುದೇ ಬೇಸರ ತರುತ್ತಿದೆ. ಅಂತಹ ಸಂಪ್ರದಾಯವನ್ನು ನಿಷೇಧಿಸಿ ಅದರ ಸುತ್ತಲೂ ಕಣ್ಗಾವಲು ಇಟ್ಟರೂ ಕಣ್ಣಿಗೆ ಮಣ್ಣೆರಚಿ ನಡೆಯುತ್ತವೆ. ಅನಾದಿ ಕಾಲದಿಂದ ನಡೆದು ಬಂದ ಅನಿಷ್ಟ ಪದ್ಧತಿಯಾಗಿರುವ ಬಾಲ್ಯ ವಿವಾಹವನ್ನು ಇವತ್ತು ನಿಷೇಧ ಮಾಡಲಾಗಿದೆ. ಆದರೂ ಅದು ಕಣ್ತಪ್ಪಿ ನಡೆಯುತ್ತಲೇ ಇದೆ. ಅದರಂತೆ ಅಕ್ಷಯ ತೃತೀಯ ದಿನದಂದು ಬಾಲ್ಯವಿವಾಹ ಮಾಡುವ ಪದ್ಧತಿ ಆಧುನಿಕತೆ ಭರಾಟೆಯಲ್ಲಿರುವ 21ನೇ ಶತಮಾನದಲ್ಲೂ ಆಚರಣೆಯಲ್ಲಿರುವುದು ಅಚ್ಚರಿಯ ಸಂಗತಿಯಾಗಿದೆ.
ಅನಿಷ್ಟ ಪದ್ಧತಿಗೆ ಇತಿಶ್ರೀ ಹಾಡಬೇಕಿದೆ
ಈ ಬಾರಿ ಏಪ್ರಿಲ್ 30 ರಂದು ಬಸವ ಜಯಂತಿ ಮತ್ತು ಅಕ್ಷಯ ತೃತೀಯ ದಿನವಾಗಿದ್ದು, ಬಾಲ್ಯವಿವಾಹ ಪ್ರಕರಣಗಳು ಹೆಚ್ಚು ನಡೆಯುವ ಸಾಧ್ಯತೆಯಿದ್ದು, ಬಾಲ್ಯ ವಿವಾಹ ನಿಷೇಧಾಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ರಾಜ್ಯಮಟ್ಟದಲ್ಲಿ ಸರ್ಕಾರ ಸೂಚಿಸಿದೆ. ಆಯಾಯ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯದಂತೆ ಎಚ್ಚರದಿಂದ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇವತ್ತಿನ ಈ ಕಾಲದಲ್ಲಿಯೂ ಇಂತಹದೊಂದು ಆಚರಣೆ ಕದ್ದುಮುಚ್ಚಿ ನಡೆಯುತ್ತಿರುವುದು ನಾವೆಲ್ಲರೂ ಅಚ್ಚರಿ ಪಡುವಂತಾಗಿದೆ.

ಕಾನೂನು ಪ್ರಕಾರ 18 ವರ್ಷದೊಳಗಿನ ಹುಡುಗಿ ಹಾಗೂ 21 ವರ್ಷದೊಳಗಿನ ಹುಡುಗನ ನಡುವೆ ನಡೆಯುವ ಮದುವೆ ಅಥವಾ ಇಬ್ಬರಲ್ಲಿ ಒಬ್ಬರು ನಿಗದಿತ ವಯಸ್ಸಿನೊಳಗಿದ್ದರೂ ಇಂತಹ ಮದುವೆಯನ್ನು ಬಾಲ್ಯವಿವಾಹ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅಕ್ಷಯ ತೃತೀಯದಂದು ಬಾಲ್ಯ ವಿವಾಹ ಮಾಡುವ ಅನಿಷ್ಟ ಪದ್ಧತಿಗೆ ಇತಿಶ್ರೀ ಹಾಡುವುದು ಎಲ್ಲರ ಕರ್ತವ್ಯವಾಗಿದೆ. ಇವತ್ತಿನ ದಿನಮಾನದಲ್ಲಿ ಬಾಲ್ಯವಿವಾಹ ನಡೆಸುವುದು ಕಷ್ಟವೇ ಆ ರೀತಿಯಾದರೆ ತಕ್ಷಣವೇ ಸಂಬಂಧಿಸಿದವರ ಗಮನಕ್ಕೆ ತಂದು ವಿವಾಹವನ್ನು ತಡೆಹಿಡಿದ ಪ್ರಕರಣಗಳು ಬಹಳಷ್ಟಿವೆ. ಹೀಗಿದ್ದರೂ ನಡೆಯುತ್ತಿವೆ ಎಂದರೆ ಒಂದು ಕ್ಷಣ ಯೋಚನೆ ಮಾಡುವ ವಿಷಯವೇ.
ಬಾಲ್ಯವಿವಾಹಕ್ಕೆ ದಂಡ ಸಹಿತ ಜೈಲು ಶಿಕ್ಷೆ
ಇನ್ನು ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ಅಧಿನಿಯಮ -2016 ಪ್ರಕಾರ ಮದುವೆಯನ್ನು ಏರ್ಪಡಿಸಿದ ಪೋಷಕರು ಅಥವಾ ಪಾಲಕರು, 18 ವರ್ಷದೊಳಗಿನ ಹುಡುಗಿಯನ್ನು ಮದುವೆಯಾಗುವ ವಯಸ್ಕ ವ್ಯಕ್ತಿ ಮತ್ತು ಮದುವೆಯಲ್ಲಿ ಭಾಗವಹಿಸುವ ಎಲ್ಲಾ ರೀತಿಯಲ್ಲಿ ಸಹಕರಿಸಿದ ಕುಟುಂಬಸ್ಥರನ್ನು ಸಹ ತಪ್ಪಿತಸ್ಥರು ಎಂದು ಇವರುಗಳಿಗೆ ಮೇಲೆ ತಿಳಿಸಿದ ಕಾಯ್ದೆಯ ಪ್ರಕಾರ ಒಂದು ವರ್ಷಕ್ಕೆ ಕಡಿಮೆಯಿಲ್ಲದ ಅಂದರೆ ಎರಡು ವರ್ಷಗಳ ಕಾಲ ವಿಸ್ತರಿಸಬಹುದಾದ ಕಠಿಣ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ಜುಲ್ಮಾನೆಗೆ ಅಥವಾ ಇವರೆಡರಿಂದಲು ಶಿಕ್ಷೆಗೆ ಒಳಪಡುತ್ತಾರೆ.

ಈ ಕಾಯ್ದೆಯಡಿ ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ತನ್ನ ಅಧಿಕಾರ ವ್ಯಾಪ್ತಿಯಡಿ ಬಾಲ್ಯವಿವಾಹ ಜರುಗುತ್ತಿರುವ ಮಾಹಿತಿ ಬಂದಾಗ ಸ್ವಪ್ರೇರಿತವಾಗಿ ದೂರು ದಾಖಲು ಮಾಡಲು ಅವಕಾಶವಿರುತ್ತದೆ. ಅದೇ ರೀತಿ ಇದು ಕೇವಲ ಸರ್ಕಾರಿ ಅಧಿಕಾರಿಗಳ ಜವಾಬ್ದಾರಿಯಾಗದೇ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿರುತ್ತದೆ. ಬಾಲ್ಯವಿವಾಹ ನಿಷೇಧಾಧಿಕಾರಿಗಳು ತಮ್ಮ ಕಾರ್ಯವ್ಯಾಪ್ತಿಗೆ ಬರುವ ಧಾರ್ಮಿಕ ಸ್ಥಳಗಳಲ್ಲಿ ಮತ್ತು ಕಲ್ಯಾಣ ಮಂಟಪಗಳಲ್ಲಿ ಸಾಮೂಹಿಕ ಅಥವಾ ವೈಯಕ್ತಿಕ ವಿವಾಹದಲ್ಲಿ ಯಾವುದೇ ಬಾಲ್ಯವಿವಾಹಗಳು ಜರುಗದಂತೆ ಕ್ರಮವಹಿಸಬೇಕು ಎಂದು ಸೂಚಿಸಲಾಗಿದೆ.
ಪ್ರಕರಣಗಳು ಪತ್ತೆಯಾದರೆ ದೂರು ನೀಡಿ
ಒಂದು ವೇಳೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಬಾಲ್ಯವಿವಾಹ ನಡೆಯುತ್ತಿರುವುದು ಗಮನಕ್ಕೆ ಬಂದರೆ ತುರ್ತಾಗಿ ಮಕ್ಕಳ ಸಹಾಯವಾಣಿ 1098, ಪೊಲೀಸ್ ಸಹಾಯವಾಣಿ 112 ಮತ್ತು ಮಕ್ಕಳ ರಕ್ಷಣಾ ಘಟಕ 080-29560034 ಹಾಗೂ ಸಂಬಂಧಪಟ್ಟ ಹತ್ತಿರದ ಪೊಲೀಸ್ ಠಾಣೆಗೆ ದೂರು ಸಲ್ಲಿಸುವಂತೆ ತಿಳಿಸಲಾಗಿದೆ. ಇನ್ನಾದರೂ ಇಂತಹದೊಂದು ಮೂಢನಂಬಿಕೆಯನ್ನು ಯಾರಾದರೂ ಹೊಂದಿದ್ದರೆ ದಯವಿಟ್ಟು ಅಂತಹ ತಪ್ಪು ನಿರ್ಧಾರಕ್ಕೆ ಮುಂದಾಗಬೇಡಿ ಮಕ್ಕಳ ಭವಿಷ್ಯವನ್ನು ಹಾಳುಮಾಡಬೇಡಿ ಎನ್ನುವುದು ಕಳಕಳೀಯ ಮನವಿಯಾಗಿದೆ.
-
Karnataka Rain: ಕರ್ನಾಟಕದಲ್ಲಿ ಮಳೆ ಕೊರತೆ ಈ ಬಾರಿ ಈ ಭಾಗಗಳಲ್ಲಿ ಸಂಕಷ್ಟ, ಕುಡಿಯುವ ನೀರಿಗೂ ಹಾಹಾಕಾರ -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ












Click it and Unblock the Notifications