ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ

ಬೆಂಗಳೂರು, ನವೆಂಬರ್ 17: ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರ್ಕಾರದ ಪತನಕ್ಕೆ ಕಾರಣವಾಗಿ ಅನರ್ಹಗೊಂಡಿದ್ದ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಯೋಗ ಸಿಕ್ಕಿದೆ. ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸಲು ಬಹುತೇಕ ಎಲ್ಲರಿಗೂ ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳ ಕೊರತೆ ಎದುರಾದರೂ ತನ್ನ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ಜೆಡಿಎಸ್ ಕೂಡಾ ಒಂದೆರಡು ಕ್ಷೇತ್ರ ಬಿಟ್ಟು ಮಿಕ್ಕೆಲ್ಲಾ ಕ್ಷೇತ್ರಗಳಿಗೆ ಸ್ಪರ್ಧಿಗಳನ್ನು ಹೆಸರಿಸಿದೆ.

10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ನವೆಂಬರ್ 14ರಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ ಕುಮಾರಸ್ವಾಮಿ ಅವರು ಪ್ರಕಟಿಸಿದರು. ಈ ಮೊದಲು ಕರ್ನಾಟಕದ 8 ಕ್ಷೇತ್ರಗಳ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಶನಿವಾರದಂದು ಯಶವಂತಪುರ ಕ್ಷೇತ್ರ ಬಿಟ್ಟು ಮಿಕ್ಕ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಗೋಕಾಕದಲ್ಲಿ ಸತೀಶ್ ಜಾರಕಿಹೊಳಿ ಪಕ್ಷೇತರರಾಗಿ ಕಣಕ್ಕಿಳಿದಿದ್ದು, ರಮೇಶ್, ಸತೀಶ್, ಲಖನ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.

ಇನ್ನು ಬಿಜೆಪಿ 13 ಕ್ಷೇತ್ರಗಳಲ್ಲಿ ಅನರ್ಹರನ್ನು ಕಣಕ್ಕಿಳಿಸಿದೆ. ಶಿವಾಜಿನಗರ ಕ್ಷೇತ್ರದಲ್ಲಿ ಅಚ್ಚರಿಯ ಅಭ್ಯರ್ಥಿಯನ್ನು ಘೋಷಿಸಿದೆ.

By polls 2019: BJP, Congress, JDS candidates list

ಒಟ್ಟು 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಮತದಾನ ನಡೆಯಲಿದೆ. ಶಾಸಕ ಸ್ಥಾನದಿಂದ ಅನರ್ಹಗೊಂಡಿರುವ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ್ದು, ನೀತಿ ಸಂಹಿತೆ ಜಾರಿಯಲ್ಲಿದೆ. ನವೆಂಬರ್ 18 ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕವಾಗಿದೆ.

ಅನರ್ಹಗೊಂಡ ಶಾಸಕರು ಸ್ಪೀಕರ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ಅಂತಿಮಗೊಳಿಸಿದ್ದು, ತೀರ್ಪು ನೀಡಿದ್ದು, ಅರ್ನಹತೆಯನ್ನು ಎತ್ತಿ ಹಿಡಿದರೂ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ. 15 ಕ್ಷೇತ್ರದ ಉಪ ಚುನಾವಣೆಗೆ ನವೆಂಬರ್ 11ರಂದು ಅಧಿಸೂಚನೆ ಪ್ರಕಟವಾಗಲಿದೆ. ಡಿಸೆಂಬರ್ 5ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ನಡೆಯಲಿದೆ.

ಕ್ಷೇತ್ರ ಬಿಜೆಪಿ ಕಾಂಗ್ರೆಸ್ ಜೆಡಿಎಸ್
ಹಿರೇಕೆರೂರು ಬಿ.ಸಿ ಪಾಟೀಲ್ ಬಿ.ಎಚ್ ಬನ್ನಿಕೋಡ್ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ
ಯಲ್ಲಾಪುರ ಶಿವರಾಮ ಹೆಬ್ಬಾರ್ ಭೀಮಣ್ಣ ನಾಯಕ್ ಚೈತ್ರಾ ಗೌಡ
ರಾಣೆಬೆನ್ನೂರು ಅರುಣ್ ಕುಮಾರ್ ಪೂಜಾರಿ ಕೆ.ಬಿ ಕೋಳಿವಾಡ ಮಲ್ಲಿಕಾರ್ಜುನ ಹಲಗೇರಿ
ವಿಜಯನಗರ ಆನಂದ್ ಸಿಂಗ್ ವಿ.ವೈ ಘೋರ್ಪಡೆ ಎನ್. ಎಂ ನಬಿ
ಚಿಕ್ಕಬಳ್ಳಾಪುರ ಡಾ. ಕೆ ಸುಧಾಕರ್ ಎಂ. ಅಂಜನಪ್ಪ ಕೆ.ಪಿ ಬಚ್ಚೇಗೌಡ/ರಾಧಾಕೃಷ್ಣ
ಕೆ. ಆರ್ ಪುರ ಬೈರತಿ ಬಸವರಾಜು ಎಂ.ನಾರಾಯಣ ಸ್ವಾಮಿ ಸಿ ಕೃಷ್ಣಮೂರ್ತಿ
ಯಶವಂತಪುರ ಎಸ್. ಟಿ ಸೋಮಶೇಖರ್ ಪಿ. ನಾಗರಾಜ್ ಟಿ.ಎನ್ ಜವರಾಯಿಗೌಡ
ಶಿವಾಜಿನಗರ ಎಂ. ಸರವಣ ರಿಜ್ವಾನ್ ಅರ್ಷದ್ ತನ್ವೀರ್ ಅಹ್ಮದ್
ಹೊಸಕೋಟೆ ಎಂಟಿಬಿ ನಾಗರಾಜ್ ಪದ್ಮಾವತಿ ಸುರೇಶ್ ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡಗೆ ಬೆಂಬಲ
ಕೆ. ಆರ್ ಪೇಟೆ ನಾರಾಯಣ ಗೌಡ ಕೆ. ಬಿ ಚಂದ್ರಶೇಖರ್ ದೇವರಾಜ್ ಬಿ. ಎಲ್
ಹುಣಸೂರು ಎಚ್ ವಿಶ್ವನಾಥ್ ಎಚ್. ಪಿ ಮಂಜುನಾಥ್ ಸೋಮಶೇಖರ್
ಮಹಾಲಕ್ಷ್ಮಿ ಲೇಔಟ್ ಗೋಪಾಲಯ್ಯ ಎಂ. ಶಿವರಾಜು ಕಾಂತರಾಜು
ಗೋಕಾಕ ರಮೇಶ್ ಜಾರಕಿಹೊಳಿ ಲಖನ್ ಜಾರಕಿಹೊಳಿ ಅಶೋಕ್ ಪೂಜಾರಿ
ಕಾಗವಾಡ ಶ್ರೀಮಂತ ಪಾಟೀಲ ಭರಮಗೌಡ ಕಾಗೆ --
ಅಥಣಿ ಮಹೇಶ್ ಕುಮಟಳ್ಳಿ ಜಿ.ಬಿ ಮಂಗ್ಸೂಳಿ ಗುರು ದಾಸ್ಯಾಳ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+