BSNL: ಕೈಗೆಟುವ ಬೆಲೆಗೆ 60 ದಿನದ ವ್ಯಾಲಿಡಿಟಿ ರಿಚಾರ್ಜ್ ಪ್ಲಾನ್! ಪ್ರಯೋಜನಗಳು
ಬೆಂಗಳೂರು, ಫೆಬ್ರವರಿ 13: ಭಾರತದ ಟೆಲಿಕಾಂ ಸಂಸ್ಥೆಯಲ್ಲಿ ತನ್ನ ಅಚ್ಚರಿಯ ಹಾಗೂ ಗ್ರಾಹಕ ಸ್ನೇಹಿ ಯೋಜನೆಗಳ ಮೂಲಕ ಜನಮನ ಸೆಳೆಯುತ್ತಿರುವ BSNL ಬಜೆಟ್ ಸ್ನೇಹಿ ರಿಚಾರ್ಜ್ ಪ್ಲಾನ್ ಘೋಷಿಸಿದೆ. ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆ ಇದಾಗಿದ್ದು, ಇಜಿಯೋ, ಏರ್‌ಟೆಲ್, ವಡಾಫೋನ್‌ನಂತಹ ದಿಗ್ಗಜ ಖಾಸಗಿ ಸಂಸ್ಥೆಗಳಿಗೆ ತೀವ್ರ ಪೈಪೋಟಿ ನೀಡುತ್ತಿದೆ. ಗ್ರಾಹಕರ ಸಂಖ್ಯೆಯಲ್ಲೂ ಹೆಚ್ಚಿಸಿಕೊಳ್ಳಲಾಗಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL)ರೂ. 345 ಪ್ರಿಪೇಯ್ಡ್ ಯೋಜನೆ ಘೋಷಿಸಿದೆ. ಇಷ್ಟು ಕಡಿಮೆ ಬೆಲೆಗೆ ಒಟ್ಟು 60 ದಿನಗಳವರೆಗೆ (ಎರಡು ತಿಂಗಳ) ಈ ಯೋಜನೆ ಪ್ರಯೋಜನ ಪಡೆಯಬಹುದಾಗಿದೆ. ಈ ಯೋಜನೆಯಿಂದ ನೀವು ಅನಿಯಮಿತವಾಗಿ ಧ್ವನಿ ಕರೆ ಪಡೆಯಬಹುದು. ಎರಡು ತಿಂಗಳು ಅನ್‌ಲಿಮಿಟೆಡ್ ಕರೆಗಳ ಜೊತೆಗೆ ದೈನಂದಿನ 100 ಎಸ್‌ಎಂಎಸ್ ಹಾಗೂ ಪ್ರತಿ ದಿನ 1ಜಿಬಿ ಡೇಟಾ ಪಡೆಯಲಾಗುತ್ತದೆ.

ರೂ. 345 & 347 ಪ್ಲಾನ್ ವತ್ಯಾಸ ಪ್ರಯೋಜನ
ಹೆಚ್ಚು ಡೇಟಾ ಬೇಕು ಎನ್ನುವವರು ಬಳಕೆದಾರರು ರೂ. 345 ಪ್ರಿಪೇಯ್ಡ್ ಯೋಜನೆ ಬದಲಾಗಿ ರೂಪಾಯಿ 347 ರಿಚಾರ್ಜ್ ಪ್ಲಾನ್ ಪಡೆಯಬಹುದು. ಇದರಲ್ಲೂ ಉತ್ತಮ ಸೇವೆ ಲಭ್ಯ ಇದೆ. ಈ ಎರಡು ಮೊಬೈಲ್ ರಿಚಾರ್ಜ್ ಯೋಜನೆಗಳ ಮಧ್ಯೆ ಕೇವಲ 2 ರೂಪಾಯಿ ವ್ಯತ್ಯಾಸ ಇದೆ. ಆದರೆ ರೂ. 347 ಪ್ಲಾನ್ ನಿಮಗೆ ಪ್ರತಿ ನಿತ್ಯ 2GB ಇಂಟರ್‌ನೆಟ್ ಸೇವೆ ನೀಡುತ್ತದೆ. ಡೈಲಿ ಬೇಸ್ ಡೇಟಾ ಖಾಲಿಯಾದರೂ ನೀವು ಅನಿಮಿತ 40kbps 4g ಇಂಟರ್‌ನೆಟ್ ಪಡೆಯಬಹುದಾಗಿದೆ ಎಂದು ಬಿಎಸ್‌ಎನ್‌ಎಲ್ ತಿಳಿಸಿದೆ.
ರೂ. 347 ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಅನಿಯಮಿತ ಧ್ವನಿ ಕರೆಗಳು, ಪ್ರತಿ ದಿನ 100 ಎಸ್‌ಎಂಎಸ್ ಸೌಲಭ್ಯವು ಸಿಗಲಿದೆ. ಈ ಪ್ಲಾನ್ 54 ದಿನಗಳವರೆಗೆ ಮಾನ್ಯವಾಗಿರುತ್ತದೆ. ಈ ಯೋಜನೆಗಳ ಮಧ್ಯ ಅಂತಹ ದೊಡ್ಡ ವ್ಯತ್ಯಾಸವೇನು ಇಲ್ಲ. ಆದರೆ ಇವು ಬಳಕೆದಾರರಿಗೆ ಅನುಕೂಲಕರವಾಗಿವೆ ಎನ್ನುತ್ತದೆ ಕಂಪನಿ.

65 ಸಾವಿರ ಸೈಟ್‌ಗಳಲ್ಲಿ 4ಜಿ ಲಭ್ಯ
BSNL ಸಂಸ್ಥೆಯು ಅಲ್ಪಾವಧಿ ಮತ್ತು ದೀರ್ಘಾವಧಿ ಪ್ಲಾನ್‌ಗಳನ್ನು ಘೋಷಿಸಿದೆ. ಇದರಿಂದ ವಿವಿಧ ಎಲ್ಲ ವರ್ಗದ ಜನರಿಗೆ ಹತ್ತಿರವಾಗುತ್ತಿದೆ. ಈಗಾಗಲೇ 65 ಸಾವಿರ ಟವರ್ ನಿರ್ಮಾಣ ಮಾಡಿದ್ದು, ಆ ಎಲ್ಲ ಸ್ಥಳಗಳಲ್ಲಿ 4G ಇಂಟರ್‌ನೆಟ್ ಸೇವೆ ನೀಡುತ್ತಿದೆ. ಜನವರಿ 15 ರಂದು ತನ್ನ 3G ಇಂಟರ್‌ನೆಟ್ ಸ್ಥಗಿತಗೊಳಿಸಿತ್ತು.
ದೇಶಾದ್ಯಂತ 1 ಲಕ್ಷ ಟವರ್‌ಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಈ ನಿಟ್ಟಿನಲ್ಲಿ ಕೆಲಸಗಳೂ ಪ್ರಗತಿಯಲ್ಲಿವೆ. ಈ ಎಲ್ಲ ಸೈಟ್‌ಗಳಲ್ಲೂ 4G ಇಂಟರ್‌ನೆಟ್ ಸೇವೆ ನೀಡುವ ಜೊತೆ ಜೊತೆಗೆ 5ಜಿ ಇಂಟರ್‌ನೆಟ್ ಗೂ BSNL ಅಪ್ಡೇಟ್ ಆಗಲಿದೆ.












Click it and Unblock the Notifications